logo
ಕನ್ನಡ ಸುದ್ದಿ  /  ಜೀವನಶೈಲಿ  /  ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಸಿದ್ಧರಾಗಿ, ಅದ್ಭುತ ಪ್ರಯೋಜನಗಳನ್ನು ಹೊಂದಿರುವ ಈ ಆಯುರ್ವೇದ ಚಹಾ ಸೇವನೆ ಆರಂಭಿಸಿ

ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಸಿದ್ಧರಾಗಿ, ಅದ್ಭುತ ಪ್ರಯೋಜನಗಳನ್ನು ಹೊಂದಿರುವ ಈ ಆಯುರ್ವೇದ ಚಹಾ ಸೇವನೆ ಆರಂಭಿಸಿ

Reshma HT Kannada

Feb 19, 2024 06:54 PM IST

google News

ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಸಿದ್ಧರಾಗಿ, ಅದ್ಭುತ ಪ್ರಯೋಜನಗಳನ್ನು ಹೊಂದಿರುವ ಈ ಆಯುರ್ವೇದ ಟೀ ಕುಡಿಯಲು ಆರಂಭಿಸಿ

    • ಋತುಮಾನಗಳು ಬದಲಾದಂತೆ ದೇಹದಲ್ಲಿ ಆರೋಗ್ಯ ಸಮಸ್ಯೆಗಳು ಕಾಡುವುದು ಸಹಜ. ಅದರಲ್ಲೂ ಬೇಸಿಗೆಯಲ್ಲಿ ಅತಿಯಾದ ಬಿಸಿಲಿನ ಕಾರಣ ಸಮಸ್ಯೆಗಳು ಹೆಚ್ಚುತ್ತವೆ. ಬೇಸಿಗೆಯಲ್ಲಿ ಕಾಡುವ ಆರೋಗ್ಯ ತೊಂದರೆಗಳಿಂದ ದೇಹವನ್ನು ರಕ್ಷಿಸಲು ಒಂದೇ ಪರಿಹಾರ ಆಯುರ್ವೇದ ಟೀ. ಈ ಟೀಯನ್ನು ನೀವು ಮನೆಯಲ್ಲಿ ಸುಲಭವಾಗಿ ತಯಾರಿಸಿ ಕುಡಿಯಬಹುದು. 
ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಸಿದ್ಧರಾಗಿ, ಅದ್ಭುತ ಪ್ರಯೋಜನಗಳನ್ನು ಹೊಂದಿರುವ ಈ ಆಯುರ್ವೇದ ಟೀ ಕುಡಿಯಲು ಆರಂಭಿಸಿ
ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಸಿದ್ಧರಾಗಿ, ಅದ್ಭುತ ಪ್ರಯೋಜನಗಳನ್ನು ಹೊಂದಿರುವ ಈ ಆಯುರ್ವೇದ ಟೀ ಕುಡಿಯಲು ಆರಂಭಿಸಿ

ಬೇಸಿಗೆ ಬಂತೆಂದರೆ ದೇಹದಲ್ಲಿ ಬದಲಾವಣೆಗಳಾಗುವುದು ಸಹಜ. ಅತಿಯಾದ ಬಿಸಿಲಿನ ತಾಪವು ದೇಹದಲ್ಲಿ ಒಂದಿಲ್ಲೊಂದು ಸಮಸ್ಯೆಯನ್ನು ಸೃಷ್ಟಿಸುತ್ತದೆ. ಈ ಎಲ್ಲಾ ಸಮಸ್ಯೆಗಳನ್ನು ನಿವಾರಿಸಿ ಆರೋಗ್ಯ ಕಾಪಾಡಿಕೊಳ್ಳಲು ಸಮ್ಮರ್‌ ಟೀ ಸೇವನೆ ಬೆಸ್ಟ್‌. ಸಹಜವಾಗಿ ಬೆಳ್ಳಿಗ್ಗೆ ಎದ್ದಾಕ್ಷಣ ಹಲವರಿಗೆ ಟೀ ಕುಡಿಯುವ ಅಭ್ಯಾಸವಿರುತ್ತದೆ. ಇದರಿಂದ ಮೂಡ್‌ ಫ್ರೆಶ್‌ ಆಗಿರುತ್ತದೆ ಎನ್ನುತ್ತಾರೆ. ಆದರೆ ಬೇಸಿಗೆಯಲ್ಲಿ ಅತಿಯಾಗಿ ಟೀ ಕುಡಿಯುವುದರಿಂದ ಪಿತ್ತದಂತಹ ಸಮಸ್ಯೆಗಳು ಉದ್ಭವಿಸುತ್ತದೆ. ಅದರ ಬದಲು ನೀವು ಆಯುರ್ವೇದ ಟೀ ಕುಡಿಯಬಹುದು. ಇದರಿಂದ ಮೂಡ್‌ ಫ್ರೆಶ್‌ ಆಗುವುದು ಮಾತ್ರವಲ್ಲ, ದೇಹಕ್ಕೂ ಸಾಕಷ್ಟು ಪ್ರಯೋಜನಗಳಿವೆ.

