logo
ಕನ್ನಡ ಸುದ್ದಿ  /  ಜೀವನಶೈಲಿ  /  Gum Pain And Oral Health: ವಸಡು ನೋವೇ: ಬಾಯಿಯ ಆರೋಗ್ಯ ಕಾಪಾಡಿಕೊಳ್ಳಿ

gum pain and oral health: ವಸಡು ನೋವೇ: ಬಾಯಿಯ ಆರೋಗ್ಯ ಕಾಪಾಡಿಕೊಳ್ಳಿ

HT Kannada Desk HT Kannada

Feb 13, 2023 07:19 PM IST

google News

Gum problem and oral health

    • ಹಲ್ಲಿನ ಆರೋಗ್ಯದಷ್ಟೇ ವಸಡಿನ ಆರೋಗ್ಯವೂ ಬಹಳ ಮುಖ್ಯ. ವಸಡಿನ ಸೌಂದರ್ಯ ಹಾಗೂ ಆರೋಗ್ಯ ಸರಿಯಿದ್ದರೆ ಹಲ್ಲು ಹಾಗೂ ಮುಖದ ಸೌಂದರ್ಯ ಚೆನ್ನಾಗಿರುತ್ತದೆ.  ಹಾಗಾದರೆ ವಸಡಿನ ಸಮಸ್ಯೆ ಬಗೆಹರಿಸಿ, ವಸಡಿನ ಆರೋಗ್ಯ ವೃದ್ಧಿಸಿಕೊಳ್ಳುವುದು ಹೇಗೆ? ಇಲ್ಲಿವೆ ಕೆಲವು ಟಿಪ್ಸ್‌.
Gum problem and oral health
Gum problem and oral health

ನಿಮ್ಮ ವಸಡಿನಲ್ಲಿ ನೋವಿದೆಯೇ? ಈ ಡೈಲಾಗ್‌ ಅನ್ನು ನೀವು ಜಾಹೀರಾತುಗಳಲ್ಲಿ ಕೇಳಿರಬಹುದು. ವಸಡಿನಲ್ಲಿ ನೋವು ಬರುವುದು, ಬ್ರಷ್ ಮಾಡುವಾಗ ರಕ್ತ ಸೋರುವುದು, ಐಸ್‌ಕ್ರೀಮ್‌ ಅಥವಾ ತಣ್ಣನೆಯ ವಸ್ತುಗಳನ್ನು ತಿನ್ನುವಾಗ ಜುಮ್ ಎನ್ನುವುದು, ವಸಡಿನಲ್ಲಿ ಊತ, ಬಾಯಿಯ ದುರ್ಗಂಧ ಈ ಎಲ್ಲದಕ್ಕೂ ವಸಡಿನ ಸಮಸ್ಯೆಯೇ ಕಾರಣ.

ಬಾಯಿಯ ಆರೋಗ್ಯ ರಕ್ಷಣೆಯಲ್ಲಿ ಜೀವನಶೈಲಿಯೂ ಪ್ರಮುಖ ಪಾತ್ರ ವಹಿಸುತ್ತದೆ. ನಮ್ಮ ಡಯೆಟ್‌, ವಯಸ್ಸು ಹಾಗೂ ಬಾಯಿಯ ಕಾಳಜಿ ಈ ಎಲ್ಲವೂ ವಸಡಿನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.

ಹಲ್ಲಿನ ಆರೋಗ್ಯದಷ್ಟೇ ವಸಡಿನ ಆರೋಗ್ಯವೂ ಬಹಳ ಮುಖ್ಯ. ವಸಡಿನ ಸೌಂದರ್ಯ ಹಾಗೂ ಆರೋಗ್ಯ ಸರಿಯಿದ್ದರೆ ಹಲ್ಲು ಹಾಗೂ ಮುಖದ ಸೌಂದರ್ಯ ಚೆನ್ನಾಗಿರುತ್ತದೆ. ವಸಡಿನ ಆರೋಗ್ಯ ಕಾಪಾಡಿಕೊಳ್ಳುವುದು ಕಷ್ಟದ ಕೆಲಸವಲ್ಲ. ಹಾಗಾದರೆ ವಸಡಿನ ಸಮಸ್ಯೆ ಬಗೆಹರಿಸಿ, ವಸಡಿನ ಆರೋಗ್ಯ ವೃದ್ಧಿಸಿಕೊಳ್ಳುವುದು ಹೇಗೆ? ಇಲ್ಲಿವೆ ಕೆಲವು ಟಿಪ್ಸ್‌.

