logo
ಕನ್ನಡ ಸುದ್ದಿ  /  ಜೀವನಶೈಲಿ  /  Weight Loss: ಬೆಲ್ಲಿ ಫ್ಯಾಟ್‌ ಕಡಿಮೆಯಾಗಿಸಲು 15 ನಿಮಿಷಗಳಲ್ಲಿ ಮಾಡಬಹುದಾದ 7 ವ್ಯಾಯಾಮಗಳಿವು

Weight Loss: ಬೆಲ್ಲಿ ಫ್ಯಾಟ್‌ ಕಡಿಮೆಯಾಗಿಸಲು 15 ನಿಮಿಷಗಳಲ್ಲಿ ಮಾಡಬಹುದಾದ 7 ವ್ಯಾಯಾಮಗಳಿವು

Reshma HT Kannada

Oct 12, 2023 11:11 AM IST

google News

ಬೆಲ್ಲಿ ಫ್ಯಾಟ್‌ ಕಡಿಮೆಯಾಗಿಸಲು 15 ನಿಮಿಷಗಳಲ್ಲಿ ಮಾಡಬಹುದಾದ 7 ವ್ಯಾಯಾಮಗಳಿವು

    • ವ್ಯಾಯಾಮ ಮಾಡುವುದರಿಂದ ಅದು ನೇರವಾಗಿ ಬೆಲ್ಲಿ ಫ್ಯಾಟ್‌ ಕಡಿಮೆ ಮಾಡದೇ ಇದ್ದರೂ ಒಟ್ಟಾರೆ ತೂಕ ನಷ್ಟಕ್ಕೆ ಕೊಡುಗೆ ನೀಡುತ್ತದೆ. ಬರಿ ವ್ಯಾಯಾಮದಿಂದಷ್ಟೇ ತೂಕ ಇಳಿಸಲು ಸಾಧ್ಯವಿಲ್ಲ, ಇದರೊಂದಿಗೆ ಆರೋಗ್ಯಕರ ಡಯೆಟ್‌ ಕ್ರಮ ಪಾಲಿಸುವುದು ಅಷ್ಟೇ ಮುಖ್ಯ. ಉತ್ತಮ ಡಯೆಟ್‌ ಕ್ರಮ ಪಾಲನೆಯೊಂದಿಗೆ ಈ ಕೆಲವು ವ್ಯಾಯಾಮಗಳನ್ನು ಮಾಡಿ, ಹೊಟ್ಟೆಯ ಬೊಜ್ಜು ಕರಗುವುದು ಖಂಡಿತ.
ಬೆಲ್ಲಿ ಫ್ಯಾಟ್‌ ಕಡಿಮೆಯಾಗಿಸಲು 15 ನಿಮಿಷಗಳಲ್ಲಿ ಮಾಡಬಹುದಾದ 7 ವ್ಯಾಯಾಮಗಳಿವು
ಬೆಲ್ಲಿ ಫ್ಯಾಟ್‌ ಕಡಿಮೆಯಾಗಿಸಲು 15 ನಿಮಿಷಗಳಲ್ಲಿ ಮಾಡಬಹುದಾದ 7 ವ್ಯಾಯಾಮಗಳಿವು

