logo
ಕನ್ನಡ ಸುದ್ದಿ  /  ಜೀವನಶೈಲಿ  /  Tasteatlas: ಅತ್ಯಂತ ಕೆಟ್ಟ ಬೀದಿ ಬದಿ ತಿನಿಸುಗಳ ಪಟ್ಟಿಯಲ್ಲಿ ದಹಿಪುರಿಗೆ ಮೊದಲ ಸ್ಥಾನ; ಇನ್ನು ಯಾವ ಯಾವ ತಿಂಡಿಗಳು ಈ ಪಟ್ಟಿಯಲ್ಲಿವೆ ನೋಡಿ

TasteAtlas: ಅತ್ಯಂತ ಕೆಟ್ಟ ಬೀದಿ ಬದಿ ತಿನಿಸುಗಳ ಪಟ್ಟಿಯಲ್ಲಿ ದಹಿಪುರಿಗೆ ಮೊದಲ ಸ್ಥಾನ; ಇನ್ನು ಯಾವ ಯಾವ ತಿಂಡಿಗಳು ಈ ಪಟ್ಟಿಯಲ್ಲಿವೆ ನೋಡಿ

Reshma HT Kannada

Aug 22, 2023 11:42 AM IST

google News

ಅತ್ಯಂತ ಕೆಟ್ಟ ಭಾರತೀಯ ಬೀದಿ ಬದಿ ತಿನಿಸುಗಳ ಪಟ್ಟಿಯಲ್ಲಿ ದಹಿಪುರಿಗೆ ಮೊದಲ ಸ್ಥಾನ

    • ಟೇಸ್ಟ್‌ ಅಟ್ಲಾಸ್‌ ಅತ್ಯಂತ ಕಳೆದ ದರ್ಜೆಯ ಭಾರತೀಯ ಬೀದಿ ಬದಿ ಆಹಾರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ದಹಿಪುರಿ ಮೊದಲ ಸ್ಥಾನ ಗಳಿಸಿದೆ. ಇನ್ನು ಯಾವ ಯಾವ ತಿಂಡಿಗಳು ಕಳಪೆ ದರ್ಜೆ ಆಹಾರಗಳ ಪಟ್ಟಿಯಲ್ಲಿ ಹೆಸರು ಗಳಿಸಿವೆ ನೋಡಿ.
ಅತ್ಯಂತ ಕೆಟ್ಟ ಭಾರತೀಯ ಬೀದಿ ಬದಿ ತಿನಿಸುಗಳ ಪಟ್ಟಿಯಲ್ಲಿ ದಹಿಪುರಿಗೆ ಮೊದಲ ಸ್ಥಾನ
ಅತ್ಯಂತ ಕೆಟ್ಟ ಭಾರತೀಯ ಬೀದಿ ಬದಿ ತಿನಿಸುಗಳ ಪಟ್ಟಿಯಲ್ಲಿ ದಹಿಪುರಿಗೆ ಮೊದಲ ಸ್ಥಾನ

ಚಾಟ್ಸ್‌ ತಿನ್ನುವುದು ಹಲವರಿಗೆ ಫೇವರಿಟ್‌.  ಇಳಿ ಸಂಜೆಯ ಚಳಿಗಾಳಿಯಲ್ಲಿ ಚಾಟ್‌ ಮೆಲ್ಲುತ್ತಿದ್ದರೆ ಇದರಲ್ಲಿ ಸಿಗುವ ಖುಷಿಯೇ ಬೇರೆ. ಮಸಾಲಪುರಿ, ಬೇಲ್‌ಪುರಿ, ಪಾನಿಪುರಿ, ದಹಿಪುರಿ, ಆಲೂ ಚಾಟ್‌ ಹೆಸರು ಕೇಳುತ್ತಿದ್ದರೆ ಬಾಯಲ್ಲಿ ನೀರೂರುತ್ತದೆ. ಆದರೆ ಚಾಟ್‌ ಪ್ರಿಯರಿಗೆ ಒಂದು ಕಹಿ ಸುದ್ದಿ ಇದೆ. ಅದೇನೆಂದರೆ ಭಾರತೀಯ ಬೀದಿ ಬದಿ ಆಹಾರಗಳ ಪೈಕಿ ಅತ್ಯಂತ ಕೆಟ್ಟ ಆಹಾರಗಳ ಪಟ್ಟಿ ಬಿಡುಗಡೆಯಾಗಿದೆ. ಇದರಲ್ಲಿ ಹಲವು ಚಾಟ್‌ ಐಟಂಗಳಿವೆ. ಈ ಪಟ್ಟಿಯಲ್ಲಿ ಹಲವರ ಫೇವರಿಟ್‌ ದಹಿಪುರಿ ಅಗ್ರಸ್ಥಾನ ಪಡೆದಿದೆ. ಹಾಗಾದರೆ ಇನ್ನೂ ಯಾವುದೆಲ್ಲಾ ಕೆಟ್ಟ ಆಹಾರಗಳ ಪಟ್ಟಿಯಲ್ಲಿ ಸ್ಥಾನ ಗಳಿಸಿವೆ ನೋಡಿ. 

