logo
ಕನ್ನಡ ಸುದ್ದಿ  /  ಜೀವನಶೈಲಿ  /  ಸಿಹಿತಿಂಡಿಯ ತಿನ್ನುವ ಬಯಕೆಯಾ: ಹಾಗಿದ್ದರೆ ಈ ರಾಗಿ ಲಾಡು ರೆಸಿಪಿ ಟ್ರೈ ಮಾಡಿ ನೋಡಿ, ಮತ್ತೆ ಮತ್ತೆ ತಿನ್ನುವಿರಿ

ಸಿಹಿತಿಂಡಿಯ ತಿನ್ನುವ ಬಯಕೆಯಾ: ಹಾಗಿದ್ದರೆ ಈ ರಾಗಿ ಲಾಡು ರೆಸಿಪಿ ಟ್ರೈ ಮಾಡಿ ನೋಡಿ, ಮತ್ತೆ ಮತ್ತೆ ತಿನ್ನುವಿರಿ

Priyanka Gowda HT Kannada

Oct 01, 2024 11:55 AM IST

google News

ರಾಗಿ ಲಾಡು ರೆಸಿಪಿಯನ್ನು ಮಾಡುವುದು ತುಂಬಾನೇ ಸಿಂಪಲ್, ಇಲ್ಲಿದೆ ಪಾಕವಿಧಾನ.

  • ರಾಗಿಯು ಭಾರತದಲ್ಲಿ ಹೆಚ್ಚು ಬಳಕೆಯಾಗುವ ಧಾನ್ಯವಾಗಿದ್ದು, ಹಿಂದೆಲ್ಲಾ ಬಡವರ ಆಹಾರ ಎಂದೇ ಹೇಳಲಾಗುತ್ತಿತ್ತು. ಆದರೆ, ಇದರ ಆರೋಗ್ಯ ಪ್ರಯೋಜನದಿಂದಾಗಿ ಸಿರಿವಂತರೂ ಕೂಡ ರಾಗಿಯ ಮೊರೆ ಹೋಗಿದ್ದಾರೆ. ಸಿಹಿತಿಂಡಿಯನ್ನು ತ್ಯಜಿಸದೆ ಆರೋಗ್ಯಕರವಾಗಿರಲು ಬಯಸುವಿರಾದರೆ ರಾಗಿ ಲಾಡನ್ನು ಸೇವಿಸಬಹುದು. ಈ ರೆಸಿಪಿಯನ್ನು ಮಾಡುವುದು ತುಂಬಾನೇ ಸಿಂಪಲ್, ಇಲ್ಲಿದೆ ಪಾಕವಿಧಾನ.

ರಾಗಿ ಲಾಡು ರೆಸಿಪಿಯನ್ನು ಮಾಡುವುದು ತುಂಬಾನೇ ಸಿಂಪಲ್, ಇಲ್ಲಿದೆ ಪಾಕವಿಧಾನ.
ರಾಗಿ ಲಾಡು ರೆಸಿಪಿಯನ್ನು ಮಾಡುವುದು ತುಂಬಾನೇ ಸಿಂಪಲ್, ಇಲ್ಲಿದೆ ಪಾಕವಿಧಾನ. (Slurrp)