ಇತ್ತೀಚಿನ ದಿನಗಳಲ್ಲಿ ದೇಹ ತೂಕದಷ್ಟೇ ಹೆಚ್ಚು ತಲೆ ಕೆಡಿಸುತ್ತಿರುವ ಇನ್ನೊಂದು ಸಮಸ್ಯೆ ಎಂದರೆ ಬೆಲ್ಲಿ ಫ್ಯಾಟ್‌. ಸಾಕಷ್ಟು ಹೊತ್ತು ಕುಳಿತಲ್ಲೇ ಕುಳಿತು ಕೆಲಸ ಮಾಡುವುದು, ಜಡಜೀವನಶೈಲಿ, ಕೊಬ್ಬಿನಾಂಶವುಳ್ಳ ಆಹಾರಗಳ ಅತಿಯಾದ ಸೇವನೆ ಈ ಕಾರಣಗಳಿಂದ ಹೊಟ್ಟೆಯ ಸುತ್ತಲೂ ಬೊಜ್ಜು ಬೆಳೆದಿರುತ್ತದೆ. ಅಲ್ಲದೆ ಸೊಂಟದ ಸುತ್ತಲೂ ಕೂಡ ಬೊಜ್ಜಿನಾಂಶ ಸಂಗ್ರಹವಾಗುತ್ತದೆ. ಹೊಟ್ಟೆ ಹಾಗೂ ಇತರ ಆಂತರಿಕ ಅಂಗಗಳಲ್ಲಿ ಕೊಬ್ಬು ಸಂಗ್ರಹವಾಗಿ ಬೆಲ್ಲಿ ಫ್ಯಾಟ್‌ ಉಂಟಾಗುತ್ತದೆ. ಇದರಿಂದ ನೋಡಲು ಅಸಹ್ಯವಾಗಿ ಕಾಣುವುದು ಮಾತ್ರವಲ್ಲ ಹೃದ್ರೋಗ, ಮಧುಮೇಹ ಮತ್ತು ಕೆಲವು ಕ್ಯಾನ್ಸರ್‌ನಂತಹ ಅಪಾಯಗಳೂ ಎದುರಾಗಬಹುದು. ಆ ಕಾರಣಕ್ಕೆ ಸಬ್ಕ್ಯುಟೇನಿಯಸ್‌ (ಚರ್ಮದ ಅಡಿಯಲ್ಲಿ ಸಂಗ್ರಹವಾಗಿರುವ ಕೊಬ್ಬು) ಗಿಂತ ಬೆಲ್ಲಿ ಫ್ಯಾಟ್‌ ಡೆಂಜರ್‌ ಎಂದು ಹೇಳಲಾಗುತ್ತದೆ.

ವ್ಯಾಯಾಮ ಮಾಡುವುದರಿಂದ ಅದು ನೇರವಾಗಿ ಬೆಲ್ಲಿ ಫ್ಯಾಟ್‌ ಕಡಿಮೆ ಮಾಡದೇ ಇದ್ದರೂ ಒಟ್ಟಾರೆ ತೂಕ ನಷ್ಟಕ್ಕೆ ಕೊಡುಗೆ ನೀಡುತ್ತದೆ. ಬರಿ ವ್ಯಾಯಾಮದಿಂದಷ್ಟೇ ತೂಕ ಇಳಿಸಲು ಸಾಧ್ಯವಿಲ್ಲ, ಇದರೊಂದಿಗೆ ಆರೋಗ್ಯಕರ ಡಯೆಟ್‌ ಕ್ರಮ ಪಾಲಿಸುವುದು ಅಷ್ಟೇ ಮುಖ್ಯ. ಉತ್ತಮ ಡಯೆಟ್‌ ಕ್ರಮ ಪಾಲನೆಯೊಂದಿಗೆ ಈ ಕೆಲವು ವ್ಯಾಯಾಮಗಳನ್ನು ಮಾಡಿ, ಹೊಟ್ಟೆಯ ಬೊಜ್ಜು ಕರಗುವುದು ಖಂಡಿತ.

ಬೆಲ್ಲಿ ಫ್ಯಾಟ್‌ ಕರಗಿಸಲು ಸಹಾಯ ಮಾಡುವ 7 ವ್ಯಾಯಾಮಗಳಿವು

ಜಂಪಿಂಗ್‌ ಜಾಕ್ಸ್‌

ಈ ಜಂಪಿಂಗ್‌ ವ್ಯಾಯಾಮದಿಂದ ಹೊಟ್ಟೆ ಹಾಗೂ ಸೊಂಟದ ಸುತ್ತಲಿನ ಬೊಜ್ಜು ಬೇಗನೆ ಕರಗುತ್ತದೆ. ಈ ವ್ಯಾಯಾಮದಲ್ಲಿ ಕಾಲು ಹಾಗೂ ಕೈ ಎರಡಕ್ಕೂ ವ್ಯಾಯಾಮ ಸಿಗುತ್ತದೆ. ಮೊದಲು ಪಾದಗಳನ್ನು ಒಟ್ಟಿಗೆ ಜೋಡಿಸಿ ತೋಳುಗಳನ್ನು ಮೇಲಕ್ಕೆ ಎತ್ತಬೇಕು. ನಂತರ ಪಾದಗಳನ್ನು ಎಡ ಹಾಗೂ ಬಲ ಬದಿಗೆ ಸರಿಸಿ ತೋಳುಗಳನ್ನು ಮೇಲಕ್ಕೆ ಎತ್ತಬೇಕು. ಹೀಗೆ ಈ ವ್ಯಾಯಾಮವನ್ನು 15 ನಿಮಿಷಗಳ ಕಾಲ ಮಾಡುವುದರಿಂದ ಇದು ನಿಮ್ಮ ಹೃದಯ ಬಡಿತವನ್ನು ಹೆಚ್ಚಿಸುತ್ತದೆ. ಕ್ಯಾಲೊರಿಗಳನ್ನು ಸುಡಲು ಇದು ಸಹಕಾರಿ. ಬೆಲ್ಲಿ ಫ್ಯಾಟ್‌ ಸೇರಿದಂತೆ ಒಟ್ಟಾರೆ ದೇಹದ ಕೊಬ್ಬು ಕರಗಲು ಇದು ಸಹಕಾರಿ.

