logo
ಕನ್ನಡ ಸುದ್ದಿ  /  ಜೀವನಶೈಲಿ  /  ಸ್ಥೂಲಕಾಯದ ಮಕ್ಕಳ ಅನಾರೋಗ್ಯ ಪತ್ತೆಗೆ ಹೊಸ ಬ್ಲಡ್‌ ಟೆಸ್ಟ್‌ ಅಭಿವೃದ್ಧಿ ಪಡಿಸಿದ ಸಂಶೋಧಕರು; ಮಧುಮೇಹ, ಹೃದ್ರೋಗ, ಲಿವರ್ ಸಮಸ್ಯೆ ಪತ್ತೆ ಸುಲಭ

ಸ್ಥೂಲಕಾಯದ ಮಕ್ಕಳ ಅನಾರೋಗ್ಯ ಪತ್ತೆಗೆ ಹೊಸ ಬ್ಲಡ್‌ ಟೆಸ್ಟ್‌ ಅಭಿವೃದ್ಧಿ ಪಡಿಸಿದ ಸಂಶೋಧಕರು; ಮಧುಮೇಹ, ಹೃದ್ರೋಗ, ಲಿವರ್ ಸಮಸ್ಯೆ ಪತ್ತೆ ಸುಲಭ

Umesh Kumar S HT Kannada

Sep 21, 2024 02:31 PM IST

google News

ಸ್ಥೂಲಕಾಯದ ಮಕ್ಕಳ ಅನಾರೋಗ್ಯ ಪತ್ತೆಗೆ ಹೊಸ ಬ್ಲಡ್‌ ಟೆಸ್ಟ್‌ ಅಭಿವೃದ್ಧಿ ಪಡಿಸಿದ ಸಂಶೋಧಕರು. ಬ್ಲಡ್‌ ಟೆಸ್ಟ್‌ (ಎಡ ಚಿತ್ರ) ಮತ್ತು ಮೆಟಾ ಎಐ ನಿರ್ಮಿತ ಮಗುವಿನ ಚಿತ್ರ ಬಲ ಭಾಗದ್ದು. ಸಾಂಕೇತಿಕವಾಗಿ ಬಳಸಲಾಗಿದೆ.

  • ಸ್ಥೂಲ ಕಾಯದ ಮಕ್ಕಳ ಅನಾರೋಗ್ಯ ಪತ್ತೆಗೆ ಹೊಸ ಬ್ಲಡ್‌ ಟೆಸ್ಟ್‌ ಅಭಿವೃದ್ಧಿ ಪಡಿಸಿದ ಲಂಡನ್‌ನ ಸಂಶೋಧಕರು, ಮಧುಮೇಹ, ಹೃದ್ರೋಗ, ಲಿವರ್ ಸಮಸ್ಯೆ ಪತ್ತೆ ಸುಲಭ ಎಂದು ಹೇಳಿದ್ದಾರೆ. ಈ ಕುರಿತು ಇನ್ನಷ್ಟು ಅಧ್ಯಯನ ಮುಂದುವರಿದಿದೆ ಎಂದು ವರದಿ ಹೇಳಿದೆ.

ಸ್ಥೂಲಕಾಯದ ಮಕ್ಕಳ ಅನಾರೋಗ್ಯ ಪತ್ತೆಗೆ ಹೊಸ ಬ್ಲಡ್‌ ಟೆಸ್ಟ್‌ ಅಭಿವೃದ್ಧಿ ಪಡಿಸಿದ ಸಂಶೋಧಕರು. ಬ್ಲಡ್‌ ಟೆಸ್ಟ್‌ (ಎಡ ಚಿತ್ರ) ಮತ್ತು ಮೆಟಾ ಎಐ ನಿರ್ಮಿತ ಮಗುವಿನ ಚಿತ್ರ ಬಲ ಭಾಗದ್ದು. ಸಾಂಕೇತಿಕವಾಗಿ ಬಳಸಲಾಗಿದೆ.
ಸ್ಥೂಲಕಾಯದ ಮಕ್ಕಳ ಅನಾರೋಗ್ಯ ಪತ್ತೆಗೆ ಹೊಸ ಬ್ಲಡ್‌ ಟೆಸ್ಟ್‌ ಅಭಿವೃದ್ಧಿ ಪಡಿಸಿದ ಸಂಶೋಧಕರು. ಬ್ಲಡ್‌ ಟೆಸ್ಟ್‌ (ಎಡ ಚಿತ್ರ) ಮತ್ತು ಮೆಟಾ ಎಐ ನಿರ್ಮಿತ ಮಗುವಿನ ಚಿತ್ರ ಬಲ ಭಾಗದ್ದು. ಸಾಂಕೇತಿಕವಾಗಿ ಬಳಸಲಾಗಿದೆ.

