logo
ಕನ್ನಡ ಸುದ್ದಿ  /  ಜೀವನಶೈಲಿ  /  Buttermilk Side Effects: ಮಜ್ಜಿಗೆ ಕುಡಿಯೋದು ಅಂದ್ರೆ ಇಷ್ಟನಾ; ಅತಿಯಾಗಿ ಕುಡಿದ್ರೆ ಆರೋಗ್ಯ ಸಮಸ್ಯೆ ತಪ್ಪಿದ್ದಲ್ಲ ನೆನಪಿರಲಿ

Buttermilk Side Effects: ಮಜ್ಜಿಗೆ ಕುಡಿಯೋದು ಅಂದ್ರೆ ಇಷ್ಟನಾ; ಅತಿಯಾಗಿ ಕುಡಿದ್ರೆ ಆರೋಗ್ಯ ಸಮಸ್ಯೆ ತಪ್ಪಿದ್ದಲ್ಲ ನೆನಪಿರಲಿ

Reshma HT Kannada

Aug 23, 2023 11:09 AM IST

google News

ಮಜ್ಜಿಗೆ ಕುಡಿಯುವುದರಿಂದ ಆರೋಗ್ಯ ಪ್ರಯೋಜನ ಮಾತ್ರವಲ್ಲ ಅಡ್ಡಪರಿಣಾಮಗಳೂ ಇವೆ

    • ಬಿಸಿಲಿನಲ್ಲಿ ಮಜ್ಜಿಗೆ ಕುಡಿಯುವುದರಿಂದ ದೇಹ ತಂಪಾಗುತ್ತದೆ. ಅಲ್ಲದೆ ಮಜ್ಜಿಗೆ ಕುಡಿಯುವುದರಿಂದ ಹಲವು ಆರೋಗ್ಯ ಪ್ರಯೋಜನಗಳೂ ಇವೆ. ಆದರೆ ಅತಿಯಾಗಿ ಮಜ್ಜಿಗೆ ಸೇವಿಸುವುದು ಅಪಾಯ. ಇದರಿಂದ ಆರೋಗ್ಯ ಸಮಸ್ಯೆ ತಪ್ಪಿದ್ದಲ್ಲ. 
ಮಜ್ಜಿಗೆ ಕುಡಿಯುವುದರಿಂದ ಆರೋಗ್ಯ ಪ್ರಯೋಜನ ಮಾತ್ರವಲ್ಲ ಅಡ್ಡಪರಿಣಾಮಗಳೂ ಇವೆ
ಮಜ್ಜಿಗೆ ಕುಡಿಯುವುದರಿಂದ ಆರೋಗ್ಯ ಪ್ರಯೋಜನ ಮಾತ್ರವಲ್ಲ ಅಡ್ಡಪರಿಣಾಮಗಳೂ ಇವೆ

ಸದ್ಯ ಮುಂಗಾರಿನ ಋತು ನಡೆಯುತ್ತಿದೆ. ಆದರೆ ದಕ್ಷಿಣ ಭಾರತದಲ್ಲಿ ಮಳೆಯ ಸುಳಿವಿಲ್ಲ. ಎಲ್ಲೆಲ್ಲೂ ರಣ ಬಿಸಿಲು ಭೂಮಿ ಹಾಗೂ ಮನುಷ್ಯರನ್ನು ಸುಡುತ್ತಿದೆ. ಬಿಸಿಲಿನ ವಾತಾವರಣವಿರುವಾಗ ದೇಹ ತಂಪಾಗಲು ಮಜ್ಜಿಗೆ ಕುಡಿಯುವುದು ವಾಡಿಕೆ. ಮಜ್ಜಿಗೆ ದೇಹವನ್ನು ತಂಪು ಮಾಡುವ ಜೊತೆಗೆ ಆರೋಗ್ಯಕ್ಕೂ ಉತ್ತಮ ಎನ್ನುತ್ತಾರೆ.

ಮಜ್ಜಿಗೆಯನ್ನು ಮನೆಯಲ್ಲಿ ಸುಲಭವಾಗಿ ತಯಾರಿಸಬಹುದು ಮಾತ್ರವಲ್ಲ, ಎಲ್ಲರೂ ಇದನ್ನು ಇಷ್ಟಪಟ್ಟು ಕುಡಿಯುತ್ತಾರೆ. ಇದು ಮೂಳೆಗಳು ಗಟ್ಟಿಯಾಗಲು ಸಹಾಯ ಮಾಡುತ್ತದೆ. ಬಾಯಿ ಆರೋಗ್ಯ ಸುಧಾರಿಸುತ್ತದೆ, ಕೊಲೆಸ್ಟ್ರಾಲ್‌ ಕಡಿಮೆ ಮಾಡುತ್ತದೆ ಜೊತೆಗೆ ರಕ್ತದೊತ್ತಡವನ್ನೂ ನಿಯಂತ್ರಿಸುತ್ತದೆ. ಇಷ್ಟೇ ಅಲ್ಲದೆ ಮಜ್ಜಿಗೆ ಸೇವಿಸುವುದರಿಂದ ಇನ್ನೂ ಹಲವು ಆರೋಗ್ಯ ಪ್ರಯೋಜನಗಳಿವೆ. ಆದರೆ ಬೇರೆಲ್ಲಾ ಆಹಾರಗಳಂತೆ ಮಜ್ಜಿಗೆಯನ್ನು ಅತಿಯಾಗಿ ಸೇವಿಸುವುದರಿಂದ ಅಡ್ಡ ಪರಿಣಾಮಗಳೂ ಉಂಟಾಗಬಹುದು ಎನ್ನುತ್ತಾರೆ ತಜ್ಞರು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಲೇಖನಗಳಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಹಾಗಾದರೆ ಮಜ್ಜಿಗೆ ಕುಡಿಯುವುದರಿಂದ ಎನೆಲ್ಲಾ ಅಡ್ಡ ಪರಿಣಾಮಗಳು ಉಂಟಾಗಬಹುದು ನೋಡಿ.