ಬೇಸಿಗೆಯಲ್ಲಿ ಆಯುರ್ವೇದ ಟೀ ಕುಡಿಯುವುದರಿಂದ ಬ್ಯಾಕ್ಟೀರಿಯಾ ಹಾಗೂ ವೈರಸ್‌ಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಬಹುದು. ಈ ಬೇಸಿಗೆಯ ಆಯುರ್ವೇದ ಚಹಾವು ತಲೆನೋವು, ಆಯಾಸ, ಆಸಿಡಿಟಿ, ಮೈಗ್ರೇನ್, ಮುಟ್ಟಿನ ಸೆಳೆತ, ಅಜೀರ್ಣ ಅಜೀರ್ಣದಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ.

ಆಯುರ್ವೇದ ಟೀ ಆರೋಗ್ಯಕ್ಕೆ ಉತ್ತಮ ಮಾತ್ರವಲ್ಲ, ಇದನ್ನು ತಯಾರಿಸುವುದು ಸುಲಭ. ಕೆಫೀನ್ ಸೇವನೆಯು ಹೊಟ್ಟೆಯಲ್ಲಿ ಉರಿಯೂತ ಮತ್ತು ಆಸಿಡಿಟಿ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಅದಕ್ಕಾಗಿಯೇ ಬೇಸಿಗೆಯಲ್ಲಿ ಟೀ ಕುಡಿಯುವ ಬದಲು ಆಯುರ್ವೇದಿಕ್‌ ಟೀ ಕುಡಿಯಬಹುದು. ಹಾಗಾದ್ರೆ ಈ ಟೀ ತಯಾರಿಸುವುದು ಹೇಗೆ?

ಟೀಗೆ ಬೇಕಾದ ಪದಾರ್ಥಗಳು

ನೀರು - 1 ಗ್ಲಾಸ್

ಕೊತ್ತಂಬರಿ - 1 ಟೇಬಲ್‌ ಚಮಚ

ಒಣ ಗುಲಾಬಿ ದಳಗಳು - 2 ಟೀ ಚಮಚ

ಪುದೀನ ಎಲೆಗಳು - 7 ರಿಂದ 8

ಕರಿಬೇವಿನ ಎಲೆಗಳು - 7 ರಿಂದ 10

ಚಿಕ್ಕ ಏಲಕ್ಕಿ - 2

ತಯಾರಿಸುವ ವಿಧಾನ: ಆಯುರ್ವೇದ ಚಹಾವನ್ನು ತಯಾರಿಸಲು, ಮೊದಲು ಒಂದು ಪಾತ್ರೆಯಲ್ಲಿ ನೀರು ಹಾಕಿ, ಆ ನೀರನ್ನು ಚೆನ್ನಾಗಿ ಬಿಸಿ ಮಾಡಿ. ನಂತರ ಮೇಲೆ ತಿಳಿಸಿದ ಎಲ್ಲಾ ಪದಾರ್ಥಗಳನ್ನು ಸೇರಿಸಿ ಮಧ್ಯಮ ಉರಿಯಲ್ಲಿ 5 ರಿಂದ 10 ನಿಮಿಷ ಕುದಿಸಿ. ನಂತರ ಸೋಸಿ, ಈಗ ನಿಮ್ಮ ಮುಂದೆ ಬೇಸಿಗೆ ಬೆಸ್ಟ್‌ ಎನ್ನಿಸುವ ಆಯುರ್ವೇದಿಕ್‌ ಸಮ್ಮರ್‌ ಟೀ ಕುಡಿಯಲು ಸಿದ್ಧ.

ಆಯುರ್ವೇದ ಟೀ ಸೇವನೆಯ ಪ್ರಯೋಜನಗಳು

ಕೊತ್ತಂಬರಿ ದೇಹದಲ್ಲಿ ಚಯಾಪಚಯವನ್ನು ಸುಧಾರಿಸುತ್ತದೆ ಮತ್ತು ಮೈಗ್ರೇನ್ ತಲೆನೋವು, ಹಾರ್ಮೋನ್ ಅಸಮತೋಲನ ನಿರ್ವಹಣೆ, ಸಕ್ಕರೆ ಮಟ್ಟದ ನಿಯಂತ್ರಣ ಮತ್ತು ಥೈರಾಯ್ಡ್ ಅನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಈ ಕೊತ್ತಂಬರಿ ಪಾನೀಯ ನಿಮ್ಮ ದೇಹದಿಂದ ವಿಷಾಂಶವನ್ನು ಹೊರ ಹಾಕಲು ಸಹಾಯ ಮಾಡುತ್ತದೆ.

