Google Chrome extensions: ಕ್ರೋಮ್‌ನಲ್ಲಿ ಈ ಎಕ್ಸ್‌ಟೆನ್ಶನ್ಸ್ ಬಳಸ್ತಿದ್ದೀರಾ? ಚೆಕ್‌ಮಾಡಿ!
Aug 31, 2022 04:31 PM IST
ಮಾಲ್ವೇರ್ ಪೀಡಿತ ಎಕ್ಸ್‌ಟೆನ್ಶನ್ಸ್ ಅನ್ನು 14 ಲಕ್ಷ ಗೂಗಲ್ ಕ್ರೋಮ್ ಬಳಕೆದಾರರು ಬಳಸುತ್ತಿದ್ದು, ಎಲ್ಲರೂ ಅವುಗಳನ್ನು ಅನ್‌ಇನ್‌ಸ್ಟಾಲ್ ಮಾಡಬೇಕು ಎಂದು McAfee ವರದಿ ಹೇಳಿದೆ.
- Google Chrome extensions: ಕ್ರೋಮ್‌ನಲ್ಲಿರುವ ಈ ಎಕ್ಸ್‌ಟೆನ್ಶನ್ಸ್ ಅಫಿಲಿಯೇಟ್ ಸೇಲ್ ಟ್ರ್ಯಾಕಿಂಗ್ ಕೋಡ್‌ಗಳನ್ನು ಇಂಜೆಕ್ಟ್ ಮಾಡುತ್ತಿವೆ ಎಂದು McAfee ವರದಿ ಹೇಳಿದೆ. ಈ ಕೋಡ್‌ಗಳು ಬಳಕೆದಾರರ ಬ್ರೌಸಿಂಗ್ ಅಭ್ಯಾಸಗಳನ್ನು ದಾಖಲಿಸಿ ಸಂಬಂಧಿತರಿಗೆ ರವಾನಿಸುತ್ತದೆ ಎಂದು ವರದಿ ಎಚ್ಚರಿಸಿದೆ.
ಗೂಗಲ್ ಕ್ರೋಮ್‌ನಲ್ಲಿ ಐದು ಎಕ್ಸ್‌ಟೆನ್ಶನ್ಸ್ ಬಳಕೆದಾರರ ಡೇಟಾವನ್ನು ಕದಿಯುತ್ತಿವೆ ಎಂದು ತನ್ನ ಇತ್ತೀಚಿನ ವರದಿಯಲ್ಲಿ McAfee ಎಚ್ಚರಿಸಿದೆ.
ವರದಿಯ ಪ್ರಕಾರ, ಈ ಎಕ್ಸ್‌ಟೆನ್ಶನ್ಸ್ ಮಾಲ್‌ವೇರ್ ಸೋಂಕಿಗೆ ಒಳಗಾಗಿವೆ. ಬಳಕೆದಾರರು ಯಾವುದೇ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗೆ ಭೇಟಿ ನೀಡಿದರೂ ಈ ಎಕ್ಸ್‌ಟೆನ್ಶನ್ಸ್ ಕುಕೀಗಳಾಗಿ ಕಾಣಿಸಿಕೊಳ್ಳುತ್ತವೆ. ಆತಂಕಕಾರಿ ಸಂಗತಿ ಎಂದರೆ, ಈ ಎಕ್ಸ್‌ಟೆನ್ಶನ್ಸ್ ಒಟ್ಟಾರೆಯಾಗಿ 14,00,000 ಕ್ಕಿಂತ ಹೆಚ್ಚು ಸಲ ಡೌನ್‌ಲೋಡ್ ಆಗಿ ಬಳಕೆಯಲ್ಲಿವೆ. ಆದ್ದರಿಂದ Google Chrome ಬಳಕೆದಾರರು ಯಾರಾದರೂ ಈ ಎಕ್ಸ್‌ಟೆನ್ಶನ್ಸ್ ಲ್ಯಾಪ್‌ಟಾಪ್‌ನಲ್ಲಿ Chrome ಗೆ ಸೇರಿಸಿದ್ದರೆ ಅವುಗಳನ್ನು ಅನ್‌ಇನ್‌ಸ್ಟಾಲ್ ಮಾಡಿದರೆ ಒಳಿತು ಎಂದು ಅದು ತಿಳಿಸಿದೆ.
ಮಾಲ್ವೇರ್ ಸೋಂಕಿತ ಗೂಗಲ್ ಎಕ್ಸ್‌ಟೆನ್ಶನ್ಸ್ ಯಾವುದು?
McAfee ವರದಿ ಪ್ರಕಾರ, ಈ ಐದು ಎಕ್ಸ್‌ಟೆನ್ಶನ್ ಬಳಕೆ ಸುತರಾಂ ಒಳ್ಳೆಯದಲ್ಲ, ಅವು ಹಾನಿಕಾರ ಎಂದು ಹೇಳಿದೆ.
- Netflix Party (netflixparty1.com)
- Netflix Party
- FlipShope — Price Tracker Extension
- Full Page Screenshot Capture — Screenshotting
- AutoBuy Flash Sales
ಈ ಎಕ್ಸ್‌ಟೆನ್ಶನ್ಸ್ ಉಂಟುಮಾಡುವ ಹಾನಿ?
