Karachi Halwa Recipe: ಸ್ವೀಟ್ ಶಾಪ್‌ಗೆ ಹೋಗೋದು ಬೇಡ ಮನೆಯಲ್ಲೇ ತಯಾರಿಸಿ ಮಕ್ಕಳ ಫೇವರೆಟ್, ಮೃದುವಾದ ಕರಾಚಿ ಹಲ್ವಾ
Dec 07, 2023 07:08 PM IST
ಕರಾಚಿ ಹಲ್ವಾ ರೆಸಿಪಿ
Karachi Halwa Recipe: ಸ್ವೀಟ್ ಅಂಗಡಿಗೆ ಹೋದರೆ ಅಲ್ಲಿ ತರೇಹವಾರಿ ಸಿಹಿತಿಂಡಿಗಳು ನಿಮ್ಮ ಕಣ್ಣಿಗೆ ಕಾಣುತ್ತವೆ. ಎಲ್ಲಾ ಸಾಮಗ್ರಿಗಳಿದ್ದರೆ ಅದೆಲ್ಲವನ್ನೂ ನೀವು ಮನೆಯಲ್ಲೇ ತಯಾರಿಸಬಹುದು. ಅದು ಅಷ್ಟು ಕಷ್ಟವೇನಲ್ಲ. ಅದರಲ್ಲಿ ಕರಾಚಿ ಹಲ್ವಾ ಕೂಡಾ ಒಂದು. ಇದನ್ನು ಬಾಂಬೆ ಹಲ್ವಾ ಎಂದೂ ಕರೆಯುತ್ತಾರೆ.
Karachi Halwa Recipe: ಕರಾಚಿ ಹಲ್ವಾ ತಿನ್ನಲು ಮೃದುವಾದ, ಕೆಲವೊಮ್ಮೆ ಚ್ಯೂಯಿಂಗ್ ಗಮ್ ಅನುಭವ ನೀಡುತ್ತದೆ. ಕೈಯಲ್ಲಿ ಹಿಡಿದರೆ ಬಳುಕುವ ರಬ್ಬರ್‌ನಂತೆ ಭಾಸವಾಗುತ್ತದೆ.
ಕರಾಚಿ ಹಲ್ವಾ ಬಹಳ ಜನರ ಫೇವರೆಟ್ ಸ್ವೀಟ್, ಮಕ್ಕಳಿಗೂ ಇದು ಬಹಳ ಇಷ್ಟ. ತಯಾರಿಸುವುದು ಬಹಳ ಸುಲಭ. ಹೆಚ್ಚು ಸಾಮಗ್ರಿಗಳು ಕೂಡಾ ಬೇಕಿಲ್ಲ. ಹಬ್ಬ ಹರಿದಿನಗಳು, ಬರ್ತ್‌ಡೆ ಪಾರ್ಟಿ ಸೇರಿ ವಿಶೇಷ ಕಾರ್ಯಕ್ರಮಗಳಲ್ಲಿ ನೀವೇ ಮನೆಯಲ್ಲಿ ತಯಾರಿಸಬಹುದು. 3 ಪ್ರಮುಖ ಸಾಮಗ್ರಿಗಳ ಜೊತೆಗೆ ಇನ್ನೊಂದಿಷ್ಟು ಸಣ್ಣ ಪುಟ್ಟ ಸಾಮಗ್ರಿಗಳಿದ್ದರೆ ಸಾಕು. ಕರಾಚಿ ಹಲ್ವಾ ತಯಾರಿಸಲು ಬೇಕಾಗುವ ಸಾಮಗ್ರಿಗಳು ಹಾಗೂ ತಯಾರಿಸುವ ವಿಧಾನ ಇಲ್ಲಿದೆ.
ಕರಾಚಿ ಹಲ್ವಾ ತಯಾರಿಸಲು ಬೇಕಾಗುವ ಸಾಮಗ್ರಿಗಳು
- ಕಾರ್ನ್‌ಫ್ಲೋರ್ - 1 ಕಪ್
- ತುಪ್ಪ - 6 ಟೇಬಲ್ ಸ್ಪೂನ್
- ಸಕ್ಕರೆ - 2 ಕಪ್
- ಏಲಕ್ಕಿ ಪುಡಿ - 1/4 ಟೀ ಸ್ಪೂನ್
- ಪಿಸ್ತಾ ಚೂರುಗಳು - 1 ಟೀ ಸ್ಪೂನ್
- ಮೆಲನ್ ಸೀಡ್ - 1 ಟೀ ಸ್ಪೂನ್
- ನಿಂಬೆ ರಸ - 1/2 ಟೀ ಸ್ಪೂನ್
- ಬಾದಾಮಿ ಚೂರುಗಳು - 1 ಟೀ ಸ್ಪೂನ್
- ಕೇಸರಿ/ಕೆಂಪು ಫುಡ್ ಕಲರ್ - ಅಗತ್ಯಕ್ಕೆ ತಕ್ಕಷ್ಟು
- ರೋಸ್ ವಾಟರ್ - 1 ಟೇಬಲ್ ಸ್ಪೂನ್
ಕರಾಚಿ ಹಲ್ವಾ ತಯಾರಿಸುವ ವಿಧಾನ
- ಒಂದು ಪಾತ್ರೆಯಲ್ಲಿ ಕಾರ್ನ್‌ಫ್ಲೋರ್ ಸೇರಿಸಿ ಅದಕ್ಕೆ 1 ⅓ ಕಪ್ ನೀರು ಹಾಕಿ ಗಂಟುಗಳು ಇಲ್ಲದಂತೆ ಮಿಕ್ಸ್ ಮಾಡಿ.