ಆಗಾಗ ನಿಮಗೆ ಏನಾದರೂ ಸಿಹಿತಿಂಡಿ ತಿನ್ನಬೇಕು ಅನ್ನೋ ಬಯಕೆ ಉಂಟಾಗುತ್ತಾ? ಆದರೆ, ಆರೋಗ್ಯಕ್ಕಾಗಿ ಅಥವಾ ತೂಕ ಇಳಿಕೆಗೆ ಡಯೆಟ್ ಮಾಡುತ್ತಿದ್ದರೆ ಸಿಹಿತಿಂಡಿ ಬೇಕು, ಬೇಡ ಎಂಬ ಗೊಂದಲವುಂಟಾಗುವುದು ಸಹಜ. ಹೀಗಾಗಿ ತಿನ್ನಲೂ ರುಚಿಕರವಾಗಿದ್ದು, ಆರೋಗ್ಯಕ್ಕೂ ಹಿತಕರವಾದ ಸಿಹಿ-ತಿಂಡಿಯನ್ನು ಪ್ರಯತ್ನಿಸಬಹುದು. ಆರೋಗ್ಯಕರ ಸಿಹಿಭಕ್ಷ್ಯವನ್ನು ಹುಡುಕುತ್ತಿರುವವರಿಗೆ ರಾಗಿ ಲಾಡು ಉತ್ತಮ ಆಯ್ಕೆ. ಹಾಗಿದ್ದರೆ ಈ ಪಾಕವಿಧಾನವನ್ನು ತಯಾರಿಸುವುದು ಹೇಗೆ ಎಂಬ ಬಗ್ಗೆ ಇಲ್ಲಿ ತಿಳಿದುಕೊಳ್ಳಿ.

ರಾಗಿ ಲಾಡು ತಯಾರಿಸುವ ವಿಧಾನ

ಬೇಕಾಗುವ ಪದಾರ್ಥಗಳು: ರಾಗಿ ಹಿಟ್ಟು- 1 ಕಪ್, ಎಳ್ಳು ಬೀಜಗಳು- 2 ಟೀಸ್ಪೂನ್, ಕೊಬ್ಬರಿ- 2 ಟೀ ಚಮಚ, ವಾಲ್‍ನಟ್ಸ್- 2 ಟೀ ಚಮಚ, ಬಾದಾಮಿ- 2 ಟೀ ಚಮಚ, ಖರ್ಜೂರ- 10 ರಿಂದ 15 (ಬೆಚ್ಚಗಿನ ನೀರಿನಲ್ಲಿ ನೆನೆಸಿಡಬೇಕು), ಏಲಕ್ಕಿ ಪುಡಿ- ಚಿಟಿಕೆ ಲವಂಗ ಪುಡಿ- ಚಿಟಿಕೆ, ತುಪ್ಪ- 2 ಟೀ ಚಮಚ, ಉಪ್ಪು- ಚಿಟಿಕೆ.

ಮಾಡುವ ವಿಧಾನ: ಮೊದಲಿಗೆಖರ್ಜೂರವನ್ನು ಪೇಸ್ಟ್‌ ಮಾಡಿಡಿ. ನಂತರ ರಾಗಿ ಪುಡಿಯನ್ನು 2 ಚಮಚ ತುಪ್ಪ ಹಾಕಿ ಸುವಾಸನೆ ಬರುವವರೆಗೆ ಚೆನ್ನಾಗಿ ಹುರಿಯಿರಿ. ನಂತರ ಎಲ್ಲಾ ಇತರ ಪದಾರ್ಥಗಳನ್ನು ಪ್ರತ್ಯೇಕವಾಗಿ ಹುರಿಯಿರಿ. ಬಳಿಕ ಎಲ್ಲಾ ಪದಾರ್ಥಗಳನ್ನು ದೊಡ್ಡ ಬಟ್ಟಲಿಗೆ ಹಾಕಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಅವುಗಳನ್ನು ಸಣ್ಣ-ಸಣ್ಣ ಉಂಡೆಗಳನ್ನು (ಲಾಡೂ) ಮಾಡಿ.

