Uses of Sweet Potato: ಆಹಾ! ಎಂಥ ಸೊಗಸು ಈ ಸಿಹಿ ಗೆಣಸು...ಇದನ್ನು ಸೇವಿಸಿದರೆ ನಿಮಗಿಂಥ ಬೇರೆ ಆರೋಗ್ಯವಂತರೇ ಇಲ್ಲ
Jan 02, 2023 08:31 PM IST
ಸಿಹಿ ಗೆಣಸಿನ ಉಪಯೋಗಗಳು
- ಪಿರಿಯಡ್ಸ್ ಸಮಯದಲ್ಲಿ ಉಂಟಾಗುವ ನೋವು ಮತ್ತು ಸಮಸ್ಯೆಗಳನ್ನು ತೊಡೆದುಹಾಕಲು ಸಿಹಿ ಗೆಣಸು ಸಹಾಯ ಮಾಡುತ್ತದೆ. ಇವುಗಳಲ್ಲಿ ಫೈಬರ್ ಮತ್ತು ಪಾಲಿಫಿನಾಲ್‌ಗಳು ಸಮೃದ್ಧವಾಗಿದ್ದು ವಾರಕ್ಕೊಮ್ಮೆಯಾದರೂ ಸಿಹಿಗೆಣಸನ್ನು ಆಹಾರದಲ್ಲಿ ಸೇರಿಸಿಕೊಂಡರೆ ಪಿರಿಯಡ್ಸ್ ವೇಳೆ ನೋವು ಕಾಣುಸುವುದಿಲ್ಲ.
ಚಳಿಗಾಲದಲ್ಲಿ ಹೆಚ್ಚಾಗಿ ದೊರೆಯುವ ತರಕಾರಿಗಳಲ್ಲಿ ಸಿಹಿ ಗೆಣಸು ಕೂಡಾ ಒಂದು. ಸಿಹಿ ಗೆಣಸು ರುಚಿಯಿಂದ ಮಾತ್ರವಲ್ಲ, ಇದರ ಪೋಷಕಾಂಶಗಳಿಂದಲೂ ಸಮೃದ್ಧವಾಗಿದೆ. ಇದರಲ್ಲಿ ವಿಟಮಿನ್ ಎ, ಬಿ-6, ಸಿ, ಡಿ, ಮೆಗ್ನೀಸಿಯಮ್ ಮತ್ತು ಹೆಚ್ಚಿನ ಫೈಬರ್ ಅಂಶವಿದೆ. ಇದರಿಂದ ಮತ್ತೇನೆಲ್ಲಾ ಪ್ರಯೋಜಗಳಿವೆ ತಿಳಿದುಕೊಳ್ಳೋಣ.
ನಮ್ಮ ದೇಹದ ಆಂತರಿಕ ಅಂಗಗಳಿಗೆ ಆಕ್ಸಿಡೇಟಿವ್ ಅಪಾಯವನ್ನು ಕಡಿಮೆ ಮಾಡುವ ಸ್ಪೋರಮಿನ್‌ಗಳನ್ನು ಉತ್ಪಾದಿಸುವ ವಿಶಿಷ್ಟ ಗುಣವನ್ನು ಸಿಹಿ ಗೆಣಸು ಹೊಂದಿದೆ. ಶಕ್ತಿಯುತ ಉರಿಯೂತದ, ಆಂಥೋಸಯಾನಿನ್ ಗುಣ ಕೂಡಾ ಇದು ಹೊಂದಿದೆ.
ಡಯಾಬಿಟಿಸ್ ಇರುವವರು ಸಿಹಿಗೆಣಸು ತಿನ್ನಬಾರದು ಎಂಬ ತಪ್ಪು ಕಲ್ಪನೆ ಇದೆ. ಆದರೆ ಇದನ್ನು ಮಿತಿಯಾಗಿ ತೆಗೆದುಕೊಂಡರೆ ಅದ್ಭುತ ಪ್ರಯೋಜನಗಳನ್ನು ಪಡೆಯಬಹುದು ಎನ್ನುತ್ತಾರೆ ತಜ್ಞರು. ಇದು ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದೆ. ಇದು ಮಧುಮೇಹ ರೋಗಿಗಳಿಗೆ ಒಳ್ಳೆಯದು. ಸಿಹಿಗೆಣಸಿನಲ್ಲಿರುವ ಹೆಚ್ಚಿನ ಕಾರ್ಬೋಹೈಡ್ರೇಟ್‌ಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುವ ಗುಣವನ್ನು ಹೊಂದಿದ್ದರೂ, ಫೈಬರ್ ಅಂಶವು ಈ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಆಂಥೋಸಯಾನಿನ್ಸ್ ಎಂಬ ಪಾಲಿಫಿನಾಲಿಕ್ ಸಂಯುಕ್ತಗಳು ಇನ್ಸುಲಿನ್ ಅನ್ನು ನಿಯಂತ್ರಿಸುತ್ತವೆ. ಉತ್ಕರ್ಷಣ ನಿರೋಧಕಗಳಾಗಿ ಕಾರ್ಯ ನಿರ್ವಹಿಸುತ್ತವೆ ಮತ್ತು ರಕ್ತದಲ್ಲಿನ ಸಕ್ಕರೆ ಮತ್ತು ಇನ್ಸುಲಿನ್ ಮಟ್ಟವನ್ನು ನಿಯಂತ್ರಿಸುತ್ತವೆ.
