logo
ಕನ್ನಡ ಸುದ್ದಿ  /  ಜೀವನಶೈಲಿ  /  ಗಣಪತಿ ಮೂರ್ತಿಯ ನಿಮಜ್ಜನ ಹೇಗೆ; ಮನೆಯಲ್ಲೇ ಪ್ರತಿಮೆ ವಿಸರ್ಜನೆಗೆ ಸರಳ ಐಡಿಯಾಗಳಿವು

ಗಣಪತಿ ಮೂರ್ತಿಯ ನಿಮಜ್ಜನ ಹೇಗೆ; ಮನೆಯಲ್ಲೇ ಪ್ರತಿಮೆ ವಿಸರ್ಜನೆಗೆ ಸರಳ ಐಡಿಯಾಗಳಿವು

Tapatrisha Das HT Kannada

Sep 16, 2023 07:00 AM IST

google News

When is Ganesh Visarjan? Know the guidelines for immersing Lord Ganesha's idol

    • Ganesh Chaturthi 2023: ಗಣಪತಿ ಪ್ರತಿಮೆಗೆ ಪೂಜೆ ಸಲ್ಲಿಸಿದ ಬಳಿಕ, ನಿಮಜ್ಜನ ದಿನದಂದು ಗಣೇಶನ ಮೂರ್ತಿಯನ್ನು ವಿಸರ್ಜಿಸಲಾಗುತ್ತದೆ. ಈ ಪ್ರಕ್ರಿಯೆಯನ್ನು ಮನೆಯಲ್ಲಿಯೇ ಸರಳವಾಗಿ ಮಾಡಬಹುದು.
When is Ganesh Visarjan? Know the guidelines for immersing Lord Ganesha's idol
When is Ganesh Visarjan? Know the guidelines for immersing Lord Ganesha's idol (PTI)

ಭಾರತದ ಅತಿ ದೊಡ್ಡ ಧಾರ್ಮಿಕ ಹಬ್ಬಗಳಲ್ಲಿ ಗಣೇಶ ಚತುರ್ಥಿಯೂ (Ganesh Chaturthi 2023) ಒಂದು. ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಗಣೇಶನ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಪ್ರತಿ ವರ್ಷ ಗಣೇಶನನ್ನು ಪ್ರತಿಷ್ಠಾಪಿಸಿ, ಕೆಲವು ದಿನಗಳವರೆಗೆ ಪೂಜಿಸಿ, ಕೊನೆಗೆ ನೀರಿನಲ್ಲಿ ವಿನಾಯಕನ ನಿಮಜ್ಜನ ಮಾಡಲಾಗುತ್ತದೆ. ಶಿವ ಮತ್ತು ಪಾರ್ವತಿ ದೇವಿಯ ಹಿರಿಯ ಪುತ್ರನಾದ ವಿಘ್ನನಿವಾರಕನು, ತನ್ನನ್ನು ಪೂಜಿಸುವ ಭಕ್ತರ ಮನೆಗಳಿಗೆ ಸುಖ-ಸಂಪತ್ತು, ಸಮೃದ್ಧಿ ಮತ್ತು ಸಂತೋಷವನ್ನು ತರುತ್ತಾನೆ ಎಂಬ ನಂಬಿಕೆ ಇದೆ.

