logo
ಕನ್ನಡ ಸುದ್ದಿ  /  ಜೀವನಶೈಲಿ  /  Nps Vatsalya: ಏನಿದು ಎನ್‌ಪಿಎಸ್‌ ವಾತ್ಸಲ್ಯ? ಅಪ್ರಾಪ್ತ ಮಕ್ಕಳ ಸುಭದ್ರ ಭವಿಷ್ಯಕ್ಕಾಗಿ ಆರಂಭವಾಗಿದೆ ಹೊಸ ಉಳಿತಾಯ ಯೋಜನೆ

NPS Vatsalya: ಏನಿದು ಎನ್‌ಪಿಎಸ್‌ ವಾತ್ಸಲ್ಯ? ಅಪ್ರಾಪ್ತ ಮಕ್ಕಳ ಸುಭದ್ರ ಭವಿಷ್ಯಕ್ಕಾಗಿ ಆರಂಭವಾಗಿದೆ ಹೊಸ ಉಳಿತಾಯ ಯೋಜನೆ

Praveen Chandra B HT Kannada

Jul 23, 2024 02:48 PM IST

google News

NPS Vatsalya: ಏನಿದು ಎನ್‌ಪಿಎಸ್‌ ವಾತ್ಸಲ್ಯ? ಅಪ್ರಾಪ್ತ ಮಕ್ಕಳ ಸುಭದ್ರ ಭವಿಷ್ಯಕ್ಕಾಗಿ ಆರಂಭವಾಗಿದೆ ಹೊಸ ಉಳಿತಾಯ ಯೋಜನೆ

    • What is NPS Vatsalya?: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಕೇಂದ್ರ ಬಜೆಟ್‌ನಲ್ಲಿ ಎನ್‌ಪಿಎಸ್‌ ವಾತ್ಸಲ್ಯ ಯೋಜನೆ ಕುರಿತು ಹೇಳಿದ್ದಾರೆ. ಅಪ್ರಾಪ್ತ ಮಕ್ಕಳ ಸುಭದ್ರ ಭವಿಷ್ಯಕ್ಕಾಗಿ ದೀರ್ಘಕಾಲದ ಉಳಿತಾಯ ಯೋಜನೆಯನ್ನು ಈ ಮೂಲಕ ಘೋಷಿಸಿದ್ದಾರೆ. 
NPS Vatsalya: ಏನಿದು ಎನ್‌ಪಿಎಸ್‌ ವಾತ್ಸಲ್ಯ? ಅಪ್ರಾಪ್ತ ಮಕ್ಕಳ ಸುಭದ್ರ ಭವಿಷ್ಯಕ್ಕಾಗಿ ಆರಂಭವಾಗಿದೆ ಹೊಸ ಉಳಿತಾಯ ಯೋಜನೆ
NPS Vatsalya: ಏನಿದು ಎನ್‌ಪಿಎಸ್‌ ವಾತ್ಸಲ್ಯ? ಅಪ್ರಾಪ್ತ ಮಕ್ಕಳ ಸುಭದ್ರ ಭವಿಷ್ಯಕ್ಕಾಗಿ ಆರಂಭವಾಗಿದೆ ಹೊಸ ಉಳಿತಾಯ ಯೋಜನೆ

NPS Vatsalya Explained: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಕೇಂದ್ರ ಬಜೆಟ್‌ನಲ್ಲಿ ಎನ್‌ಪಿಎಸ್‌ ವಾತ್ಸಲ್ಯ ಯೋಜನೆ ಕುರಿತು ಹೇಳಿದ್ದಾರೆ. ಅಪ್ರಾಪ್ತ ಮಕ್ಕಳ ಸುಭದ್ರ ಭವಿಷ್ಯಕ್ಕಾಗಿ ದೀರ್ಘಕಾಲದ ಉಳಿತಾಯ ಯೋಜನೆಯನ್ನು ಈ ಮೂಲಕ ಘೋಷಿಸಿದ್ದಾರೆ. "ಆರಂಭದಲ್ಲಿ ಮಕ್ಕಳ ಹೆತ್ತವರು ಮತ್ತು ಪೋಷಕರು ಆರಂಭಿಸುವ ಯೋಜನೆ ಇದಾಗಿದೆ" ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ಎನ್‌ಪಿಎಸ್‌ ವಾತ್ಸಲ್ಯ ಯೋಜನೆ ಎಂದರೇನು?