ಜಗತ್ತಿನಾದ್ಯಂತ ಜೀವನ ಶೈಲಿ ಕಾರಣಕ್ಕೆ ಸ್ಥೂಲಕಾಯ ಹೊಂದಿದ ಮಕ್ಕಳಲ್ಲಿ ಮಧುಮೇಹ ಸಾಮಾನ್ಯ. ಇದು ಜಗತ್ತಿನ ಸಮಸ್ಯೆಯಾಗಿದ್ದು, ಭಾರತದಲ್ಲಿ ಬಾಲ್ಯದ ಸ್ಥೂಲಕಾಯತೆಯು ಬೆಳೆಯುತ್ತಿರುವ ಆರೋಗ್ಯ ಕಾಳಜಿಯಾಗಿ ಕಂಡುಬಂದಿದೆ. ಈ ಸಮಸ್ಯೆಗೆ ಹಲವು ಕಾರಣಗಳು. ಇತ್ತೀಚಿನ ಅಂಕಿ ಅಂಶ ಅಂದರೆ, 2022 ರ ಲ್ಯಾನ್ಸೆಟ್ ಅಧ್ಯಯನವು ಭಾರತದಲ್ಲಿ 5 ರಿಂದ 19 ವರ್ಷದೊಳಗಿನ 12.5 ಮಿಲಿಯನ್ ಮಕ್ಕಳು ಬೊಜ್ಜು ಹೊಂದಿದ್ದಾರೆ ಎಂದು ಅಂದಾಜಿಸಲಾಗಿದೆ

ಈ ಪೀಠಿಕೆ ಹಾಕಿದ್ದಕ್ಕೆ ಇಷ್ಟೇ ಕಾರಣ. ಸಂಶೋಧಕರು, ಸ್ಥೂಲ ಕಾಯದ ಮಕ್ಕಳ ಅನಾರೋಗ್ಯ ಪತ್ತೆಗೆ ಹೊಸ ಬ್ಲಡ್‌ ಟೆಸ್ಟ್‌ ಅಭಿವೃದ್ಧಿ ಪಡಿಸಿದ್ದಾರೆ. ಟೈಪ್ 2 ಮಧುಮೇಹ, ಯಕೃತ್ತು ಮತ್ತು ಹೃದ್ರೋಗದಂತಹ ಸ್ಥೂಲಕಾಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಹೆಚ್ಚು ಒಳಗಾಗುವ ಮಕ್ಕಳನ್ನು ಗುರುತಿಸಲು ಲಿಪಿಡ್‌ ಬಳಸುವ ಹೊಸ ರೀತಿಯ ರಕ್ತ ಪರೀಕ್ಷೆಯನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.

ಮಕ್ಕಳ ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರುವ ಲಿಪಿಡ್‌ಗಳು ಮತ್ತು ಅಸ್ವಸ್ಥತೆಗಳ ನಡುವಿನ ಹೊಸ ಸಂಬಂಧವನ್ನು ಲಂಡನ್‌ನ ಕಿಂಗ್ಸ್ ಕಾಲೇಜ್ ಸಂಶೋಧಕರು ಕಂಡುಹಿಡಿದಿದ್ದಾರೆ. ಈ ಸಂಶೋಧನೆಯು ಯಕೃತ್ತಿನ ಕಾಯಿಲೆ ಸೇರಿ ಕಾಯಿಲೆಗಳಿಗೆ ಮುಂಚಿತವಾಗಿ ಎಚ್ಚರಿಕೆ ನೀಡಬಹುದು. ಈ ಅಧ್ಯಯನವನ್ನು ನೇಚರ್ ಮೆಡಿಸಿನ್‌ನಲ್ಲಿ ಪ್ರಕಟವಾಗಿದೆ.

