Benefits of Neem: ದೇಹ, ತ್ವಚೆಯ ಆರೋಗ್ಯಕ್ಕೆ ಬೇವು ಎಷ್ಟು ಉಪಯೋಗಕಾರಿ ನಿಮಗೆ ತಿಳಿದಿದೆಯೇ..?
Jul 24, 2022 02:16 PM IST
ಬೇವಿನಿಂದಾಗುವ ಉಪಯೋಗಗಳು (Freepik , Pixabay)
- ಎಲೆಗಳು, ಕಾಂಡ, ಹೂವುಗಳು, ತೊಗಟೆ, ಕೊಂಬೆಗಳು ಅಥವಾ ಬೀಜಗಳು ಸೇರಿದಂತೆ ಬೇವಿನ ಮರದ ಪ್ರತಿಯೊಂದು ಭಾಗವು ಅನೇಕ ಔಷಧೀಯ ಪ್ರಯೋಜನಗಳನ್ನು ಹೊಂದಿದೆ. ಅದಕ್ಕಾಗಿಯೇ ಅದನ್ನು ಪ್ರಾಚೀನ ಕಾಲದಿಂದಲೂ ಔಷಧೀಯ ಉದ್ದೇಶಗಳಿಗಾಗಿ ಬಳಸಲಾಗುತ್ತದೆ.
ಹಿಂದಿನ ಕಾಲದಲ್ಲಿ ಬಹುತೇಕ ಎಲ್ಲರೂ ಬೇವಿನ ಕಡ್ಡಿಯಿಂದ ಹಲ್ಲು ಉಜ್ಜುತ್ತಿದ್ದರು ಎಂಬುದನ್ನು ಕೇಳಿದ್ದೇವೆ. ಬೇವು ಕಹಿಯಾಗಿದ್ದರೂ, ಅದರಲ್ಲಿ ಇರುವ ಆರೋಗ್ಯಕರ ಗುಣಗಳು ಒಂದಲ್ಲಾ, ಎರಡಲ್ಲ. ಬೇವಿನಿಂದ ದೇಹದ ಆರೋಗ್ಯ ಸುಧಾರಿಸುವುದಲ್ಲದೆ, ತ್ವಚೆಗೂ ಇದು ಬಹಳ ಉಪಯೋಗಕಾರಿ.
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು, ಚರ್ಮ, ಬಾಯಿಯ ಆರೋಗ್ಯ, ಜೀರ್ಣಕ್ರಿಯೆ, ಗಾಯಗಳು ಮುಂತಾದ ಸಮಸ್ಯೆಗಳಿಗೆ ಬೇವು ನೈಸರ್ಗಿಕ ಔಷಧವಾಗಿ ಕೆಲಸ ಮಾಡುತ್ತದೆ. ಎಲೆಗಳು, ಕಾಂಡ, ಹೂವುಗಳು, ತೊಗಟೆ, ಕೊಂಬೆಗಳು ಅಥವಾ ಬೀಜಗಳು ಸೇರಿದಂತೆ ಬೇವಿನ ಮರದ ಪ್ರತಿಯೊಂದು ಭಾಗವು ಅನೇಕ ಔಷಧೀಯ ಪ್ರಯೋಜನಗಳನ್ನು ಹೊಂದಿದೆ. ಅದಕ್ಕಾಗಿಯೇ ಅದನ್ನು ಪ್ರಾಚೀನ ಕಾಲದಿಂದಲೂ ಔಷಧೀಯ ಉದ್ದೇಶಗಳಿಗಾಗಿ ಬಳಸಲಾಗುತ್ತದೆ.
ಬೇವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು, ಹೊಟ್ಟೆಯ ಹುಣ್ಣುಗಳನ್ನು ಗುಣಪಡಿಸಲು, ಬ್ಯಾಕ್ಟೀರಿಯಾವನ್ನು ಕೊಲ್ಲಲು ಮತ್ತು ಬಾಯಿಯ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುವ ರಾಸಾಯನಿಕಗಳನ್ನು ಒಳಗೊಂಡಿದೆ. ಇದು ಅಸಿಡಿಟಿ, ಮೂತ್ರ ಹಾಗೂ ಚರ್ಮ ರೋಗಗಳಿಗೆ ಅತ್ಯುತ್ತಮ ಮದ್ದಾಗಿ ಕೆಲಸ ಮಾಡುತ್ತದೆ ಎಂದು ಆಯುರ್ವೇದ ತಜ್ಞೆ ಡಾ. ದೀಕ್ಷಾ ಭಾವಸರ್ ಹೇಳುತ್ತಾರೆ. ಬೇವು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ, ಆಯಾಸವನ್ನು ನಿವಾರಿಸುತ್ತದೆ. ಗಾಯಗಳನ್ನು ಗುಣಪಡಿಸುತ್ತದೆ.
ಪ್ರತಿದಿನ ನೀವು ಸ್ನಾನ ಮಾಡುವಾಗ ನೀರಿನೊಂದಿಗೆ ಒಂದು ಎಸಳು ಬೇವಿನ ಸೊಪ್ಪನ್ನು ಬೆರೆಸಿ, ಸ್ವಲ್ಪ ಸಮಯ ಬಿಟ್ಟು ಸ್ನಾನ ಮಾಡುವುದರಿಂದ ದೇಹದ ದುರ್ಗಂಧ ನಿವಾರಣೆಯಾಗುತ್ತದೆ.