ಈಗಾಗಲೇ ಇರುವ ನ್ಯಾಷನಲ್‌ ಪೆನ್ಷನ್‌ ಸ್ಕೀಮ್‌ (ಎನ್‌ಪಿಎಸ್‌)ನ ಒಂದು ಆವೃತ್ತಿ ಇದಾಗಿದೆ. ವಿಶೇಷವಾಗಿ ದೇಶದ ಯುವ ಜನತೆಯ ಭವಿಷ್ಯಕ್ಕಾಗಿ ಈ ಯೋಜನೆ ರೂಪಿಸಲಾಗಿದೆ. ಈ ಯೋಜನೆಯನ್ವಯ ಹೆತ್ತವರು ಅಥವಾ ಪೋಷಕರು ತಮ್ಮ ಅಪ್ರಾಪ್ತ ಮಕ್ಕಳ ಹೆಸರಿನಲ್ಲಿ ಖಾತೆ ತೆರೆಯಬಹುದು. ತಮ್ಮ ನಿವೃತ್ತಿ ಉಳಿತಾಯವನ್ನು ಈ ಖಾತೆಗೆ ಹಾಕಲು ಆರಂಭಿಸಬಹುದು. ಮಕ್ಕಳು ಪ್ರಾಪ್ತ ವಯಸ್ಸಿಗೆ ಬಂದಾಗ ಆ ಯೋಜನೆಯನ್ನು ನಾನ್‌ ಎನ್‌ಪಿಎಸ್‌ ಯೋಜನೆಯಾಗಿ ಬದಲಾಯಿಸಬಹುದು. ಈ ಮೂಲಕ ಮಕ್ಕಳಿಗೆ ದೀರ್ಘಾವಧಿಯ ಎನ್‌ಪಿಎಸ್‌ ಹೂಡಿಕೆ ಇದರಿಂದ ಸಾಧ್ಯವಾಗುತ್ತದೆ.

ಎನ್‌ಪಿಎಸ್‌ ಯೋಜನೆಯಿಂದ ಏನು ಲಾಭ?

ಈ ಸ್ಕೀಮ್ನ ಪ್ರಮುಖ ಪ್ರಯೋಜನ ಫ್ಲೆಕ್ಸಿಬಿಲಿಟಿ. ಅಪ್ರಾಪ್ತ ಮಗಳು ಅಥವಾ ಮಗ 18 ವರ್ಷ ವಯಸ್ಸಿಗೆ ತಲುಪಿದಾಗ ಹೆತ್ತವರು ಈ ಖಾತೆಯನ್ನು ಎನ್‌ಪಿಎಸ್‌ ಖಾತೆಯಾಗಿ ಬದಲಾಯಿಸಬಹುದು. ಈ ಮೂಲಕ ಮಕ್ಕಳು ಅತ್ಯಂತ ಕಿರಿಯ ವಯಸ್ಸಿನಿಂದಲೇ ಎನ್‌ಪಿಎಸ್‌ ಹೂಡಿಕೆ ಆರಂಭಿಸುವಂತೆ ಆಗುತ್ತದೆ. ಇದರಿಂದ ಮುಂದಿನ ತಲೆಮಾರಿನವರಿಗೆ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ಪ್ರಯೋಜನಗಳು ದೊರಕುತ್ತವೆ. ಭಾರತೀಯ ಕುಟುಂಬಗಳಲ್ಲಿ ಆರಂಭಿಕ ಹಂತದಲ್ಲಿಯೇ ಉಳಿತಾಯ ಮತ್ತು ಹೂಡಿಕೆ ಅಭ್ಯಾಸಗಳನ್ನು ಬೆಳೆಸಿಕೊಳ್ಳಲು ಇದು ಸಹಾಯ ಮಾಡುತ್ತದೆ.

ಕೇಂದ್ರ ಸರಕಾರವು ನ್ಯಾಷನಲ್‌ ಪೆನ್ಷನ್‌ ಸ್ಕೀಮ್‌ ಮೂಲಕ ನಿವೃತ್ತಿ ಸಮಯದಲ್ಲಿ ವ್ಯಕ್ತಿಗಳಿಗೆ ಒಂದಿಷ್ಟು ಆದಾಯ ಪಡೆಯುವ ಅವಕಾಶ ನೀಡಿತ್ತು. ಇದನ್ನು ಪಿಂಚಣಿ ನಿಧಿ ನಿಯಂತ್ರಕ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಪಿಎಫ್‌ಆರ್‌ಡಿಎ) ಪಿಎಫ್‌ಆರ್‌ಡಿಎ ಕಾಯಿದೆ 2013 ಅಡಿಯಲ್ಲಿ ಸ್ಥಾಪಿಸಿದೆ. ಇದೀಗ ಈ ಯೋಜನೆಯ ಉಪಯೋಜನೆಯಾಗಿ ಎನ್‌ಪಿಎಸ್‌ ವಾತ್ಸಲ್ಯ ಆರಂಭಿಸಲು ಉದ್ದೇಶಿಸಲಾಗಿದೆ.

