logo
ಕನ್ನಡ ಸುದ್ದಿ  /  ಜೀವನಶೈಲಿ  /  ಬದನೆಕಾಯಿ ಇಷ್ಟ ಪಡದವರೂ ಬಾಯಿ ಚಪ್ಪರಿಸಿಕೊಂಡು ತಿನ್ನುವ ಕಾಶ್ಮೀರಿ ಸ್ಟೈಲ್‌ನ ಖಟ್ಟೆ ಬೇಂಗನ್‌; ನೀವೂ ಟ್ರೈ ಮಾಡಿ ನೋಡಿ

ಬದನೆಕಾಯಿ ಇಷ್ಟ ಪಡದವರೂ ಬಾಯಿ ಚಪ್ಪರಿಸಿಕೊಂಡು ತಿನ್ನುವ ಕಾಶ್ಮೀರಿ ಸ್ಟೈಲ್‌ನ ಖಟ್ಟೆ ಬೇಂಗನ್‌; ನೀವೂ ಟ್ರೈ ಮಾಡಿ ನೋಡಿ

HT Kannada Desk HT Kannada

Nov 29, 2023 09:00 AM IST

google News

ಬದನೆಕಾಯಿ ಇಷ್ಟ ಪಡದವರೂ ಬಾಯಿ ಚಪ್ಪರಿಸಿಕೊಂಡು ತಿನ್ನುವ ಕಾಶ್ಮೀರಿ ಸ್ಟೈಲ್‌ನ ಖಟ್ಟೆ ಬೇಂಗನ್‌; ನೀವೂ ಟ್ರೈ ಮಾಡಿ ನೋಡಿ

    • Khatte Baingan Recipe: ಬದನೆಕಾಯಿ ಎಂದರೆ ದೂರ ಓಡುವವರಿದ್ದಾರೆ. ಅಂತಹವರಿಗಾಗಿ ಇಲ್ಲೊಂದು ರೆಸಿಪಿ ಇದೆ. ಇದು ಹುಳಿ–ಖಾರ ಹದವಾಗಿ ಬೆರೆತಿರುವ ಕಾಶ್ಮೀರದವರು ತಯಾರಿಸುವ ಸಸ್ಯಾಹಾರಿ ಡಿಶ್‌. ಖಟ್ಟೆ ಬೇಂಗನ್‌ ಎಂದು ಕರೆಯುವ ಬದನೆಕಾಯಿಯ ಹೊಸ ರುಚಿಯನ್ನು ನೀವೂ ಪ್ರಯತ್ನಿಸಿ.
ಬದನೆಕಾಯಿ ಇಷ್ಟ ಪಡದವರೂ ಬಾಯಿ ಚಪ್ಪರಿಸಿಕೊಂಡು ತಿನ್ನುವ ಕಾಶ್ಮೀರಿ ಸ್ಟೈಲ್‌ನ ಖಟ್ಟೆ ಬೇಂಗನ್‌; ನೀವೂ ಟ್ರೈ ಮಾಡಿ ನೋಡಿ
ಬದನೆಕಾಯಿ ಇಷ್ಟ ಪಡದವರೂ ಬಾಯಿ ಚಪ್ಪರಿಸಿಕೊಂಡು ತಿನ್ನುವ ಕಾಶ್ಮೀರಿ ಸ್ಟೈಲ್‌ನ ಖಟ್ಟೆ ಬೇಂಗನ್‌; ನೀವೂ ಟ್ರೈ ಮಾಡಿ ನೋಡಿ

