Snacks for Kids: ಮಕ್ಕಳಿಗೆ ಭಿನ್ನವಾಗಿ ಸ್ನ್ಯಾಕ್ಸ್ ತಯಾರಿಸಲು ಯೋಚಿಸಿದ್ದೀರಾ; ಇಲ್ಲಿದೆ ಸೂಪರ್ ಟೇಸ್ಟಿ ಚೀಸ್ ಮಸಾಲಾ ಆಲೂ ರೆಸಿಪಿ
Aug 02, 2023 04:23 PM IST
ಚೀಸ್ ಮಸಾಲಾ ಆಲೂ
- Evening Snacks Recipe: ಮಕ್ಕಳು ಸಂಜೆ ವೇಳೆ ತಿಂಡಿಗಾಗಿ ಹಟ ಮಾಡುವುದು ಸಾಮಾನ್ಯ. ಅಲ್ಲದೇ ಪ್ರತಿದಿನ ಒಂದೇ ರೀತಿ ತಿನಿಸುಗಳು ಮಕ್ಕಳಿಗೆ ಬೇಸರ ತರಿಸಬಹುದು. ಅದಕ್ಕಾಗಿ ನೀವು ಆಲೂಗೆಡ್ಡೆಯಿಂದ ತಯಾರಿಸಬಹುದಾದ ಚೀಸ್ ಮಸಾಲಾ ಆಲೂ ಟ್ರೈ ಮಾಡಬಹುದು. ಇದರ ರೆಸಿಪಿ ಇಲ್ಲಿದೆ.
ಮಕ್ಕಳು ಪ್ರತಿದಿನ ರುಚಿ ರುಚಿಯಾದ ತಿನಿಸುಗಳನ್ನು ತಿನ್ನಲು ಬಯಸುತ್ತಾರೆ. ಮನೆಯಲ್ಲಿ ರುಚಿಯಾದ ತಿಂಡಿ ತಿನ್ನಲು ಸಿಗದೇ ಇದ್ದರೆ, ಹೊರಗಡೆ ತಿನ್ನಲು ಮನಸ್ಸು ಮಾಡುತ್ತಾರೆ. ಇದರಿಂದ ಅವರ ಆರೋಗ್ಯ ಕೆಡಬಹುದು. ಅಲ್ಲದೆ ಒಂದೇ ರೀತಿಯ ತಿನಿಸುಗಳನ್ನು ಮಾಡಿಕೊಟ್ಟರೆ ಅವರು ಬೇಸರಗೊಳ್ಳುತ್ತಾರೆ. ಪ್ರತಿದಿನ ವಿಭಿನ್ನ ತಿನಿಸುಗಳಿಗಾಗಿ ಮಕ್ಕಳು ಬೇಡಿಕೆ ಇಡುವುದು ಸಹಜ. ಸಾಮಾನ್ಯವಾಗಿ ಮಕ್ಕಳಿಗೆ ಆಲೂಗೆಡ್ಡೆಯಿಂದ ತಯಾರಿಸುವ ತಿನಿಸುಗಳು ಇಷ್ಟವಾಗುತ್ತವೆ. ಚಿಪ್ಸ್, ಫ್ರೆಂಚ್ ಫ್ರೈಸ್‌ನಂತಹ ತಿನಿಸುಗಳನ್ನು ಅವರು ಇಷ್ಟಪಟ್ಟು ತಿನ್ನುತ್ತಾರೆ.
ನಿಮ್ಮ ಮಗು ಆಲೂಗಡ್ಡೆ ಮತ್ತು ಚೀಸ್ ಅನ್ನು ಇಷ್ಟಪಟ್ಟರೆ, ಈ ಎರಡರಿಂದ ನೀವು ನಿಮ್ಮ ಮಗುವಿಗೆ ರುಚಿಯಾದ ಚೀಸ್ ಮಸಾಲ ಆಲೂ ತಯಾರಿಸಬಹುದು. ಇದನ್ನು ಸುಲಭವಾಗಿ ಹಾಗೂ ಬೇಗನೆ ತಯಾರಿಸಬಹುದು. ಇದನ್ನು ಮಕ್ಕಳ ಟಿಫಿನ್ ಬಾಕ್ಸ್‌ಗೂ ಹಾಕಬಹುದು. ಹಾಗಾದರೆ ಈ ಸೂಪರ್ ಟೇಸ್ಟಿ ಡಿಶ್ ತಯಾರಿಸುವುದು ಹೇಗೆ ನೋಡೋಣ.
