logo
ಕನ್ನಡ ಸುದ್ದಿ  /  ಜೀವನಶೈಲಿ  /  Sabja Water Benifits: ಖಾಲಿ ಹೊಟ್ಟೆಯಲ್ಲಿ ಸೇವಿಸಿ ಸಬ್ಜಾ ನೀರು, ತುಳಸಿ ಬೀಜಗಳ ನೀರು ತಯಾರಿಸುವುದು ಹೇಗೆ? 11 ಪ್ರಯೋಜನಗಳನ್ನು ತಿಳಿಯಿರಿ

Sabja Water Benifits: ಖಾಲಿ ಹೊಟ್ಟೆಯಲ್ಲಿ ಸೇವಿಸಿ ಸಬ್ಜಾ ನೀರು, ತುಳಸಿ ಬೀಜಗಳ ನೀರು ತಯಾರಿಸುವುದು ಹೇಗೆ? 11 ಪ್ರಯೋಜನಗಳನ್ನು ತಿಳಿಯಿರಿ

Praveen Chandra B HT Kannada

Jun 11, 2024 06:30 AM IST

google News

Sabja Water Benifits: ಖಾಲಿ ಹೊಟ್ಟೆಯಲ್ಲಿ ಸೇವಿಸಿ ಸಬ್ಜಾ ನೀರು, ತುಳಸಿ ಬೀಜಗಳ ನೀರು ತಯಾರಿಸುವುದು ಹೇಗೆ?

    • Sabja Water Benifits: ಚಿಯಾ ಬೀಜಗಳು ಎಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎಂಬುವುದು ನಿಮಗೆ ತಿಳಿದಿರಬಹುದು. ಹಾಗೆಯೇ ಸಬ್ಜಾ (ತುಳಸಿ) ಬೀಜಗಳು ಕೂಡ ತನ್ನದೇ ಆದ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ಇದನ್ನು ನೀರಿನಲ್ಲಿ ನೆನೆಸಿ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಏನೇನು ಪ್ರಯೋಜನಗಳಿವೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
Sabja Water Benifits: ಖಾಲಿ ಹೊಟ್ಟೆಯಲ್ಲಿ ಸೇವಿಸಿ ಸಬ್ಜಾ ನೀರು, ತುಳಸಿ ಬೀಜಗಳ ನೀರು ತಯಾರಿಸುವುದು ಹೇಗೆ?
Sabja Water Benifits: ಖಾಲಿ ಹೊಟ್ಟೆಯಲ್ಲಿ ಸೇವಿಸಿ ಸಬ್ಜಾ ನೀರು, ತುಳಸಿ ಬೀಜಗಳ ನೀರು ತಯಾರಿಸುವುದು ಹೇಗೆ?

Sabja Water Benifits: ಯುವಜನತೆಯು ಇಂದಿನ ಆಹಾರ ಪದ್ಧತಿ, ಜೀವನ ಶೈಲಿಯಿಂದಾಗಿ ತೂಕ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಬಹುತೇಕ ಮಂದಿ ಇದರಿಂದ ಚಿಂತೆಗೀಡಾಗಿದ್ದು, ತೂಕ ಇಳಿಸಲು ಏನಾದರೂ ಪ್ರಯತ್ನಿಸುತ್ತಲೇ ಇರುತ್ತಾರೆ. ತೂಕವನ್ನು ಕಳೆದುಕೊಳ್ಳಲು ಬಯಸುವವರಿಗೆ ಸಬ್ಜಾ (ತುಳಸಿ) ಬೀಜಗಳನ್ನು ಬಳಸಲು ಯೋಗ್ಯವಾಗಿದೆ. ಇದು ಕೇವಲ ತೂಕ ಇಳಿಸುವಲ್ಲಿ ಮಾತ್ರವಲ್ಲ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳುವಲ್ಲಿ ಪರಿಣಾಮಕಾರಿಯಾಗಿದೆ.

