logo
ಕನ್ನಡ ಸುದ್ದಿ  /  ಜೀವನಶೈಲಿ  /  Honor X9b: ಭಾರತದಲ್ಲಿ ಬಿಡುಗಡೆಗೆ ಹಾನರ್ X9b 5ಜಿ ಸ್ಮಾರ್ಟ್‌ಪೋನ್ ರೆಡಿ; 180ಪಿಎಂ ಟ್ರಿಪಲ್ ರೇರ್ ಕ್ಯಾಮೆರಾದ ಫೋನ್ ಬೆಲೆ ಎಷ್ಟಿದೆ

Honor x9b: ಭಾರತದಲ್ಲಿ ಬಿಡುಗಡೆಗೆ ಹಾನರ್ x9b 5ಜಿ ಸ್ಮಾರ್ಟ್‌ಪೋನ್ ರೆಡಿ; 180ಪಿಎಂ ಟ್ರಿಪಲ್ ರೇರ್ ಕ್ಯಾಮೆರಾದ ಫೋನ್ ಬೆಲೆ ಎಷ್ಟಿದೆ

Raghavendra M Y HT Kannada

Feb 09, 2024 04:31 PM IST

google News

ಹಾನರ್ x9b 5ಜಿ ಸ್ಮಾರ್ಟ್‌ಫೋನ್ 108ಎಂಬಿ ಟ್ರಿಪಲ್ ರೇರ್ ಕ್ಯಾಮೆರಾದೊಂದಿಗೆ ಭಾರತದ ಮಾರುಕಟ್ಟೆಗೆ ಬರಲು ಸಿದ್ಧವಾಗಿದೆ.

  • Honor x9b Price: ಹಾನರ್ x9b ಸ್ಮಾರ್ಟ್‌ಫೋನ್ ಬರೋಬ್ಬರಿ 108ಎಂಬಿ ಟ್ರಿಪರ್ ರೇರ್ ಕ್ಯಾಮೆರಾದೊಂದಿಗೆ ಭಾರತದ ಮಾರುಕಟ್ಟೆಗೆ ಬರುತ್ತಿದೆ. ಈ ಫೋನಿಗೆ ಬೆಲೆ, ವೈಶಿಷ್ಟ್ಯಗಳನ್ನು ತಿಳಿಯಿರಿ.

ಹಾನರ್ x9b 5ಜಿ ಸ್ಮಾರ್ಟ್‌ಫೋನ್ 108ಎಂಬಿ ಟ್ರಿಪಲ್ ರೇರ್ ಕ್ಯಾಮೆರಾದೊಂದಿಗೆ ಭಾರತದ ಮಾರುಕಟ್ಟೆಗೆ ಬರಲು ಸಿದ್ಧವಾಗಿದೆ.
ಹಾನರ್ x9b 5ಜಿ ಸ್ಮಾರ್ಟ್‌ಫೋನ್ 108ಎಂಬಿ ಟ್ರಿಪಲ್ ರೇರ್ ಕ್ಯಾಮೆರಾದೊಂದಿಗೆ ಭಾರತದ ಮಾರುಕಟ್ಟೆಗೆ ಬರಲು ಸಿದ್ಧವಾಗಿದೆ.

Honor x9b Price in India: ಹಾನರ್ ಕಂಪನಿ ಹೊಸ ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಲಾಂಚ್ ಮಾಡೋಕೆ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈ ಹೊಸ ಫೋನಿನ ಹೆಸರು ಹಾನರ್ ಎಕ್ಸ್‌9ಬಿ. 2024ರ ಫೆಬ್ರವರಿ 15ರ ಗುರುವಾರ ಈ ಗ್ಯಾಡ್ಜೆಟ್ ಬಿಡುಗಡೆಯಾಗಲಿದೆ. ಫೋನಿನ ಬೆಲೆ ಹಾಗೂ ವೈಶಿಷ್ಟ್ಯಗಳನ್ನು ತಿಳಿಯೋಣ.