ವಸಡಿನ ರಕ್ಷಣೆಗೆ ಸಾಮಾನ್ಯ ಎನ್ನಿಸುವ ಕೆಲವು ಸಲಹೆ ಹೀಗಿವೆ:

* ಹಲ್ಲುಗಳನ್ನು ಸರಿಯಾದ ಕ್ರಮದಲ್ಲಿ ಬ್ರಷ್ ಮಾಡಿ. ಹಲ್ಲು ಹಾಗೂ ವಸಡಿನ ಆರೋಗ್ಯ ರಕ್ಷಣೆಯಲ್ಲಿ ಬ್ರಷ್ ಮಾಡುವ ವಿಧಾನವೇ ಮುಖ್ಯ

* ದಿನಕ್ಕೆ ಎರಡು ಬಾರಿ ಬ್ರಷ್ ಮಾಡಿ.

* ತಿಂಗಳಿಗೊಮ್ಮೆ ಟೂತ್‌ಬ್ರಷ್ ಬದಲಿಸಿದರೆ ಉತ್ತಮ.

ಪ್ರತಿನಿತ್ಯ ಹಲ್ಲುಗಳ ನಡುವೆ ಸ್ವಚ್ಛಗೊಳಿಸಿ

ಊಟ ಅಥವಾ ತಿಂಡಿ ಸೇವಿಸಿದ ನಂತರ ಹಲ್ಲುಗಳ ನಡುವಿನ ಜಾಗದಲ್ಲಿ ಆಹಾರದ ತುಣುಕುಗಳು ಸಿಕ್ಕಿ ಹಾಕಿಕೊಳ್ಳುವುದು ಸಹಜ. ಈ ತುಣುಕುಗಳು ಹೊರಗೆ ಬಾರದೆ ಕಿರಿಕಿರಿ ಮಾಡುತ್ತದೆ. ಅಲ್ಲದೇ ಇದು ವಸಡಿನ ಊತಕ್ಕೂ ಕಾರಣವಾಗಬಹುದು. ಹಲ್ಲಿನ ನಡುವೆ ಸಿಕ್ಕಿಕೊಂಡ ಪ್ಲೇಕ್ ಅಥವಾ ತುಣುಕುಗಳನ್ನು ತೆಗೆಯಲು ಬ್ರಷ್ ಉಪಯೋಗಿಸುತ್ತೇವೆ. ಆದರೆ ಕೆಲವೊಮ್ಮೆ ಬ್ರಷ್ ತಲುಪದ ಜಾಗದಲ್ಲಿ ಅವು ಸಿಕ್ಕಿ ಹಾಕಿಕೊಳ್ಳುತ್ತವೆ. ಹಾಗಾಗಿ ಪ್ರತಿದಿನ ಹಲ್ಲುಗಳ ನಡುವೆ ಸ್ವಚ್ಛ ಮಾಡಿಕೊಳ್ಳುವುದು ಅಗತ್ಯ. ಬಹಳ ಸಮಯದಿಂದ ಹಲ್ಲುಗಳ ನಡುವೆ ಸಿಲುಕಿ ಇರುವ ಆಹಾರದ ತುಣುಕನ್ನು ಸ್ವಚ್ಛಗೊಳಿಸಲು ಸಾಧ್ಯವಾಗದೇ ಅದು ಹಲ್ಲಿನ ಸಂಧಿನಲ್ಲಿ ಸೋಂಕು ಉಂಟಾಗಲು ಕಾರಣವಾಗಬಹುದು. ಅಂತಹ ಸಂದರ್ಭದಲ್ಲಿ ತಜ್ಞ ವೈದ್ಯರ ಬಳಿ ತೋರಿಸುವುದು ಉತ್ತಮ.