ಬೇಕಾಗುವ ಸಾಮಗ್ರಿಗಳು: ಬೇಯಿಸಿದ ಸಣ್ಣ ಆಲೂಗಡ್ಡೆ, ಚೀಸ್, ಖಾರದ ಪುಡಿ, ಓರೆಗಾನೊ, ಅರಿಸಿನ ಪುಡಿ, ಜೀರಿಗೆ ಪುಡಿ, ಚಿಲ್ಲಿ ಫೇಕ್ಸ್, ಕಾಳುಮೆಣಸಿನ ಪುಡಿ, ಉಪ್ಪು, ಕರಿಯಲು ಎಣ್ಣೆ
ತಯಾರಿಸುವ ವಿಧಾನ: ಆಲೂಗೆಡ್ಡೆಯನ್ನು ಬೇಯಿಸಿ, ಸಿಪ್ಪೆ ತೆಗೆದು ಇರಿಸಿಕೊಳ್ಳಿ. ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ, ಅದಕ್ಕೆ ಬೇಯಿಸಿ, ಚಿಕ್ಕದಾಗಿ ಕತ್ತರಿಸಿದ ಆಲೂಗೆಡ್ಡೆ ಸೇರಿಸಿ. ಆಲೂಗೆಡ್ಡೆ ಕೆಂಬಣ್ಣಕ್ಕೆ ಬರುವವರೆಗೂ ಚೆನ್ನಾಗಿ ಫ್ರೈ ಮಾಡಿ. ನಂತರ ಇದಕ್ಕೆ ಉಪ್ಪು, ಕಾಳುಮೆಣಸಿನ ಪುಡಿ, ಅರಿಸಿನ ಪುಡಿ, ಖಾರದ ಪುಡಿ, ಜೀರಿಗೆ ಸೇರಿಸಿ, ಎಲ್ಲವನ್ನೂ ಮಿಶ್ರಣ ಮಾಡಿ. ಅದಕ್ಕೆ ಚೀಸ್ ತುರಿದು ಹಾಕಿ. ಇದ ಮೇಲೆ ಚಿಲ್ಲಿ ಫ್ಲೇಕ್ಸ್, ಒರೆಗಾನೊ ಉದುರಿಸಿ. ಕೊತ್ತಂಬರಿ ಸೊಪ್ಪನ್ನು ಚಿಕ್ಕದಾಗಿ ಹೆಚ್ಚಿ, ಇದರ ಮೇಲೆ ಉದುರಿಸಿ. ಬೇಕು ಎಂದರೆ ಹಸಿ ಈರುಳ್ಳಿ ಕೂಡ ಹೆಚ್ಚಿ ಹಾಕಬಹುದು. ಸಖತ್ ಟೇಸ್ಟಿ ಆಗಿರುವ ಈ ಸ್ನ್ಯಾಕ್ಸ್ ನಿಮ್ಮ ಮಗುವಿಗೆ ಇಷ್ಟವಾಗದೇ ಇರದು.
ಇದನ್ನೂ ಓದಿ
Snacks Recipe: ಇದು ಮಹಾರಾಷ್ಟ್ರದ ಫೇಮಸ್ ಸ್ನಾಕ್ಸ್; ಕೊತ್ತಂಬರಿ ಸೊಪ್ಪು, ಕಡ್ಲೆಹಿಟ್ಟು ಜೊತೆಗೆ ಕೆಲವೇ ಕೆಲವು ಸಾಮಗ್ರಿಗಳು ಸಾಕು
ಬಹುತೇಕ ಮಂದಿ ಒಂದೇ ರೀತಿಯ ಅಡುಗೆಗೆ ಸ್ಟಿಕ್ ಆನ್ ಆಗಿರುತ್ತಾರೆ. ಆದರೆ ನೀವು ಬೇರೆ ಬೇರೆ ರೆಸಿಪಿಗಳನ್ನು ಕಲಿತುಕೊಂಡರೆ ಆಯಾ ಪ್ರಾಂತ್ಯದ ಆಹಾರ ಪದ್ಧತಿಯನ್ನು ಪರಿಚಯ ಮಾಡಿಕೊಂಡಂತೆ ಆಗುತ್ತದೆ. ಹೊಸ ರುಚಿ ಟೇಸ್ಟ್ ಮಾಡಿದಂತೆ ಕೂಡಾ ಆಗುತ್ತದೆ.
ಕೊತಿಂಬಿರ್ ವಡಿ, ಇದು ಮಹಾರಾಷ್ಟ್ರದ ಸ್ನಾಕ್ಸ್ ರೆಸಿಪಿ. ಕೊತ್ತಂಬರಿ ಸೊಪ್ಪು ಇದಕ್ಕೆ ಬೇಕಾಗಿರುವ ಪ್ರಮುಖ ಇಂಗ್ರೀಡಿಯಂಟ್ಸ್. ಇದರ ಜೊತೆ ಕಡ್ಲೆಹಿಟ್ಟು ಹಾಗೂ ಇನ್ನಿತರ ಸಾಮಗ್ರಿಗಳನ್ನು ಸೇರಿಸಿ ಶ್ಯಾಲೋ ಫ್ರೈ ಮಾಡಿದರೆ ಮುಗಿಯಿತು. ಇದನ್ನು ನೀವು ಪುದೀನಾ ಚಟ್ನಿ ಅಥವಾ ಸಾಸ್‌ನೊಂದಿಗೆ ಸವಿಯಬಹುದು. ಕೊತಿಂಬಿರ್ ವಡಿ ತಯಾರಿಸಲು ಬೇಕಾಗುವ ಸಾಮಗ್ರಿಗಳು ಹಾಗೂ ತಯಾರಿಸುವ ವಿಧಾನ ಹೇಗೆ ನೋಡೋಣ ಬನ್ನಿ.