logo
ಕನ್ನಡ ಸುದ್ದಿ  /  ಜೀವನಶೈಲಿ  /  ಅನ್ನ, ಚಪಾತಿಗೆ ಸೂಪರ್‌ ಕಾಂಬಿನೇಷನ್‌ ರಾಯಲಸೀಮೆ ಶೈಲಿಯ ಬದನೆಕಾಯಿ ಕರಿ; ಈ ರೀತಿ ಮಾಡಿದ್ರೆ ಬದನೆಕಾಯಿ ಇಷ್ಟ ಇಲ್ಲ ಅನ್ನೋರು ತಿಂತಾರೆ

ಅನ್ನ, ಚಪಾತಿಗೆ ಸೂಪರ್‌ ಕಾಂಬಿನೇಷನ್‌ ರಾಯಲಸೀಮೆ ಶೈಲಿಯ ಬದನೆಕಾಯಿ ಕರಿ; ಈ ರೀತಿ ಮಾಡಿದ್ರೆ ಬದನೆಕಾಯಿ ಇಷ್ಟ ಇಲ್ಲ ಅನ್ನೋರು ತಿಂತಾರೆ

Reshma HT Kannada

Nov 29, 2024 08:33 AM IST

google News

ರಾಯಲಸೀಮೆ ಶೈಲಿಯ ಬದನೆಕಾಯಿ ಕರಿ

    • ರಾಯಲಸೀಮೆಯ ಖಾದ್ಯಗಳಿಗೆ ತನ್ನದೇ ಆದ ಪ್ರಾಮುಖ್ಯವಿದೆ. ಇಲ್ಲಿದೆ ಆಹಾರಗಳು ಭಾರತೀಯರಿಗೆ ಹೆಚ್ಚು ಇಷ್ಟವಾಗುತ್ತದೆ. ಖಾರ ಕೊಂಚ ಜಾಸ್ತಿ ಅನ್ನೋದು ಬಿಟ್ರೆ ರುಚಿಯಲ್ಲಿ ಎರಡು ಮಾತಿಲ್ಲ. ರಾಯಲಸೀಮೆಯ ಫೇಮಸ್ಸ್‌ ಖಾದ್ಯಗಳಲ್ಲಿ ಬದನೆಕಾಯಿ ಕರಿ ಕೂಡ ಒಂದು. ಇದರ ರೆಸಿಪಿ ಇಲ್ಲಿದೆ, ನೀವೂ ಒಮ್ಮೆ ಮನೆಯಲ್ಲಿ ಮಾಡಿ ತಿನ್ನಿ. ಬದನೆಕಾಯಿ ಇಷ್ಟವಿಲ್ಲ ಅನ್ನೋರು ಇದನ್ನ ತಿಂತಾರೆ. 
ರಾಯಲಸೀಮೆ ಶೈಲಿಯ ಬದನೆಕಾಯಿ ಕರಿ
ರಾಯಲಸೀಮೆ ಶೈಲಿಯ ಬದನೆಕಾಯಿ ಕರಿ

ಬದನೆಕಾಯಿ ಹಲವರಿಗೆ ಇಷ್ಟವಾಗದ ತರಕಾರಿ ಎನ್ನುವುದು ಸುಳ್ಳಲ್ಲ. ಇದರಲ್ಲಿ ನಂಜಿನಾಂಶ ಹೆಚ್ಚಿರುವ ಕಾರಣ ಇದನ್ನು ತಿನ್ನಲು ಹಿಂದೇಟು ಹಾಕುವವರೇ ಹೆಚ್ಚು. ಆದರೆ ಬದನೆಕಾಯಿಯಿಂದಲೂ ವಿವಿಧ ಬಗೆಯ ಸಖತ್ ಟೇಸ್ಟಿ ಖಾದ್ಯಗಳನ್ನು ಮಾಡಿ ಸವಿಯಬಹುದು. ಅಂತಹ ಅಪರೂಪದ ಖಾದ್ಯಗಳಲ್ಲಿ ರಾಯಲಸೀಮೆ ಶೈಲಿಯ ಬದನೆಕಾಯಿ ಕರಿ ಕೂಡ ಒಂದು.

