logo
ಕನ್ನಡ ಸುದ್ದಿ  /  ಜೀವನಶೈಲಿ  /  Soya Chunks Kurma: ಇದು ನಾನ್‌ವೆಜ್‌ ಖಂಡಿತ ಅಲ್ಲ, ಸೋಯಾ ಚಂಕ್ಸ್‌ ಕುರ್ಮಾ ಕಣ್ರೀ; ರೆಸಿಪಿ ಇಲ್ಲಿದೆ ನೋಡಿ

Soya Chunks Kurma: ಇದು ನಾನ್‌ವೆಜ್‌ ಖಂಡಿತ ಅಲ್ಲ, ಸೋಯಾ ಚಂಕ್ಸ್‌ ಕುರ್ಮಾ ಕಣ್ರೀ; ರೆಸಿಪಿ ಇಲ್ಲಿದೆ ನೋಡಿ

HT Kannada Desk HT Kannada

Dec 29, 2023 01:41 PM IST

google News

ಸೋಯಾ ಚಂಕ್ಸ್‌ ಕುರ್ಮಾ

  • Soya Chnuks Recipe: ಸಸ್ಯಹಾರಿಗಳು ಇಷ್ಟಪಡುವ ಸೋಯಾಚಂಕ್ಸ್‌ನಲ್ಲಿ ವಿಧವಿಧವಾದ ವೆರೈಟಿ ಫುಡ್‌ ತಯಾರಿಸಬಹುದು. ಅದರಲ್ಲಿ ಸೋಯಾ ಚಂಕ್ಸ್‌ ಕುರ್ಮಾ ಕೂಡಾ ಒಂದು. 

ಸೋಯಾ ಚಂಕ್ಸ್‌ ಕುರ್ಮಾ
ಸೋಯಾ ಚಂಕ್ಸ್‌ ಕುರ್ಮಾ (PC: Unsplash)

Soya Chnuks Recipe: ಸಸ್ಯಹಾರಿಗಳಿಗೆ ಅಷ್ಟೊಂದು ವೆರೈಟಿ ಫುಡ್‌ ಸಿಗುವುದಿಲ್ಲ ಎಂಬ ಮಾತಿದೆ. ಆದರೆ ನಿಮ್ಮ ಊಹೆ ತಪ್ಪು. ನಾನ್‌ವೆಜ್‌ ಆಹಾರದಂತೆ ಸಸ್ಯಹಾರಿಗಳಿಗೂ ಸಾಕಷ್ಟು ವೆರೈಟಿ ಫುಡ್‌ಗಳಿವೆ. ಅದರಲ್ಲಿ ಸೋಯಾ ಚಂಕ್ಸ್‌ ಕೂಡಾ ಒಂದು.

ಸೋಯಾ ಚಂಕ್ಸ್‌ನಲ್ಲಿ ಪ್ರೋಟೀನ್‌ ಇದೆ. ಸೋಯಾ ಚಂಕ್ಸ್ ಶೇ ಸಸ್ಯಹಾರಿ ಪದಾರ್ಥ. ಯಾವುದೇ ಭಯ ಇಲ್ಲದೆ ಸಸ್ಯಹಾರಿಗಳು ಇದನ್ನು ತಿನ್ನಬಹುದು. ಸೋಯಾ ಚಂಕ್ಸ್‌ನಲ್ಲಿ ದೇಹಕ್ಕೆ ಅಗತ್ಯವಾದ ಸುಮಾರು 9 ಬಗೆಯ ಅಮೈನೋ ಆಮ್ಲಗಳಿವೆ. ಸೋಯಾ ಚಂಕ್ಸ್‌ನಲ್ಲಿ ನಾನಾ ರೀತಿಯ ರೆಸಿಪಿ ತಯಾರಿಸಬಹುದು. ಅದರಲ್ಲಿ ಸೋಯಾ ಚಂಕ್ಸ್‌ ಕುರ್ಮಾ ಕೂಡಾ ಒಂದು.