ರಾಗಿ ಲಾಡೂ ಸೇವಿಸುವುದರ ಪ್ರಯೋಜನಗಳು

ರಾಗಿಯು ಭಾರತದಲ್ಲಿ ಹೆಚ್ಚು ಬಳಕೆಯಾಗುವ ಧಾನ್ಯವಾಗಿದ್ದು, ಹಿಂದೆಲ್ಲಾ ಬಡವರ ಆಹಾರ ಎಂದೇ ಹೇಳಲಾಗುತ್ತಿತ್ತು. ಆದರೆ, ಇದರ ಆರೋಗ್ಯ ಪ್ರಯೋಜನದಿಂದಾಗಿ ಸಿರಿವಂತರೂ ಕೂಡ ರಾಗಿಯ ಮೊರೆ ಹೋಗಿದ್ದಾರೆ. ರಾಗಿಯು ಜೀರ್ಣಾಂಗ ವ್ಯವಸ್ಥೆಗೆ ನಂಬಲಾಗದಷ್ಟು ಪ್ರಯೋಜನಕಾರಿಯಾಗಿದೆ. ಮಧುಮೇಹದಂತಹ ದೀರ್ಘಕಾಲದ ಕಾಯಿಲೆಗಳನ್ನು ನಿಯಂತ್ರಿಸುವ ಸಾಮರ್ಥ್ಯದಿಂದಾಗಿ ಇದು ಹೆಚ್ಚು ಜನಪ್ರಿಯವಾಗುತ್ತಿವೆ. ಪೌಷ್ಟಿಕಾಂಶ ಮತ್ತು ಪ್ರೋಟೀನ್‌ನಿಂದ ಸಮೃದ್ಧವಾಗಿರುವ ರಾಗಿಯು ಇತರ ಧಾನ್ಯಗಳಿಗಿಂತ ಬಹಳ ಪ್ರಯೋಜನಕಾರಿಯಾಗಿದೆ.

ರಾಗಿಯು ಕ್ಯಾಲ್ಸಿಯಂ, ಕಬ್ಬಿಣ ಮತ್ತು ಆಹಾರದ ಫೈಬರ್‌ನಲ್ಲಿ ಸಮೃದ್ಧವಾಗಿದೆ ಮತ್ತು ಗ್ಲುಟನ್-ಮುಕ್ತವಾಗಿದೆ. ಇದು ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್‌ನಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ ತೂಕ ನಿರ್ವಹಣೆಯನ್ನು ಬೆಂಬಲಿಸುತ್ತದೆ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ದಿನನಿತ್ಯ ಸೇವಿಸಬಹುದಾದ ಶಕ್ತಿ-ಸಮೃದ್ಧ ತಿಂಡಿಯಾಗಿ, ಖರ್ಜೂರವು ಅತ್ಯುತ್ತಮವಾದ ಪೌಷ್ಟಿಕಾಂಶವನ್ನು. ಫೈಬರ್ ಅಂಶ ಇವುಗಳಲ್ಲಿ ಹೆಚ್ಚಿದ್ದು, ಆರೋಗ್ಯಕ್ಕೆ ಉತ್ತಮವಾಗಿದೆ. ನಿಯಮಿತ ಕರುಳಿನ ಚಲನೆಯನ್ನು ಉತ್ತೇಜಿಸುವ ಮೂಲಕ ಜೀರ್ಣಕಾರಿ ಆರೋಗ್ಯಕ್ಕೆ ಪ್ರಯೋಜನವನ್ನು ನೀಡುತ್ತದೆ. ಖರ್ಜೂರವು ವಿವಿಧ ಉತ್ಕರ್ಷಣ ನಿರೋಧಕಗಳನ್ನು ಒದಗಿಸುತ್ತದೆ. ಇದು ರೋಗಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಮೆದುಳಿನ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಒಟ್ಟಿನಲ್ಲಿ ರಾಗಿ ಲಾಡು ಸೇವನೆಯಿಂದ ಸಿಹಿ-ತಿಂಡಿಯ ಬಯಕೆಯೂ ಈಡೇರುತ್ತದೆ ಜೊತೆಗೆ ಆರೋಗ್ಯಕ್ಕೆ ಅನೇಕ ರೀತಿಯ ಪ್ರಯೋಜನಗಳೂ ಉಂಟಾಗುತ್ತದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