ಒಂದೊಂದು ಪ್ರದೇಶದಲ್ಲಿ ಒಂದೊಂದು ಅಡುಗೆ ಜನಪ್ರಿಯವಾಗಿರುತ್ತದೆ. ಆ ಪ್ರದೇಶದ ಹೆಸರಿನಿಂದ ಅಡುಗೆಗಳನ್ನು ಗುರುತಿಸಿದಾಗ ಅದರ ವಿಶೇಷತೆ ಇನ್ನಷ್ಟು ಹೆಚ್ಚಾಗುತ್ತದೆ. ಹೈದ್ರಾಬಾದ್‌ ಬಿರಿಯಾನಿ, ಗುಜರಾತಿ ಡೋಕ್ಲಾ, ಗೋವಾ ಫೀಶ್‌ ಕರಿ, ತಮಿಳುನಾಡು ಪೊಂಗಲ್‌ ಹೀಗೆ ಆಯಾ ಊರಿನ ಹೆಸರುಗಳ ಜೊತೆ ಅಡಗೆಯೂ ಫೇಮಸ್‌ ಆಗಿರುತ್ತದೆ. ಅದೇ ರೀತಿ ಕಾಶ್ಮೀರಿ ಅಡುಗೆಗಳ ಬಗ್ಗೆ ಮಾತನಾಡುತ್ತಿದ್ದರೆ ನಮಗೆ ಮೊದಲಿಗೆ ನೆನಪಾಗುವುದ ಕಾಶ್ಮೀರಿ ಪುಲಾವ್‌, ಕಾಶ್ಮೀರಿ ಟೀ, ಕಾಶ್ಮೀರಿ ಮಟನ್‌ ರೋಗನ್‌ ಜೋಶ್‌, ಗೊಷ್ಟಬಾದಂತಹ ಅಡುಗೆಯ ಚಿತ್ರಗಳೇ. ಕಾಶ್ಮೀರಿ ಅಡುಗೆಗಳೆಂದಾಕ್ಷಣ ಬರೀ ಮಾಂಸಾಹಾರವಷ್ಟೇ ಅಲ್ಲ, ಬದಲಿಗೆ ರುಚಿಯಾದ ಸಸ್ಯಾಹಾರ ಅಡುಗೆಗಳು ಅಷ್ಟೇ ಜನಪ್ರಿಯವಾಗಿದೆ. ಅವರ ಪದ್ಧತಿಯ ಪ್ರಕಾರ ತಯಾರಿಸುವ ರುಚಿಯಾದ ಸ್ವಾದಿಷ್ಟ ಅಡುಗೆಗಳು ನಮ್ಮ ನಾಲಿಗೆಯ ರುಚಿ ಹೆಚ್ಚಿಸುತ್ತವೆ.

ಕಾಶ್ಮೀರದವರು ತಯಾರಿಸುವ ಸಸ್ಯಾಹಾರಿ ರೆಸಿಪಿಯೊಂದು ಇಲ್ಲಿದೆ. ಇದು ಬದನೆಕಾಯಿ, ಹುಣಸೆ ರಸ, ಮತ್ತೊಂದಿಷ್ಟು ಮಸಾಲೆಗಳನ್ನು ಸೇರಿಸಿ ಮಾಡುವ ಅಡುಗೆಯಾಗಿದೆ. ಇದನ್ನು ತಯಾರಿಸಲು ಈರುಳ್ಳಿ, ಬೆಳ್ಳುಳ್ಳಿ ಬಳಸದೇ ಇರುವುದು ವಿಶೇಷ. ಇದು ಕಾಶ್ಮೀರದವರ ಪಾರಂಪರಾಗತ ಅಡುಗೆಗಳಲ್ಲಿ ಒಂದಾಗಿದೆ. ಬದನೆಕಾಯಿ ತಿನ್ನದವರೂ ಸಹ ಬಾಯಿಚಪ್ಪರಿಸಿ ತಿನ್ನುವಂತಹ ಹುಳಿ–ಖಾರದ ಮಿಶ್ರಣ ಇದಾಗಿದೆ. ಇದನ್ನು ಕಾಶ್ಮೀರದವರು ಖಟ್ಟೆ ಬೇಂಗನ್‌ ಎಂದು ಕರೆಯುತ್ತಾರೆ. ಉದ್ದದ ನೀಲಿ ಬದನೆಕಾಯಿ ಬಳಸಿ ಮಾಡುವ ಈ ಅಡುಗೆಗೆ ಬೇಕಾದ ಪದಾರ್ಥ ಮತ್ತು ತಯಾರಿಸುವ ವಿಧಾನ ಇಲ್ಲಿದೆ.