ಈ ವರ್ಷ ಗಣೇಶ ಚತುರ್ಥಿಯನ್ನು ಸೆಪ್ಟೆಂಬರ್ 19ರಂದು ಆಚರಿಸಲಾಗುತ್ತದೆ. ನಿಯಮಗಳ ಪ್ರಕಾರ, ಹಬ್ಬದ ಹತ್ತನೇ ದಿನದಂದು ಗಣೇಶನ ನಿಮಜ್ಜನ (ವಿಸರ್ಜನೆ) ನಡೆಯುತ್ತದೆ. ಅದರ ಪ್ರಕಾರ ಗೌರಿಸುತನ ವಿಸರ್ಜನೆಯು ಸೆಪ್ಟೆಂಬರ್ 28 ರಂದು ನಡೆಯಲಿದೆ. ದೇಶ ಹಾಗೂ ರಾಜ್ಯದ ಒಂದೊಂದು ಭಾಗಗಳಲ್ಲಿ ಈಶಪುತ್ರನ ನಿಮಜ್ಜನವನ್ನು ಒಂದೊಂದು ಸಂಪ್ರದಾಯದಂತೆ ಮಾಡಲಾಗುತ್ತದೆ. ಕರ್ನಾಟದ ಹಲವೆಡೆ ಗಣೇಶ ಚತುರ್ಥಿ ನಂತರದ ಬೆಸ ದಿನಗಳಲ್ಲಿ ವಿಸರ್ಜನೆ ಮಾಡಲಾಗುತ್ತದೆ. ಅಂದರೆ ಚೌತಿ ಹಬ್ಬದ ನಂತರ ಮೂರು, ಐದು, ಏಳು, ಒಂಬತ್ತು ಹೀಗೆ ಬೆಸ ಸಂಖ್ಯೆಯ ದಿನಗಳವರೆಗೆ ಗಣೇಶನಿಗೆ ನಿತ್ಯ ಪೂಜೆ ಹಾಗೂ ನೈವೇದ್ಯ ಅರ್ಪಿಸಿ, ಆ ಬಳಿಕ ಅದ್ಧೂರಿ ಮೆರವಣಿಗೆಯೊಂದಿಗೆ ನೀರಿನಲ್ಲಿ ವಿಸರ್ಜಿಸಲಾಗುತ್ತದೆ.

ಗಣೇಶ ಮೂರ್ತಿಯ ನಿಮಜ್ಜನ ಹೇಗೆ?

ಗಣೇಶ ಪೂಜೆಯನ್ನು ಮೂರು ಹಂತಗಳಲ್ಲಿ ನಡೆಸಲಾಗುತ್ತದೆ. ಆವಾಹನ, ಪೂಜೆ ಮತ್ತು ಯಥಾಸ್ಥಾನ. ಇದರಲ್ಲಿ ಆವಾಹನ ಎಂದರೆ, ಗಣೇಶನನ್ನು ಮನೆಗೆ ಸ್ವಾಗತಿಸುವುದು. ಪೂಜೆಯು, ವಿಘ್ನವಿನಾಶಕ ವಿಗ್ರಹವನ್ನು ಪೂಜಿಸುವುದನ್ನು ಸೂಚಿಸುತ್ತದೆ. ಯಥಾಸ್ಥಾನವು ಗಣೇಶನನ್ನು ಬೀಳ್ಕೊಡುವುದನ್ನು ಅಥವಾ ನಿಮಜ್ಜನ ಮಾಡುವುದನ್ನು ಸೂಚಿಸುತ್ತದೆ.

ನಿಮಜ್ಜನ ಮಾಡುವ ದಿನದಂದು, ಸುಮುಖನ ಪ್ರತಿಮೆಗೆ ಕೊನೆಯ ಪೂಜೆ ನೆರವೇರಿಸಲಾಗುತ್ತದೆ. ನಂತರ, ಕುಟುಂಬದ ಸದಸ್ಯರು ವಿಗ್ರಹವನ್ನು ಪೀಠದಿಂದ ಮೇಲಕ್ಕೆತ್ತಿ, ನಿಮಜ್ಜನ ಮೆರವಣಿಗೆ ಆರಂಭಿಸುತ್ತಾರೆ. ಗಣಪತಿಯ ಶ್ಲೋಕಗಳೊಂದಿಗೆ, ಮೂರ್ತಿಯನ್ನು ಕುಟುಂಬದ ಸದಸ್ಯರು ಮನೆಯ ಸುತ್ತಲೂ ಒಯ್ಯುತ್ತಾರೆ. ಬಳಿಕ ಮನೆಯ ಸಮೀಪದ ಜಲಮೂಲದಲ್ಲಿ ವಕ್ರತುಂಡನ ನಿಮಜ್ಜನ ಮಾಡಲಾಗುತ್ತದೆ. ಮಂತ್ರಗಳನ್ನು ಪಠಿಸುತ್ತಾ ವಿಗ್ರಹವನ್ನು ನಿಧಾನವಾಗಿ ನೀರಿಗೆ ಬಿಡಬೇಕಾಗುತ್ತದೆ.

