logo
ಕನ್ನಡ ಸುದ್ದಿ  /  ಜೀವನಶೈಲಿ  /  Green Ganesha : ಲೀಫ್‌ ಕಟ್ಟಿಂಗ್‌ ಆರ್ಟ್‌ನಲ್ಲಿ ಮೂಡಿದ ಗಣಪ; ಇದು ಕಿರಣ್‌ ಕೈಚಳಕ

Green Ganesha : ಲೀಫ್‌ ಕಟ್ಟಿಂಗ್‌ ಆರ್ಟ್‌ನಲ್ಲಿ ಮೂಡಿದ ಗಣಪ; ಇದು ಕಿರಣ್‌ ಕೈಚಳಕ

Umesh Kumar S HT Kannada

Aug 31, 2022 03:38 PM IST

google News

ಲೀಫ್‌ ಆರ್ಟ್‌ನ ಉದಯೋನ್ಮುಖ ಕಲಾವಿದ, ವಿದ್ಯಾರ್ಥಿ ಕಿರಣ್‌ ಸಬ್ಬಣಕೋಡಿ ಗಣೇಶನ ಹಬ್ಬದ ಸಂಭ್ರಮವನ್ನು HTಕನ್ನಡದ ಜತೆಗೆ ಹಂಚಿಕೊಂಡಿರುವುದು ಹೀಗೆ..

    • ನಾಡಿನಾದ್ಯಂತ ಗಣೇಶನ ಹಬ್ಬದ ಸಂಭ್ರಮ. ಈ ಸಂಭ್ರಮವನ್ನು ವಿದ್ಯಾರ್ಥಿ, ಲೀಫ್‌ ಆರ್ಟ್‌ನ ಉದಯೋನ್ಮುಖ ಕಲಾವಿದ ಕಿರಣ್‌ ಸಬ್ಬಣಕೋಡಿ HTಕನ್ನಡದ ಜತೆಗೆ ವಿಶೇಷ ರೀತಿಯಲ್ಲಿ ಹಂಚಿಕೊಂಡಿದ್ದಾರೆ. ಲೀಫ್‌ ಆರ್ಟ್‌ ಮೂಲಕ ಎಲೆಯ ಮೇಲೆ ಗಣಪನನ್ನು ಮೂಡಿಸಿ ಸಂಭ್ರಮಿಸಿದ್ದಾರೆ. 
ಲೀಫ್‌ ಆರ್ಟ್‌ನ ಉದಯೋನ್ಮುಖ ಕಲಾವಿದ, ವಿದ್ಯಾರ್ಥಿ ಕಿರಣ್‌ ಸಬ್ಬಣಕೋಡಿ ಗಣೇಶನ ಹಬ್ಬದ ಸಂಭ್ರಮವನ್ನು HTಕನ್ನಡದ ಜತೆಗೆ ಹಂಚಿಕೊಂಡಿರುವುದು ಹೀಗೆ..
ಲೀಫ್‌ ಆರ್ಟ್‌ನ ಉದಯೋನ್ಮುಖ ಕಲಾವಿದ, ವಿದ್ಯಾರ್ಥಿ ಕಿರಣ್‌ ಸಬ್ಬಣಕೋಡಿ ಗಣೇಶನ ಹಬ್ಬದ ಸಂಭ್ರಮವನ್ನು HTಕನ್ನಡದ ಜತೆಗೆ ಹಂಚಿಕೊಂಡಿರುವುದು ಹೀಗೆ.. (UK)

ಬೆಂಗಳೂರು: ನಾಡಿನ ಉದ್ದಗಲಕ್ಕೂ ಗಣಪತಿ ಹಬ್ಬದ ಸಂಭ್ರಮ, ಸಡಗರ. ಸಾರ್ವಜನಿಕ ಗಣೇಶೋತ್ಸವಗಳೂ ಗಮನಸೆಳೆಯುತ್ತಿವೆ. ಇವುಗಳ ನಡುವೆ, ಕಲಾವಿದರು ಕೂಡ ತಮ್ಮದೇ ಆದ ರೀತಿಯಲ್ಲಿ ಗಣೇಶನ ಹಬ್ಬದ ಸಂಭ್ರಮ ಆಚರಿಸುತ್ತಾರೆ. ಈ ಪೈಕಿ ಲೀಫ್‌ ಆರ್ಟ್‌ನ ಉದಯೋನ್ಮುಖ ಕಲಾವಿದ, ವಿದ್ಯಾರ್ಥಿ ಕಿರಣ್‌ ಸಬ್ಬಣಕೋಡಿ ಗಣೇಶನ ಹಬ್ಬದ ಸಂಭ್ರಮವನ್ನು ನಮ್ಮೊಂದಿಗೆ ವಿಶೇಷವಾಗಿ ಹಂಚಿಕೊಂಡಿದ್ದಾರೆ.

