logo
ಕನ್ನಡ ಸುದ್ದಿ  /  ಜೀವನಶೈಲಿ  /  ಅನ್ನ ಮಿಕ್ಕಿದಾಗ ಚಿಕನ್‌ ಮಸಾಲಾ ರೈಸ್‌ ಮಾಡಿ, ಬಿರಿಯಾನಿಗಿಂತಲೂ ರುಚಿಯಾಗಿರುವ ಈ ರೆಸಿಪಿ ಮನೆಮಂದಿಗೆಲ್ಲಾ ಇಷ್ಟ ಆಗೋದು ಪಕ್ಕಾ

ಅನ್ನ ಮಿಕ್ಕಿದಾಗ ಚಿಕನ್‌ ಮಸಾಲಾ ರೈಸ್‌ ಮಾಡಿ, ಬಿರಿಯಾನಿಗಿಂತಲೂ ರುಚಿಯಾಗಿರುವ ಈ ರೆಸಿಪಿ ಮನೆಮಂದಿಗೆಲ್ಲಾ ಇಷ್ಟ ಆಗೋದು ಪಕ್ಕಾ

Reshma HT Kannada

Jul 31, 2024 01:25 PM IST

google News

ಅನ್ನ ಮಿಕ್ಕಿದಾಗ ಚಿಕನ್‌ ಮಸಾಲಾ ರೈಸ್‌ ಮಾಡಿ, ಬಿರಿಯಾನಿಗಿಂತಲೂ ರುಚಿಯಾಗಿರುವ ಈ ರೆಸಿಪಿ ಮನೆಮಂದಿಗೆಲ್ಲಾ ಇಷ್ಟ ಆಗೋದು ಪಕ್ಕಾ

    • ಮನೆಯಲ್ಲಿ ಅನ್ನ ಮಾಡಿದ್ದು ಮಿಕ್ಕಿದೆ ಅಂದ್ರೆ ಚಿತ್ರಾನ್ನ ಮಾಡೋದು ಸಹಜ. ಆದ್ರೆ ಈ ಸಲ ಸ್ಪೆಷಲ್‌ ಆಗಿ ನಾನ್‌ವೆಜ್‌ ರೈಸ್‌ ಮಾಡಿ. ಚಿತ್ರಾನ್ನ ತಿಂದು ಜಿಡ್ಡು ಹಿಡಿದ ನಾಲಿಗೆ ಈ ಚಿಕನ್‌ ಮಸಾಲಾ ರೈಸ್‌ ಸ್ಪೆಷಲ್‌ ರುಚಿ ಅನ್ನಿಸೋದು ಮಾತ್ರವಲ್ಲ, ಮನೆಯವರೆಲ್ಲಾ ಮತ್ತೆ ಬೇಕು ಅಂತ ಕೇಳಿ ಹಾಕಿಸಿಕೊಂಡು ತಿಂದಿಲ್ಲ ಅಂದ್ರೆ ಹೇಳಿ.
ಅನ್ನ ಮಿಕ್ಕಿದಾಗ ಚಿಕನ್‌ ಮಸಾಲಾ ರೈಸ್‌ ಮಾಡಿ, ಬಿರಿಯಾನಿಗಿಂತಲೂ ರುಚಿಯಾಗಿರುವ ಈ ರೆಸಿಪಿ ಮನೆಮಂದಿಗೆಲ್ಲಾ ಇಷ್ಟ ಆಗೋದು ಪಕ್ಕಾ
ಅನ್ನ ಮಿಕ್ಕಿದಾಗ ಚಿಕನ್‌ ಮಸಾಲಾ ರೈಸ್‌ ಮಾಡಿ, ಬಿರಿಯಾನಿಗಿಂತಲೂ ರುಚಿಯಾಗಿರುವ ಈ ರೆಸಿಪಿ ಮನೆಮಂದಿಗೆಲ್ಲಾ ಇಷ್ಟ ಆಗೋದು ಪಕ್ಕಾ