ಸಿಹಿ ಗೆಣಸಿನಲ್ಲಿ ಫೈಬರ್‌ನಲ್ಲಿ ಸಮೃದ್ಧವಾಗಿರುವುದರಿಂದ ಇದು ಜೀರ್ಣಾಂಗ ವ್ಯವಸ್ಥೆಗೆ ಬಹಳ ಒಳ್ಳೆಯದು. ಇದು ಮಲಬದ್ಧತೆಯ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಪಿರಿಯಡ್ಸ್ ಸಮಯದಲ್ಲಿ ಉಂಟಾಗುವ ನೋವು ಮತ್ತು ಸಮಸ್ಯೆಗಳನ್ನು ತೊಡೆದುಹಾಕಲು ಸಿಹಿ ಗೆಣಸು ಸಹಾಯ ಮಾಡುತ್ತದೆ. ಇವುಗಳಲ್ಲಿ ಫೈಬರ್ ಮತ್ತು ಪಾಲಿಫಿನಾಲ್‌ಗಳು ಸಮೃದ್ಧವಾಗಿದ್ದು ವಾರಕ್ಕೊಮ್ಮೆಯಾದರೂ ಸಿಹಿಗೆಣಸನ್ನು ಆಹಾರದಲ್ಲಿ ಸೇರಿಸಿಕೊಂಡರೆ ಪಿರಿಯಡ್ಸ್ ವೇಳೆ ನೋವು ಕಾಣುಸುವುದಿಲ್ಲ. ಮೊಡವೆ, ಕೂದಲು ಉದುರುವ ಸಮಸ್ಯೆಗೂ ಇದು ರಾಮಬಾಣ.
ಸಿಹಿಗೆಣಸಿನಲ್ಲಿ ಕ್ಯಾರೊಟಿನಾಯ್ಡ್‌ಗಳು ಅಧಿಕವಾಗಿದೆ. ಅದು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಸಿಹಿಗೆಣಸಿನಲ್ಲಿರುವ ಆಂಥೋಸಯಾನಿನ್, ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡುತ್ತದೆ. ಕ್ಯಾನ್ಸರ್‌ನಿಂದ ದೂರವಿರಲು ನಿಮ್ಮ ಆಹಾರದಲ್ಲಿ ಸಿಹಿಗೆಣಸನ್ನು ನಿಯಮಿತವಾಗಿ ಬಳಸಬೇಕು ಎಂದು ತಜ್ಞರು ಹೇಳುತ್ತಾರೆ. ಇದರಲ್ಲಿರುವ ಬೀಟಾ ಕ್ಯಾರೋಟಿನ್ ಅನ್ನನಾಳದ ಕ್ಯಾನ್ಸರ್ ತಡೆಯುತ್ತದೆ.
ಸಿಹಿ ಗೆಣಸು ತಿನ್ನುವುದರಿಂದ ಕಣ್ಣುಗಳು ಆರೋಗ್ಯವಾಗಿರುತ್ತವೆ. ಸಿಹಿ ಗೆಣಸಿನಲ್ಲಿರುವ ಬೀಟಾ ಕ್ಯಾರೋಟಿನ್ ಅಂಶ ದೃಷ್ಟಿಯನ್ನು ಸುಧಾರಿಸುತ್ತದೆ. ಸಿಹಿಗೆಣಸು ತಿನ್ನುವುದರಿಂದ ಬಹುತೇಕ ಕಣ್ಣಿನ ಸಮಸ್ಯೆ ಕಡಿಮೆಯಾಗುತ್ತದೆ. ಸಿಹಿ ಗೆಣಸಿನಲ್ಲಿ ಮೆಗ್ನೀಸಿಯಮ್ ಅಧಿಕವಾಗಿರುತ್ತದೆ. ಇದರಲ್ಲಿರುವ ಮೆಗ್ನೀಸಿಯಮ್ ಅಂಶ ಮಾನಸಿಕ ಒತ್ತಡ ಮತ್ತು ಆತಂಕವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.
ಚಳಿಗಾಲದಲ್ಲಿ ಚರ್ಮ ಒಣಗುತ್ತದೆ. ಈ ಅವಧಿಯಲ್ಲಿ ಸಿಹಿಗೆಣಸು ತಿಂದರೆ, ತ್ವಚೆ ತೇವಾಂಶದಿಂದ ಕೂಡಿರುತ್ತದೆ. ಇದು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಚರ್ಮದ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ. ಕಪ್ಪು ಕಲೆಗಳನ್ನು ಹೋಗಲಾಡಿಸುತ್ತದೆ. ದೇಹದಲ್ಲಿನ ಸ್ವತಂತ್ರ ರಾಡಿಕಲ್‌ಗಳನ್ನು ಕಡಿಮೆ ಮಾಡುತ್ತದೆ ಮತ್ತು ಚರ್ಮಕ್ಕೆ ವಯಸ್ಸಾಗುವುದನ್ನು ತಡೆಯುತ್ತದೆ.
ವಿಭಾಗ