ಹಾನರ್ ಎಕ್ಸ್‌9ಬಿ ಸ್ಮಾರ್ಟ್‌ಫೋನ್‌ನಲ್ಲಿ ಹೊಸದು ಏನೆಲ್ಲಾ ಇದೆ?

ಹಾನರ್ ಎಕ್ಸ್‌9ಬಿ ಸ್ಮಾರ್ಟ್‌ಫೋನ್ ಈಗಾಗಲೇ ಅಂತಾರಾಷ್ಟ್ರೀಯ ಮಾಕುಕಟ್ಟೆಯಲ್ಲಿ ಲಭ್ಯವಿದೆ. ಭಾರತದಲ್ಲಿ ಮುಂದಿನ ವಾರ ಬಿಡುಗಡೆಯಾಗುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ಹಾನರ್ ಎಕ್ಸ್‌9ಬಿಗೂ ಭಾರತದಲ್ಲಿ ಬಿಡುಗಡೆಯಾಗಲಿರುವ ಹಾನರ್ ಎಕ್ಸ್‌9ಬಿಗೆ ದೊಡ್ಡ ವ್ಯತ್ಯಾಸವೇನೂ ಇರುವುದಿಲ್ಲ. ಬಹುತೇಕ ಒಂದೇ ಆಗಿರುತ್ತದೆ. ಹಾನರ್ ಎಕ್ಸ್‌9ಬಿ ನಲ್ಲಿ 120 ಎಚ್‌ಜೆಡ್ ರಿಫ್ರೆಶ್ ರೇಟ್‌ನೊಂದಿಗೆ 6.78 ಇಂಚಿನ ಕರ್ವ್ಡ್‌ ಎಡ್ಜ್‌ ಅಮೋಲೆಡ್ ಡಿಸ್‌ಪ್ಲೇ ಇರುತ್ತದೆ. ಫಿಂಗರ್ ಪ್ರಿಂಟ್ ಸ್ಕ್ಯಾನರ್ ಮನೆಗ್ರೇಟೆಡ್ ಆಗಿರುತ್ತದೆ. ಸ್ನ್ಯಾಪ್‌ಡ್ರ್ಯಾಗನ್ 6 ಜೆನ್ 1 ಪ್ರೊಸೆಸರ್ ಇದರಲ್ಲಿ ಇರಲಿದೆ.

ಈ 5ಜಿ ಸ್ಮಾರ್ಟ್‌ಫೋನ್‌ನಲ್ಲಿ 8GB RAM, 8GB ವರ್ಚುವಲ್ RAM, 256GB ಸ್ಟೋರೇಜ್ ಇರಲಿದೆ. ಆಂಡ್ರಾಯ್ಡ್ 13 ಅಥವಾ ಆಂಡ್ರಾಯ್ಡ್ 14 ಸಾಫ್ಟ್‌ವೇರ್ ಹಾನರ್ ಹೊಸ ಮೊಬೈಲ್‌ನಲ್ಲಿ ಇರಲಿದೆ. ಮಿಡ್‌ನೈಟ್ ಬ್ಲಾಕ್, ಸನ್‌ಶೈನ್ ಆರೆಂಜ್ ಕಲರ್‌ಗಳಲ್ಲಿ ಬರುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹಾನರ್ ಎಕ್ಸ್‌9ಬಿ ಸ್ಮಾರ್ಟ್‌ಫೋನ್‌ನ ಮತ್ತೊಂದು ವಿಶೇಷ ಎಂದರೆ 108ಎಂಬಿ ಟ್ರಿಪಲ್ ರೇರ್ ಕ್ಯಾಮೆರಾದೊಂದಿಗೆ ಬರುತ್ತಿದೆ ಎಂದು ಹಾನರ್ ಸಂಸ್ಥೆಯೇ ಅಧಿಕೃತವಾಗಿ ಘೋಷಣೆ ಮಾಡಿದೆ. ಇದರಲ್ಲಿ ಐ ಪವರ್ಡ್ ಮೋಷನ್ ಸೆನ್ಸಿಂಗ್ ಕ್ಯಾಮೆರಾ ಕೂಡ ಇದೆ ಎಂಬ ಮಾಹಿತಿ ಇದೆ. ಸೆಲ್ಫಿ ಕ್ಯಾಮೆರಾದ ಬಗ್ಗೆ ಸ್ಪಷ್ಟತೆ ಇಲ್ಲ.

