logo
ಕನ್ನಡ ಸುದ್ದಿ  /  ಜೀವನಶೈಲಿ  /  Savings Scheme: ಹಿರಿಯ ನಾಗರಿಕರ ಸೇವಿಂಗ್‌ ಸ್ಕೀಮ್‌ನಲ್ಲಿ ಬದಲಾವಣೆ; ಪರಿಷ್ಕೃತ ನಿಯಮಗಳು ಹೀಗಿವೆ

Savings Scheme: ಹಿರಿಯ ನಾಗರಿಕರ ಸೇವಿಂಗ್‌ ಸ್ಕೀಮ್‌ನಲ್ಲಿ ಬದಲಾವಣೆ; ಪರಿಷ್ಕೃತ ನಿಯಮಗಳು ಹೀಗಿವೆ

HT Kannada Desk HT Kannada

Nov 15, 2023 03:46 PM IST

google News

ಸೀನಿಯರ್‌ ಸಿಟಿಜನ್‌ ಸೇವಿಂಗ್ಸ್‌ ಸ್ಕೀಮ್‌ನಲ್ಲಿ ಬದಲಾವಣೆ

  • Savings:  ಖಾತೆದಾರರು 5 ವರ್ಷಗಳ ಯೋಜನೆ ಮಗಿದ ನಂತರ ಇಷ್ಟವಿದ್ದಲ್ಲಿ ಮತ್ತೆ 3 ವರ್ಷಗಳ ಅವಧಿಯಲ್ಲಿ ಖಾತೆಯನ್ನು ವಿಸ್ತರಿಸುವುದನ್ನು ಮುಂದುವರೆಸಬಹುದು. ಇದಕ್ಕೂ ಮುನ್ನ ಈ ರೀತಿ ವಿಸ್ತರಣೆ ಮಾಡಲು ಒಮ್ಮೆ ಮಾತ್ರ ಅವಕಾಶವಿತ್ತು.

ಸೀನಿಯರ್‌ ಸಿಟಿಜನ್‌ ಸೇವಿಂಗ್ಸ್‌ ಸ್ಕೀಮ್‌ನಲ್ಲಿ ಬದಲಾವಣೆ
ಸೀನಿಯರ್‌ ಸಿಟಿಜನ್‌ ಸೇವಿಂಗ್ಸ್‌ ಸ್ಕೀಮ್‌ನಲ್ಲಿ ಬದಲಾವಣೆ (PC: Freepik)

Savings: ಬ್ಯಾಂಕ್, ಪೋಸ್ಟ್‌ ಆಫೀಸ್‌ ಸೇರಿದಂತೆ ಎಲ್ಲೆಡೆ ಸಾಮಾನ್ಯ ನಾಗರಿಕರಿಗಿಂತ ಹಿರಿಯ ನಾಗರಿಕರಿಗೆ ಹೆಚ್ಚು ಬಡ್ಡಿ ದರ ನೀಡುತ್ತಾ ಬಂದಿದೆ. ಇದೀಗ ಭಾರತ ಸರ್ಕಾರವು ಹಿರಿಯ ನಾಗರಿಕರ ಉಳಿತಾಯ ಯೋಜನೆ, ಸಾರ್ವಜನಿಕ ಭವಿಷ್ಯ ನಿಧಿ, 5 ವರ್ಷದ ಪೋಸ್ಟ್‌ ಆಫೀಸ್‌ ಟೈಮ್‌ ಡೆಪಾಸಿಟ್‌ ಸ್ಕೀಮ್‌ನಲ್ಲಿ ಇತ್ತೀಚೆಗೆ ಕೆಲವೊಂದು ಬದಲಾವಣೆ ಮಾಡಿದೆ.

ಈ ಮೂರೂ ಕೂಡಾ ಅತ್ಯುತ್ತಮ ಹೂಡಿಕೆ ಯೋಜನೆಗಳಾಗಿದ್ದು ದೇಶಾದ್ಯಂತ ಉತ್ತಮ ಬಡ್ಡಿದರವನ್ನು ನೀಡುತ್ತಿದೆ. ಇದು ಸುರಕ್ಷಿತ ಹಾಗೂ ಸರ್ಕಾರಿ ಬೆಂಬಲಿತವಾಗಿದ್ದು ಹೆಚ್ಚಿನ ಬಡ್ಡಿ ದರ ಹಾಗೂ ಖಾತರಿಯ ಮೆಚ್ಯೂರಿಟಿ ಮೊತ್ತವನ್ನು ಖಾತರಿಗೊಳಿಸುತ್ತದೆ.

