logo
ಕನ್ನಡ ಸುದ್ದಿ  /  ಜೀವನಶೈಲಿ  /  Bread Pizza: ಸಖತ್‌ ಟೇಸ್ಟಿಯಾಗಿರೋ ಬ್ರೆಡ್‌ ಪಿಜ್ಜಾ, ಆರೋಗ್ಯಕ್ಕೂ ಬೆಸ್ಟ್‌; ಐದೇ ನಿಮಿಷದಲ್ಲಿ ತಯಾರಾಗೋ ಸ್ಪೆಷಲ್‌ ರೆಸಿಪಿ ಇದು

Bread Pizza: ಸಖತ್‌ ಟೇಸ್ಟಿಯಾಗಿರೋ ಬ್ರೆಡ್‌ ಪಿಜ್ಜಾ, ಆರೋಗ್ಯಕ್ಕೂ ಬೆಸ್ಟ್‌; ಐದೇ ನಿಮಿಷದಲ್ಲಿ ತಯಾರಾಗೋ ಸ್ಪೆಷಲ್‌ ರೆಸಿಪಿ ಇದು

Reshma HT Kannada

Oct 17, 2023 07:07 PM IST

google News

ಬ್ರೆಡ್‌ ಪಿಜ್ಜಾ

    • Bread Pizza Recipe in Kannada: ಸಖತ್‌ ಟೇಸ್ಟಿ ಹಾಗೂ ಹೆಲ್ತಿ ಆಗಿರೋ ಬ್ರೆಡ್‌ ಪಿಜ್ಜಾವನ್ನು ಮನೆಯಲ್ಲೂ ತಯಾರಿಸಬಹುದು. ಈ ಬ್ರೆಡ್‌ ಪಿಜ್ಜಾಗೆ ರೆಸ್ಟೊರೆಂಟ್‌ ರುಚಿ ಬರಲು ಏನು ಮಾಡಬೇಕು ನೋಡಿ. ಈ ಸಿಂಪಲ್‌ ರೆಸಿಪಿಯನ್ನು ನೀವು ಕಲಿಯಿರಿ.
ಬ್ರೆಡ್‌ ಪಿಜ್ಜಾ
ಬ್ರೆಡ್‌ ಪಿಜ್ಜಾ (freepik)

ಆಗೊಮ್ಮೆ ಈಗೊಮ್ಮೆ ಒಂದಿಷ್ಟು ಭಿನ್ನ ರುಚಿಯ ತಿಂಡಿಗಳನ್ನು ತಿನ್ನಬೇಕು. ಇಲ್ಲದಿದ್ದರೆ ನಾಲಿಗೆ ಜಡ್ಡುಕಟ್ಟುತ್ತೆ. ಹಾಗಂತ ಹೊರಗಡೆ ತಿಂದು ಆರೋಗ್ಯ ಹಾಳು ಮಾಡಿಕೊಳ್ಳುವ ಬದಲು ಮನೆಯಲ್ಲೇ ಡಿಫ್ರೆಂಟ್‌ ರುಚಿಯನ್ನು ಟ್ರೈ ಮಾಡಬಹುದು. ಹೀಗೆ ನೀವು ಭಿನ್ನ ರುಚಿಯ ತಿಂಡಿ ಮಾಡಬೇಕು ಅಂದುಕೊಂಡಿದ್ರೆ ಸರಳ ಮತ್ತು ರುಚಿಕರವಾದ ಬ್ರೆಡ್ ಪಿಜ್ಜಾವನ್ನು ಪ್ರಯತ್ನಿಸಬಹುದು. ಮೈದಾಹಿಟ್ಟಿನ ಬ್ರೆಡ್‌ ಬದಲು ವಿವಿಧ ಧಾನ್ಯಗಳಿಂದ ಮಾಡಿದ ಬ್ರೆಡ್‌ ಅಥವಾ ಗೋಧಿ ಬ್ರೆಡ್ ಆಯ್ಕೆ ಮಾಡಿ. ಬೆಳಗಿನ ಉಪಾಹಾರಕ್ಕೆ ಇದು ಬೆಸ್ಟ್‌ ಆಯ್ಕೆ ಆಗುವುದರಲ್ಲಿ ಎರಡು ಮಾತಿಲ್ಲ. ನಿಮಗೆ ಅಗತ್ಯವಿಲ್ಲದಿದ್ದರೆ ಚೀಸ್ ಅನ್ನು ಬಿಟ್ಟುಬಿಡಬಹುದು. ಇದು ನಿಮ್ಮ ಆಯ್ಕೆಗೆ ಬಿಟ್ಟಿದ್ದು.