ಎಲೆಯ ಮೇಲೆ ಗಣಪನನ್ನು ಮೂಡಿಸಿ ಅದರ ಫೋಟೋ, ವಿಡಿಯೋಗಳನ್ನು ಕೂಡ ಶೇರ್‌ ಮಾಡಿದ್ದಾರೆ. ಕಳೆದ ಎರಡು ವರ್ಷಗಳಿಂದ ಅವರು ಲೀಫ್‌ ಆರ್ಟ್‌ ಮಾಡುತ್ತಿದ್ದು, ಈಗ ಜನಮೆಚ್ಚುಗೆ ಪಡೆಯುವಷ್ಟರ ಮಟ್ಟಿಗೆ ಪಳಗಿದ್ದಾರೆ.

ಲೀಫ್‌ ಆರ್ಟ್‌ ಎಂದರೇನು?: ಲೀಫ್‌ ಆರ್ಟ್‌ ಅಥವಾ ಲೀಫ್‌ ಕಟ್ಟಿಂಗ್‌ ಆರ್ಟ್‌ ಅಥವಾ ಲೀಫ್‌ ಕಾರ್ವಿಂಗ್‌ ಎಂಬ ಈ ಕಲೆಯು ನವೀನ ಕಲೆಯ ವ್ಯಾಪ್ತಿಗೆ ಒಳಪಡುತ್ತಿರುವುದಾಗಿ ಹೇಳಲಾಗುತ್ತಿದೆ. ಇದರ ಮೂಲ ಚೀನಾ. 1994 ರಲ್ಲಿ ಕಲಾವಿದ ಹುವಾಗ್ ತೈ ಶೆಂಗ್ ತನ್ನ ಕೆಲಸವನ್ನು ಗುರುತಿಸಲು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ದಾಖಲಾದ ಬಳಿಕ ಈ ಕಲೆ ಜನಪ್ರಿಯತೆಯನ್ನು ಗಳಿಸಿತು ಎಂಬ ಉಲ್ಲೇಖ ವಿಕಿಪೀಡಿಯಾದಲ್ಲಿದೆ.

ಎಲೆಯಲ್ಲಿ ಚಿತ್ರವನ್ನು ಕೆತ್ತುವ ಈ ಕಲೆ ಬಹುಬೇಗ ಎಲ್ಲರನ್ನೂ ತನ್ನತ್ತ ಆಕರ್ಷಿಸುತ್ತದೆ. ಇದಕ್ಕೆ ಹೆಚ್ಚಿನ ಶ್ರದ್ಧೆ ಮತ್ತು ಪರಿಶ್ರಮ ಬೇಕು ಎನ್ನುವ ಕಿರಣ್‌, ಎರಡು ವರ್ಷ ಹಿಂದೆ ಕರೋನಾ ಸಂಕಷ್ಟದ ಅವಧಿಯಲ್ಲಿ ಈ ಕಲೆಯನ್ನು ಕಲಿತದ್ದಾಗಿ ಹೇಳಿದ್ದಾರೆ. ಪಿಯುಸಿ ತನಕದ ಶಿಕ್ಷಣ ಪುತ್ತೂರಿನ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಮಾಡಿದ ಅವರು, ಪ್ರಸ್ತುತ ಮಂಗಳೂರಿನ ಶ್ರೀನಿವಾಸ್‌ ಸ್ಕೂಲ್‌ ಆಫ್‌ ಆರ್ಕಿಟೆಕ್ಚರ್‌ನಲ್ಲಿ ಬಿ.ಆರ್ಕಿಟೆಕ್ಚರ್‌ನಲ್ಲಿ ನಾಲ್ಕನೇ ವರ್ಷ ವ್ಯಾಸಂಗ ಮಾಡುತ್ತಿದ್ದಾರೆ.