ದೂಮಪಾನ ನಿಷೇದಿಸಿ

ದೂಮಪಾನ ಮಾಡುವುದು ಶ್ವಾಸಕೋಶಕ್ಕೆ ಮಾತ್ರವಲ್ಲ ಹಲ್ಲು ಹಾಗೂ ವಸಡಿನ ಆರೋಗ್ಯ ಹದಗೆಡಲು ಕಾರಣವಾಗುತ್ತದೆ. ಇದರೊಂದಿಗೆ ಪಾನ್, ಗುಟ್ಕಾದಂತಹ ತಂಬಾಕಿನ ಉತ್ಪನ್ನಗಳು ವಸಡಿನ ಸಮಸ್ಯೆಗೆ ಕಾರಣವಾಗುತ್ತವೆ. ಇದರಿಂದ ವಸಡಿನಲ್ಲಿ ಆದ ಗಾಯ ಗುಣವಾಗದೆ ಕೀವು ಉಂಟಾಗಬಹುದು. ವಸಡಿನಲ್ಲಿ ರಕ್ತಸ್ರಾವ ಆಗುತ್ತಿದ್ದರೆ ತಕ್ಷಣಕ್ಕೆ ದೂಮಪಾನಕ್ಕೆ ಗುಡ್‌ಬಾಯ್ ಹೇಳುವುದು ಅತಿ ಅಗತ್ಯ.

ನಾವು ಸೇವಿಸುವ ಆಹಾರವೂ ಮುಖ್ಯ

ಬಾಯಿಯ ಆರೋಗ್ಯಕ್ಕೆ ನಾವು ಸೇವಿಸುವ ಆಹಾರದ ಪಾತ್ರವೂ ದೊಡ್ಡದು. ಯಾವ ರೀತಿಯ ಆಹಾರವನ್ನು ಸೇವಿಸುತ್ತೇವೆ, ಬಾಯಿ ಆರೋಗ್ಯಕ್ಕೆ ಪೂರಕ ಯಾವುದು, ಬಾಯಿ ಅನಾರೋಗ್ಯಕ್ಕೆ ಯಾವುದು ಕಾರಣವಾಗಬಹುದು ಈ ರೀತಿಯ ಅರಿವು ನಮಗಿರಬೇಕು. ನಾವು ಸೇವಿಸುವ ಆಹಾರದಲ್ಲಿ ಸಕ್ಕರೆ ಅಂಶ ಅಧಿಕವಾಗಿದ್ದರೆ ಅದು ಹಲ್ಲಿನ ಹುಳುಕಿಗೆ ಕಾರಣವಾಗಬಹುದು. ಹಸಿರು ತರಕಾರಿ ಹಾಗೂ ಪ್ರೊಟೀನ್ ಅಂಶ ಇರುವ ಆಹಾರ ಪದಾರ್ಥಗಳ ಸೇವನೆ ಹಲ್ಲಿನ ಆರೋಗ್ಯಕ್ಕೆ ಬಹಳ ಮುಖ್ಯ.

ಆಗಾಗ್ಗೆ ದಂತ ಚಿಕಿತ್ಸೆ ಮಾಡಿಸಿಕೊಳ್ಳಿ

ಹಲ್ಲು ನೋವು ಬಂದಾಗ ಮಾತ್ರ ವೈದ್ಯರ ಬಳಿ ಓಡುವುದು ನಮಗೆ ಅಭ್ಯಾಸ. ಆದರೆ ಈ ಅಭ್ಯಾಸ ಸಲ್ಲ. ಬದಲಿಗೆ ಆಗಾಗ್ಗೆ ದಂತವೈದ್ಯರ ಬಳಿ ತೆರಳಿ ಕ್ಲೀನಿಂಗ್ ಮಾಡಿಸಿಕೊಳ್ಳುವುದು ಅಗತ್ಯ. ದಂತ ಚಿಕಿತ್ಸಾಲಯದಲ್ಲಿ ಹಲ್ಲಿನ ಫ್ಲೋಸ್ ಮಾಡಿಸುವುದರಿಂದ ವಸಡಿನ ಹಾಗೂ ಹಲ್ಲಿನ ನಡುವೆ ಹುಳುಕು, ಊತ ಉಂಟಾಗುವುದನ್ನು ತಡೆಯಬಹುದು. ಬ್ರಷ್ ತಲುಪದ ಜಾಗದಲ್ಲಿ ಕೂತ ಆಹಾರದ ತುಣುಕನ್ನು ಸ್ವಚ್ಛಗೊಳಿಸಲು ಕ್ಲೀನಿಂಗ್‌ನಿಂದ ಸಾಧ್ಯ.

ಒಟ್ಟಾರೆ ವಸಡು ಹಾಗೂ ಹಲ್ಲಿನ ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ವಿಧಾನಗಳನ್ನು ಅನುಸರಿಸಬೇಕು. ಇದರಿಂದ ಸೋಂಕು, ಹುಳುಕು ಹಾಗೂ ಬಾಯಿಯ ದುರ್ಗಂದದಂತಹ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