McAfee ವರದಿಯು ಈ ಎಕ್ಸ್‌ಟೆನ್ಶನ್ಸ್ ಅಫಿಲಿಯೇಟ್ ಸೇಲ್ ಟ್ರ್ಯಾಕಿಂಗ್ ಕೋಡ್‌ಗಳನ್ನು ಚುಚ್ಚುತ್ತಿವೆ. ಇವು ಬಳಕೆದಾರರ ಬ್ರೌಸಿಂಗ್ ಅಭ್ಯಾಸಗಳನ್ನು ನಿರಂತರವಾಗಿ ರೆಕಾರ್ಡ್ ಮಾಡುತ್ತಿರುವುದು ಕಂಡುಬಂದಿದೆ. ವಿಶೇಷವಾಗಿ ಬಳಕೆದಾರರು ಯಾವುದೇ ಇ-ಕಾಮರ್ಸ್ ಸೈಟ್‌ಗೆ ಭೇಟಿ ನೀಡಿದಾಗ ಈ ಎಕ್ಸ್‌ಟೆನ್ಶನ್ಸ್ ಕುಕೀಗಳಂತೆ ಗೋಚರಿಸುತ್ತವೆ ಎಂದು ವಿವರಿಸಿದೆ.
bleepingcomputing.com ಪ್ರಕಾರ, ಈ Chrome ಎಕ್ಸ್‌ಟೆನ್ಶನ್ಸ್ ಡೇಟಾವನ್ನು ಕದಿಯುವುದರ ಜತೆಗೆ ತಮ್ಮ ಉದ್ದೇಶಿತ ಕಾರ್ಯವನ್ನು ನಿರ್ವಹಿಸುತ್ತವೆ. ಕಳ್ಳತನವನ್ನು ಗುರುತಿಸಲು ಬಹಳ ಕಷ್ಟವಾಗುತ್ತದೆ.
ತಡೆಗಟ್ಟುವ ಕ್ರಮಗಳಿವೆಯೇ?
ಹೌದು. Chrome ಬ್ರೌಸರ್‌ನ ಅಸುರಕ್ಷಿತ ಎಕ್ಸ್‌ಟೆನ್ಶನ್ಸ್ ಅನ್ನು ಡೌನ್‌ಲೋಡ್ ಮಾಡುವುದನ್ನು ತಪ್ಪಿಸಬಹುದು. ಡೌನ್‌ಲೋಡ್ ಮಾಡುವ ಮೊದಲು ಎಕ್ಸ್‌ಟೆನ್ಶನ್ಸ್ ಅನ್ನು ಸಂಪೂರ್ಣವಾಗಿ ಪರಿಶೀಲಿಸಬೇಕು ಎಂದು McAfee ಬಳಕೆದಾರರಿಗೆ ಸಲಹೆ ನೀಡುತ್ತದೆ. ಉದಾಹರಣೆಗೆ, ಬ್ರೌಸರ್ ಎಕ್ಸ್‌ಟೆನ್ಶನ್ಸ್ ಇನ್‌ಸ್ಟಾಲ್ ಮಾಡುವಾಗ, ಅದು ಬಹು ಅನುಮತಿಗಳನ್ನು ಕೇಳುತ್ತದೆ. ಈ ವಿನಂತಿಸಿದ ಅನುಮತಿಗಳಲ್ಲಿ ಏನೇನು ಇವೆ ಎಂಬುದನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕು ಎಂದು ಬಳಕೆದಾರರಿಗೆ ವರದಿ ಎಚ್ಚರಿಸಿದೆ.
ಅಲ್ಲದೆ, Chrome ಎಕ್ಸ್‌ಟೆನ್ಶನ್ಸ್ ಹೊರಗಿರುವ ಎಕ್ಸ್‌ಟೆನ್ಶನ್ಸ್ ಇನ್‌ಸ್ಟಾಲ್ ಆಗುವುದನ್ನು ತಪ್ಪಿಸುವುದು ಸೂಕ್ತ. Google ಡೆವಲಪರ್ ಪ್ರೋಗ್ರಾಂ ನೀತಿಗಳಿಗೆ ಹೊಂದಿಕೆಯಾಗುವುದನ್ನು ನೋಡಲು Chrome ಎಕ್ಸ್‌ಟೆನ್ಶನ್ಸ್ ಶಾಪ್‌ನಲ್ಲಿ ಪ್ರತಿಯೊಂದು ಎಕ್ಸ್‌ಟೆನ್ಶನ್ಸ್ ಅನ್ನು Google ಸ್ಕ್ಯಾನ್ ಮಾಡುತ್ತದೆ. ಎಕ್ಸ್‌ಟೆನ್ಶನ್ಸ್ ಕೆಲವು ತಿಂಗಳುಗಳಷ್ಟು ಹಳೆಯದಾಗಿದ್ದರೆ ಅದು "ವಿಶ್ವಾಸಾರ್ಹ" ಎಂದು ಗುರುತಿಸುತ್ತದೆ. Google ಎಕ್ಸ್‌ಟೆನ್ಶನ್ಸ್‌ಗೆ ‘ನಂಬಲಾಗದವರು’ ಎಂದು ಲೇಬಲ್ ಮಾಡಿದರೆ, ಅದು ಬಳಕೆದಾರರಿಗೆ “ಎಚ್ಚರಿಕೆಯಿಂದ ಮುಂದುವರಿಯಿರಿ” ಎಂಬ ಎಚ್ಚರಿಕೆ. ಆದಾಗ್ಯೂ, ಬಳಕೆದಾರರು ಈ ಎಕ್ಸ್‌ಟೆನ್ಶನ್ಸ್ "ಇನ್‌ಸ್ಟಾಲ್ ಮಾಡುವುದಕ್ಕೆ" ಆಯ್ಕೆಯನ್ನು ಪಡೆಯುತ್ತಾರೆ. ರಿಸ್ಕ್ ಸಂಪೂರ್ಣ ಬಳಕೆದಾರರದ್ದೇ ಆಗಿರುತ್ತದೆ ಎಂಬುದು ಗಮನಾರ್ಹ.