ಡಯೆಟ್ ಪ್ರಿಯರಿಗೆ ಗುಡ್ನ್ಯೂಸ್; ಒಂದು ಹನಿಯೂ ಎಣ್ಣೆ ಬಳಸದೆ ತಯಾರಿಸಬಹುದು ಗರಿಗರಿ ಪೂರಿ; ಇಲ್ಲಿದೆ ವಿಧಾನ
Feb 10, 2024 07:43 PM IST
ಡಯೆಟ್ ಪ್ರಿಯರಿಗೆ ಗುಡ್ನ್ಯೂಸ್; ಒಂದು ಹನಿಯೂ ಎಣ್ಣೆ ಬಳಸದೆ ತಯಾರಿಸಬಹುದು ಗರಿಗರಿ ಪೂರಿ; ಇಲ್ಲಿದೆ ವಿಧಾನ
- ಡಯಟ್ ಫಾಲೋ ಮಾಡೋರು ಹಲವು ತಿನಿಸುಗಳ ವಿಚಾರದಲ್ಲಿ ಬಾಯಿ ಕಟ್ಟುತ್ತಾರೆ. ನಾಲಿಗೆಗೆ ರುಚಿ ಎನ್ನಿಸಿದ್ರೂ, ಹೊಟ್ಟೆ ಬಯಸಿದ್ರೂ ತಿನ್ನೋದಕ್ಕೆ ಕಡಿವಾಣ ಹಾಕುತ್ತಾರೆ. ಇಂತಹ ತಿನಿಸುಗಳ ಪೈಕಿ ಪೂರಿ ಕೂಡ ಒಂದು. ಹಾಗಂತ ನೀವಿನ್ನು ಚಿಂತಿಸುವ ಅಗತ್ಯವಿಲ್ಲ. ತೂಕ ಏರಿಕೆಯಾಗದಂತೆ, ಎಣ್ಣೆ ಬಳಸದೇ ಪೂರಿಯನ್ನು ತಯಾರಿಸಬಹುದು. ಅದು ಹೇಗೆ ನೋಡಿ.
ಎಣ್ಣೆ ಅಂಶಯುಕ್ತ ಆಹಾರಗಳನ್ನು ಸೇವಿಸಿದ್ರೆ ತೂಕ ಏರಿಕೆಯಾಗುತ್ತೆ ಎನ್ನುವ ಕಾರಣಕ್ಕೆ ಅನೇಕರು ಇಷ್ಟವಿದ್ದರೂ ಸಹ ಪೂರಿ ಬಾಜಿ ತಿನ್ನಲು ಹೋಗುವುದಿಲ್ಲ. ಆದರೆ ಪೂರಿಯನ್ನು ಸವಿಯಬೇಕು ಎಂಬ ಆಸೆ ಅವರ ಮನಸ್ಸಿನಲ್ಲಿ ಹಾಗೆಯೇ ಉಳಿದುಕೊಂಡು ಬಿಡುತ್ತದೆ. ಹೀಗಾಗಿ ನಿಮ್ಮ ತೂಕವನ್ನು ಒಂದಿಂಚೂ ಹೆಚ್ಚಿಸದೇ ಪೂರಿಯನ್ನು ತಯಾರಿಸುವ ವಿಧಾನವನ್ನು ನಿಮಗೆ ನಾವು ಕಲಿಸಿಕೊಡುತ್ತೇವೆ. ಅಂದಹಾಗೆ ಈ ಪೂರಿಯನ್ನು ತಯಾರಿಸಲು ನೀವು ಒಂದೇ ಒಂದು ಹನಿ ಎಣ್ಣೆ ಬಳಸುವ ಅವಶ್ಯಕತೆ ಇಲ್ಲವೇ ಇಲ್ಲ. ಹಾಗಾದರೆ ಈ ಡಯಟ್ ಸ್ನೇಹಿ ಪೂರಿಯನ್ನು ತಯಾರಿಸುವುದು ಹೇಗೆ..? ಎಣ್ಣೆಯ ಬದಲಾಗಿ ಇಲ್ಲಿ ಏನನ್ನು ಬಳಕೆ ಮಾಡಬೇಕು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ
ಬೇಕಾಗುವ ಸಾಮಗ್ರಿಗಳು: ಗೋಧಿಹಿಟ್ಟು - 1 ಕಪ್, ಜೀರಿಗೆ - 1 ಟೀ ಚಮಚ, ನೀರು 3 ಲೋಟ, ಉಪ್ಪು ರುಚಿಗೆ ತಕ್ಕಷ್ಟು
ಮಾಡುವ ವಿಧಾನ: ಗೋಧಿಹಿಟ್ಟನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಗಾಳಿಸಿಕೊಳ್ಳಿ. ಗಾಳಿಸಿಕೊಂಡ ಗೋಧಿಹಿಟ್ಟನ್ನು ಒಂದು ಪಾತ್ರೆಗೆ ಹಾಕಿ ಇದಕ್ಕೆ ಜೀರಿಗೆ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿಕೊಳ್ಳಿ. ಈಗ ಈ ಮಿಶ್ರಣವು ಪೂರಿ ಹಿಟ್ಟಿನ ಹದಕ್ಕೆ ಬರಲು ಬೇಕಾಗುವಷ್ಟು ನೀರು ಸೇರಿಸಿ ಚೆನ್ನಾಗಿ ಕಲೆಸಿ. ನೆನಪಿರಲಿ ಪೂರಿ ಹಿಟ್ಟು ಮೆದುವಾಗಿರುವಂತೆ ನೋಡಿಕೊಳ್ಳಬೇಕು. ಹಿಟ್ಟು ಕೈಗೆ ಅಂಟುವಂತೆ ಇದ್ದರೆ ಇದಕ್ಕೆ ಸರಿಯಾದ ಪ್ರಮಾಣದಲ್ಲಿ ನೀರು ಹಾಗೂ ಹಿಟ್ಟನ್ನು ಸೇರಿಸಿಕೊಂಡು ಸರಿಯಾದ ಹದಕ್ಕೆ ನಾದಿಕೊಳ್ಳಬೇಕು.
ಸರಿಯಾದ ಹದದಲ್ಲಿ ಪೂರಿಹಿಟ್ಟು ತಯಾರಾದ ಬಳಿಕ ಪಾತ್ರೆಗೆ ಒದ್ದೆ ಬಟ್ಟೆಯನ್ನು ಸುತ್ತಿ ಸುಮಾರು 15 ರಿಂದ 20 ನಿಮಿಷಗಳ ಕಾಲ ಹಿಟ್ಟನ್ನು ಹಾಗೆಯೇ ಬಿಡಬೇಕು. ಈಗ ಹಿಟ್ಟನ್ನು ತೆಗೆದುಕೊಂಡು ಇದರಲ್ಲಿ ನಿಂಬೆಹಣ್ಣಿನ ಗಾತ್ರೆದ ಉಂಡೆಗಳನ್ನು ತಯಾರಿಸಿಕೊಳ್ಳಿ. ಈ ವೇಳೆಗೆ ಸರಿಯಾಗಿ ನೀವು ಏರ್ಫ್ರೈಯರ್ನ್ನು 180 ಡಿಗ್ರಿಯಲ್ಲಿ ಪ್ರಿಹೀಟ್ ಮಾಡಿಕೊಳ್ಳಬೇಕು. ಇದಾದ ಬಳಿಕ ಲಟ್ಟಣಿಗೆಯನ್ನು ತೆಗೆದುಕೊಂಡು ಒಂದೊಂದೆ ಉಂಡೆಯನ್ನು ಪೂರಿ ಆಕೃತಿಯಲ್ಲಿ ಲಟ್ಟಿಸಿಕೊಳ್ಳಿ .