ಜೀವನಶೈಲಿಗೆ ಸಂಬಂಧಿಸಿದ ಲೇಖನಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ಬ್ರೆಡ್‌ ಪಿಜ್ಜಾ

ಬೇಕಾಗುವ ಪದಾರ್ಥಗಳು: ಬ್ರೆಡ್‌ - 4 ಸ್ಲೈಸ್‌, ಬೆಣ್ಣೆ ಅಥವಾ ಆಲಿವ್ ಎಣ್ಣೆ - 4 ಚಮಚ, ಪಿಜ್ಜಾ ಸಾಸ್, ಈರುಳ್ಳಿ - 1 (ಹೆಚ್ಚಿಕೊಳ್ಳಿ), ಕ್ಯಾಪ್ಸಿಕಂ - 1 ಮಧ್ಯಮ ಗಾತ್ರದ್ದು (ಸಣ್ಣದಾಗಿ ಹೆಚ್ಚಿಕೊಳ್ಳಿ), ಟೊಮೆಟೊ - 1 ಮಧ್ಯಮ ಗಾತ್ರದ್ದು, ಒರೆಗಾನೊ ಪೌಡರ್‌ - ಸ್ವಲ್ಪ, ಖಾರದ ಪುಡಿ - ಸ್ವಲ್ಪ, ಚೀಸ್‌ - 2 ಚಮಚ, ಚಿಲ್ಲಿ ಫ್ಲೇಕ್ಸ್‌ - 1 ಚಮಚ,

ತಯಾರಿಸುವ ವಿಧಾನ: ಅಗಲವಾದ ಪ್ಯಾನ್‌ ಅಥವಾ ತವಾ ಬಿಸಿ ಮಾಡಿ. ತವಾಕ್ಕೆ ಸ್ವಲ್ಪ ತುಪ್ಪ ಸವರಿ ಬಿಸಿಯಾದ ಮೇಲೆ ಬ್ರೆಡ್ ಸ್ಲೈಸ್ ಇಡಿ.

ಎರಡೂ ಕಡೆ ಬಣ್ಣ ಬದಲಾಗುವವರೆಗೆ ಮಗುಚಿ ಹಾಕಿ. ಈಗ ಕಾಯಿಸಿಕೊಂಡ ಬ್ರೆಡ್ ಮೇಲೆ ಸ್ವಲ್ಪ ಪಿಜ್ಜಾ ಸಾಸ್ ಹರಡಿ. ಅದರ ಮೇಲೆ ಈರುಳ್ಳಿ ತುಂಡುಗಳು ಮತ್ತು ತರಕಾರಿ ತುಂಡುಗಳನ್ನು ಜೋಡಿಸಬೇಕು.

ಕೊನೆಯಲ್ಲಿ ಓರೆಗಾನೊ ಮತ್ತು ಕಾಳುಮೆಣಸಿನ ಪುಡಿಯನ್ನು ಸಿಂಪಡಿಸಿ. ಅಂತಿಮವಾಗಿ ಚೀಸ್ ಸೇರಿಸಿ. ಚೀಸ್ ಕರಗುವ ತನಕ ಒಂದು ನಿಮಿಷ ಹಾಗೆ ಬಿಡಿ. ಓವೆನ್‌ನಲ್ಲಿ ಬಿಸಿ ಮಾಡಿ. ಕೊನೆಯಲ್ಲಿ ಚಿಲ್ಲಿ ಫ್ಲೇಕ್ಸ್‌ ಸಿಂಪಡಿಸಿ ತಿನ್ನಲು ಕೊಡಿ. ಇದನ್ನು ಮಕ್ಕಳನ್ನು ಹೆಚ್ಚು ಇಷ್ಟಪಟ್ಟು ತಿನ್ನುತ್ತಾರೆ.

ಇದನ್ನೂ ಓದಿ

ಚಪಾತಿ ಮಿಕ್ಕಿದೆ ಅಂತ ಚಿಂತೆ ಮಾಡ್ಬೇಡಿ, ಹತ್ತೇ ನಿಮಿಷದಲ್ಲಿ ಸೂಪರ್‌ ಟೇಸ್ಟಿ ಉಪ್ಪಿಟ್ಟು ಮಾಡ್ಕೊಂಡು ತಿನ್ನಿ, ಇಲ್ಲಿದೆ ರೆಸಿಪಿ

ಪ್ರತಿದಿನ ರಾತ್ರಿ ಊಟಕ್ಕೆ ಚಪಾತಿ ತಯಾರಿಸಿ ತಿನ್ನೋದು ಹಲವರಿಗೆ ರೂಢಿ. ಆದರೆ ಕೆಲವೊಮ್ಮೆ ಚಪಾತಿ ಮಿಕ್ಕಬಹುದು. ಅದನ್ನ ಏನ್‌ ಮಾಡೋದು ಬೆಳಿಗ್ಗೆ ತಿನ್ನೋದು ಕಷ್ಟ, ಎಸಿಯೋಣ ಅಂದ್ರೆ ಆಹಾರ ವೇಸ್ಟ್‌ ಮಾಡೋಕು ಮನಸ್ಸಾಗೊಲ್ಲ ಅಂತಿದ್ರೆ, ಇಲ್ಲಿದೆ ಬೆಸ್ಟ್‌ ಐಡಿಯಾ. ಈ ಚಪಾತಿಯಲ್ಲಿ ರುಚಿ ರುಚಿಯಾದ ಉಪ್ಪಿಟ್ಟು ತಯಾರಿಸಬಹುದು. ಹೇಗೆ ಅಂತಿರಾ, ಮುಂದೆ ಓದಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