ಓಟ್‌ಮೀಲ್‌ನಿಂದ ಸ್ಮೂಥಿವರೆಗೆ; ವರ್ಕೌಟ್‌ಗೂ ಮೊದಲು ಸೇವಿಸಬಹುದಾದ ಆರೋಗ್ಯಕರ ತಿನಿಸುಗಳು
Mar 10, 2023 06:24 PM IST
ವರ್ಕೌಟ್‌ಗೂ ಮೊದಲು ಸೇವಿಸಬಹುದಾದ ಉಪಾಹಾರಗಳು
- ವರ್ಕೌಟ್‌ಗೂ ಮೊದಲು ಸರಿಯಾದ ಕ್ರಮದಲ್ಲಿ ಆಹಾರ ಸೇವನೆ ಮಾಡಬಹುದು. ವರ್ಕೌಟ್‌ಗೆ ಪೂರಕವಾದ ಅಗತ್ಯ ಪೋಷಕಾಂಶಗಳು ಮತ್ತು ಶಕ್ತಿಯನ್ನು ಒದಗಿಸುವ ಸಾಕಷ್ಟು ಆರೋಗ್ಯಕರ ಉಪಾಹಾರ ಆಯ್ಕೆಗಳಿವೆ.
ಆರೋಗ್ಯಕರ ಉಪಾಹಾರ ಸೇವನೆಯಿಂದ ನಮ್ಮ ಬೆಳಗನ್ನು ಆರಂಭಿಸುವುದರಿಂದ ಇಡಿ ದಿನವನ್ನು ಉತ್ಸಾಹದಿಂದ ಕಳೆಯಬಹುದು, ಅದರಲ್ಲೂ ವರ್ಕೌಟ್ ಮಾಡುವವರಿಗೆ ಇದು ಬಹಳ ಅವಶ್ಯ. ವರ್ಕೌಟ್‌ಗೂ ಮೊದಲು ಸರಿಯಾದ ಕ್ರಮದಲ್ಲಿ ಆಹಾರ ಸೇವನೆ ಮಾಡಬಹುದು. ಇದರಿಂದ ನೀವು ಚೆನ್ನಾಗಿ ದೇಹದಂಡಿಸಬಹುದು. ಇದು ನಿಮ್ಮ ಸಹಿಷ್ಣುತೆಯನ್ನು ಹೆಚ್ಚಿಸುವ, ಜೊತೆಗೆ ಆಯಾಸವನ್ನು ನಿವಾರಿಸುತ್ತದೆ. ಆದರೆ ಆರೋಗ್ಯಕರ ಹಾಗೂ ಬಾಯಿಗೂ ರುಚಿ ಎನ್ನಿಸುವ ಉಪಾಹಾರ ಸೇವಿಸುವುದು ನಿಜಕ್ಕೂ ಸವಾಲು. ಅದರಲ್ಲೂ ಈಗಿನ ಸಮಯದ ಕೊರತೆಯಲ್ಲಿ ಇದು ನಿಜಕ್ಕೂ ಕಷ್ಟ. ನೀವು ತ್ವರಿತ ಹಾಗೂ ಸುಲಭದ ಆಹಾರವನ್ನು ಸೇವಿಸಲು ಬಯಸುತ್ತೀರಾ? ನಿಮ್ಮ ವರ್ಕೌಟ್‌ಗೆ ಪೂರಕವಾದ ಅಗತ್ಯ ಪೋಷಕಾಂಶಗಳು ಮತ್ತು ಶಕ್ತಿಯನ್ನು ಒದಗಿಸುವ ಸಾಕಷ್ಟು ಆರೋಗ್ಯಕರ ಉಪಾಹಾರ ಆಯ್ಕೆಗಳಿವೆ.
ಪೌಷ್ಟಿಕ ತಜ್ಞೆ ಸಲೋನಿ ಝವೇರಿ ವರ್ಕೌಟ್ ಮೊದಲು ಸೇವಿಸಬಹುದಾದ ಕೆಲವು ಆಹಾರ ಪದಾರ್ಥಗಳ ಬಗ್ಗೆ ಇಲ್ಲಿ ತಿಳಿಸಿದ್ದಾರೆ.
