Friday Motivation: ಬಡವರಾಗಲಿ, ಶ್ರೀಮಂತರಾಗಲಿ ಎಲ್ಲರನ್ನೂ ಸಮಾನವಾಗಿ ಗೌರವಿಸುವುದನ್ನ ಕಲಿಯಿರಿ
Feb 23, 2024 08:14 AM IST
ಎಲ್ಲರನ್ನು ಸಮಾನವಾಗಿ ನೋಡಿದಾಗ ನಿಮ್ಮ ಗೌರವ ಹೆಚ್ಚಾಗುತ್ತದೆ. ಶುಕ್ರವಾರದ ಸ್ಫೂರ್ತಿದಾಯ ಸ್ಟೋರಿಯನ್ನು ಓದಿ.
- Friday Motivation: ಪ್ರತಿಯೊಬ್ಬರನ್ನು ಗೌರವಿಸಬೇಕು. ವಾಸ್ತವವಾಗಿ ಬಡವರು, ಶ್ರೀಮಂತರು, ಕಿರಿಯರು, ಹಿರಿಯನರು ಎಂಬ ಭೇದವಿಲ್ಲದೆ ಪ್ರತಿಯೊಬ್ಬರನ್ನುಗೌರವಿಸಿದಾಗ ನಿಮ್ಮ ಗೌರವ ಹೆಚ್ಚಾಗುತ್ತದೆ.
Friday Motivation in Kannada: ದಟ್ಟವಾದ ಕಾಡು. ದೊಡ್ಡ ಆನೆಯೊಂದು ಆ ಕಾಡಿನಲ್ಲಿ ವಾಸವಾಗಿತ್ತು. ಹಾಗೆ ಕಾಡಿನ ರಸ್ತೆಯ ಎಲ್ಲೋ ಒಂದು ಕಡೆ ಇರುವೆಗಳು ಕೂಡ ಇರುತ್ತವೆ. ಎಲ್ಲಾ ಇರುವೆಗಳು ಒಟ್ಟಾಗಿ ಸೇರೆ ಗೂಡು ಕಟ್ಟಿಕೊಂಡು ವಾಸವಾಗಿರುತ್ತವೆ. ಅಲ್ಲದೆ, ಆಹಾರಕ್ಕಾಗಿ ತುಂಬಾ ಕಷ್ಟಪಡುತ್ತಿರುತ್ತವೆ. ಆದರೆ ಪುಟ್ಟ ಇರುವೆಗಳನ್ನ ನೋಡಿ ಆನೆ ತುಂಬಾ ನಗುತ್ತದೆ. ಕೀಳಾಗಿ ನೋಡುತ್ತದೆ. ತನ್ನ ಗಾತ್ರದ ಬಗ್ಗೆ ಇರುವೆಗಳ ಮುಂದೆ ಹೆಮ್ಮೆಯಿಂದ ಮಾತನಾಡುತ್ತದೆ. ಆದರೆ ಇದ್ಯಾವುದಕ್ಕೂ ಗಮನ ಕೊಡದೆ, ಗಂಭೀರವಾಗಿ ಪರಿಗಣಿಸದ ಇರುವೆಗಳು ತಾವಾಯ್ತು ತಮ್ಮ ಕೆಲಸವಾಯ್ತು ಅಂತ ಇರುತ್ತವೆ.
