ಸ್ಯಾಮ್‌ಸಂಗ್‌ನಿಂದ 2 ಹೊಸ ಫೋಲ್ಡಬಲ್ ಫೋನ್‌ಗಳ ಬಿಡುಗಡೆ; ಎಐ ಹೊಂದಿರುವ ಗ್ಯಾಲಕ್ಸಿ ಝಡ್ ಫೋಲ್ಡ್ 6, ಝಡ್ ಫ್ಲಿಪ್ 6 ಬೆಲೆಯ ಮಾಹಿತಿ ಇಲ್ಲಿದೆ
Jul 11, 2024 04:17 PM IST
ಸ್ಯಾಮ್‌ಸಂಗ್‌ನಿಂದ 2 ಹೊಸ ಫೋಲ್ಡಬಲ್ ಫೋನ್‌ಗಳ ಬಿಡುಗಡೆ; ಎಐ ಹೊಂದಿರುವ ಗ್ಯಾಲಕ್ಸಿ ಝಡ್ ಫೋಲ್ಡ್ 6, ಝಡ್ ಫ್ಲಿಪ್ 6 ಮಾಹಿತಿ ಇಲ್ಲಿದೆ
- ಸ್ಯಾಮ್‌ಸಂಗ್ ಮಾಡಚಬಹುದಾದ 2 ಹೊಸ ಫೋನ್‌ಗಳನ್ನು ಪ್ಯಾರಿಸ್‌ನಲ್ಲಿ ನಡೆದ ಗ್ಯಾಲಕ್ಸಿ ಅನ್ ಪ್ಯಾಕ್ಡ್ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿದೆ. ಗ್ಯಾಲಕ್ಸಿ ಝಡ್ ಫೋಲ್ಡ್ 6, ಗ್ಯಾಲಕ್ಸಿ ಝಡ್ ಫ್ಲಿಪ್ 6 ಮತ್ತು ಇವುಗಳ ಜೊತೆಗೆ ಗ್ಯಾಲಕ್ಸಿ ಬಡ್ಸ್ 3 ಮತ್ತು ಗ್ಯಾಲಕ್ಸಿ ಬಡ್ಸ್ 3 ಪ್ರೊ ಅನ್ನು ಅನಾವರಣಗೊಳಿಸಲಾಗಿದೆ.
ಪ್ರಮುಖ ಸ್ಮಾರ್ಟ್‌ಫೋನ್ ಸಂಸ್ಥೆಯಾಗಿರುವ ಸ್ಯಾಮ್‌ಸಂಗ್ ಜುಲೈ 10 (ಬುಧವಾರ) ರಂದು ಪ್ಯಾರಿಸ್‌ನಲ್ಲಿ ನಡೆದ ಗ್ಯಾಲಕ್ಸಿ ಅನ್ ಪ್ಯಾಕ್ಡ್ ಕಾರ್ಯಕ್ರಮದಲ್ಲಿ ತನ್ನ ಹೊಚ್ಚ ಹೊಸ ಫೋಲ್ಡಬಲ್ ಫೋನ್‌ಗಳಾದ ಎಐ ತಂತ್ರಜ್ಞಾನ ಆಧಾರಿತ ಗ್ಯಾಲಕ್ಸಿ ಝಡ್ ಫೋಲ್ಡ್ 6 (Galaxy Z Fold 6) ಹಾಗೂ ಗ್ಯಾಲಕ್ಸಿ ಝಡ್ ಫ್ಲಿಪ್ 6 (Galaxy z flip 6) ಜಾಗತಿಕ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದರ ಜೊತೆಗೆ ಗ್ಯಾಲಕ್ಸಿ ಬಡ್ಸ್ 3 ಮತ್ತು ಗ್ಯಾಲಕ್ಸಿ ಬಡ್ಸ್ 3 ಪ್ರೊ ಅನ್ನು ಕೂಡ ಲಾಂಚ್ ಮಾಡಿದೆ. ಎಐನೊಂದಿಗೆ ಬರುತ್ತಿರುವ ಈ ಎರಡು ಹೊಸ ಸ್ಮಾರ್ಟ್‌ಫೋನ್‌ಗಳು