logo
ಕನ್ನಡ ಸುದ್ದಿ  /  ಜೀವನಶೈಲಿ  /  ಚಳಿಗಾಲಕ್ಕೆ ಸಖತ್ ಆಗಿರುತ್ತೆ ಗರಿಗರಿ ಬೆಳ್ಳುಳ್ಳಿ ಖಾರ ಮಂಡಕ್ಕಿ, 5 ನಿಮಿಷದಲ್ಲಿ ತಯಾರಾಗುವ ಈ ರೆಸಿಪಿ ನಿಮಗೂ ಇಷ್ಟ ಆಗುತ್ತೆ, ಟ್ರೈ ಮಾಡಿ

ಚಳಿಗಾಲಕ್ಕೆ ಸಖತ್ ಆಗಿರುತ್ತೆ ಗರಿಗರಿ ಬೆಳ್ಳುಳ್ಳಿ ಖಾರ ಮಂಡಕ್ಕಿ, 5 ನಿಮಿಷದಲ್ಲಿ ತಯಾರಾಗುವ ಈ ರೆಸಿಪಿ ನಿಮಗೂ ಇಷ್ಟ ಆಗುತ್ತೆ, ಟ್ರೈ ಮಾಡಿ

Reshma HT Kannada

Nov 12, 2024 03:54 PM IST

google News

ಬೆಳ್ಳುಳ್ಳಿ ಖಾರ ಮಂಡಕ್ಕಿ

    • ಚಳಿಗಾಲದಲ್ಲಿ ಗರಿಗರಿಯಾದ, ಖಾರ ಖಾರವಾದ ತಿಂಡಿಗಳನ್ನ ತಿನ್ನಬೇಕು ಅನ್ನಿಸೋದು ಸಹಜ. ಆದ್ರೆ ಯಾವಾಗ್ಲೂ ಬೊಂಡ, ಬಜ್ಜಿ ತಿಂದ್ರೆ ಬೇಸರ ಬರುತ್ತೆ, ಅದಕ್ಕಾಗಿ ಈ ಬಾರಿ ನೀವು ಮಂಡಕ್ಕಿ ಸ್ಪೆಷಲ್ ಮಾಡಿ. ಇಲ್ಲಿದೆ ಬೆಳ್ಳುಳ್ಳಿ ಖಾರ ಮಂಡಕ್ಕಿ ರೆಸಿಪಿ, ಇದನ್ನ ಒಮ್ಮೆ ತಿಂದ್ರೆ ಇದರ ರುಚಿಗೆ ನೀವು ಫಿದಾ ಆಗ್ತೀರಿ. ಸಿಂಪಲ್ ಆಗಿ ಮಾಡಬಹುದಾದ ರೆಸಿಪಿ ಇದು. 
ಬೆಳ್ಳುಳ್ಳಿ ಖಾರ ಮಂಡಕ್ಕಿ
ಬೆಳ್ಳುಳ್ಳಿ ಖಾರ ಮಂಡಕ್ಕಿ (PC: Veg Recipes of Karnataka)

ಮಂಡಕ್ಕಿ ಕರ್ನಾಟಕದಲ್ಲಿ ಸಖತ್ ಫೇಮಸ್. ಗರಿಗರಿಯಾದ ಮಂಡಕ್ಕಿ ತಿನ್ನೋಕೆ ಸೂಪರ್ ಆಗಿರುತ್ತೆ. ಮಂಡಕ್ಕಿಯಿಂದ ಸೂಸ್ಲಾ, ಉಪ್ಕರಿ, ಮಂಡಕ್ಕಿ ಒಗ್ಗರಣೆ ಹೀಗೆ ಬಗೆ ಬಗೆಯ ಚಾಟ್ಸ್‌, ಸ್ನ್ಯಾಕ್ಸ್‌ಗಳನ್ನ ಮಾಡಬಹುದು. ಇದನ್ನು ನೀವು ತಿಂದು ಕೂಡ ಇರ್ತೀರಾ.

ಆದ್ರೆ ನೀವು ಯಾವತ್ತಾದ್ರೂ ಬೆಳುಳ್ಳಿ ಮಂಡಕ್ಕಿ ತಿಂದಿದ್ದೀರಾ. ಈ ಚುಮುಚುಮು ಚಳಿಯಲ್ಲಿ, ಮೋಡ ಕವಿದ ವಾತಾವರಣದಲ್ಲಿ ಬೆಳ್ಳುಳ್ಳಿ ಮಂಡಕ್ಕಿ ತಿನ್ನೋಕೆ ಸಖರ್ ಆಗಿರುತ್ತೆ. ಕಡಿಮೆ ಸಾಮಗ್ರಿ ಬಳಸಿ, ಥಟ್ಟಂತ ಅಂತ ತಯಾರಾಗೋ ರೆಸಿಪಿನಾ ಒಮ್ಮೆ ತಿಂದ್ರೆ ಮತ್ತೆ ಮತ್ತೆ ತಿಂತಾನೇ ಇರ್ಬೇಕು ಅನ್ಸುತ್ತೆ. ಹಾಗಾದ್ರೆ ಬೆಳ್ಳುಳ್ಳಿ ಮಂಡಕ್ಕಿ ಮಾಡೋದು ಹೇಗೆ ನೋಡಿ.