ರಾಯಲಸೀಮೆ ಶೈಲಿಯ ಬದನೆಕಾಯಿ ಕರಿ ಸಖತ್ ಟೇಸ್ಟಿ ಆಗಿರುತ್ತೆ. ಇದು ಪರಿಮಳವೂ ಅದ್ಭುತ. ಇದನ್ನು ರಾಯಲಸೀಮೆ ಶೈಲಿಯ ಬದನೆಕಾಯಿ ಎಣ್‌ಗಾಯಿ ಅಂತಲೂ ಕರೆಯಬಹುದು. ಸಾಮಾನ್ಯವಾಗಿ ಬಿಳಿಬದನೆ ಅಥವಾ ನೇರಳೆ ಬದನೆಯೊಂದಿಗೆ ಇದನ್ನು ಮಾಡಲಾಗುತ್ತದೆ. ಈ ರೀತಿ ಬದನೆಕಾಯಿ ಕರಿ ಮಾಡಿದ್ರೆ ಬದನೆಕಾಯಿ ಇಷ್ಟ ಇಲ್ಲ ಅನ್ನೋದು ಖುಷಿಯಿಂದ ತಿಂತಾರೆ. ಇದರ ರೆಸಿಪಿ ಇಲ್ಲಿದೆ ನೋಡಿ.

ಬದನೆಕಾಯಿ ಕರಿ ರೆಸಿಪಿ

ಬೇಕಾಗುವ ಸಾಮಗ್ರಿಗಳು: ಬದನೆಕಾಯಿ – ಅರ್ಧ ಕೆಜಿ, ಕೊತ್ತಂಬರಿ ಪುಡಿ – 2 ಚಮಚ, ಖಾರದಪುಡಿ – 2 ಚಮಚ, ಕಾಳುಮೆಣಸು – ಅರ್ಧ ಚಮಚ, ಬೆಳ್ಳುಳ್ಳಿ – 4 ಎಸಳು, ಕರಿಬೇವಿನ ಎಲೆ – ಒಂದು ಮುಷ್ಟಿ, ಜೀರಿಗೆ – 1 ಚಮಚ, ಸಾಸಿವೆ – 1 ಚಮಚ, ಎಣ್ಣೆ – ಅಗತ್ಯ ಇರುವಷ್ಟು, ಕೊತ್ತಂಬರಿ ಸೊಪ್ಪು – ಅರ್ಧ ಕಪ್‌, ಉಪ್ಪು – ರುಚಿಗೆ, ಹುಣಸೆಹಣ್ಣು – ನಿಂಬೆ ಗಾತ್ರದ್ದು, ಈರುಳ್ಳಿ – 2, ಕಡಲೆಬೇಳೆ – 1 ಚಮಚ, ಟೊಮೆಟೊ – 2, ತೆಂಗಿನತುರಿ – ಅರ್ಧ ಕಪ್‌, ಅರಿಸಿನ – ಅರ್ಧ ಚಮಚ, ನೀರು – ಅಗತ್ಯ ಇರುವಷ್ಟು