-ಒಂದು ಪ್ಯಾನಿನಲ್ಲಿ ಸಕ್ಕರೆ ಸೇರಿಸಿ ಮಧ್ಯಮ ಫ್ಲೇಮ್ ಇರಿಸಿ. ಪಾಕ ಕುದಿಯಲು ಆರಂಭವಾಗುತ್ತಿದ್ದಂತೆ ನಿಂಬೆರಸ ಸೇರಿಸಿ ಮಿಕ್ಸ್ ಮಾಡಿ.
-ಮೊದಲೇ ಮಾಡಿಟ್ಟುಕೊಂಡ ಕಾರ್ನ್‌ಪ್ಲೋರ್ ಮಿಶ್ರಣವನ್ನು ಸಕ್ಕರೆ ಪಾಕದೊಂದಿಗೆ ಸೇರಿಸಿ ಫ್ಲೇಮ್ ಕಡಿಮೆ ಮಾಡಿ.
-ಮಿಶ್ರಣವನ್ನು ಬಿಡದಂತೆ ತಿರುವುತ್ತಿರಿ, ಸ್ವಲ್ಪ ಸಮಯ ಕಳೆದ ನಂತರ ಈ ಮಿಶ್ರಣ ಗಾಜಿನಂತೆ ಕಾಣುತ್ತದೆ.
-ಈ ಮಿಶ್ರಣಕ್ಕೆ 2 ನಿಮಿಷ ಅಂತರದಲ್ಲಿ ಸ್ವಲ್ಪ ಸ್ವಲ್ಪ ತುಪ್ಪ ಸೇರಿಸಿ ತಿರುವಿ.
-10 ನಿಮಿಷದ ನಂತರ ಫುಡ್ ಕಲರ್ ಪಿಸ್ತಾ, ಬಾದಾಮಿ, ಮೆಲನ್ ಸೀಡ್ಸ್ ಸೇರಿಸಿ ಮಿಕ್ಸ್ ಮಾಡಿ.
-ಮಿಶ್ರಣದಿಂದ ತುಪ್ಪ ಬಿಡುತ್ತಿದ್ದಂತೆ ಏಲಕ್ಕಿ ಪುಡಿ, ರೋಸ್ ವಾಟರ್ ಸೇರಿಸಿ ಮತ್ತೊಮ್ಮೆ ಮಿಕ್ಸ್ ಮಾಡಿ, ಸ್ಟೌವ್ ಆಫ್ ಮಾಡಿ.
-ತುಪ್ಪ ಸವರಿದ ಟ್ರೇಗೆ ಈ ಮಿಶ್ರಣವನ್ನು ಸುರಿಯಿರಿ, ಬೇಕಿದ್ದರೆ ಇನ್ನಷ್ಟು ಡ್ರೈ ಪ್ರೂಟ್‌ಗಳಿಂದ ಗಾರ್ನಿಶ್ ಮಾಡಿ.
-ಮಿಶ್ರಣ ತಣ್ಣಗಾದಾಗ ನಿಮಗಿಷ್ಟವಾದ ಆಕಾರಕ್ಕೆ ಕತ್ತರಿಸಿ ಮಕ್ಕಳಿಗೆ, ಆತ್ಮೀಯರಿಗೆ ಸರ್ವ್ ಮಾಡಿ
ಗಮನಿಸಿ: ರೋಸ್ ವಾಟರ್ ನಿಮ್ಮ ಆಯ್ಕೆಗೆ ಬಿಟ್ಟದ್ದು , ಏಲಕ್ಕಿ ಪುಡಿ ಇದ್ದರೆ ರೋಸ್ ವಾಟರ್ ಸ್ಕಿಪ್ ಮಾಡಬಹುದು, ಏಲಕ್ಕಿ ಪುಡಿ ಬದಲಿಗೆ ಎಸೆನ್ಸ್ ಕೂಡಾ ಬಳಸಬಹುದು.
ವಿಭಾಗ