ಈಗ ನೀವು ಒಂದು ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಕಾಯಲು ಬಿಡಬೇಕು. ನೀರು ಕೊತ ಕೊತ ಕುದಿಯಲು ಆರಂಭಿಸುತ್ತಿದ್ದಂತೆಯೇ ಹೇಗೆ ನೀವು ಎಣ್ಣೆಯಲ್ಲಿ ಪುರಿಯನ್ನು ಕರಿಯಲು ಬಿಡುತ್ತಿದ್ದರೋ ಅದೇ ರೀತಿ ನೀರಿನಲ್ಲಿ ಪುರಿಯನ್ನು ಕರಿಯಲು ಬಿಡಬೇಕು. ಡಯಟ್ ಸ್ನೇಹಿ ಪೂರಿಯನ್ನು ತಯಾರಿಸಲು ನಾವು ಎಣ್ಣೆಯ ಜಾಗದಲ್ಲಿ ನೀರನ್ನು ಬಳಸಿಕೊಳ್ಳಬೇಕು.
ಈಗ ನೀರಿನಿಂದ ಪೂರಿಯನ್ನು ಹೊರತೆಗೆದು ಹೆಚ್ಚುವರಿ ನೀರನ್ನು ಪೂರಿಯಿಂದ ತೆಗಿಯಿರಿ. ಬಳಿಕ ಪೂರಿಗಳನ್ನು ಏರ್ಫ್ರೈಯರ್ನಲ್ಲಿಟ್ಟು 10 ರಿಂದ 15 ನಿಮಿಷಗಳ ಕಾಲ ಬೇಯಿಸಬೇಕು. ಈಗ ನಿಮ್ಮ ಡಯಟ್ ಸ್ನೇಹಿ ಪೂರಿ ಸವಿಯಲು ಸಿದ್ಧ. ಇದನ್ನು ನೀವು ನಿಮ್ಮಿಷ್ಟದ ಯಾವುದೇ ಸಾಂಬಾರಿನೊಂದಿಗೆ ಸವಿಯಬಹುದಾಗಿದೆ. ಈ ರೀತಿ ತಯಾರಿಸಿದ ಪೂರಿಯು ಥೇಟ್ ಎಣ್ಣೆಯಲ್ಲಿ ಕರಿದ ಪೂರಿಯ ರುಚಿಯನ್ನೇ ನೀಡುತ್ತದೆ. ನಿಮ್ಮ ಮನೆಯಲ್ಲಿ ಏರ್ ಫ್ರೈಯರ್ ಇದ್ರೆ, ನೀವು ಈ ರೀತಿ ರುಚಿಯಾದ ಪೂರಿಯನ್ನು ಸವಿಯಬಹುದು. ಇದರಿಂದ ತೂಕ ಕೂಡ ಹೆಚ್ಚುತ್ತೆ ಅನ್ನೋ ಭಯಬೇಡ.
ಇದನ್ನೂ ಓದಿ
Ragi Poori: ಮಧುಮೇಹ ನಿಯಂತ್ರಣಕ್ಕೆ ಬೆಸ್ಟ್ ರಾಗಿ ಪೂರಿ; ಈ ಹೆಲ್ತಿ, ಟೇಸ್ಟಿ ರೆಸಿಪಿಯನ್ನು ನೀವೂ ಮನೆಯಲ್ಲಿ ಟ್ರೈ ಮಾಡಿ
ಮಧುಮೇಹಿಗಳಿಗೆ ಪೂರಿ ತಿನ್ನೋದು ಇಷ್ಟ ಅಂದ್ರು ತಿನ್ನೂ ಹಾಗಿಲ್ಲ. ಕಾರಣ ಅದಕ್ಕೆ ಬಳಸುವ ಮೈದಾಹಿಟ್ಟು. ಮಧುಮೇಹಿಗಳಾಗಿ ಇಲ್ಲಿದೆ ಒಂದು ಸ್ಪೆಷಲ್ ರೆಸಿಪಿ. ಇದು ರಾಗಿ ಪೂರಿ. ಇದು ಕೊಲೆಸ್ಟ್ರಾಲ್ ನಿಯಂತ್ರಣಕ್ಕೂ ಉತ್ತಮ. ಸಖತ್ ಟೇಸ್ಟಿ, ಹೆಲ್ತಿ ಆಗಿರೋ ರಾಗಿಪೂರಿಯನ್ನು ನೀವೂ ಟ್ರೈ ಮಾಡಿ.