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಲೇಖನಗಳಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಆನ್‌ಲೈನ್‌ ಫುಡ್‌ ಮತ್ತು ಟ್ರಾವೆಲ್‌ ಗೈಡ್‌ ಟೇಸ್ಟ್‌ ಅಟ್ಲಾಸ್‌ ಇತ್ತೀಚೆಗೆ ಕಡಿಮೆ ರೇಟಿಂಗ್‌ ಪಡೆದ ಭಾರತೀಯ ಬೀದಿ ಆಹಾರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಮಹಾರಾಷ್ಟ್ರ ಮೂಲದ ದಹಿ ಪುರಿ ಅಗ್ರ ಸ್ಥಾನ ಪಡೆದಿದೆ. ಇದು ಒಟ್ಟು 2508 ರೇಟಿಂಗ್‌ ಪಡೆದಿದೆ. ಇದರಲ್ಲಿ ಕೇವಲ 1,773 ಕಾನೂನು ಬದ್ಧವಾಗಿ ಪಡೆದ ರೇಟಿಂಗ್‌ ಎಂದು ಟೇಸ್ಟ್‌ ಆಟ್ಲಾಸ್‌ ತಿಳಿಸಿದೆ.

ಸೇವ್‌, ದಾಬೇಲಿಯೂ ಕೆಟ್ಟ ತಿಂಡಿ

ಕಡಲೆಹಿಟ್ಟು ಹಾಗೂ ಮಸಾಲೆ ಪದಾರ್ಥಗಳನ್ನು ಸೇರಿಸಿ ತಯಾರಿಸುವ ಮಧ್ಯಪ್ರದೇಶ ಮೂಲದ ತಿನಿಸು ಸೇವ್‌ ಎರಡನೇ ಕೆಟ್ಟ ತಿನಿಸು ಎನ್ನಿಸಿಕೊಂಡಿದೆ. ಆಲೂಗೆಡ್ಡೆ ಸ್ಮ್ಯಾಶ್‌ ಮಾಡಿ, ಬನ್‌ ನಡುವೆ ಸೇರಿಸಿ ಕೊಡುವ ಗುಜರಾತ್‌ ಮೂಲಕ ತಿಂಡಿ ದಾಬೇಲಿ ಕೂಡ ಕೆಟ್ಟ ಆಹಾರಗಳ ಪಟ್ಟಿಯಲ್ಲಿ ಹೆಸರು ಪಡೆದಿದೆ. ಬಾಂಬೆ ಸ್ಯಾಂಡ್‌ವಿಚ್‌ ಕೆಟ್ಟ ಆಹಾರಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಬ್ರೆಡ್‌ ತುಂಡುಗಳ ನಡುವೆ ತರಕಾರಿ, ಮಸಾಲೆ ಸೇರಿಸಿ ಇರುವ ಮುಂಬೈನಲ್ಲಿ ಹೆಚ್ಚು ಖ್ಯಾತಿಯಲ್ಲಿರುವ ಈ ತಿಂಡಿಗೆ ಕೆಟ್ಟ ತಿಂಡಿ ಎನ್ನುವ ಪಟ್ಟ ದೊರಕಿದೆ.