ಇಲ್ಲಿದೆ 2 ರೀತಿಯಲ್ಲಿ ಬೆಳುಳ್ಳಿ ಮಂಡಕ್ಕಿ ಮಾಡುವ ವಿಧಾನ. Veg Recipes of Karnataka ಎಂಬ ಯೂಟ್ಯೂಬ್ ಪೇಜ್‌ನಲ್ಲಿ ಈ ಮಂಡಕ್ಕಿ ಸ್ನ್ಯಾಕ್ಸ್ ಮಾಡುವ ವಿಧಾನವನ್ನು ಹಂಚಿಕೊಳ್ಳಲಾಗಿದೆ. ಇದಕ್ಕೆ ಇವರು ಹಸಿ ಖಾರ ಮಂಡಕ್ಕಿ, ಒಣ ಖಾರ ಮಂಡಕ್ಕಿ ಎಂದು ಹೆಸರು ಇಟ್ಟಿದ್ದಾರೆ. ಇದು ಐದೇ ನಿಮಿಷದಲ್ಲಿ ತಯಾರಾಗುವ ರೆಸಿಪಿ ಆಗಿದೆ.

ಬೆಳುಳ್ಳಿ ಹಸಿ ಖಾರ ಮಂಡಕ್ಕಿ

ಬೇಕಾಗುವ ಸಾಮಗ್ರಿಗಳು: ಮಂಡಕ್ಕಿ – ತೆಂಗಿನತುರಿ – ಅರ್ಧ ಕಪ್‌, ಉಪ್ಪು – ರುಚಿಗೆ, ಬೆಳ್ಳುಳ್ಳಿ – 4 ಎಳಸು, ಹಸಿಮೆಣಸು – 2, ಕೊತ್ತಂಬರಿ ಸೊಪ್ಪು – ಸ್ವಲ್ಪ, ಮಂಡಕ್ಕಿ – 2 ರಿಂದ 3 ಕಪ್‌,

ಬೆಳುಳ್ಳಿ ಹಸಿ ಖಾರ ಮಂಡಕ್ಕಿ ಮಾಡುವ ವಿಧಾನ

ತೆಂಗಿನತುರಿ, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು, ಉಪ್ಪು, ಹಸಿಮೆಣಸು ಈ ಎಲ್ಲವನ್ನೂ ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಳ್ಳಿ. ಮಂಡಕ್ಕಿಯಲ್ಲಿ ಉಪ್ಪು ಇರುವ ಕಾರಣ ಉಪ್ಪು ಹಾಕಿ. ಈ ಮಿಶ್ರಣಕ್ಕೆ ನೀರು ಹಾಕದೇ ರುಬ್ಬಿಕೊಳ್ಳಬೇಕು. ನಂತರ ರುಬ್ಬಿಕೊಂಡ ಮಿಶ್ರಣವನ್ನು ಮಂಡಕ್ಕಿಗೆ ಹಾಕಿ. ಅದರ ಜೊತೆ ಎರಡು ಟೇಬಲ್ ಚಮಚ ಎಣ್ಣೆ ಸೇರಿಸಿ. ಇದನ್ನು ಚೆನ್ನಾಗಿ ಕಲೆಸಿ. ಇದನ್ನು ಮಾಡಿದ ಕೂಡಲೇ ತಿನ್ನಬೇಕು. ಇದನ್ನು ಹೆಚ್ಚು ಹೊತ್ತು ಇಟ್ಟು ತಿಂದರೆ ಚೆನ್ನಾಗಿರುವುದಿಲ್ಲ.

ಬೆಳುಳ್ಳಿ ಒಣ ಖಾರ ಮಂಡಕ್ಕಿ

ಬೇಕಾಗುವ ಸಾಮಗ್ರಿಗಳು: ಒಣಮೆಣಸು – 4, ತೆಂಗಿನತುರಿ – ಅರ್ಧ ಕಪ್, ಬೆಳ್ಳುಳ್ಳಿ – 4 ರಿಂದ 5, ಕರಿಬೇವು – ಐದಾರು ಎಸಳು, ಉಪ್ಪು – ರುಚಿಗೆ, ಮಂಡಕ್ಕಿ – 2 ರಿಂದ ಮೂರು ಕಪ್‌

ಬೆಳುಳ್ಳಿ ಒಣ ಖಾರ ಮಂಡಕ್ಕಿ ಮಾಡುವ ವಿಧಾನ

ಒಣಮೆಣಸು, ಬೆಳ್ಳುಳ್ಳಿ, ಕರಿಬೇವು, ಉಪ್ಪು, ಕಾಯಿ ತುರಿಯನ್ನು ಪುಡಿ ಮಾಡಿಕೊಳ್ಳಿ.ಇದನ್ನು ಮಂಡಕ್ಕಿ ಮೇಲೆ ಸುರಿಯಿರಿ. ಇದರ ಮೇಲೆ ಎರಡು ಚಮಚ ಎಣ್ಣೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಬೆಳ್ಳುಳ್ಳಿ ಒಣ ಖಾರ ಮಂಡಕ್ಕಿ ಕೂಡ ಸಿದ್ಧ.

ಇದು ಸಂಜೆಗೆ ತಿಂಡಿಗೂ ಸಖತ್ ಆಗಿರುತ್ತೆ, ಮಕ್ಕಳು ತಿಂಡಿ ಬೇಕು ಅಂದಾಗ ತಟ್ಟಂಥ ಮಾಡಬಹುದಾದ ರೆಸಿಪಿ ಇದು. ಇದಕ್ಕೆ ತೆಂಗಿನೆಣ್ಣೆ ಬಳಸಿದ್ರೆ ರುಚಿ ಇನ್ನೂ ಸೂಪರ್ ಆಗಿರುತ್ತೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