ಯೋಗರ್ಟ್ ಹಣ್ಣಗಳು ಹಾಗೂ ಗ್ರಾನೊಲಾ
ಯೋಗರ್ಟ್‌ನಲ್ಲಿ ಸಾಕಷ್ಟು ಪೋಷಕಾಂಶಗಳಿವೆ. ಇದು ಸ್ನಾಯಗಳ ಅಂಗಾಂಶವನ್ನು ಸರಿಪಡಿಸಲು, ಸೃದಢಗೊಳಿಸಲು ಸಹಾಯ ಮಾಡುತ್ತವೆ. ಇದರೊಂದಿಗೆ ಕಾರ್ಬೋಹೈಡ್ರೇಟ್ ಹಾಗೂ ನಾರಿನಂಶ ಅಧಿಕವಾಗಿರುವ ಹಣ್ಣುಗಳನ್ನು ಸೇರಿಸಿ, ಇದರ ಮೇಲೆ ಗ್ರಾನೋಲಾ ಸೇರಿಸಿ ಸೇವಿಸಬಹುದು. ಇದು ಸೇವನೆಗೆ ಕ್ರಂಚಿಯಾಗಿರುವುದು ಮಾತ್ರವಲ್ಲ, ಚೈತ್ಯನವೂ ಹೆಚ್ಚುತ್ತದೆ.
ಓಟ್‌ಮೀಲ್ ಬಾದಾಮಿ ಹಾಗೂ ಬೆರ್ರಿ
ಓಟ್‌ಮೀಲ್ಸ್‌ನಲ್ಲಿ ಕಾರ್ಬೊಹೈಡ್ರೇಟ್ ಅಂಶ ಅಧಿಕವಾಗಿದೆ. ಇದು ವ್ಯಾಯಾಮದ ಸಮಯದಲ್ಲಿ ಶಕ್ತಿಯ ಸ್ಥಿರ ಮೂಲವನ್ನು ಒದಗಿಸುತ್ತದೆ. ಓಟ್‌ಮೀಲ್‌ನೊಂದಿಗೆ ಕತ್ತರಿಸಿದ ಬಾದಾಮಿ ತುಂಡುಗಳನ್ನು ಸೇರಿಸುವುದರಿಂದ ಆರೋಗ್ಯಕರ ಕೊಬ್ಬಿನಂಶ ಹಾಗೂ ಪ್ರೊಟೀನ್ ಅಂಶ ದೇಹಕ್ಕೆ ಸೇರ್ಪಡೆಯಾಗುತ್ತದೆ. ಬೆರ್ರಿಗಳಲ್ಲಿ ವಿಟಮಿನ್ ಹಾಗೂ ಆಂಟಿಆಕ್ಸಿಡೆಂಟ್ ಅಂಶಗಳಿವೆ.
ಪಾಲಕ್, ಬಾಳೆಹಣ್ಣಿನ ಸ್ಮೂಥಿ
ಈ ಸ್ಮೂಥಿಯಲ್ಲಿ ಸಾಕಷ್ಟು ಪೋಷಕಾಂಶಗಳಿವೆ. ಅಲ್ಲದೆ ಇದು ಸುಲಭವಾಗಿ ತಯಾರಿಸಬಹುದಾದ ಉಪಾಹಾರ ಪೇಯವಾಗಿದೆ. ಪಾಲಕ್, ಬಾಳೆಹಣ್ಣು ಹಾಗೂ ಪ್ರೊಟೀನ್ ಪುಡಿಯನ್ನು ಸೇರಿಸಿ ರುಬ್ಬಿ. ರುಬ್ಬುವಾಗ ಅದಕ್ಕೆ ಹಾಲು ಅಥವಾ ಯೋಗರ್ಟ್ ಸೇರಿಸಬಹುದು. ಇದು ಆರೋಗ್ಯಕ್ಕೂ ಉತ್ತಮ, ವರ್ಕೌಟ್‌ಗೂ ಮೊದಲು ದೇಹಕ್ಕೆ ಅಗತ್ಯವಿರುವ ಶಕ್ತಿಯನ್ನು ಒದಗಿಸುತ್ತದೆ. ಪಾಲಕ್‌ನಲ್ಲಿ ಕಬ್ಬಿಣಾಂಶ ಹಾಗೂ ಇತರ ಪೋಷಕಾಂಶಗಳಿವೆ. ಬಾಳೆಹಣ್ಣಿನಲ್ಲಿ ಕಾರ್ಬೋಹೈಡ್ರೆಟ್ ಅಂಶ ಅಧಿಕವಾಗಿದೆ.