ಫೆಬ್ರವರಿ 15 ರಂದು ನಡೆಯಲಿರುವ ಕಾರ್ಯಕ್ರಮವೊಂದರಲ್ಲಿ ಹಾನರ್ ಎಕ್ಸ್‌9ಬಿ ಸ್ಮಾರ್ಟ್‌ಫೋನ್‌ ಭಾರತದಲ್ಲಿ ಲಾಂಚ್ ಮಾಡಲಾಗುತ್ತದೆ ಎಂದು ಹಾನರ್ ಸಂಸ್ಥೆ ಹೇಳಿದೆ. ಇದೇ ಈವೆಂಟ್‌ನಲ್ಲಿ ಛಾಯಾಸ್ ಎಕ್ಸ್‌ 5 ಇಯರ್ ಬಡ್ಸ್‌, ಛಾಯಾಸ್ ವಾಚ್ ಅನ್ನು ಲಾಂಚ್ ಮಾಡಲಾಗುತ್ತದೆ. ಎಕ್ಸ್‌9ಬಿ ಸ್ಮಾರ್ಟ್‌ಫೋನ್‌ ಜೊತೆಗೆ 2,99 ರೂಪಾಯಿ ಮೌಲ್ಯದ ಮೊಬೈಲ್ ಪ್ರೊಟೆಕ್ಷನ್ ಪ್ಲಾನ್ ಅನ್ನು ಕಂಪನಿ ಉಚಿತವಾಗಿ ನೀಡುತ್ತದೆ.

ಈ ಪ್ರೊಟೆಕ್ಷನ್ ಪ್ಲಾನ್‌ನಲ್ಲಿ 1 ಟೈ ಸ್ಕ್ರೀನ್ ರಿಪ್ಲೇಸ್ಮೆಂಟ್ (ಮೊಬೈಲ್ ಖರೀದಿಸಿದ ಮೊದಲ 6 ತಿಂಗಳು), 18 ತಿಂಗಳ ವಾರಂಟಿ, ಡೋರ್ ಟು ಡೋರ್ ಅಸಿಸ್ಟೆನ್ಸ್ ಇರಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಹಾನರ್ ಎಕ್ಸ್‌9ಬಿ ಸ್ಮಾರ್ಟ್‌ಫೋನ್‌ ಬೆಲೆಗೆ ಸಂಬಂಧಿಸಿದ ವಿವರಗಳು ಪ್ರಸ್ತುತ ಲಭ್ಯವಾಗಿಲ್ಲ. ಇತರೆ ವೈಶಿಷ್ಟ್ಯಗಳ ಬಗ್ಗೆ ಹಾನರ್ ಕಂಪನಿ ಶೀಘ್ರದಲ್ಲೇ ಸ್ಪಷ್ಟನೆ ನೀಡಲಿದೆ. ಭಾರತದಲ್ಲಿ ಈ ಫೋನ್ ಬಿಡುಗಡೆಯ ವೇಳೆ ಬೆಲೆ ಸೇರಿದಂತೆ ಎಲ್ಲಾ ಮಾಹಿತಿಯು ಲಭ್ಯವಾಗಲಿದೆ. ಇ-ಕಾರ್ಮಸ್‌ ಆನ್‌ಲೈನ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಮೊದಲು ಈ ಫೋನ್ ಖರೀದಿಗೆ ಲಭ್ಯವಾಗುವ ಸಾಧ್ಯತೆ ಇದೆ. (This copy first appeared in Hindustan Times Kannada website. To read more like this please logon to kannada.hindustantime.com).

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