ಲ್ಯಾಕ್ಟೋಸ್‌ ಅಲರ್ಜಿ

ಹಾಲು ಹಾಗೂ ಡೇರಿ ಉತ್ಪನ್ನಗಳಲ್ಲಿ ಇರುವಂತೆ ಮಜ್ಜಿಗೆಯಲ್ಲಿ ಲ್ಯಾಕ್ಟೋಸ್‌ ಅಂಶವಿರುತ್ತದೆ. ಲ್ಯಾಕ್ಟೋಸ್‌ ಅಲರ್ಜಿ ಇರುವವರು ಮಜ್ಜಿಗೆಯನ್ನು ಅತಿಯಾಗಿ ಸೇವಿಸುವುದರಿಂದ ಹೊಟ್ಟೆಯುಬ್ಬರ, ಗ್ಯಾಸ್ಟ್ರಿಕ್‌, ಅತಿಸಾರ, ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಅನುಭವಿಸಬಹುದು.

ಅಲರ್ಜಿ

ಹಲವರಿಗೆ ಹಾಲು ಹಾಗೂ ಮಜ್ಜಿಗೆ, ಮೊಸರಿನಲ್ಲಿರುವ ಅಂಶ ಅಲರ್ಜಿಯಾಗುವ ಸಾಧ್ಯತೆ ಇದೆ. ಇದರಿಂದ ಚರ್ಮದ ದದ್ದು, ತುರಿಕೆ ಅಥವಾ ಉಸಿರಾಟಕ್ಕೆ ತೊಂದರೆ ಉಂಟಾಗುವುದು ಇಂತಹ ಸಮಸ್ಯೆಗಳು ಎದುರಾಗಬಹುದು. ಆ ಕಾರಣಕ್ಕೆ ಮಜ್ಜಿಗೆ ಸೇವಿಸುವ ಮೊದಲು ವೈದ್ಯರ ಬಳಿ ಸಲಹೆ ಕೇಳುವುದು ಉತ್ತಮ.

ಕ್ಯಾಲೊರಿ ಅಂಶ

ಹಾಲಿಗೆ ಹೋಲಿಸಿದರೆ ಮಜ್ಜಿಗೆಯಲ್ಲಿ ಕ್ಯಾಲೊರಿ ಅಂಶ ಕಡಿಮೆ ಇದೆ. ಆದರೆ ಅದಕ್ಕೆ ಸಕ್ಕರೆ ಅಥವಾ ಸುವಾಸನೆ ಬೀರುವ ಎಸೆನ್ಸ್‌ಗಳನ್ನು ಸೇರಿಸಿದಾಗ ಇದರಲ್ಲಿ ಕ್ಯಾಲೊರಿ ಅಂಶ ಸೇಪರ್ಡೆಯಾಗಬಹುದು. ಕ್ಯಾಲೊರಿ ಅಂಶವಿರುವ ಮಜ್ಜಿಗೆಯ ಸೇವನೆಯು ತೂಕ ಹೆಚ್ಚಲು ಕಾರಣವಾಗಬಹುದು.

ಸೋಡಿಯಂ ಅಂಶ

ಮಾರುಕಟ್ಟೆಯಲ್ಲಿ ಸಿಗುವ ಮಜ್ಜಿಗೆಗೆ ಉಪ್ಪು ಸೇರಿಸಲಾಗುತ್ತದೆ. ಇದು ಅಧಿಕ ರಕ್ತದೊತ್ತಡ ಮತ್ತು ಹೃದಯದ ಸಮಸ್ಯೆ ಇರುವವರಲ್ಲಿ ಇನ್ನಷ್ಟು ತೊಂದರೆಗೆ ಕಾರಣವಾಗಬಹುದು. ದೇಹದಲ್ಲಿ ಸೋಡಿಯಂ ಮಟ್ಟವನ್ನು ನಿಯಂತ್ರಿಸಲು ಬಯಸಿದರೆ ಮಸಾಲಾ ಮಜ್ಜಿಗೆ ಕುಡಿಯುವುದನ್ನು ತಪ್ಪಿಸಬೇಕು.