ನಾನ್‌ವೆಜ್ ಪ್ರಿಯರಿಗೆ ಚಿಕನ್‌ ಮೇಲೆ ಎಲ್ಲಿಲ್ಲದ ಪ್ರೀತಿ. ವಾರಕ್ಕೆ ನಾಲ್ಕೈದು ಬಾರಿಯಾದರೂ ಚಿಕನ್ ಪೀಸ್ ತಿನ್ನಲೇಬೇಕು. ಚಿಕನ್‌ ಸಾಂಬಾರ್‌, ಬಿರಿಯಾನಿ, ಕಬಾಬ್‌ ಬದಲಿಗೆ ಹೊಸ ರುಚಿ ಏನಾದ್ರೂ ತಿನ್‌ಬೇಕು ಅಂತಿದ್ರೆ ಚಿಕನ್‌ ಮಸಾಲಾ ರೈಸ್‌ ಟ್ರೈ ಮಾಡಬಹುದು. ಅನ್ನ ಮಿಕ್ಕಿದ್ದಾಗ ಚಿತ್ರಾನ್ನ ಮಾಡುವ ಬದಲು ಈ ರೈಸ್‌ ಐಟಂ ಮಾಡಿದ್ರೆ ಇದರ ರುಚಿಗೆ ನೀವು ಕಳೆದು ಹೋಗ್ತೀರಾ.

ಈ ಮಳೆಗಾಲದಲ್ಲಿ ಚಿಕನ್ ಮಸಾಲಾ ರೈಸ್ ಬಿಸಿಬಿಸಿಯಾಗಿ ತಿಂದ್ರೆ ರುಚಿ ಹೆಚ್ಚು. ಹಾಗಾದ್ರೆ ಚಿಕನ್‌ ಮಸಾಲಾ ರೈಸ್‌ ಮಾಡೋದು ಹೇಗೆ, ಅದಕ್ಕೆ ಏನೆಲ್ಲಾ ಸಾಮಾಗ್ರಿ ಬೇಕು ಅನ್ನೋದಕ್ಕೆ ಇಲ್ಲಿದೆ ಉತ್ತರ.

ಚಿಕನ್ ಮಸಾಲಾ ರೈಸ್

ಬೇಕಾಗುವ ಸಾಮಗ್ರಿಗಳು: ಅನ್ನ - ಎರಡು ಕಪ್‌, ಚಿಕನ್ ತುಂಡುಗಳು - ಕಾಲು ಕೆಜಿ, ಆಲೂಗಡ್ಡೆ - ಒಂದು, ಗಸಗಸೆ - ಚಿಟಿಕೆ, ಎಳ್ಳು - ಕಾಲು ಚಮಚ, ನಿಂಬೆ ರಸ - ಒಂದು ಚಮಚ, ಶುಂಠಿ ಬೆಳ್ಳುಳ್ಳಿ ಪೇಸ್ಟ್ - ಅರ್ಧ ಚಮಚ, ಈರುಳ್ಳಿ - ಒಂದು, ಉಪ್ಪು - ರುಚಿಗೆ, ಬಿರಿಯಾನಿ ಎಲೆ - ಒಂದು, ತುಪ್ಪ - ಒಂದು ಚಮಚ, ಏಲಕ್ಕಿ - ಎರಡು, ಎಣ್ಣೆ - ಸಾಕಷ್ಟು, ಲವಂಗ - ಎರಡು, ಜೀರಿಗೆ - ಕಾಲು ಚಮಚ, ಕೊತ್ತಂಬರಿ ಪುಡಿ - ಒಂದು ಚಮಚ, ಪುದಿನಾ - ಒಂದು ಚಮಚ, ಮೆಣಸಿನ ಪುಡಿ - ಅರ್ಧ ಚಮಚ, ಮೆಣಸಿನಕಾಯಿ - ಅರ್ಧ ಚಮಚ, ದಾಲ್ಚಿನ್ನಿ - ಸಣ್ಣ ತುಂಡು,