ಚಿಯಾಸೀಡ್ ಪುಡ್ಡಿಂಗ್
ನಾರಿನಂಶದಿಂದ ತುಂಬಿರುವ ರುಚಿಕರ ಬ್ರೇಕ್‌ಫಾಸ್ಟ್ ಇದು. ಇದರಲ್ಲಿ ಪ್ರೊಟೀನ್ ಪ್ರಮಾಣವು ಅಧಿಕವಾಗಿದೆ. ಇದರಲ್ಲಿ ಆರೋಗ್ಯಕರ ಕೊಬ್ಬಿನಂಶವಿದ್ದು, ಇದು ದೇಹಕ್ಕೆ ನಿಧಾನಕ್ಕೆ ಶಕ್ತಿಯನ್ನು ಒದಗಿಸುತ್ತದೆ.
ಬ್ರೆಡ್ ಪೀನಟ್ ಬಟರ್
ಇದು ಕೊಬ್ಬಿನಂಶ ಹಾಗೂ ಪ್ರೊಟೀನ್ ಹೊಂದಿರುವ ಕಾರಣ ವರ್ಕೌಟ್‌ಗೂ ಮೊದಲು ಇದರ ಸೇವನೆ ಉತ್ತಮ. ಕಾರ್ಬೊಹೈಡ್ರೆಟ್ ಇದಕ್ಕೆ ತತ್‌ಕ್ಷಣಕ್ಕೆ ಬೇಕಾಗುವ ಶಕ್ತಿ ಒದಗಿಸುತ್ತದೆ. ಪ್ರೊಟೀನ್ ಸ್ನಾಯಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಸಿಹಿಗೆಣಸು
ಸಿಹಿಗೆಣಸಿನಲ್ಲಿ ನಾರಿನಂಶ ಹಾಗೂ ದೇಹಕ್ಕೆ ಅಗತ್ಯವಿರುವ ವಿಟಮಿನ್ ಎ, ಬಿ6, ಕೆ ಹಾಗೂ ಪೊಟ್ಯಾಶಿಯಂ ಅಂಶಗಳು ಸಮೃದ್ಧವಾಗಿದೆ. ಇದು ಅವರು ನಿಮ್ಮ ವ್ಯಾಯಾಮವನ್ನು ಹೆಚ್ಚಿಸಲು ಸಹಾಯ ಮಾಡುವ ಸ್ಥಿರವಾದ ಶಕ್ತಿಯನ್ನು ಒದಗಿಸುತ್ತಾರೆ.
ಆರೋಗ್ಯಕ್ಕೆ ಸಂಬಂಧಿಸಿದ ಈ ಸುದ್ದಿಯನ್ನೂ ಓದಿ
ಬಾಯಿಗೆ ಕಹಿ ಎನ್ನಿಸಿದರೂ ಒಡಲಿಗೆ ಸಿಹಿ ಮೆಂತ್ಯೆ; ಇದರಿಂದ ಆರೋಗ್ಯಕ್ಕಿದೆ ಹಲವು ರೀತಿಯ ಪ್ರಯೋಜನ
ಮೆಂತ್ಯೆ ಕಹಿ ಎನ್ನುವ ಕಾರಣಕ್ಕೆ ಹಲವರಿಗೆ ಇದು ಹಿಡಿಸುವುದಿಲ್ಲ. ಆದರೆ ಮೆಂತ್ಯೆಯಲ್ಲಿ ಹಲವು ಆರೋಗ್ಯಗುಣಗಳಿವೆ. ಹೃದಯದ ಆರೋಗ್ಯದಿಂದ ಕರುಳಿನ ಆರೋಗ್ಯದವರೆಗೆ ಇದರಿಂದ ಹಲವು ರೀತಿಯ ಪ್ರಯೋಜನಗಳಿವೆ.
ವಿಭಾಗ