ಮೌಂಟೈನ್‌ ಕ್ಲೈಂಬರ್ಸ್‌

ಬೆಲ್ಲಿ ಫ್ಯಾಟ್‌ ಕರಗಿಸಲು ಪ್ರಯತ್ನಿಸುವವರು ಪ್ರತಿದಿನ ಪರ್ವತ ಅಥವಾ ಗುಡ್ಡವನ್ನು ಏರುವ ಭಂಗಿಯಲ್ಲಿ ವ್ಯಾಯಾಮ ಮಾಡಬೇಕು. ದೇಹವನ್ನು ಉಲ್ಟಾವಾಗಿಸಿ ಕೈ ಮುಂದಕ್ಕೆ ಚಾಚಿ ಕಾಲಿನಿಂದ ಪರ್ವತ ಹತ್ತುವಂತಹ ಭಂಗಿಯಲ್ಲಿ ಇರಬೇಕು. ಇದನ್ನು ಮಾಡುವುದರಿಂದ ಬೇರೆ

ಯಾವುದೇ ವ್ಯಾಯಾಮಗಳು ಬೇಡ. ಇದು ಪಾದದಿಂದ ಇಡೀ ದೇಹಕ್ಕೆ ವ್ಯಾಯಾಮ ನೀಡುತ್ತದೆ. ಇದು ಕೋರ್‌ ಎಕ್ಸ್‌ಸೈಸ್‌. ಇದು ಕೂಡ ಹೃದಯ ಬಡಿತವನ್ನು ಹೆಚ್ಚಿಸಿ, ಬೆಲ್ಲಿ ಫ್ಯಾಟ್‌ ಕಡಿಮೆಯಾಗಲು ಉತ್ತಮ ವ್ಯಾಯಾಮ.

ಬೈಸಿಕಲ್‌ ಕ್ರಂಚಸ್‌

ಅಂಗಾತ ಮಲಗಿ ಕೈಗಳನ್ನು ಮಡಚಿ ತಲೆ ಹಿಂದಕ್ಕೆ ಇರಿಸಿ. ಈಗ ಕಾಲುಗಳಿಂದ ಸೈಕಲ್‌ ತುಳಿಯುವಂತೆ ಹಿಂದಕ್ಕೆ ಮುಂದಕ್ಕೆ ಚಲಿಸುವಂತೆ ಮಾಡಿ. ಇದನ್ನು ಕೂಡ ಪ್ರತಿದಿನ 15 ನಿಮಿಷಗಳ ಕಾಲ ಮಾಡುವುದರಿಂದ ಸೊಂಟದ ಸುತ್ತಲಿನ ಬೊಜ್ಜು, ಹೊಟ್ಟೆಯ ಸುತ್ತಲಿನ ಬೊಜ್ಜು ಎಲ್ಲವೂ ಕಡಿಮೆಯಾಗುತ್ತದೆ. ಇದು ದೇಹದಲ್ಲಿ ಕ್ಯಾಲೊರಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಹೈ ನೀಸ್‌

ನೇರವಾಗಿ ನೆಲದ ಮೇಲೆ ನಿಂತುಕೊಂಡು ಮೊಣಕಾಲುಗಳನ್ನು ಮಡಿಚುವುದು ಹೀಗಿ ಮಡಿಚುವಾಗ ಬಲಗೈ ಎಡಗಾಲಿನ ಮೊಣಕಾಲಿಗೆ ಎಡಗೈ ಬಲಗಾಲಿನ ಮೊಣಕಾಲಿಗೆ ತಾಕಬೇಕು. ಇದು ಕೂಡ ಬೆಲ್ಲಿ ಫ್ಯಾಟ್‌ ಕರಗಿಸಲು ನೆರವಾಗುವ ಬೆಸ್ಟ್‌ ವ್ಯಾಯಾಮ.