ಸೋಯಾಚಂಕ್ಸ್‌ ಕುರ್ಮಾ ತಯಾರಿಸಲು ಬೇಕಾಗುವ ಸಾಮಗ್ರಿಗಳು

  • ಸೋಯಾ ಚಂಕ್ಸ್‌ - 1 ಕಪ್‌
  • ಎಣ್ಣೆ - 3 ಟೇಬಲ್‌ ಸ್ಪೂನ್‌
  • ಶಾಲೋಟ್ಸ್‌ - 20
  • ಕರಿಮೆಣಸು - 1 ಟೀ ಸ್ಪೂನ್‌
  • ಜೀರ್ಗೆ - 1 ಟೀ ಸ್ಪೂನ್‌
  • ಜೀರ್ಗೆ - ½ ಟೀ ಸ್ಪೂನ್‌
  • ಕರಿವೇವು - 2 ಎಸಳು
  • ಟೊಮೆಟೊ - 1
  • ಶುಂಠಿ ಬೆಳ್ಳುಳ್ಳಿ ಪೇಸ್ಟ್‌ - 1 ಟೀ ಸ್ಪೂನ್‌
  • ಚಿಲ್ಲಿ ಪೌಡರ್‌ - 1 ಟೀ ಸ್ಪೂನ್‌
  • ಪುದೀನಾ - 1 ಕಟ್ಟು
  • ಹಸಿಮೆಣಸಿನ ಕಾಯಿ - 5
  • ಧನಿಯಾ ಪುಡಿ - 1 ಟೀ ಸ್ಪೂನ್‌
  • ಕೊತ್ತಂಬರಿ ಸೊಪ್ಪು - 1/2 ಕಟ್ಟು
  • ಮೊಸರು - 4 ಟೇಬಲ್‌ ಸ್ಪೂನ್‌
  • ಗರಂ ಮಸಾಲೆ - 1/4 ಟೀ ಸ್ಪೂನ್‌
  • ಉಪ್ಪು - ರುಚಿಗೆ ತಕ್ಕಷ್ಟು

ಸೋಯಾಚಂಕ್ಸ್‌ ಕುರ್ಮಾ ತಯಾರಿಸುವ ವಿಧಾನ

  1. ಬಿಸಿ ನೀರಿನಲ್ಲಿ ಸೋಯಾ ಚಂಕ್ಸ್‌ ಸೇರಿಸಿ 20 ನಿಮಿಷ ನೆನೆಯಲು ಬಿಡಿ

2. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಶಾಲೋಟ್ಸ್‌ ಸೇರಿಸಿ ಫ್ರೈ ಮಾಡಿ

3. ಜೊತೆಗೆ ಕರಿಮೆಣಸು, ಜೀರ್ಗೆ, ಕರಿಬೇವು ಸೇರಿಸಿ ಫ್ರೈ ಮಾಡಿ

4. ಈ ಮಿಶ್ರಣ ತಣ್ಣಗಾಗುತ್ತಿದ್ದಂತೆ ಇದಕ್ಕೆ ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಪುದೀನಾ ಸೇರಿಸಿ ಗ್ರೈಂಡ್‌ ಮಾಡಿಕೊಳ್ಳಿ

5. ಮತ್ತೊಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಸಣ್ಣಗೆ ಹೆಚ್ಚಿದ ಟೊಮೆಟೋ ಫ್ರೈ ಮಾಡಿ

6. ಅದರೊಂದಿಗೆ ಗ್ರೈಂಡ್‌ ಮಾಡಿಕೊಂಡ ಮಸಾಲೆ, ಶುಂಠಿ ಬೆಳ್ಳುಳ್ಳಿ ಸೇರಿಸಿ ಹಸಿ ವಾಸನೆ ಹೋಗುವರೆಗೂ ಹುರಿಯಿರಿ.

7. ಜೊತೆಗೆ ಅಚ್ಚ ಖಾರದ ಪುಡಿ, ಧನಿಯಾ ಪುಡಿ, ಅರಿಶಿನ ಉಪ್ಪು ಸೇರಿಸಿ

8. ಇದರೊಂದಿಗೆ ಮೊಸರು ಸೇರಿಸಿ ಮಿಕ್ಸ್‌ ಮಾಡಿ

9. ನೀರಿನಲ್ಲಿ ನೆನೆಸಿದ ಸೋಯಾ ಚಂಕ್ಸನ್ನು ಸ್ಕ್ವೀಜ್‌ ಮಾಡಿ ಮಸಾಲೆಯೊಂದಿಗೆ ಸೇರಿಸಿ.

10. ನಂತರ ಗರಂ ಮಸಾಲೆ ಸೇರಿಸಿ ನೀರು ಸೇರಿಸಿ ಕುಕ್ಕರ್‌ನಲ್ಲಿ 1 ಸೀಟಿ ಕೂಗಿಸಿ ಬೇಯಿಸಿಕೊಳ್ಳಿ.

11. ಮುಚ್ಚಳ ತೆಗೆದು ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿದರೆ ಸೋಯಾಚಂಕ್ಸ್‌ ಕುರ್ಮಾ ರೆಡಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