logo
ಕನ್ನಡ ಸುದ್ದಿ  /  ಜೀವನಶೈಲಿ  /  Banana Benifits: ಪ್ರತಿದಿನ ಬಾಳೆಹಣ್ಣು ಏಕೆ ತಿನ್ನಬೇಕು? ಮೂಡ್‌ ಸುಧಾರಣೆಯಿಂದ ಹೃದಯದ ಆರೋಗ್ಯದವರೆಗೆ ಇದೆ ಹಲವು ಪ್ರಯೋಜನ

Banana Benifits: ಪ್ರತಿದಿನ ಬಾಳೆಹಣ್ಣು ಏಕೆ ತಿನ್ನಬೇಕು? ಮೂಡ್‌ ಸುಧಾರಣೆಯಿಂದ ಹೃದಯದ ಆರೋಗ್ಯದವರೆಗೆ ಇದೆ ಹಲವು ಪ್ರಯೋಜನ

Praveen Chandra B HT Kannada

Jun 11, 2024 07:00 AM IST

google News

Banana Benifits: ಪ್ರತಿದಿನ ಬಾಳೆಹಣ್ಣು ಏಕೆ ತಿನ್ನಬೇಕು? ಮೂಡ್‌ ಸುಧಾರಣೆಯಿಂದ ಹೃದಯದ ಆರೋಗ್ಯದವರೆಗೆ ಇದೆ ಹಲವು ಪ್ರಯೋಜನ

    • Health Benefits of Banana: ಬಾಳೆಹಣ್ಣು ಸಾಮಾನ್ಯವಾಗಿ ಮಾರುಕಟ್ಟೆಗಳಲ್ಲಿ ಸಿಗುವ ಹಣ್ಣಾಗಿದೆ. ಕಡಿಮೆ ದರದಲ್ಲಿ ದೊರಕುವ ಹಣ್ಣಾಗಿದ್ದರೂ ಸಹ ಬಾಳೆ ಹಣ್ಣಿನಿಂದ ಇರುವ ಲಾಭ ಅಪಾರ. ಹೃದಯದ ಆರೋಗ್ಯವನ್ನು ಕಾಪಾಡುವುದರಿಂದ ಹಿಡಿದು ನರಮಂಡಲದ ಕಾರ್ಯವನ್ನು ಉತ್ತೇಜಿಸುವವರೆಗೂ ಬಾಳೆಹಣ್ಣು ಸಾಕಷ್ಟು ಪ್ರಯೋಜನಗಳನ್ನು ಹೊಂದಿದೆ.
Banana Benifits: ಪ್ರತಿದಿನ ಬಾಳೆಹಣ್ಣು ಏಕೆ ತಿನ್ನಬೇಕು? ಮೂಡ್‌ ಸುಧಾರಣೆಯಿಂದ ಹೃದಯದ ಆರೋಗ್ಯದವರೆಗೆ ಇದೆ ಹಲವು ಪ್ರಯೋಜನ
Banana Benifits: ಪ್ರತಿದಿನ ಬಾಳೆಹಣ್ಣು ಏಕೆ ತಿನ್ನಬೇಕು? ಮೂಡ್‌ ಸುಧಾರಣೆಯಿಂದ ಹೃದಯದ ಆರೋಗ್ಯದವರೆಗೆ ಇದೆ ಹಲವು ಪ್ರಯೋಜನ

ಮನೆಯ ಕೈತೋಟದಲ್ಲಿ ಸುಲಭವಾಗಿ ಬೆಳೆಯುವ ಹಾಗೂ ಮಾರುಕಟ್ಟೆಗಳಲ್ಲಿ ಕಡಿಮೆ ದರಕ್ಕೆ ಸಿಗುವ ಹಣ್ಣು ಎಂದರೆ ಅದು ಬಾಳೆಹಣ್ಣು. ಸಾಕಷ್ಟು ಪೌಷ್ಠಿಕಾಂಶಗಳನ್ನು ಹೊಂದಿರುವ ಬಾಳೆಹಣ್ಣು ಆಗ್ನೇಯ ಏಷ್ಯಾದ ಮೂಲದಿಂದ ಬಂದಿದೆ. ಬಾಳೆಹಣ್ಣನ್ನು ನೀವು ಹಾಗೆಯೇ ಸೇವಿಸಬಹುದು. ಅಥವಾ ವಿವಿಧ ರೀತಿಯ ಸಿಹಿತಿನಿಸುಗಳನ್ನು ತಯಾರಿಸಿ ಕೂಡ ಸವಿಯಬಹುದಾಗಿದೆ. ರುಚಿ ಹಾಗೂ ಪೋಷಣೆಯಲ್ಲಿ ಅಗ್ರಗಣ್ಯ ಸ್ಥಾನದಲ್ಲಿ ಇರುವ ಬಾಳೆಹಣ್ಣನ್ನು ಸೇವಿಸಲು ಇರುವ ಪ್ರಮುಖ ಐದು ಕಾರಣಗಳ ಬಗ್ಗೆ ತಿಳಿದುಕೊಳ್ಳೋಣ :