ಪ್ರತಿ ದಿನ ಇರುವೆಗಳ ಗೂಡಿನ ಬಳಿಯಲ್ಲೇ ಸಾಗುವ ಮೂಲಕ ತೊಂದರೆ ಕೊಡುತ್ತದೆ. ಕೆಲವೊಮ್ಮೆ ತನ್ನ ಕಾಲಿನಿಂದ ಗೂಡನ್ನು ತುಳಿಯುತ್ತಗೆ. ಅಷ್ಟು ಸಾಲದು ಎಂಬಂತೆ ಸೊಂಡಿಲಿನಿಂದ ಇರುವೆಗಳನ್ನು ಹೊಡೆಯುತ್ತಿತ್ತು. ಒಮ್ಮೆ ಸೊಂಡಲಿನಲ್ಲಿ ನೀರು ತುಂಬಿಸಿಕೊಂಡು ಬಂದು ಇರುವೆಗಳ ಮೇಲೆ ಎರಚಿ ತೊಂದರೆ ಕೊಡಲು ಆರಂಭಿಸಿತು. ಆನೆಯ ಈ ಅಟ್ಟಹಾಸದಿಂದ ಇರುವೆಗಳು ತುಂಬಾ ಬೇಸತ್ತಿದ್ದವು. ತಮ್ಮ ನೋವನ್ನು ವ್ಯಕ್ತಪಡಿಸುತ್ತಿದ್ದರೆ ಆನೆ ನಗುತ್ತಿತ್ತು.
ಇರುವೆಗಳು ನೋವಿನಿಂದ ಕಿರುಚಿದರೆ, ಆನೆ ಸಂತೋಷದಿಂದ ನಗುತ್ತದೆ. ನಿಮ್ಮನ್ನೆಲ್ಲ ನನ್ನ ಕಾಲಡಿಯಲ್ಲಿ ತುಳಿದು ಹಾಕುತ್ತೇನೆ ಎಂದು ಹೇಳುತ್ತದೆ. ಆದರೆ ಇರುವೆಗಳು ತಾಳ್ಮೆಯಿಂದಿದ್ದವು. ಆನೆಗೆ ಸೆಡ್ಡು ಹೊಡೆದು ಮತ್ತೆ ಇನ್ನೊಂದು ಗೂಡವನ್ನು ಕಟ್ಟಿಕೊಳ್ಳಲು ಕೆಲಸ ಆರಂಭಿಸುತ್ತವೆ. ಹೊಸದಾಗಿ ಕಟ್ಟುತ್ತಿದ್ದ ಗೂಡನ್ನ ನೋಡಿದ ಆನೆಗೆ ಸಿಟ್ಟು ಬರುತ್ತದೆ. ಕೆರೆಗೆ ಹೋಗಿ ಸೊಂಡಿಲಿನಿಂದ ನೀರು ತಂದು ಮತ್ತೆ ಇರುವೆಗಳ ಮೇಲೆ ಎರಚುತ್ತದೆ. ಇದರೊಂದಿಗೆ ಇರುವೆಗಳು ಮತ್ತೆ ನಿರಾಶ್ರಿತವಾದವು.
ಹೀಗೆ ಸುಮ್ಮನಿದ್ದರೆ ಆನೆ ನಮ್ಮ ಪ್ರಾಣವನ್ನೇ ತೆಗೆಯುವ ಸಾಧ್ಯತೆ ಇದೆ. ಹೀಗಾಗಿ ಇದಕ್ಕೆ ಚೆನ್ನಾಗಿ ಬುದ್ಧಿಕಲಿಸಬೇಕೆಂದು ನಿರ್ಧರಿಸುತ್ತವೆ. ಮರುದಿನ ಆನೆ ಬಂದಾಗ ಆನೆಯ ಸೊಂಡಿಲಿನೊಳಗೆ ಹೋಗಿ ಕುಳಿತುಕೊಳ್ಳುತ್ತವೆ. ಚನ್ನಾಗಿ ಕಚ್ಚುತ್ತವೆ. ಆನೆ ಎಷ್ಟೇ ಸರ್ಕಸ್ ಮಾಡಿದ್ರೂ ಇರುವೆಗಳನ್ನು ಸೊಂಡಿಲಿನಿಂದ ಹೊರಗಡೆ ಹಾಕೋಕೆ ಸಾಧ್ಯವಾಗುವುದಿಲ್ಲ. ಗೂಡಿಗೆ ಹಾನಿ ಮಾಡಿ ನಮ್ಮನ್ನು ನಿರಾಶ್ರಿತರನ್ನಾಗಿ ಮಾಡಿದ್ದೀಯಾ, ನಿನ್ನ ಸೊಂಡಿಲಿನಲ್ಲೇ ಗೂಡನ್ನು ಕಟ್ಟಿಕೊಳ್ಳುತ್ತೇವೆ ಎಂದು ಇರುವೆಗಳು ಹೇಳುತ್ತವೆ. ಆಗ ಆನೆಗೆ ತನ್ನ ತಪ್ಪಿನ ಅರಿವಾಗುತ್ತದೆ. ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳುತ್ತದೆ. ಇನ್ನೊಮ್ಮೆ ಹೀಗೆ ಮಾಡುವುದಿಲ್ಲ ಎಂದು ಹೇಳಿದ ಬಳಿಕ ತನ್ನ ತಪ್ಪನ್ನು ಅರ್ಥ ಮಾಡಿಸಿ ಇರುವೆಗಳು ಸೊಂಡಿಲಿನಿಂದ ಹೊರ ಬರುತ್ತವೆ.