ತುಳಸಿ ಬೀಜ (ಸಬ್ಜಾ) ವನ್ನು 15 ರಿಂದ 30 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿ ಮತ್ತು ಇದಕ್ಕೆ ನಿಂಬೆಹಣ್ಣನ್ನು ಸ್ವಲ್ಪ ಸೇರಿಸಿ ಕುಡಿಯುವುದರಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸುವುದರಿಂದ ಚಯಾಪಚಯವನ್ನು ಹೆಚ್ಚಿಸುತ್ತದೆ. ಅಲ್ಲದೆ ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ.

ತುಳಸಿ ಬೀಜಗಳು ಅಥವಾ ತುಕ್ಮಾರಿಯಾ ಬೀಜಗಳು ಎಂದೂ ಕರೆಯಲ್ಪಡುವ ಸಬ್ಜಾ ಬೀಜಗಳು, ಪೌಷ್ಟಿಕಾಂಶ ಭರಿತವಾಗಿದ್ದು, ಇದನ್ನು ಅನಾದಿ ಕಾಲದಿಂದಲೂ ಸಾಂಪ್ರದಾಯಿಕ ಔಷಧಗಳಲ್ಲಿ ಬಳಸಲಾಗುತ್ತಿದೆ. ಇದರಲ್ಲಿ ಕೊಬ್ಬಿನಾಮ್ಲಗಳು, ಆಹಾರದ ಫೈಬರ್, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಕಬ್ಬಿಣದಂತಹ ಖನಿಜಗಳು ಮತ್ತು ಇತರ ಸೂಕ್ಷ್ಮ ಪೋಷಕಾಂಶಗಳಿಂದ ತುಂಬಿವೆ. ಇದು ಆರೋಗ್ಯಕರ ಕರುಳಿನ ಚಲನೆಯನ್ನು ಉತ್ತೇಜಿಸುತ್ತದೆ. ಹೊಟ್ಟೆ ಉಬ್ಬರವನ್ನು ಕಡಿಮೆ ಮಾಡುತ್ತದೆ. ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸುವುದರಿಂದ ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ಅಲ್ಲದೆ, ಸಬ್ಜಾ ಬೀಜಗಳು ನಿಮ್ಮ ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ.

ಸಬ್ಜಾ ಬೀಜಗಳು ಗಟ್ಟಿಯಾಗಿರುತ್ತವೆ. ಇದನ್ನು ನೀರಿನಲ್ಲಿ ನೆನೆಸಿದ ನಂತರ ಅವು ಜೆಲ್ ತರಹದ ಸ್ಥಿರತೆಯನ್ನು ಪಡೆದುಕೊಂಡು ಮೃದುವಾಗುತ್ತವೆ. ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದಾಗ ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತವೆ.

ಸಬ್ಜಾ ನೀರಿನ ಪ್ರಯೋಜನಗಳು

1. ಸಮೃದ್ಧ ಪೋಷಕಾಂಶ

ಸಬ್ಜಾ ಬೀಜಗಳು ಅಗತ್ಯವಾದ ಪೋಷಕಾಂಶಗಳಿಂದ ಕೂಡಿದೆ. ಅವು ಪ್ರೊಟೀನ್, ಅಗತ್ಯವಾದ ಕೊಬ್ಬಿನಾಮ್ಲಗಳು, ಆಹಾರದ ಫೈಬರ್ ಮತ್ತು ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಕಬ್ಬಿಣದಂತಹ ವಿವಿಧ ಜೀವಸತ್ವಗಳು ಮತ್ತು ಖನಿಜಗಳ ಅತ್ಯುತ್ತಮ ಮೂಲವಾಗಿದೆ. ಖಾಲಿ ಹೊಟ್ಟೆಯಲ್ಲಿ ಸಬ್ಜಾ ನೀರನ್ನು ಸೇವಿಸುವುದರಿಂದ ನಿಮ್ಮ ದೇಹವು ಈ ಪೋಷಕಾಂಶಗಳನ್ನು ಪರಿಣಾಮಕಾರಿಯಾಗಿ ಹೀರಿಕೊಳ್ಳುತ್ತದೆ.