ಗ್ರಾಹಕರಿಗೆ ವಿಶಿಷ್ಟವಾದ ಮೊಬೈಲ್ ಅನುಭವವನ್ನು ಒದಗಿಸಲಿದೆ. ಗ್ಯಾಲಕ್ಸಿ ಎಐ ಸಂವಹನ, ಉತ್ಪಾದಕತೆ ಮತ್ತು ಸೃಜನಶೀಲತೆಯನ್ನು ತೀವ್ರಗೊಳಿಸಲು ಮತ್ತು ವೇಗಗೊಳಿಸಲು ಶಕ್ತಿಯುತವಾದ, ಬುದ್ಧಿವಂತ ಮತ್ತು ಬಾಳಿಕೆ ಬರುವ ಫೋಲ್ಡೇಬಲ್ ಸ್ಮಾರ್ಟ್ ಫೋನ್ ಅನುಭವವನ್ನು ಒದಗಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಭಾರತದಲ್ಲಿ ಗ್ಯಾಲಕ್ಸಿ ಝಡ್ ಫೋಲ್ಡ್ 6 ಹಾಗೂ ಗ್ಯಾಲಕ್ಸಿ ಝಡ್ ಫ್ಲಿಪ್ 6 ಬೆಲೆ
ಹೊಸ ತಂತ್ರಜ್ಞಾನದೊಂದಿಗೆ ಬರುತ್ತಿರುವ ಈ ಎರಡು ಫೋನ್‌ಗಳು ನೋಡಲು ತುಂಬಾ ಆಕರ್ಷಣೆಯಾಗಿದ್ದು, ಬೆಲೆ ಕೂಡ ಕೊಂಚ ಜಾಸ್ತಿ ಅಂತಲೇ ಹೇಳಬಹುದು. ಜುಲೈ 10 ರಿಂದಲೇ ಈ ಎರಡೂ ಫೋನ್‌ಗಳ ಮುಂಗಡ ಬುಕಿಂಗ್ ಆರಂಭವಾಗಿದ್ದು, ಜುಲೈ 24 ರಿಂದ ಖರೀದಿಗೆ ಲಭ್ಯವಿರುತ್ತವೆ. ಗ್ಯಾಲಕ್ಸಿ ಝೆಡ್ ಫ್ಲಿಪ್ 6 ಫೋನ್‌ನ ಬೆಲೆ ಭಾರತದಲ್ಲಿ 1,64,999 ರೂಪಾಯಿ ಇರಲಿದೆ. ಇದರಲ್ಲಿ 12 GB+256 GB ಸಾಮರ್ಥ್ಯವನ್ನು ಹೊಂದಿರುತ್ತದೆ. ಇದರಲ್ಲಿನ ಮತ್ತೊಂದು ವೇರಿಯಂಟ್ ಫೋನ್ ಬೆಲೆ 2,00,999 ರೂಪಾಯಿ ಇಲಿದೆ. ಇದು 12 GB+1TB ಸಾಮರ್ಥ್ಯವನ್ನು ಹೊಂದಿರಲಿದೆ. 12 GB+256 GB ವೇರಿಯಂಟ್‌ನ ಗ್ಯಾಲಕ್ಸಿ ಝೆಡ್ ಫ್ಲಿಪ್ 6 ಫೋನ್ ಬೆಲೆ 1,09,999 ರೂಪಾಯಿಯಿಂದ ಆರಂಭವಾಗುತ್ತದೆ. 12 GB+512 GB ಗೆ ವೇರಿಯಂಟ್ ಫೋನ್ ಬೆಲೆ 1,21,999 ರೂಪಾಯಿ ಇದೆ.
ಗ್ಯಾಲಕ್ಸಿ ಝಡ್ ಫೋಲ್ಡ್ 6 ಹಾಗೂ ಗ್ಯಾಲಕ್ಸಿ ಝಡ್ ಫ್ಲಿಪ್ 6 ಫೋನ್‌ಗೆ ಏನೆಲ್ಲಾ ಆಫರ್‌ಗಳಿವೆ?