ಚಿಕನ್ ಮಸಾಲಾ ರೈಸ್ ತಯಾರಿಸುವ ವಿಧಾನ

ಮೊದಲು ಅನ್ನ ಮಾಡಿಕೊಂಡು ಪಕ್ಕಕ್ಕೆ ಇರಿಸಿಕೊಳ್ಳಿ ಅಥವಾ ಮಿಕ್ಕಿರುವ ಅನ್ನ ಇದ್ದರೆ ಎತ್ತಿಟ್ಟಿಡಿ. ಅನ್ನ ಮುದ್ದೆಯಾಗಿದ್ದರೆ ಚೆನ್ನಾಗಿರುವುದಿಲ್ಲ. ಈಗ ಮೊದಲು ಚಿಕನ್ ಮಸಾಲ ತಯಾರಿಸಿ. ಒಲೆಯ ಮೇಲೆ ಪ್ಯಾನ್ ಇಟ್ಟು ದಾಲ್ಚಿನ್ನಿ, ಕೊತ್ತಂಬರಿ, ಎಳ್ಳು, ಗಸಗಸೆ, ಲವಂಗ, ಜೀರಿಗೆ ಮತ್ತು ಏಲಕ್ಕಿಯನ್ನು ಹುರಿಯಿರಿ. ಇವೆಲ್ಲವನ್ನೂ ಮಿಕ್ಸಿಯಲ್ಲಿ ಸೇರಿಸಿ ನಯವಾದ ಪುಡಿ ಮಾಡಿಕೊಳ್ಳಿ. ಅಷ್ಟೇ, ಚಿಕನ್ ಮಸಾಲಾ ರೆಡಿ. ಇನ್ನೊಂದು ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಎಣ್ಣೆ ಹಾಕಿ. ಆ ಎಣ್ಣೆಯಲ್ಲಿ ಬಿರಿಯಾನಿ ಎಲೆಗಳು, ಈರುಳ್ಳಿ ಪೇಸ್ಟ್, ಹಸಿರು ಮೆಣಸಿನಕಾಯಿ ಪೇಸ್ಟ್, ಬೇಯಿಸಿದ ಆಲೂಗಡ್ಡೆ ತುಂಡುಗಳನ್ನು ಹಾಕಿ ಫ್ರೈ ಮಾಡಿ. ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮತ್ತು ಮೆಣಸಿನಕಾಯಿ ಹಾಕಿ ಫ್ರೈ ಮಾಡಿ. ಈ ಮಿಶ್ರಣಕ್ಕೆ ಸಿದ್ಧಪಡಿಸಿದ ಮಸಾಲಾ ಪುಡಿಯನ್ನು ಸೇರಿಸಿ ಚೆನ್ನಾಗಿ ಫ್ರೈ ಮಾಡಿ. ಈಗ ತೊಳೆದಿಟ್ಟುಕೊಂಡ ಚಿಕನ್ ತುಂಡುಗಳನ್ನು ಸೇರಿಸಿ ಮತ್ತು ಕಡಿಮೆ ಉರಿಯಲ್ಲಿ ಬೇಯಿಸಿ. ಚಿಕನ್‌ನಿಂದ ನೀರನ್ನು ಬಸಿದು ಫ್ರೈ ಆಗುವವರೆಗೆ ಹುರಿಯಿರಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಕೊತ್ತಂಬರಿ ಸೊಪ್ಪು ಮತ್ತು ಪುದೀನ ಎಲೆಗಳನ್ನು ಸೇರಿಸಿ. ಇವೆಲ್ಲವೂ ಬೆಂದ ನಂತರ ಮೊದಲೇ ಬೇಯಿಸಿದ ಅನ್ನವನ್ನು ಹಾಕಿ ಪುಳಿಯೋಗರೆಯ ಹಾಗೆ ಕಲೆಸಿ. ಅಷ್ಟೇ ಟೇಸ್ಟಿಯಾದ ಚಿಕನ್ ಮಸಾಲಾ ರೈಸ್ ರೆಡಿ. ಚಿಕನ್ ಬೇಯಿಸಲು ಅಗತ್ಯವಿದ್ದರೆ ನಾಲ್ಕರಿಂದ ಐದು ಚಮಚ ನೀರು ಸೇರಿಸಿ. ಈ ಚಿಕನ್ ಮಸಾಲಾ ರೈಸ್ ಅನ್ನು ಖಾರವಾಗಿ ತಿಂದರೆ ತುಂಬಾ ರುಚಿಯಾಗಿರುತ್ತದೆ.

ಮಳೆ ಬಂದಾಗ ಹವಾಮಾನವು ತುಂಬಾ ತಂಪಾಗಿರುತ್ತದೆ. ಇಂತಹ ಸಮಯದಲ್ಲಿ ಚಿಕನ್ ಮಸಾಲ ರೈಸ್ ಅನ್ನು ಈ ರೀತಿ ಮಾಡಿದರೆ ಮತ್ತೆ ಮತ್ತೆ ತಿನ್ನಬೇಕೆನಿಸುತ್ತದೆ. ಇದರ ರುಚಿ ಕೂಡ ಸ್ವಲ್ಪ ವಿಭಿನ್ನವಾಗಿದೆ. ಹಾಗಾಗಿ ತಿನ್ನುವಾಗ ಬಾಯಲ್ಲಿ ನೀರು ಬರುವುದು ಖಚಿತ. ಬಿರಿಯಾನಿ ತಿಂದು ಬೋರ್‌ ಆದವರು ಕೂಡ ಚಿಕನ್‌ ಮಸಾಲಾ ರೈಸ್‌ ಟ್ರೈ ಮಾಡಬಹುದು. ಇದರ ರುಚಿ ಅವರಿಗೆ ಹಿಡಿಸೋದು ಖಂಡಿತ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