ಅಗತ್ಯ ಪೋಷಕಾಂಶಗಳ ಸಮಾಗಮ 

 ಬಾಳೆಹಣ್ಣುಗಳು ಪೌಷ್ಠಿಕಾಂಶದ ಪ್ರಮುಖ ಮೂಲ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹೃದಯದ ಆರೋಗ್ಯ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಬಾಳೆಹಣ್ಣು ಪ್ರಮುಖ ಪಾತ್ರ ವಹಿಸುತ್ತದೆ. ಬಾಳೆಹಣ್ಣಿನಲ್ಲಿ ಹೃದಯದ ಆರೋಗ್ಯವನ್ನು ಕಾಫಾಡುವಂತಹ ಪೊಟ್ಯಾಷಿಯಂ, ಆ್ಯಂಟಿ ಆಕ್ಸಿಡಂಟ್ ಗುಣವನ್ನು ಹೆಚ್ಚಿಸುವಂತಹ ವಿಟಮಿನ್ ಸಿ, ಮೆದುಳಿನ ಆರೋಗ್ಯವನ್ನು ಸುಧಾರಿಸುವ ವಿಟಮಿನ್ ಬಿ6 ಸೇರಿದಂತೆ ಇನ್ನೂ ಅನೇಕ ಪೋಷಕಾಂಶಗಳನ್ನು ಹೊಂದಿದೆ. ಉತ್ತಮ ಜೀರ್ಣಕ್ರಿಯೆಯನ್ನು ಪೋಷಿಸುವ ಫೈಬರ್ ಅಂಶವನ್ನು ಸಹ ಬಾಳೆಹಣ್ಣು ಹೊಂದಿದೆ. ಈ ಎಲ್ಲಾ ಪ್ರಮುಖ ಪೋಷಕಾಂಶಗಳು ದೇಹದ ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ.

ಜೀರ್ಣಕ್ರಿಯೆಗೆ ಉತ್ತೇಜನ 

ಬಾಳೆಹಣ್ಣುಗಳಲ್ಲಿ ಫೈಬರ್ ಅಂಶ ಅಗಾಧವಾಗಿದೆ. ಪೆಕ್ಟಿನ್ ರೂಪದಲ್ಲಿರುವ ಕರಗುವ ಫೈಬರ್ ಕರುಳಿನ ಚಲನೆಯನ್ನು ಸರಾಗಗೊಳಿಸುತ್ತದೆ. ಇದರಿಂದ ಮಲಬದ್ಧತೆಯಂತಹ ಸಮಸ್ಯೆಯಿಂದ ಮುಕ್ತಿ ಕಾಣಬಹುದಾಗಿದೆ. ಬಾಳೆಹಣ್ಣುಗಳು ಪ್ರಿಬಯಾಟಿಕ್ ಅಂಶಗಳನ್ನು ಹೊಂದಿದ್ದು ಇವುಗಳು ಸಹ ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ.