ಈ ಫೋಲ್ಡಬ್ ಹೊಸ ಸ್ಮಾರ್ಟ್‌ಫೋನ್‌ಗಳಿಗೆ ಸ್ಯಾಮ್‌ಸಂಗ್ ಆಫರ್‌ಗಳನ್ನು ಘೋಷಣೆ ಮಾಡಿದೆ. ಗ್ಯಾಲಕ್ಸಿ ಝಡ್ ಫ್ಲಿಪ್ 6 ಫೋನ್‌ಗೆ 9,999 ರೂಪಾಯ ಮೌಲ್ಯದ ಎರಡು ಸ್ಕ್ರೀನ್ ಅಥವಾ ಬಿಡಿಭಾಗಗಳ ರಿಪ್ಲೇಸ್‌ಮೆಂಟ್ ಅನ್ನು ಕೇವಲ 999 ರೂಪಾಯಿಗೆ ಮಾಡಿಕೊಡಲಾಗುತ್ತದೆ. 8,000 ಅಪ್‌ಗ್ರೇಡ್ ಬೋನಸ್ ಅಥವಾ 8,000 ರೂಪಾಯಿ ಬ್ಯಾಂಕ್ ಕ್ಯಾಶ್‌ಬ್ಯಾಕ್, ಅಧಿಕೃತ ಕವರ್ ಮೇಲೆ ರಿಯಾಯಿತಿ ಮತ್ತು ಲೇಟೆಸ್ಟ್ ಗ್ಯಾಲಕ್ಸಿ ವಾಚ್ ಅಲ್ಟ್ರಾ, ವಾಚ್7 ಹಾಗೂ ಗ್ಯಾಲಕ್ಸಿ ಬಡ್ಸ್ 3 ಮೇಲೆ ಶೇಕಡಾ 35 ರಷ್ಟು ಡಿಸ್ಕೌಂಟ್ ನೀಡಲಾಗುತ್ತಿದೆ. ಜೊತೆಗೆ ಸ್ಯಾಮ್‌ಸಂಗ್ ಫ್ಲಾಗ್‌ಶಿಪ್ ಗ್ರಾಹಕರಿಗೆ 15,000 ರೂಪಾಯಿಗಳ ಅಪ್‌ಗ್ರೇಡ್ ಸೌಲಭ್ಯ ನೀಡಲಾಗುತ್ತಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ ಝಡ್ ಫೋಲ್ಡ್ 6 ಗೆ 14,999 ರೂಪಾಯಿ ಮೌಲ್ಯದ ಎರಡು ಸ್ಕ್ರೀನ್ ಅಥವಾ ಬಿಡಿಭಾಗಗಳನ್ನು ಕೇವಲ 999 ರೂಪಾಯಿಗೆ ರಿಪ್ಲೇಸ್‌ಮೆಂಟ್ ಮಾಡಿಕೊಡಲಾಗುತ್ತದೆ. 8,000 ರೂಪಾಯಿ ಅಪ್‌ಗ್ರೇಡ್ ಬೋನಸ್ ಅಥವಾ 8,000 ರೂಪಾಯಿ ಬ್ಯಾಂಕ್ ಕ್ಯಾಶ್‌ಬ್ಯಾಕ್, ಮೊಬೈಲ್ ಕವರ್ ಮೇಲೆ ರಿಯಾಯಿತಿ ಹಾಗೂ ಸ್ಯಾಮ್‌ಸಂಗ್ ಫ್ಲಾಗ್‌ಶಿಪ್ ಗ್ರಾಹಕರಿಗೆ 15,000 ರೂಪಾಯಿಗಳ ಅಪ್‌ಗ್ರೇಡ್ ಸೌಲಭ್ಯ ನೀಡಲಾಗುತ್ತದೆ.
ಗ್ಯಾಲಕ್ಸಿ ಝಡ್ ಫೋಲ್ಡ್ 6 ಮತ್ತು ಝಡ್ ಫ್ಲಿಪ್5 ಗಳು ತೆಳ್ಳಗಿರುವ ಮತ್ತು ಹಗುರವಾದ ಗ್ಯಾಲಕ್ಸಿ ಝಡ್ ಸರಣಿಯಾಗಿದ್ದು, ಆರಾಮವಾಗಿ ಕೊಂಡೊಯ್ಯಲು ಸಾಧ್ಯವಾಗುವಂತೆ ರೂಪುಗೊಳಿಸಲಾಗಿದೆ. ಸಿಮ್ಮೆಟ್ರಿಕಲ್ (ಎರಡು ಭಾಗಗಳಿದ್ದು, ಎರಡೂ ಒಂದೇ ಥರ ಇರುತ್ತವೆ) ವಿನ್ಯಾಸವನ್ನು ಹೊಂದಿರುವ, ನೇರವಾದ ಎಡ್ಜ್ ಅನ್ನು ಹೊಂದಿರುವ ಈ ಫೋನ್ ಗಳು ಕಲಾತ್ಮಕವಾಗಿ ನಯವಾದ ಫಿನಿಶಿಂಗ್ ಹೊಂದಿವೆ. ಗ್ಯಾಲಕ್ಸಿ ಝಡ್ ಫೋಲ್ಡ್ 6 ಸ್ವಲ್ಪ ಹೆಚ್ಚು ಕವರ್ ಸ್ಕ್ರೀನ್ ನ ರೇಶಿಯೋ ಹೊಂದಿದ್ದು, ಹೆಚ್ಚು ನೈಸರ್ಗಿಕವಾದ ವೀಕ್ಷಣಾ ಅನುಭವವನ್ನು ಒದಗಿಸುತ್ತದೆ. ಹೆಚ್ಚು ಆರ್ಮರ್ ಅಲ್ಯೂಮಿನಿಯಂ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ಅನ್ನು ಹೊಂದಿದೆ. ಆದ್ದರಿಂದ ಇದು ಇನ್ನೂ ಹೆಚ್ಚು ಬಾಳಿಕೆ ಬರುವ ಗ್ಯಾಲಕ್ಸಿ ಝಡ್ ಸರಣಿಯಾಗಿದೆ.