ಎನ್‌ಪಿಎಸ್‌ ವಾತ್ಸಲ್ಯ ಯೋಜನೆ

  • ಮಕ್ಕಳ ಹೆಸರಿನಲ್ಲಿ ಪಿಂಚಣಿ ಹಣ ಹೂಡಿಕೆ ಆರಂಭಿಸುವಂತಹ ಯೋಜನೆ ಇದಾಗಿದೆ.
  • ಹೆತ್ತವರು/ ಪೋಷಕರು ತಮ್ಮ ಅಪ್ರಾಪ್ತ ಮಕ್ಕಳ ಹೆಸರಿನಲ್ಲಿ ಎನ್‌ಪಿಎಸ್‌ ವಾತ್ಸಲ್ಯ ಯೋಜನೆಯಲ್ಲಿ ಹಣ ಹೂಡಿಕೆ ಮಾಡಬಹುದು.
  • ಮಕ್ಕಳು ಪ್ರಾಪ್ತ ವಯಸ್ಸಿಗೆ ಬಂದಾಗ ಇದನ್ನು ನಾನ್‌ ಎನ್‌ಪಿಎಸ್‌ ಖಾತೆಯಾಗಿ ಬದಲಾಯಿಸುವ ಅವಕಾಶ ಹೆತ್ತವರಿಗೆ ಇದೆ.

ಎನ್‌ಪಿಎಸ್‌ ಯೋಜನೆ ಎಂದರೇನು?

ಎನ್‌ಪಿಎಸ್‌ ಅಡಿ ವ್ಯಕ್ತಿಯೊಬ್ಬರು ಸಿಆರ್‌ಎ ಖಾತೆ ತೆಗೆಯಬೇಕು. ಈ ರೀತಿ ಖಾತೆ ಹೊಂದಿರುವವರಿಗೆ ವಿಶಿಷ್ಟವಾದ ಶಾಶ್ವತ ನಿವೃತ್ತಿ ಕಾತೆ ಸಂಖ್ಯೆ (ಪಿಆರ್‌ಎಎನ್‌) ನೀಡಲಾಗುತ್ತದೆ. ಎನ್‌ಪಿಎಸ್‌ನಲ್ಲಿ ಶ್ರೇಣಿ ಒಂದು ಮತ್ತು ಶ್ರೇಣಿ ಎರಡು ಎಂಬ ಎರಡು ವಿಧಗಳಿವೆ. ಎನ್‌ಪಿಎಸ್‌ ಶ್ರೇಣಿ 1ರಲ್ಲಿ ನಿವೃತ್ತಿಗಾಗಿ ಮಾಡಿರುವ ಹಣವನ್ನು ಹಿಂತೆಗೆದುಕೊಳ್ಳುವ ಅವಕಾಶ ಇರುವುದಿಲ್ಲ. ಶ್ರೇಣಿ ಎರಡರ ಎನ್‌ಪಿಎಸ್‌ ಖಾತೆಯಲ್ಲಿ ತಮ್ಮ ಉಳಿತಾಯವನ್ನು ಯಾವಾಗ ಬೇಕಾದರೂ ಹಿಂತೆಗೆದುಕೊಳ್ಳಲು ಅವಕಾಶವಿರುತ್ತದೆ. ಒಟ್ಟಾರೆ ಉದ್ಯೋಗಿಯು ನಿವೃತ್ತಿಯಾದ ಬಳಿಕ ಖಾತೆಯಲ್ಲಿರುವ ಎಲ್ಲಾ ಹಣವನ್ನು ಅಥವಾ ತಿಂಗಳಿಗೆ ಇಂತಿಷ್ಟು ಎಂದು ಪಡೆಯುವ ಅವಕಾಶವನ್ನು ಎನ್‌ಪಿಎಸ್‌ ಒದಗಿಸುತ್ತದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