ಅವರ ಕೈಚಳಕದಲ್ಲಿ ಮೂಡಿದ ಗಣಪನನ್ನು ನೋಡುವುದಕ್ಕೆ ಈ ಕೆಳಗಿನ ವಿಡಿಯೋ ವೀಕ್ಷಿಸಬಹುದು. ಇದರಲ್ಲಿ ಅವರು ಲೀಫ್‌ ಆರ್ಟ್‌ ಬಗ್ಗೆ ಮತ್ತು ಅವರು ಯಾವಾಗ ಈ ವಿನೂತನ ಕಲೆ ಅಭ್ಯಾಸ ಮಾಡಲಾರಂಭಿಸಿದರು? ಇದರ ವಿಶೇಷತೆ ಏನು ಎಂಬಿತ್ಯಾದಿ ವಿವರವನ್ನೂ ನೀಡಿದ್ದಾರೆ.

ಎಲೆಯಲ್ಲಿ ಮೂಡಿದ ಗಣಪನ ಚಿತ್ರದ ಜತೆಗೆ ಈ ಮೊದಲೇ ತಾನು ಮಾಡಿದ ಇನ್ನೂ ಕೆಲವು ಲೀಫ್‌ ಆರ್ಟ್‌ಗಳ ಫೋಟೋವನ್ನು ಅವರು ಶೇರ್‌ ಮಾಡಿದ್ದಾರೆ. ಅವುಗಳಲ್ಲಿ ಕೆಲವು ಸೆಲೆಬ್ರಿಟಿಗಳದ್ದು ಇದ್ದರೆ, ಇನ್ನು ಕೆಲವು ಜನಸಾಮಾನ್ಯರದ್ದೂ, ಶಾಸರದ್ದೂ ಇದೆ.

<p>ಕಿರಣ್‌ ಕೈಚಳಕದಲ್ಲಿ ಎಲೆಯ ಮೇಲೆ ಮೂಡಿದ ಗಣಪ&nbsp;</p>

ಇದೇ ರೀತಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌) ಸಂಸ್ಥಾಪಕ ಡಾ.ಕೇಶವ ಬಲಿರಾಮ್‌ ಹೆಡ್ಗೇವಾರ್‌ ಚಿತ್ರವನ್ನೂ ಎಲೆಯ ಮೇಲೆ ಮೂಡಿಸಿದ್ದಾರೆ ಕಿರಣ್‌.

<p>ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌) ಸಂಸ್ಥಾಪಕ ಡಾ.ಕೇಶವ ಬಲಿರಾಮ್‌ ಹೆಡ್ಗೇವಾರ್‌</p>

ಚಿತ್ರಕಲೆಯಲ್ಲೂ ಆಸಕ್ತಿ ಹೊಂದಿರುವ ಕಿರಣ್‌, ಇನ್‌ಸ್ಟಾಗ್ರಾಂ ಪುಟದಲ್ಲೂ ಲೀಫ್‌ ಆರ್ಟ್‌ನ ವಿವಿಧ ಚಿತ್ರಗಳನ್ನು ಪೋಸ್ಟ್‌ ಮಾಡಿದ್ದಾರೆ. ಇದರ ಜತೆಗೆ ತಾವು ಲೀಫ್‌ ಆರ್ಟ್‌ ಮಾಡುವಾಗ ಅದರ ವಿಡಿಯೋ ತೆಗೆದು ಎಡಿಟ್‌ ಮಾಡಿ ಅದನ್ನೂ ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿದ್ದಾರೆ.

ಹೆಚ್ಚಿನ ಸುದ್ದಿಗಳಿಗೆ ನಮ್ಮನ್ನು ಫೇಸ್‌ಬುಕ್‌ ಮತ್ತು ಟ್ವಿಟರ್‌ ನಲ್ಲಿ ಫಾಲೋಮಾಡಿ.

ಗಮನಿಸಬಹುದಾದ ವಿಷಯಗಳಿವು…

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