2. ಜೀರ್ಣಕ್ರಿಯೆಗೆ ಸಹಕಾರಿ

ಸಬ್ಜಾ ನೀರು ಜೀರ್ಣಕ್ರಿಯೆಗೆ ಪರಿಣಾಮಕಾರಿಯಾಗಿದೆ. ಸಬ್ಜಾ ಬೀಜಗಳಲ್ಲಿನ ಹೆಚ್ಚಿನ ಫೈಬರ್ ಅಂಶವು ಆರೋಗ್ಯಕರ ಕರುಳಿನ ಚಲನೆಯನ್ನು ಉತ್ತೇಜಿಸುತ್ತದೆ. ಮಲಬದ್ಧತೆಯನ್ನು ತಡೆಯುತ್ತದೆ. ಹೊಟ್ಟೆ ಉಬ್ಬರ ಮತ್ತು ಅನಿಲವನ್ನು ನಿವಾರಿಸಲು ಸಹಾಯ ಮಾಡುವ ಕಾರ್ಮಿನೇಟಿವ್ ಗುಣಲಕ್ಷಣಗಳನ್ನು ಸಹ ಹೊಂದಿವೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸಬ್ಜಾ ನೀರನ್ನು ಕುಡಿಯುವುದರಿಂದ ಜೀರ್ಣಾಂಗವನ್ನು ಶುದ್ಧೀಕರಿಸಲು ಉಪಯುಕ್ತವಾಗಿದೆ.

3. ತೂಕ ನಿರ್ವಹಣೆಯಲ್ಲಿ ಸಹಕಾರಿ

ಸಬ್ಜಾ ಬೀಜಗಳು ತೂಕ ನಿರ್ವಹಣೆಯಲ್ಲಿ ಸಹಕಾರಿಯಾಗಿದೆ. ಇದನ್ನು ನೀರಿನಲ್ಲಿ ನೆನೆಸಿದಾಗ, ಬೀಜಗಳು ಉಬ್ಬುತ್ತವೆ. ಇದರಲ್ಲಿನ ಹೆಚ್ಚಿನ ಫೈಬರ್ ಅಂಶದಿಂದಾಗಿ ಜೆಲ್ ತರಹದ ರೂಪುಗೊಳ್ಳುತ್ತದೆ. ಇದರಲ್ಲಿನ ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ಪೋಷಕಾಂಶಗಳಿಂದಾಗಿ ತೂಕ ನಷ್ಟಕ್ಕೆ ಸಹಕಾರಿಯಾಗಿದೆ.

4. ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣ

ಮಧುಮೇಹ ಹೊಂದಿರುವ ವ್ಯಕ್ತಿಗಳಿಗೆ ಅಥವಾ ಸ್ಥಿರವಾದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಬಯಸುವವರು, ಸಬ್ಜಾ ನೀರನ್ನು ಸೇವಿಸಬಹುದು. ಸಬ್ಜಾ ಬೀಜಗಳಲ್ಲಿರುವ ಫೈಬರ್ ಕಾರ್ಬೋಹೈಡ್ರೇಟ್‌ ಜೀರ್ಣಕ್ರಿಯೆ ಮತ್ತು ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುತ್ತದೆ. ಖಾಲಿ ಹೊಟ್ಟೆಯಲ್ಲಿ ಸಬ್ಜಾ ನೀರನ್ನು ಸೇವಿಸುವುದರಿಂದ ಗ್ಲೂಕೋಸ್‌ನ ಸ್ಥಿರ ಬಿಡುಗಡೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ಮಧುಮೇಹವನ್ನು ನಿರ್ವಹಿಸಲು ನಿರ್ಣಾಯಕವಾಗಿದೆ.

5. ಜಲಸಂಚಯನ ಸುಧಾರಣೆ

ಸಬ್ಜಾ ಬೀಜಗಳು ತಮ್ಮ ತೂಕದ 30 ಪಟ್ಟು ನೀರನ್ನು ಹೀರಿಕೊಳ್ಳಬಲ್ಲವು. ಜೀರ್ಣಕ್ರಿಯೆ, ತಾಪಮಾನ ನಿಯಂತ್ರಣ ಸೇರಿದಂತೆ ಎಲ್ಲಾ ದೈಹಿಕ ಕಾರ್ಯಗಳಿಗೆ ಸರಿಯಾದ ಜಲಸಂಚಯನವು ಅತ್ಯಗತ್ಯ. ಸಬ್ಜಾ ನೀರು ನಿಮ್ಮ ದೇಹವನ್ನು ಹೈಡ್ರೀಕರಿಸುತ್ತದೆ.