ಎಗ್‌ ಬುರ್ಜಿ, ದಹಿ ವಡಾ ಮತ್ತು ಸಾಬುದಾನ ವಡಾ ಇವು ಕ್ರಮವಾಗಿ ಐದು, ಆರು ಹಾಗೂ ಏಳನೇ ಸ್ಥಾನ ಗಳಿಸಿವೆ.

ಅತ್ಯಂತ ಕೆಟ್ಟ ತಿಂಡಿಗಳ ಪಟ್ಟಿಯಲ್ಲಿ 8ನೇ ಸ್ಥಾನಗಳಿಸಿರುವುದು ಉತ್ತರ ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಖ್ಯಾತಿ ಪಡೆದಿರುವ ಪುರಿ ಚಾಟ್‌. ಇದಕ್ಕೂ ಕೂಡ ಕಡಿಮೆ ರೇಟಿಂಗ್‌ ಸಿಕ್ಕಿದ್ದು ಕೆಟ್ಟ ತಿಂಡಿ ಎನ್ನಿಸಿದೆ.

ಒಂಬತ್ತನೇ ಸ್ಥಾನದಲ್ಲಿ ಉತ್ತರ ಭಾರತದ ಸಾಂಪ್ರದಾಯಿಕ ತಿಂಡಿಯಾದ ಗೋಬಿ ಪರೋಟವಿದೆ.

ಈ ಲಿಸ್ಟ್‌ನ ಕೊನೆಯ ಸ್ಥಾನದಲ್ಲಿ ಕರಿದ ತಿನಿಸು ಹಾಗೂ ಎಲ್ಲರೂ ಇಷ್ಟಪಡುವ ಬೊಂಡವಿದೆ. ಈ ಫುಡ್‌ ಲಿಸ್ಟ್‌ನಲ್ಲಿ ನಿಮ್ಮ ಇಷ್ಟದ ತಿಂಡಿಗಳು ಇವೆಯೇ ನೋಡಿ.

ಇದನ್ನೂ ಓದಿ 

Indian Desserts: ವಿಶ್ವದ ಅಗ್ರ ಬೀದಿಬದಿ ಆಹಾರಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಮೂರು ಸಿಹಿ ತಿನಿಸುಗಳು; ಇದರಲ್ಲಿ ಕರ್ನಾಟಕದ ಪಾಲೂ ಇದೆ

ಟೇಸ್ಟ್‌ ಆಟ್ಲಾಸ್‌ ಇತ್ತೀಚೆಗೆ ವಿಶ್ವದ ಅಗ್ರ ಮೂರು ಭಾರತೀಯ ಬೀದಿ ಬದಿ ಸಿಹಿ ತಿನಿಸುಗಳನ್ನು ಬಹಿರಂಗ ಪಡಿಸಿದೆ. ಈ ಪಟ್ಟಿಯಲ್ಲಿ ಯಾವ ಭಕ್ಷ್ಯಗಳು ಸ್ಥಾನ ಪಡೆದಿವೆ ಎಂಬುದನ್ನು ತಿಳಿಯಲು ಮುಂದೆ ಓದಿ.

ಆಚರಣೆ, ಸಂಸ್ಕಾರ, ಸಂಸ್ಕೃತಿಯಂತೆ ಆಹಾರ ಸಂಸ್ಕೃತಿಯಲ್ಲೂ ಭಾರತ ಭಿನ್ನವಾಗಿದೆ. ಬಹಳ ಹಿಂದಿನ ಕಾಲದಿಂದಲೂ ಭಾರತದಲ್ಲಿ ಭಿನ್ನ ಆಹಾರ ಪದಾರ್ಥಗಳು ಜಗತ್ತಿನ ಗಮನ ಸೆಳೆದಿವೆ. ಅಲ್ಲದೆ ಇಂದಿಗೂ ಭಾರತೀಯ ಭಕ್ಷ್ಯಗಳು ಜಗತ್ತಿನಾದ್ಯಂತ ಖ್ಯಾತಿ ಪಡೆಯುತ್ತಲೇ ಇವೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