logo
ಕನ್ನಡ ಸುದ್ದಿ  /  ಜೀವನಶೈಲಿ  /  ಬೆಳಗಿನ ಉಪಹಾರಕ್ಕೂ ಓಕೆ, ಮಕ್ಕಳ ಲಂಚ್ ಬಾಕ್ಸ್‌ಗೂ ಬೆಸ್ಟ್: ಗರಿಗರಿ ಮೂಲಂಗಿ ಪೂರಿ ತಯಾರಿಸುವುದು ತುಂಬಾನೇ ಸಿಂಪಲ್

ಬೆಳಗಿನ ಉಪಹಾರಕ್ಕೂ ಓಕೆ, ಮಕ್ಕಳ ಲಂಚ್ ಬಾಕ್ಸ್‌ಗೂ ಬೆಸ್ಟ್: ಗರಿಗರಿ ಮೂಲಂಗಿ ಪೂರಿ ತಯಾರಿಸುವುದು ತುಂಬಾನೇ ಸಿಂಪಲ್

Priyanka Gowda HT Kannada

Dec 01, 2024 08:00 AM IST

google News

ಬೆಳಗಿನ ಉಪಹಾರಕ್ಕೂ ಓಕೆ, ಮಕ್ಕಳ ಲಂಚ್ ಬಾಕ್ಸ್‌ಗೂ ಬೆಸ್ಟ್: ಗರಿಗರಿ ಮೂಲಂಗಿ ಪೂರಿ ತಯಾರಿಸುವುದು ತುಂಬಾನೇ ಸಿಂಪಲ್

  • ಮಕ್ಕಳಿಗೆ ಲಂಚ್ ಬಾಕ್ಸ್‌ನಲ್ಲಿ ಏನಾದರೂ ವಿಭಿನ್ನವಾದ ರೆಸಿಪಿ ಹಾಕಿ ಕಳುಹಿಸಬೇಕು ಎಂದು ಯೋಚಿಸುತ್ತಿದ್ದರೆ ಗರಿಗರಿಯಾದ ಮೂಲಂಗಿ ಪೂರಿಯನ್ನು ಹಾಕಿ ಕಳುಹಿಸಬಹುದು. ಲಂಚ್ ಬಾಕ್ಸ್ ಮಾತ್ರವಲ್ಲ ಬೆಳಗಿನ ಉಪಹಾರಕ್ಕೂ ಬೆಸ್ಟ್ ತಿಂಡಿಯಿದು. ಇದನ್ನು ತಯಾರಿಸುವುದು ಕೂಡ ತುಂಬಾನೇ ಸರಳ. ಇಲ್ಲಿದೆ ಪಾಕವಿಧಾನ.

ಬೆಳಗಿನ ಉಪಹಾರಕ್ಕೂ ಓಕೆ, ಮಕ್ಕಳ ಲಂಚ್ ಬಾಕ್ಸ್‌ಗೂ ಬೆಸ್ಟ್: ಗರಿಗರಿ ಮೂಲಂಗಿ ಪೂರಿ ತಯಾರಿಸುವುದು ತುಂಬಾನೇ ಸಿಂಪಲ್
ಬೆಳಗಿನ ಉಪಹಾರಕ್ಕೂ ಓಕೆ, ಮಕ್ಕಳ ಲಂಚ್ ಬಾಕ್ಸ್‌ಗೂ ಬೆಸ್ಟ್: ಗರಿಗರಿ ಮೂಲಂಗಿ ಪೂರಿ ತಯಾರಿಸುವುದು ತುಂಬಾನೇ ಸಿಂಪಲ್

ಚಳಿಗಾಲದಲ್ಲಿ ಮಾರುಕಟ್ಟೆಯಲ್ಲಿ ಮೂಲಂಗಿ ಹೇರಳವಾಗಿ ಲಭ್ಯವಿದೆ. ಮೂಲಂಗಿ ಚಟ್ನಿ, ಸಾಂಬಾರ್ ತಿಂದು ಬೇಸರವಾಗಿರಬಹುದು. ಅದರಲ್ಲೂ ಹಾಸ್ಟೆಲ್, ಪಿಜಿಯಲ್ಲಿರುವವರಿಗಂತೂ ಈ ಮೂಲಂಗಿ ಅಂದರೆ ವಾಕರಿಕೆ ಬರುವಂತಾಗಿರಬಹುದು. ಆದರೆ, ಮೂಲಂಗಿ ತಿನ್ನುವುದು ಆರೋಗ್ಯಕ್ಕೆ ಬಹಳ ಉತ್ತಮ. ಕೇವಲ ಸಾಂಬಾರ್, ಪಲ್ಯ ಇವಿಷ್ಟನ್ನೇ ತಿನ್ನುವ ಬದಲು ಗರಿಗರಿಯಾದ ಪೂರಿ ತಯಾರಿಸಿ ಸವಿಯಬಹುದು. ಇದರ ರುಚಿಯನ್ನು ಎಲ್ಲರೂ ಇಷ್ಟಪಡುತ್ತಾರೆ. ಬೆಳಗಿನ ಉಪಹಾರಕ್ಕೆ ಮಾತ್ರವಲ್ಲ, ಮಕ್ಕಳ ಲಂಚ್ ಬಾಕ್ಸ್‌ಗೂ ಇದನ್ನು ಹಾಕಿ ಕಳುಹಿಸಬಹುದು. ಈ ಮೂಲಂಗಿ ಪೂರಿ ರೆಸಿಪಿ ಮಾಡುವುದು ತುಂಬಾನೇ ಸುಲಭ. ಇಲ್ಲಿದೆ ಪಾಕವಿಧಾನ.