ಬದನೆಕಾಯಿ ಕರಿ ತಯಾರಿಸುವ ವಿಧಾನ

ಒಲೆಯ ಮೇಲೆ ಪ್ಯಾನ್ ಇಟ್ಟು ಒಂದು ಚಮಚ ಎಣ್ಣೆ ಸೇರಿಸಿ. ಇದಕ್ಕೆ ಸಣ್ಣದಾಗಿ ಹೆಚ್ಚಿದ ಈರುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಿ. ನಂತರ ಜೀರಿಗೆ, ಕಡಲೆಬೇಳೆ, ಹಸಿಮೆಣಸು ಸೇರಿಸಿ ಹುರಿಯಿರಿ. ಇದಕ್ಕೆ ಟೊಮೆಟೊ ಸೇರಿಸಿ ಮೃದುವಾಗುವವರೆಗೂ ಬೇಯಿಸಿ. ಇದಕ್ಕೆ ಅರಿಸಿನ, ಉಪ್ಪು, ಕೊಬ್ಬರಿ ತುರಿ ಸೇರಿಸಿ ಹುರಿದುಕೊಳ್ಳಿ. ಈ ಮಿಶ್ರಣವನ್ನು ಸಂಪೂರ್ಣ ತಣ್ಣಗಾಗಲು ಬಿಡಿ. ನಂತರ ಮಿಕ್ಸಿಗೆ ಹಾಕಿ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಈಗ ಇನ್ನೊಂದು ಪಾತ್ರೆಯನ್ನು ಒಲೆಯ ಮೇಲೆ ಇರಿಸಿ ಎಣ್ಣೆ ಹಾಕಿ. ಬಿಸಿಯಾದ ಮೇಲೆ ಜೀರಿಗೆ, ಸಾಸಿವೆ, ಕಾಳುಮೆಣಸು, ಕರಿಬೇವು ಹಾಗೂ ಬೆಳ್ಳುಳ್ಳಿ ಹಾಕಿ. ಈಗ ಸ್ವಲ್ಪ ಈರುಳ್ಳಿ ಕೂಡ ಸೇರಿಸಿ. ಈಗ ಬದನೆಕಾಯಿಯನ್ನು 4 ಭಾಗವಾಗಿ ಕತ್ತರಿಸಿ ಎಣ್ಣೆಯಲ್ಲಿ ಹುರಿಯಿರಿ. ಬದನೆಕಾಯಿ ಸ್ವಲ್ಪ ಮೃದುವಾಗಿದೆ ಎನ್ನಿಸಿದಾಗ ಖಾರದಪುಡಿ ಹಾಗೂ ಕೊತ್ತಂಬರಿ ಪುಡಿ ಸೇರಿಸಿ. ನಂತರ ಹುಣಸೆ ರಸ ಸೇರಿಸಿ. ನಂತರ ರುಬ್ಬಿಕೊಂಡ ಮಸಾಲೆ ಸೇರಿಸಿ. ಇದನ್ನು ಕಡಿಮೆ ಉರಿಯಲ್ಲಿ ಅರ್ಧ ಗಂಟೆವರೆಗೂ ಬೇಯಿಸಿ. ಈಗ ಎಣ್ಣೆ ಮೇಲ್ಭಾಗದಲ್ಲಿ ತೇಲಲು ಆರಂಭವಾಗುತ್ತದೆ. ನಂತರ ಮೇಲಿಂದ ಕೊತ್ತಂಬರಿ ಸೊಪ್ಪು ಉದುರಿಸಿ. ಈಗ ನಿಮ್ಮ ಮುಂದೆ ಬದನೆಕಾಯಿ ಕರಿ ತಿನ್ನಲು ಸಿದ್ಧ.

ಈ ಕರಿ ರಾಯಲಸೀಮೆ ಕಡೆಯಲ್ಲಿ ತುಂಬಾನೇ ಫೇಮ‌ಸ್‌. ತಮಿಳುನಾಡಿನಲ್ಲೂ ಇದನ್ನು ಮಾಡುತ್ತಾರೆ. ಇದನ್ನು ಒಮ್ಮೆ ತಿಂದ್ರೆ ನೀವು ಖಂಡಿತ ಮತ್ತೆ ಮತ್ತೆ ಮಾಡ್ತೀರಾ. ಇದು ಕಡಿಮೆ ಸಾಮಗ್ರಿ ಬಳಸಿ ಮಾಡುವ ರೆಸಿಪಿಯಾಗಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