ಖಟ್ಟೆ ಬೇಂಗನ್‌ ತಯಾರಿಸಲು ಬೇಕಾಗುವ ಪದಾರ್ಥಗಳು

ಉದ್ದವಾದ ಬದನೆಕಾಯಿ– ಕಾಲು ಕೆಜಿ

ಹುಣಸೆ ರಸ– 1 ಕಪ್‌

ಸಾಸಿವೆ ಎಣ್ಣೆ– 2 ಕಪ್‌

ಕೆಂಪು ಮೆಣಸಿನ ಪುಡಿ– 2 ಚಮಚ

ಬಡೇ ಸೊಪ್ಪಿನ ಪುಡಿ– 2 ಚಮಚ

ಶುಂಠೀ ಪುಡಿ– 1ಚಮಚ

ಇಂಗು– 1ಚಮಚ

ಲವಂಗ– 1

ನೀರು

ಉಪ್ಪು– ರುಚಿಗೆ ತಕ್ಕಷ್ಟು

ಕೊತ್ತೊಂಬರಿ ಸೊಪ್ಪು

ವಿಧಾನ

1. ಬದನೆಕಾಯಿಯನ್ನು ಉದ್ದಕ್ಕೆ ನಾಲ್ಕು ಭಾಗಗಳಂತೆ ಮಾಡಿ. ಆದರೆ ಅದನ್ನು ಸಂಪೂರ್ಣವಾಗಿ ಕತ್ತರಿಸಬೇಡಿ. ನಂತರ ಅದನ್ನು ತೊಳೆಯಿರಿ.

2. ಒಂದು ಪ್ಯಾನ್‌ಗೆ ಎಣ್ಣೆ ಹಾಕಿ ಬಿಸಿ ಮಾಡಿ.

3. ಹೆಚ್ಚಿಟ್ಟ ಬದನೆಕಾಯಿಗಳನ್ನು ಹಾಕಿ, ಗೋಲ್ಡನ್ ಬ್ರೌನ್‌ ಆಗುವವರೆಗೆ ಫ್ರೈ ಮಾಡಿ. ಪಕ್ಕಕ್ಕೆ ಇಡಿ.

4. ಮತ್ತೊಂದು ಪಾತ್ರೆ ತೆಗೆದುಕೊಳ್ಳಿ. ಅದಕ್ಕೆ 2 ಚಮಚ ಸಾಸಿವೆ ಎಣ್ಣೆ ಹಾಕಿ, ಅದನ್ನು ಬಿಸಿ ಮಾಡಿ.

5. ಉಪ್ಪು, ಕೆಂಪು ಮೆಣಸಿನ ಪುಡಿ, ಇಂಗು ಮತ್ತು ಲವಂಗಕ್ಕೆ ಸ್ವಲ್ಪ ನೀರು ಸೇರಿಸಿ ಮಿಶ್ರಣ ತಯಾರಿಸಿಕೊಳ್ಳಿ. ಅದನ್ನು ಬಿಸಿ ಮಾಡಿದ ಎಣ್ಣೆಯ ಪಾತ್ರೆಗೆ ಹಾಕಿ

6. ಅದಕ್ಕೆ ಉಳಿದ ಮಸಾಲೆ ಪುಡಿ ಮತ್ತು ಹುಣಸೆ ರಸಕ್ಕೆ ಎರಡು ಕಪ್‌ ನೀರು ಸೇರಿಸಿ.

7. ಮುಚ್ಚಳ ಮುಚ್ಚಿ ಕುದಿಯಲು ಬಿಡಿ.

8. ಕುದಿಯುತ್ತಿರುವ ಮಸಾಲೆಗೆ ಹುರಿದಿಟ್ಟುಕೊಂಡ ಬದನೆಕಾಯಿ ಸೇರಿಸಿ. 5 ರಿಂದ 7 ನಿಮಿಷಗಳವರೆಗೆ ಬೇಯಿಸಿ.

9. ಮೇಲಿಂದ ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸಿ.

10. ಈಗ ರುಚಿಯಾದ ಕಾಶ್ಮೀರಿ ಖಟ್ಟೆ ಬೇಂಗನ್‌ ಸವಿಯಲು ಸಿದ್ಧ.

ಇದು ಬಿಸಿಯಾದ ಅನ್ನ, ರೊಟ್ಟಿ, ಚಪಾತಿಯ ಜೊತೆಗೆ ಬೆಸ್ಟ್‌ ಕಾಂಬಿನೇಷನ್‌ ಆಗಿದೆ.

(ಬರಹ: ಅರ್ಚನಾ ವಿ. ಭಟ್‌)

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