ಬೇವಿನ ಪುಡಿ ಹಾಗೂ ನಿಮ್ಮ ಚರ್ಮಕ್ಕೆ ಹೊಂದುವ ಇತರ ಗಿಡಮೂಲಿಕೆಗಳ ಪುಡಿಯನ್ನು (ಕಡ್ಲೆ ಹಿಟ್ಟು ಕೂಡಾ ಆಗಬಹುದು) ನೀರು ಅಥವಾ ಜೇನುತುಪ್ಪ ಬೆರೆಸಿ ಪೇಸ್ಟ್ ಮಾಡಿ, ಇದನ್ನು ಚರ್ಮ ಅಥವಾ ಗಾಯದ ಮೇಲೆ ಹಚ್ಚಿದರೆ ಉತ್ತಮ ಫಲಿತಾಂಶ ದೊರೆಯಲಿದೆ.
ಬೇವಿನ ಪ್ಯಾಕನ್ನು ನೀವು ತಲೆಗೆ ಹಚ್ಚಿಕೊಳ್ಳುವುದರಿಂದ ಡ್ಯಾಂಡ್ರಫ್ ಸಮಸ್ಯೆ ಕಡಿಮೆಯಾಗುತ್ತದೆ.
ಬೇವಿನಿಂದ ನೀವು ಹರ್ಬಲ್ ಟೀ ಕೂಡಾ ತಯಾರಿಸಬಹುದು. ಒಂದು ಬೇವಿನ ಎಲೆಯನ್ನು ತೊಳೆದು ನೀರಿಗೆ ಸೇರಿಸಿ, ಅದರೊಂದಿಗೆ ಶುಂಠಿ, ಜೀರ್ಗೆ, ಕರಿಮೆಣಸು, ತುಳಸಿ ಎಲೆ, ಪುದೀನಾ ಎಲೆ ಸೇರಿಸಿ ಕಷಾಯ ತಯಾರಿಸಬಹುದು. ಇದು ಕಹಿ ಎನಿಸಿದರೆ ಸ್ವಲ್ಪ ಜೇನುತುಪ್ಪ ಸೇರಿಸಿ.
ಬೇವಿನಿಂದ ಮೊಡವೆಗಳಿಗೆ ಪರಿಹಾರ ದೊರೆಯುತ್ತದೆ. ಬೇವಿನ ಪುಡಿಯನ್ನು ಶ್ರೀಗಂಧ, ಗುಲಾಬಿ, ಅರಿಶಿನ, ಮಂಜಿಷ್ಟ, ಲೈಕೋರೈಸ್ ಮುಂತಾದ ಮೊಡವೆಗಳ ವಿರುದ್ಧ ಹೋರಾಡುವ ಇತರ ಗಿಡಮೂಲಿಕೆಗಳೊಂದಿಗೆ ಬೆರೆಸಿ, ಮೊಸರು ಅಥವಾ ನೀರಿನಿಂದ ಪೇಸ್ಟ್ ತಯಾರಿಸಿ ಫೇಸ್ ಪ್ಯಾಕ್‌ನಂತೆ ಬೆರೆಸಿ ಮುಖಕ್ಕೆ ಲೇಪಿಸಬಹುದು.
ನಿಮಗೆ ಸಾಧ್ಯವಾದೆ ಬೇವಿನ ಎಲೆಗಳನ್ನು ಅಗಿಯಿರಿ, ಬೇವಿನ ಕಡ್ಡಿಯಿಂದ ಹಲ್ಲು ಉಜ್ಜಿದರೆ ಹಲ್ಲು ಸ್ವಚ್ಛವಾಗುತ್ತದೆ. ಬಾಯಿಯಲ್ಲಿ ದುರ್ಗಂಧ ಇರುವುದಿಲ್ಲ. ಬೇವಿನ ಮಾತ್ರೆಗಳು ಕೂಡಾ ದೊರೆಯುತ್ತದೆ. ಆದರೆ ಇದನ್ನು ನೀವು ವೈದ್ಯರ ಸಲಹೆ ಇಲ್ಲದೆ ಸೇವಿಸಬಾರದು.
ಬೇವಿನಿಂದ ಎಷ್ಟು ಉಪಯೋಗ ಇದೆಯೋ ಕೆಲವರಿಗೆ ಇದರಿಂದ ಸಮಸ್ಯೆಗಳು ಆಗುತ್ತದೆ
ಗರ್ಭಿಣಿಯಾದವರು, ಮಕ್ಕಳು ಬೇವನ್ನು ಸೇವಿಸಬಾರದು. ಕೆಲವರಿಗೆ ಇದು ಸಮಸ್ಯೆ ತರಬಹುದು. ಆದ್ದರಿಂದ ವೈದ್ಯರ ಸಲಹೆ ಇಲ್ಲದೆ ಬೇವನ್ನು ಸೇವಿಸುವುದು ಸೂಕ್ತವಲ್ಲ.
ವಿಭಾಗ