ಗುಲಾಬಿ ದಳಗಳು ಆರೋಗ್ಯಕ್ಕೆ ಉತ್ತಮ. ಇದು ಫಲವಂತಿಕೆಯ ಪ್ರಮಾಣವನ್ನು ಸುಧಾರಿಸುತ್ತದೆ. ಇದರಲ್ಲಿ ದೇಹವನ್ನು ತಂಪಾಗಿಸುವ ಗುಣವಿದ್ದು, ಇದರಿಂದ ಟೀ ತಯಾರಿಸಿ ಕುಡಿಯುವುದರಿಂದ ದೇಹಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಇದು ನಿಮ್ಮ ಹೃದಯ, ಮೆದುಳು, ನಿದ್ರೆ ಮತ್ತು ಚರ್ಮಕ್ಕೂ ಒಳ್ಳೆಯದು.

ಕರಿಬೇವಿನ ಎಲೆಗಳು ಕೂದಲು ಉದುರುವಿಕೆಯ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೇ ರಕ್ತದಲ್ಲಿನ ಸಕ್ಕರೆ ಮಟ್ಟದ ನಿಯಂತ್ರಣ ಮತ್ತು ಹಿಮೋಗ್ಲೋಬಿನ್ ಮಟ್ಟ ಸುಧಾರಿಸಲು ಉಪಯುಕ್ತವಾಗಿದೆ. ಕರಿಬೇವಿನ ಎಲೆಗಳು ಮಧುಮೇಹ ನಿವಾರಕ, ಅತಿಸಾರ ನಿವಾರಕ, ಉತ್ಕರ್ಷಣ ನಿರೋಧಕ, ಶಿಲೀಂಧ್ರ ನಿವಾರಕ, ಕಾರ್ಸಿನೋಜೆನಿಕ್, ಅಧಿಕ ರಕ್ತದೊತ್ತಡ, ಹುಣ್ಣು ನಿವಾರಕ, ಬ್ಯಾಕ್ಟೀರಿಯಾ ವಿರೋಧಿ ಮತ್ತು ಕೊಲೆಸ್ಟ್ರಾಲ್ ಕಡಿಮೆ ಮಾಡುವ ಔಷಧೀಯ ಗುಣಗಳನ್ನು ಹೊಂದಿದೆ.

ಪುದೀನ ಎಲೆಗಳು ಪ್ರತಿ ಋತುವಿನಲ್ಲಿ ನಿಮಗೆ ಮೂಲಿಕೆಯಾಗಿ ಕಾರ್ಯನಿರ್ವಹಿಸುತ್ತವೆ. ಬೇಸಿಗೆಯಲ್ಲಿ ಧೂಳಿನ ಕಾರಣದಿಂದ ಉಂಟಾಗುವ ಗಂಟಲು ನೋವಿನ ಸಮಸ್ಯೆಗೂ ಇದು ಮದ್ದು. ಅಲರ್ಜಿ, ಕೆಮ್ಮು, ಶೀತ, ಮೊಡವೆ, ತಲೆನೋವು, ಬಾಯಿಯ ಆರೈಕೆಗೆ ಇದು ಪ್ರಯೋಜನಕಾರಿ.

ಏಲಕ್ಕಿಯ ವಾಸನೆ ಮತ್ತು ರುಚಿ ಎಲ್ಲರಿಗೂ ಇಷ್ಟ. ಇದಲ್ಲದೆ, ಇದು ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವಾಗಿದೆ. ಏಲಕ್ಕಿಯು ನಿಮ್ಮ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು, ಅಧಿಕ ರಕ್ತದೊತ್ತಡ, ಅಸ್ತಮಾ ಇತ್ಯಾದಿಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಆದ್ದರಿಂದ ಬೇಸಿಗೆಯಲ್ಲಿ ಆಯುರ್ವೇದ ಬೇಸಿಗೆ ಚಹಾವನ್ನು ಪ್ರಯತ್ನಿಸಿ. ಆರೋಗ್ಯವಾಗಿರಿ.

(This copy first appeared in Hindustan Times Kannada website. To read more like this please logon to kannada.hindustantimes.com)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