ಗ್ಯಾಲಕ್ಸಿ ಝಡ್ ಫೋಲ್ಡ್6 ಮತ್ತು ಫ್ಲಿಪ್ 6 ಎರಡನ್ನೂ ಗ್ಯಾಲಕ್ಸಿ ಸ್ನ್ಯಾಪ್ ಡ್ರಾಗನ್ 8 ಜೆನ್ 3 ಮೊಬೈಲ್ ಪ್ಲಾಟ್‌ಫಾರ್ಮ್ ಬಳಸಿಕೊಂಡು ಸಜ್ಜುಗೊಳಿಸಲಾಗಿದೆ. ಇದು ಇನ್ನೂ ಅತ್ಯಾಧುನಿಕ ಸ್ನಾಪ್‌ಡ್ರಾಗನ್ ಮೊಬೈಲ್ ಪ್ರೊಸೆಸರ್ ಆಗಿದ್ದು, ವಿಭಾಗದಲ್ಲಿಯೇ ಅತ್ಯುತ್ತಮ ಕ್ಲಾಸ್ ಇನ್ ಸಿಪಿಯು, ಜಿಪಿಯು ಮತ್ತು ಎನ್ ಪಿ ಯು ಕಾರ್ಯಕ್ಷಮತೆ ಒದಗಿಸುತ್ತದೆ. ಗ್ಯಾಲಕ್ಸಿ ಝಡ್ ಫೋಲ್ಡ್ 6 ಫೋನ್ ನೋಟ್ ಅಸಿಸ್ಟ್, ಪಿಡಿಎಫ್ ಓವರ್‌ಲೇ ಟ್ರಾನ್ಸ್ ಲೇಷನ್, ಕಂಪೋಸರ್, ಸ್ಕೆಚ್ ಟು ಇಮೇಜ್ ಮತ್ತು ಇಂಟರ್ ಪ್ರಿಟರ್ ಮುಂತಾದ ಎಐ- ಚಾಲಿತ ಫೀಚರ್ ಗಳು ಮತ್ತು ಟೂಲ್ ಗಳ ಶ್ರೇಣಿಯನ್ನು ಒದಗಿಸುತ್ತದೆ. ಅಲ್ಲದೇ ಲಾರ್ಜ್ ಸ್ಕ್ರೀನ್ ಅನ್ನು ಹೊಂದಿದ್ದು, ಉತ್ಪಾದಕತೆಯನ್ನು ಹೆಚ್ಚಿಸುತ್ತದೆ. ಗ್ಯಾಲಕ್ಸಿ ಝಡ್ ಫೋಲ್ಡ್6 ಅಪ್‌ಗ್ರೇಡ್ ಮಾಡಿದ ತೀವ್ರ ಥರದ ಗೇಮಿಂಗ್ ಅನುಭವವನ್ನು ನೀಡುತ್ತದೆ. ಅದರ ಶಕ್ತಿಯುತ ಚಿಪ್‌ಸೆಟ್ ಮತ್ತು 1.6x ದೊಡ್ಡ ವೇಪರ್ ಚೇಂಬರ್ ಕಾರಣದಿಂದಾಗಿ ಇನ್ನೂ ಹೆಚ್ಚಿ ಕಾರ್ಯಕ್ಷಮತೆಯನ್ನು ಒದಗಿಸಿ ಹೆಚ್ಚು ಕಾಲ ಆಟವಾಡುವ ಸಾಮರ್ಥ್ಯವನ್ನು ಹೊಂದಿದೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)