ಮನೆಯಲ್ಲಿಯೇ ಗಣೇಶ ಮೂರ್ತಿ ವಿಸರ್ಜಿಸುವುದು ಹೇಗೆ?

ಒಂದು ಬಕೆಟ್‌ನಲ್ಲಿ ನೀರು ತುಂಬಿಸಿ ಅದಕ್ಕೆ 2 ಕೆಜಿ ಅಮೋನಿಯಂ ಬೈಕಾರ್ಬನೇಟ್ ಹಾಕಿ. ಅದನ್ನು ನೀರಿನಲ್ಲಿ ಕರಗಿಸಿ. ನಿಮಜ್ಜನ ದಿನದಂದು ಗಣೇಶನ ವಿಗ್ರಹಗಳನ್ನು ಬಕೆಟ್ ಒಳಗೆ ಮುಳುಗಿಸಿ. ಎರಡು-ಮೂರು ಗಂಟೆಗಳಿಗೊಮ್ಮ ನೀರನ್ನು ಬೆರೆಸಿ. ನಿಮಜ್ಜನ ಮಾಡಿದ 48 ಗಂಟೆಗಳ ನಂತರ, ಕ್ಯಾಲ್ಸಿಯಂ ಕಾರ್ಬೋನೇಟ್ ನೀರಿನ ಕೆಳಗೆ ಉಳಿಯುತ್ತದೆ. ಮೇಲ್ಭಾಗದಲ್ಲಿ ಹಾಲಿನಂಥಾ ಬಿಳಿ ಬಣ್ಣದ ದ್ರಾವಣವು ರೂಪುಗೊಳ್ಳುತ್ತದೆ. ಅಮೋನಿಯಂ ಸಲ್ಫೇಟ್ ದ್ರಾವಣ ಉತ್ಪತ್ತಿಯಾದ ನಂತರ, ಅದಕ್ಕೆ ಮತ್ತಷ್ಟು ನೀರನ್ನು ಸೇರಿಸಿ. ಈ ನೀರನ್ನು ನೀವು ತೋಟಗಾರಿಕೆಗೆ ಬಳಸಬಹುದು.

ನೀರಿನ ಸಮಸ್ಯೆಯಿದ್ದರೆ ಏನು ಮಾಡಬಹುದು?

ಕೆಲವು ಪ್ರದೇಶಗಳು ಗಣೇಶನ ನಿಮಜ್ಜನಕ್ಕೆ ಬೇಕಾದಷ್ಟು ನೀರಿನ ಮೂಲಗಳು ಇರುವುದಿಲ್ಲ. ಇನ್ನೂ ಕೆಲವೆಡೆ ನೀರಿನ ಎಲ್ಲಾ ಮೂಲಗಳು ಕಲುಷಿತಗೊಂಡಿರುತ್ತದೆ. ಇಂಥಾ ಸಂದರ್ಭದಲ್ಲಿ ವಿಗ್ರಹವನ್ನು ಪ್ರತಿಷ್ಠಾಪಿಸುವ ಬದಲು ವೀಳ್ಯದೆಲೆಯನ್ನು ಇರಿಸಿ ಅದನ್ನೇ ಸಾಂಕೇತಿಕವಾಗಿ ಗಣಪತಿ ಎಂದು ಪೂಜಿಸಬಹುದು. ವೀಳ್ಯದೆಲೆಯನ್ನು ಸಣ್ಣ ಬಾವಿ ಅಥವಾ ಕಡಿಮೆ ನೀರಿರುವ ಹೊಳೆಯಲ್ಲಿಯೂ ವಿಸರ್ಜಿಸಬಹುದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