ಶಕ್ತಿ ವರ್ಧಕ

ಬಾಳೆಹಣ್ಣುಗಳು ಕಾರ್ಬೋಹೈಡ್ರೇಟ್ನ ಅತ್ಯುತ್ತಮ ಮೂಲವಾಗಿದೆ. ಇವುಗಳಲ್ಲಿ ಗ್ಲುಕೋಸ್, ಫ್ರುಕ್ಟೋಸ್ ಹಾಗೂ ಸುಕ್ರೋಸ್ನಂತಹ ನೈಸರ್ಗಿಕ ಸಕ್ಕರೆಯಂಶವಿದೆ. ಇವುಗಳು ದೇಹಕ್ಕೆ ತ್ವರಿತ ಶಕ್ತಿಯನ್ನು ಒದಗಿಸುತ್ತವೆ. ಕ್ರೀಡಾಪಟುಗಳು ಹಾಗೂ ಜಿಮ್ಗಳಲ್ಲಿ ಹೆಚ್ಚು ಕಾಲ ಕಳೆಯುವವರು ಬಾಳೆಹಣ್ಣು ಸೇವನೆ ಮಾಡಬೇಕು. ಇವುಗಳಲ್ಲಿ ಇರುವ ಜೀವಸತ್ವ ಹಾಗೂ ಖನಿಜಗಳು ಸಕ್ಕರೆಯನ್ನು ಪರಿಣಾಮಕಾರಿ ಶಕ್ತಿಯನ್ನಾಗಿ ಪರಿವರ್ತಿಸಲು ಸಹಾಯ ಮಾಡುತ್ತವೆ. ಹೀಗಾಗಿ ದೈಹಿಕ ಚಟುವಟಿಕೆಯ ಬಳಿಕ ಬಾಳೆಹಣ್ಣನ್ನು ಸೇವಿಸುವುದು ಒಳ್ಳೆಯದು.

ನಿಮ್ಮ ಹೃದಯದ ಆರೋಗ್ಯಕ್ಕೆ ಒಳ್ಳೆಯದು 

 ಬಾಳೆಹಣ್ಣಿನಲ್ಲಿ ಇರುವ ಪೊಟ್ಯಾಷಿಯಂ ಹೃದಯದ ಆರೋಗ್ಯಕ್ಕೆ ಅವಶ್ಯಕವಾಗಿದೆ. ಪೊಟ್ಯಾಷಿಯಂ ದೇಹದಲ್ಲಿ ಸೋಡಿಯಂ ಪರಿಣಾಮವನ್ನು ಪ್ರತಿರೋಧಿಸುವ ಕಾರ್ಯ ಮಾಡುವ ಮೂಲಕ ರಕ್ತದೊತ್ತಡವನ್ನು ಹತೋಟಿಯಲ್ಲಿ ಇಡಲು ಸಹಾಯ ಮಾಡುತ್ತದೆ. ಬಾಳೆಹಣ್ಣಿನಲ್ಲಿ ಸೋಡಿಯಂ ಅಂಶ ಕಡಿಮೆಯಾಗಿದೆ. ಹೀಗಾಗಿ ಅಧಿಕ ರಕ್ತದೊತ್ತಡ ಹೊಂದಿರುವವರಿಗೆ ಇದು ಉತ್ತಮ ಹಣ್ಣಾಗಿದೆ. ಬಾಳೆಹಣ್ಣನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಪಾರ್ಶ್ವವಾಯು ಹಾಗೂ ಹೃದಯಾಘಾತದಂತಹ ಸಮಸ್ಯೆಗಳಿಂದ ನಿಮ್ಮನ್ನು ದೂರಮಾಡುತ್ತದೆ.

ಮೂಡ್ ಸುಧಾರಣೆ 

ಬಾಳೆಹಣ್ಣು ನಮ್ಮ ದೇಹದಲ್ಲಿ ಸಂತೋಷದ ಭಾವವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಬಾಳೆಹಣ್ಣುಗಳಲ್ಲಿ ಇರುವ ವಿಟಮಿನ್ ಬಿ 6 ಹಾಗೂ ಸಿರೊಟೋನಿನ್ ಮತ್ತು ಡೋಪನೈನ್ ನಂತಹ ಅಂಶಗಳು ನರಮಂಡಲದಲ್ಲಿ ಉತ್ತಮ ಕಾರ್ಯವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಹೀಗಾಗಿ ಖಿನ್ನತೆಯಂತಹ ಸಮಸ್ಯೆಯನ್ನು ಹೊಂದಿರುವವರು ಮಾನಸಿಕ ಆರೋಗ್ಯವನ್ನು ಸುಧಾರಿಸಿಕೊಳ್ಳಲು ಬಾಳೆಹಣ್ಣು ಸೇವನೆ ಮಾಡಬಹುದಾಗಿದೆ.

ಲೇಖನ: ರಶ್ಮಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