ಇರುವೆಗಳ ನಾಯಕ ಎನಿಸಿಕೊಂಡವನು ಆನೆಗೆ ಹೀಗೆ ಹೇಳುತ್ತಾನೆ. ನಾವು ನಿನ್ನ ಕಣ್ಣಿಗೆ ಸಣ್ಣದಾಗಿ ಕಾಣಬಹುದು. ನಿಮ್ಮ ಕಾಣ್ಣಿಗೆ ಕಾಣಿಸದೆ ನಿನ್ನ ದೇಹವನ್ನು ಪ್ರವೇಶಿಸಬಹುದು. ಆದರೂ ನಾವು ನಿನ್ನನ್ನ ಸಹ ಜೀವಿ ಎಂದು ಗೌರವಿಸುತ್ತೇವೆ. ಆದರೆ ನೀನು ನಿನ್ನ ಗಾತ್ರದ ಬಗ್ಗೆ ಹೆಮ್ಮೆಪಡುತ್ತಿರುವೆ. ಬಡವರಾಗಲಿ, ಶ್ರೀಮಂತರಾಗಲಿ, ಹಿರಿಯರಾಗಲಿ, ಕಿರಿಯರಾಗಲಿ ಎಲ್ಲವರನ್ನೂ ಸಮಾನವಾಗಿ, ಗೌರವದಿಂದ ಕಾಣಬೇಕು. ಇಲ್ಲದಿದ್ದರೆ ಮುಂದೆ ಇಂಥ ಪಾಠಗಳನ್ನು ಮತ್ತಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸುತ್ತದೆ.
ಅಂತಿಮವಾಗಿ ಆನೆ ಎಲ್ಲಾ ಇರುವಗಳ ಕ್ಷಮೆಯಾಚಿಸಿ ತನ್ನ ದಾರಿಯಲ್ಲಿ ಸಾಗುತ್ತದೆ. ಆ ನಂತರ ಇರುವೆಗಳು ಬಳಿಗೆ ಸುಳಿಯಲೇ ಇಲ್ಲ. ಒಟ್ಟಾರೆ ಸಾರಾಂಶದ ಅರ್ಥವೆಂದನೆರೆ ಯಾರನ್ನ ಯಾರೂ ಕೂಡ ಕೀಳಾಗಿ ಕಾಣಬಾರದು. ದಯೆಯಿಂದ ನೋಡಬೇಕು. ಸಾಧ್ಯವಾದರೆ ಸಹಾಯ ಮಾಡಬೇಕು, ಇಲ್ಲದಿದ್ದರೆ ಸುಮ್ಮನೆ ಇರಬೇಕು. ಇತರರನ್ನ ನೋಯಿಸುವಂತೆ ಮಾತನಾಡಬಾರದು.
(This copy first appeared in Hindustan Times Kannada website. To read more like this please logon to kannada.hindustantimes.com )
ವಿಭಾಗ