ಸೂಕ್ಷ್ಮಗಳು

ಕೆಲವೊಮ್ಮೆ ಮಜ್ಜಿಗೆಗೆ ಸೇರಿಸುವ ಮಸಾಲೆ ಅಥವಾ ಗಿಡಮೂಲಿಕೆಯಂತಹ ಪದಾರ್ಥಗಳು ಸೂಕ್ಷ್ಮ ಅಂಶಗಳನ್ನು ಹೊಂದಿದ್ದರೆ ಇದು ಜಠರಗರುಳಿನ ಅಸ್ವಸ್ಥತೆ ಮತ್ತು ಇತರ ರೋಗಲಕ್ಷಣಗಳನ್ನು ಹೊಂದಬಹುದು.

ಮಿತಿಮೀರಿದ ಸೇವನೆ ಸಲ್ಲ

ಮಜ್ಜಿಗೆಯನ್ನು ಮಿತವಾಗಿ ಸೇವಿಸಿದ್ರೆ ಆರೋಗ್ಯಕ್ಕೆ ಪ್ರಯೋಜನ, ಆದರೆ ಇದನ್ನು ಅತಿಯಾಗಿ ಸೇವಿಸುವುದು ಹಲವು ರೀತಿಯ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡಬಹುದು. ಯಾವುದೇ ಆಹಾರ ಪಾನೀಯವಾಗಲಿ ಸರಿಯಾದ ಪ್ರಮಾಣದಲ್ಲಿ ಸೇವಿಸುವುದು ಮುಖ್ಯವಾಗುತ್ತದೆ.

ಆದರೆ ಮಜ್ಜಿಗೆ ಕುಡಿಯುವುದರಿಂದ ಎಲ್ಲರಿಗೂ ಸಮಸ್ಯೆಯಾಗುತ್ತದೆ ಎಂದೇನಿಲ್ಲ. ಆದರೆ ಮಿತವಾಗಿ ಕುಡಿಯುವುದನ್ನು ಅಭ್ಯಾಸ ಮಾಡುವುದು ಉತ್ತಮ.

ಇದನ್ನೂ ಓದಿ

TasteAtlas: ಅತ್ಯಂತ ಕೆಟ್ಟ ಬೀದಿ ಬದಿ ತಿನಿಸುಗಳ ಪಟ್ಟಿಯಲ್ಲಿ ದಹಿಪುರಿಗೆ ಮೊದಲ ಸ್ಥಾನ; ಇನ್ನು ಯಾವ ಯಾವ ತಿಂಡಿಗಳು ಈ ಪಟ್ಟಿಯಲ್ಲಿವೆ ನೋಡಿ

ಚಾಟ್ಸ್‌ ತಿನ್ನುವುದು ಹಲವರಿಗೆ ಫೇವರಿಟ್‌. ಇಳಿ ಸಂಜೆಯ ಚಳಿಗಾಳಿಯಲ್ಲಿ ಚಾಟ್‌ ಮೆಲ್ಲುತ್ತಿದ್ದರೆ ಇದರಲ್ಲಿ ಸಿಗುವ ಖುಷಿಯೇ ಬೇರೆ. ಮಸಾಲಪುರಿ, ಬೇಲ್‌ಪುರಿ, ಪಾನಿಪುರಿ, ದಹಿಪುರಿ, ಆಲೂ ಚಾಟ್‌ ಹೆಸರು ಕೇಳುತ್ತಿದ್ದರೆ ಬಾಯಲ್ಲಿ ನೀರೂರುತ್ತದೆ. ಆದರೆ ಚಾಟ್‌ ಪ್ರಿಯರಿಗೆ ಒಂದು ಕಹಿ ಸುದ್ದಿ ಇದೆ. ಅದೇನೆಂದರೆ ಭಾರತೀಯ ಬೀದಿ ಬದಿ ಆಹಾರಗಳ ಪೈಕಿ ಅತ್ಯಂತ ಕೆಟ್ಟ ಆಹಾರಗಳ ಪಟ್ಟಿ ಬಿಡುಗಡೆಯಾಗಿದೆ. ಇದರಲ್ಲಿ ಹಲವು ಚಾಟ್‌ ಐಟಂಗಳಿವೆ. ಈ ಪಟ್ಟಿಯಲ್ಲಿ ಹಲವರ ಫೇವರಿಟ್‌ ದಹಿಪುರಿ ಅಗ್ರಸ್ಥಾನ ಪಡೆದಿದೆ. ಹಾಗಾದರೆ ಇನ್ನೂ ಯಾವುದೆಲ್ಲಾ ಕೆಟ್ಟ ಆಹಾರಗಳ ಪಟ್ಟಿಯಲ್ಲಿ ಸ್ಥಾನ ಗಳಿಸಿವೆ ನೋಡಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