ಹಿರಿಯ ನಾಗರಿಕರ ಸೇವಿಂಗ್‌ ಸ್ಕೀಮ್‌

ಹಿರಿಯ ನಾಗರಿಕರ ಉಳಿತಾಯ ಯೋಜನೆಯು ಸರ್ಕಾರಿ ಬೆಂಬಲಿತ ನಿವೃತ್ತಿ ನಂತರ ಉಪಯೋಗಕ್ಕೆ ಬರುವ ಉತ್ತಮ ಸ್ಕೀಮ್‌ ಆಗಿದೆ. ಇದು ಮೂರು ತಿಂಗಳಿಗೊಮ್ಮೆ ಪಾವತಿಸುವ ನಿವೃತ್ತಿ ನಂತರ ನಿಯಮಿತ ಆದಾಯದ ಪ್ರವೇಶದ ಜೊತೆಗೆ ತೆರಿಗೆ ಪ್ರಯೋಜನಗಳನ್ನೂ ನೀಡುತ್ತದೆ. ಈ ಸ್ಕೀಮ್‌ನಲ್ಲಿ ನೀವು ಜಂಟಿ ಖಾತೆಯನ್ನಾದರೂ ತೆರೆಯಬಹುದು, ಪ್ರತ್ಯೇಕ ಖಾತೆಯನ್ನಾದರೂ ತೆರೆಯಬಹುದು.

ಹಿರಿಯ ನಾಗರಿಕರ ಉಳಿತಾಯ ಯೋಜನೆ ವಿಸ್ತರಣೆ, ಬಡ್ಡಿ ದರದ ಪರಿಷ್ಕೃತ ನಿಯಮಗಳು

ಹಿರಿಯ ನಾಗರಿಕರ ಉಳಿತಾಯ ಯೋಜನೆ ವಿಸ್ತರಣೆಗೆ ಯಾವುದೇ ಮಿತಿ ಇರುವುದಿಲ್ಲ ಎಂದು ಸರ್ಕಾರವು ಅಧಿಸೂಚನೆ ಹೊರಡಿಸಿದೆ. ಖಾತೆದಾರರು 5 ವರ್ಷಗಳ ಯೋಜನೆ ಮಗಿದ ನಂತರ ಇಷ್ಟವಿದ್ದಲ್ಲಿ ಮತ್ತೆ 3 ವರ್ಷಗಳ ಅವಧಿಯಲ್ಲಿ ಖಾತೆಯನ್ನು ವಿಸ್ತರಿಸುವುದನ್ನು ಮುಂದುವರೆಸಬಹುದು. ಇದಕ್ಕೂ ಮುನ್ನ ಈ ರೀತಿ ವಿಸ್ತರಣೆ ಮಾಡಲು ಒಮ್ಮೆ ಮಾತ್ರ ಅವಕಾಶವಿತ್ತು. ಪರಿಷ್ಕೃತ ನಿಯಮಗಳ ಪ್ರಕಾರ SCSS ಖಾತೆಯನ್ನು ವಿಸ್ತರಿಸಿದರೆ, ಠೇವಣಿಯು ಮೆಚ್ಯೂರಿಟಿ ದಿನ ಅಥವಾ ವಿಸ್ತೃತ ಮುಕ್ತಾಯದ ದಿನದಂದು ಯೋಚನೆಗೆ ಅನ್ವಯವಾಗುವ ಬಡ್ಡಿದರವನ್ನು ಗಳಿಸುತ್ತದೆ. ಪರಿಷ್ಕೃತ ನಿಯಮಗಳ ಅಡಿಯಲ್ಲಿ ಹೂಡಿಕೆ ಆರಂಭವಾಗಿ ಒಂದು ವರ್ಷ ಪೂರೈಸುವ ಮುನ್ನವೇ ಖಾತೆಯನ್ನು ಮುಚ್ಚಿದರೆ ಠೇವಣಿಯಿಂದ ಶೇ 1 ರಷ್ಟು ದರ ಕಡಿತವಾಗಲಿದೆ ಎಂದು ಎಕನಾಮಿಕ್ಸ್‌ ಟೈಮ್ಸ್‌ ವರದಿ ಮಾಡಿದೆ.

ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಬಡ್ಡಿ ದರ

ಅಕ್ಟೋಬರ್-ಡಿಸೆಂಬರ್‌ ತ್ರೈಮಾಸಿಕದಲ್ಲಿ ( 3 ತಿಂಗಳ ಅವಧಿಗೆ) ಹಿರಿಯ ನಾಗರಿಕ ಉಳಿತಾಯ ಯೋಜನೆಯು ವಾರ್ಷಿಕವಾಗಿ 8.2% ಬಡ್ಡಿದರವನ್ನು ನೀಡುತ್ತದೆ. ಹಾಗೂ ಹೂಡಿಕೆಯ ಮಿತಿ ಬಗ್ಗೆ ಹೇಳುವುದಾರೆ ಕನಿಷ್ಠ ಹೂಡಿಕೆ ಮಿತಿ 1,000 ಹಾಗೂ ಗರಿಷ್ಠ ಹೂಡಿಕೆ ಮಿತಿ 30 ಲಕ್ಷ ರೂಪಾಯಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