ಮೂಲಂಗಿ ಪೂರಿ ರೆಸಿಪಿ ಮಾಡುವ ವಿಧಾನ

ಬೇಕಾಗುವ ಸಾಮಗ್ರಿಗಳು: ಮೂಲಂಗಿ- 3 ರಿಂದ 4, ನೀರು- 1 ಕಪ್, ತುಪ್ಪ- 1 ಟೀ ಚಮಚ, ಕಪ್ಪು ಜೀರಿಗೆ- 1 ಟೀ ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಶುಂಠಿ-ಬೆಳ್ಳುಳ್ಳಿ ಪೇಸ್ಟ್- 1 ಟೀ ಚಮಚ, ಖಾರ ಮೆಣಸಿನ ಪುಡಿ- 2 ಟೀ ಚಮಚ, ಅಕ್ಕಿ ಹಿಟ್ಟು- 1.5 ಕಪ್.

ಮೂಲಂಗಿ ಪೂರಿ ತಯಾರಿಸುವ ವಿಧಾನ: ಮೊದಲು ಮೂಲಂಗಿಯನ್ನು ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಿ. ನಂತರ ಅದನ್ನು ತುರಿದಿಟ್ಟುಕೊಳ್ಳಿ.

- ಬಾಣಲೆಗೆ ಉಪ್ಪು, ಹಸಿಮೆಣಸಿನ ಕಾಯಿ ಪೇಸ್ಟ್, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಕಪ್ಪು ಜೀರಿಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

- ಒಂದು ಚಮಚ ತುಪ್ಪವನ್ನು ಸೇರಿಸಿ. ಈಗ ತುರಿದ ಮೂಲಂಗಿಯನ್ನು ಬಿಸಿ ನೀರಿನಲ್ಲಿ ಹಾಕಿ ಚೆನ್ನಾಗಿ ಮಿಶ್ರಗೊಳಿಸಿ.

- ಅಕ್ಕಿ ಹಿಟ್ಟನ್ನು ಕೂಡ ಸೇರಿಸಿ. ನಿಮ್ಮ ಬಳಿ ಅಕ್ಕಿ ಹಿಟ್ಟು ಇಲ್ಲದಿದ್ದರೆ ಈ ಪೂರಿಯನ್ನು ರವೆಯೊಂದಿಗೆ ಸಹ ತಯಾರಿಸಬಹುದು.

- ಅಕ್ಕಿ ಹಿಟ್ಟನ್ನು ಚೆನ್ನಾಗಿ ಮಿಶ್ರಣ ಮಾಡಿದ ನಂತರ ಸ್ಟೌವ್ ಆಫ್ ಮಾಡಿ, ಮುಚ್ಚಳವನ್ನು ಮುಚ್ಚಿ.

- ಸುಮಾರು ಎರಡರಿಂದ ಮೂರು ನಿಮಿಷಗಳ ನಂತರ ಮುಚ್ಚಳವನ್ನು ತೆಗೆದು ಕೈಗಳಿಂದ ಹಿಸುಕಿ. ಇದಕ್ಕೆ ಹೆಚ್ಚುವರಿ ನೀರನ್ನು ಸೇರಿಸುವ ಅಗತ್ಯವಿಲ್ಲ.

- ತಯಾರಿಸಿದ ಹಿಟ್ಟಿನಿಂದ ಸಣ್ಣ ಪೂರಿಗಳನ್ನು ಮಾಡಿ. ಪೂರಿಯನ್ನು ಮಾಡುವಾಗ ಸ್ವಲ್ಪ ಒಣ ಹಿಟ್ಟು ಅಥವಾ ಎಣ್ಣೆಯನ್ನು ಹಚ್ಚಿ. ಇದರಿಂದ ಪೂರಿಗಳನ್ನು ಸುಲಭವಾಗಿ ತಯಾರಿಸಲಾಗುತ್ತದೆ ಮತ್ತು ಕೈಗೆ ಅಂಟಿಕೊಳ್ಳುವುದಿಲ್ಲ.

- ಬಾಣಲೆಯಲ್ಲಿ ಎಣ್ಣೆ ಹಾಕಿ ಅದು ಕಾದ ನಂತರ ಪೂರಿಯನ್ನು ಹಾಕಿ ಫ್ರೈ ಮಾಡಿ. ಗರಿಗರಿಯಾಗಿ ಗೋಲ್ಡನ್ ಬ್ರೌನ್ ಆದ ನಂತರ ಅದನ್ನು ತೆಗೆದರೆ ರುಚಿಕರವಾದ ಮೂಲಂಗಿ ಪೂರಿ ಸವಿಯಲು ಸಿದ್ಧ.

- ಮೂಲಂಗಿಯು ನೀರನ್ನು ಬಿಟ್ಟರೆ, ಈ ತಯಾರಿಸಿದ ಹಿಟ್ಟನ್ನು ಹೆಚ್ಚು ಸಮಯ ಇಡಬೇಡಿ. ಇಲ್ಲದಿದ್ದರೆ ಪೂರಿಗಳನ್ನು ಮಾಡಲಾಗುವುದಿಲ್ಲ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