ಪ್ಲಾಂಕ್‌ ವ್ಯಾಯಾಮ

ಪ್ಲಾಂಕ್‌ ವ್ಯಾಯಾಮ ಆರಂಭದಲ್ಲಿ ತೀರ ಕಷ್ಟ ಎನ್ನಿಸಿದರೂ ಕೂಡ ಇದು ಬೆಲ್ಲಿ ಫ್ಯಾಟ್‌ ಕರಗಿಸಲು ಬಹಳ ಪರಿಣಾಮಕಾರಿ. ನೆಲದ ಮೇಲೆ ಉಲ್ಟಾ ಮಲಗಿ ಹೆಬ್ಬೆರಳು ಹಾಗೂ ಮುಷ್ಟಿಯ ಸಹಾಯದ ಮೇಲೆ ಇಡೀ ದೇಹ ನಿಲ್ಲುವಂತೆ ಮಾಡಬೇಕು. ಇದನ್ನು ಮೊದಲು ಮೊದಲು ಕಡಿಮೆ ಸಮಯ ಮಾಡಿ ಅಭ್ಯಾಸವಾದ ಮೇಲೆ ಅವಧಿಯನ್ನು ಹೆಚ್ಚಿಸಿ.

ರಷ್ಯನ್‌ ಟ್ವಿಸ್ಟ್‌

ಇದು ಕೂಡ ಮನೆಯಲ್ಲಿ ಸುಲಭವಾಗಿ ಮಾಡಬಹುದಾದ ವ್ಯಾಯಾಮ. ಅಲ್ಲದೆ ಸೊಂಟದ ಸುತ್ತಲಿನ ಬೊಜ್ಜು ಕರಗಲು ಇದು ಬೆಸ್ಟ್‌ ವ್ಯಾಯಾಮ ಕೂಡ ಹೌದು. ನೆಲದ ಮೇಲೆ ಕುಳಿತು ಕಾಲುಗಳನ್ನು ಅರ್ಧ ಏರಿಸಿ ಕೈಗಳನ್ನು ಎಡಕ್ಕೆ ಬಲಕ್ಕೆ ತಿರುಗಿಸುವುದು. ಇದು ಸುಲಭ ಎನ್ನಿಸಿದರೂ ಪರಿಣಾಮಕಾರಿ ವ್ಯಾಯಾಮ.

ಬರ್ಪೀಸ್‌

ಮೊದಲು ನೇರವಾಗಿ ನಿಂತುಕೊಳ್ಳುವುದು ನಂತರ ನೆಲದ ಮೇಲೆ ಜಿಗಿದು ಕೈಗಳನ್ನು ಮುಂದೆ ಚಾಚುವುದು. ಇದರಲ್ಲಿ ಐದಾರು ಬಗೆಯ ವ್ಯಾಯಾಮವ ಭಂಗಿಗಳು ಬರುತ್ತವೆ. ಇದರಲ್ಲಿ ಪುಶ್‌ ಅಪ್‌ ಕೂಡ ಒಂದು. ಬರ್ಪೀಸ್‌ ಇಡೀ ದೇಹಕ್ಕೆ ವ್ಯಾಯಾಮವನ್ನು ಒದಗಿಸುತ್ತದೆ. ಇದು ಕ್ಯಾಲೊರಿ ಸುಡಲು ಪರಿಣಾಮಕಾರಿ ವ್ಯಾಯಾಮವು ಹೌದು.

ಈ ವ್ಯಾಯಾಮಗಳನ್ನು ಆರಂಭದಲ್ಲಿ 1 ರಿಂದ 2 ನಿಮಿಷಗಳ ಕಾಲ ಮಾಡಿ. ನಂತರ ನಿಧಾನಕ್ಕೆ ಅಭ್ಯಾಸವಾದ ಹಾಗೆ ಅವಧಿಯನ್ನು ಹೆಚ್ಚಿಸಿ. ಆದರೆ ಇಂತಹ ಯಾವುದೇ ವ್ಯಾಯಾಮವನ್ನು ಮಾಡುವ ಮುನ್ನ ತಜ್ಞರಿಂದ ಸಲಹೆ ಪಡೆಯುವುದು ಉತ್ತಮ. ಅಲ್ಲದೆ ವ್ಯಾಯಾಮ ಎಷ್ಟೇ ಪರಿಣಾಮಕಾರಿಯಾಗಿದ್ದರೂ ಇದರೊಂದಿಗೆ ಸೂಕ್ತ ಆಹಾರಕ್ರಮ ಪಾಲಿಸುವುದು ಅಷ್ಟೇ ಮುಖ್ಯ ಎಂಬುದನ್ನು ಮರೆಯಬಾರದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