6. ದೇಹವನ್ನು ನಿರ್ವಿಷಗೊಳಿಸುತ್ತದೆ

ಸಬ್ಜಾ ಬೀಜಗಳು ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕುವ ಮೂಲಕ ದೇಹವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಅಲ್ಲದೆ, ನೈಸರ್ಗಿಕ ಮೂತ್ರವರ್ಧಕ ಪರಿಣಾಮವು ಮೂತ್ರದ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಹಾಗೂ ದೇಹದಿಂದ ತ್ಯಾಜ್ಯ ಉತ್ಪನ್ನಗಳನ್ನು ತೆಗೆದುಹಾಕುವಲ್ಲಿ ಸಹಾಯ ಮಾಡುತ್ತದೆ. ಖಾಲಿ ಹೊಟ್ಟೆಯಲ್ಲಿ ಸಬ್ಜಾ ನೀರನ್ನು ಕುಡಿಯುವುದು ಯಕೃತ್ತು ಮತ್ತು ಮೂತ್ರಪಿಂಡದ ಆರೋಗ್ಯವನ್ನು ಸುಧಾರಿಸುತ್ತದೆ. ಚಯಾಪಚಯ ಕ್ರಿಯೆ ಮತ್ತು ಒಟ್ಟಾರೆ ಆರೋಗ್ಯಕ್ಕೆ ಇದು ಕೊಡುಗೆ ನೀಡುತ್ತದೆ.

7. ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ

ಸಬ್ಜಾ ಬೀಜಗಳು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ. ಇದು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮೊಡವೆ ಮುಂತಾದ ಚರ್ಮದ ಸ್ಥಿತಿಯನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ. ಬೆಳಿಗ್ಗೆ ಸಬ್ಜಾ ನೀರನ್ನು ಕುಡಿಯುವುದರಿಂದ ಚರ್ಮವು ಕಾಂತಿಯುತವಾಗಿ ಹೊಳೆಯುವಲ್ಲಿ ಸಹಕಾರಿಯಾಗಿದೆ.

8. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಸಬ್ಜಾ ಬೀಜಗಳಲ್ಲಿ ವಿಟಮಿನ್‌ಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದ್ದು, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸಬ್ಜಾ ನೀರನ್ನು ನಿಯಮಿತವಾಗಿ ಸೇವಿಸುವುದರಿಂದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಸಬ್ಜಾ ಬೀಜಗಳ ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿ-ವೈರಲ್ ಗುಣಲಕ್ಷಣಗಳು ರೋಗನಿರೋಧಕ ರಕ್ಷಣೆಯನ್ನು ಹೆಚ್ಚಿಸುವಲ್ಲಿ ಪಾತ್ರವಹಿಸುತ್ತವೆ.

9. ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ

ಸಬ್ಜಾ ಬೀಜಗಳಲ್ಲಿ ಇರುವ ಒಮೆಗಾ-3 ಕೊಬ್ಬಿನಾಮ್ಲಗಳು ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಈ ಅಗತ್ಯ ಕೊಬ್ಬುಗಳು ಉರಿಯೂತವನ್ನು ಕಡಿಮೆ ಮಾಡಲು, ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಸಬ್ಜಾ ನೀರನ್ನು ಕುಡಿಯುವುದರಿಂದ ಹೃದಯ ಕಾಯಿಲೆಯ ಅಪಾಯ ಕಡಿಮೆ. ಇದು ಆರೋಗ್ಯಕರ ರಕ್ತ ಪರಿಚಲನೆಯನ್ನು ಉತ್ತೇಜಿಸುವ ಮೂಲಕ ಹೃದಯರಕ್ತನಾಳದ ಆರೋಗ್ಯವನ್ನು ಬೆಂಬಲಿಸುತ್ತದೆ.

10. ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ

ಸಬ್ಜಾ ಬೀಜಗಳಲ್ಲಿನ ಮೆಗ್ನೀಸಿಯಮ್ ಮತ್ತು ಇತರ ಅಗತ್ಯ ಪೋಷಕಾಂಶಗಳು ಅನಗತ್ಯ ಚಟುವಟಿಕೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅಲ್ಲದೆ ಇದು ವಿಶ್ರಾಂತಿಯನ್ನು ಉತ್ತೇಜಿಸಿ, ಆತಂಕದ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಒತ್ತಡವನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸುವಲ್ಲೂ ಸಹಕಾರಿಯಾಗಿದೆ.

11. ಗರ್ಭಾವಸ್ಥೆಯ ಆರೋಗ್ಯವನ್ನು ಬೆಂಬಲಿಸುತ್ತದೆ

ಗರ್ಭಿಣಿಯರಿಗೆ ಸಬ್ಜಾ ನೀರು ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಕಬ್ಬಿಣ, ಗರ್ಭಾವಸ್ಥೆಯಲ್ಲಿ ಹೆಚ್ಚಿದ ಪೌಷ್ಟಿಕಾಂಶದ ಅಗತ್ಯಗಳನ್ನು ಬೆಂಬಲಿಸುತ್ತದೆ. ಸಬ್ಜಾ ಬೀಜಗಳು ಮಲಬದ್ಧತೆ ಮತ್ತು ಹೊಟ್ಟೆ ಉಬ್ಬರ ಮುಂತಾದ ಸಾಮಾನ್ಯ ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಎದೆಯುರಿಯಿಂದ ಪರಿಹಾರ ನೀಡುತ್ತದೆ. ಆರೋಗ್ಯಕರ ಗರ್ಭಧಾರಣೆಗೂ ಕೊಡುಗೆ ನೀಡುತ್ತದೆ.

ಸಬ್ಜಾ ನೀರನ್ನು ತಯಾರಿಸುವುದು ಹೇಗೆ?

ಸಬ್ಜಾ ನೀರನ್ನು ತಯಾರಿಸಲು ಈ ಸರಳ ಹಂತಗಳನ್ನು ಅನುಸರಿಸಿ

ಮೊದಲಿಗೆ ಬೀಜಗಳನ್ನು ನೆನೆಸಿ: ಒಂದು ಲೋಟ ನೀರಿಗೆ 1 ರಿಂದ 2 ಚಮಚ ಸಬ್ಜಾ ಬೀಜಗಳನ್ನು ಸೇರಿಸಿ. ಅದು ಉಬ್ಬುವವರೆಗೆ ಮತ್ತು ಜೆಲ್ಲಿ ತರಹದ ರೂಪವನ್ನು ಪಡೆಯುವವರೆಗೆ ಕನಿಷ್ಠ 15 ರಿಂದ 30 ನಿಮಿಷಗಳ ಕಾಲ ಅವುಗಳನ್ನು ನೆನೆಸಿ.

ಚೆನ್ನಾಗಿ ಬೆರೆಸಿ ಕುಡಿಯಿರಿ: ಮಿಶ್ರಣವನ್ನು ಚೆನ್ನಾಗಿ ಬೆರೆಸಿ ಮತ್ತು ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಹೆಚ್ಚುವರಿ ಸುವಾಸನೆ ಅಥವಾ ಬಾಯಿ ರುಚಿಗೆ ಮತ್ತು ಪ್ರಯೋಜನಗಳಿಗಾಗಿ ನೀವು ನಿಂಬೆ ರಸ ಅಥವಾ ಜೇನುತುಪ್ಪವನ್ನು ಸೇರಿಸಬಹುದು.

ನಿಮ್ಮ ದೈನಂದಿನ ದಿನಚರಿಯಲ್ಲಿ ಸಬ್ಜಾ ನೀರನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ. ಜೀರ್ಣಕ್ರಿಯೆ ಮತ್ತು ತೂಕ ನಿರ್ವಹಣೆಗೆ ಸಹಾಯ ಮಾಡುವುದಲ್ಲದೆ, ಚರ್ಮದ ಆರೋಗ್ಯವನ್ನು ಉತ್ತೇಜಿಸುತ್ತದೆ ಹಾಗೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆರೋಗ್ಯಕರ ಜೀವನಶೈಲಿಗೆ ಸಬ್ಜಾ ಬೀಜಗಳನ್ನು ನೀವು ಖಂಡಿತಾ ಸೇರಿಸಬಹುದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