ಆಸ್ಪತ್ರೆಗಳಲ್ಲಿ ಈಗಾಗಲೇ ಬಳಕೆಯಲ್ಲಿರುವ ರಕ್ತ ಪ್ಲಾಸ್ಮಾ ಪರೀಕ್ಷಾ ಯಂತ್ರಗಳನ್ನು ಬಳಸಿಕೊಂಡು ಮಕ್ಕಳಲ್ಲಿ ರೋಗದ ಆರಂಭಿಕ ಸೂಚಕಗಳನ್ನು ಹೆಚ್ಚು ತ್ವರಿತವಾಗಿ ಗುರುತಿಸಲು ಮತ್ತು ಸೂಕ್ತ ಚಿಕಿತ್ಸೆ ಪಡೆಯುವುದಕ್ಕೆ ಅವರಿಗೆ ಸುಲಭವಾಗುವಂತೆ ಮಾಡಲು ಇದು ವೈದ್ಯಕೀಯ ವೃತ್ತಿಪರರಿಗೆ ನೆರವಾಗುವುದೆಂದು ಸಂಶೋಧಕರು ಪ್ರತಿಪಾದಿಸಿದ್ದಾರೆ. ಮಕ್ಕಳಲ್ಲಿ ಸ್ಥೂಲಕಾಯದ ಸಮಸ್ಯೆ ಮತ್ತು ಅದರ ಜೊತೆಗಿರುವ ಆರೋಗ್ಯ ಸಮಸ್ಯೆಗಳಿಗೆ ಕೊಲೆಸ್ಟ್ರಾಲ್ ಪ್ರಮುಖ ಕಾರಣ ಎಂಬ ಸಾಮಾನ್ಯ ಕಲ್ಪನೆಯನ್ನು ಸಹ ಸಂಶೋಧನೆ ಪ್ರತಿಪಾದಿಸುತ್ತವೆ. ಇದು ರಕ್ತದ ಒತ್ತಡದಂತಹ ಆರೋಗ್ಯ ಅಪಾಯಗಳಿಗೆ ಕೊಡುಗೆ ನೀಡುವ ಹೊಸ ಲಿಪಿಡ್ ಅಣುಗಳನ್ನು ಗುರುತಿಸುತ್ತದೆ. ಆದರೆ ಮಗುವಿನ ತೂಕದೊಂದಿಗೆ ಮಾತ್ರ ಸಂಬಂಧಿಸಿಲ್ಲ ಎಂದು ಅವರು ತಿಳಿಸಿದ್ದಾರೆ.

ಲಿಪಿಡ್ ಸಂಶೋಧನೆ ಮತ್ತು ಮಕ್ಕಳ ಆರೋಗ್ಯದ ಮೇಲೆ ಅದರ

ಲಿಪಿಡ್‌ಗಳನ್ನು ಸಾಂಪ್ರದಾಯಿಕವಾಗಿ ದೇಹದಲ್ಲಿ ಕೊಬ್ಬಿನಾಮ್ಲಗಳೆಂದು ಹೇಳಲಾಗುತ್ತದೆ. ಒಳ್ಳೆಯ ಅಥವಾ ಕೆಟ್ಟ ರೀತಿಯ ಕೊಲೆಸ್ಟ್ರಾಲ್ ಅಥವಾ ಟ್ರೈಗ್ಲಿಸರೈಡ್‌ಗಳು, ಮಾನವ ದೇಹದಲ್ಲಿ ಹೆಚ್ಚು ಸಾಮಾನ್ಯವಾಗಿರುವ ರಕ್ತಪ್ರವಾಹದಲ್ಲಿ ಕಂಡುಬರುವ ಕೊಬ್ಬುಗಳು.

ಈ ವಿಷಯವಾಗಿ ಅದೇ ಗುಂಪಿನ ವಿಜ್ಞಾನಿಗಳ ಇತ್ತೀಚಿನ ಅಧ್ಯಯನ ವರದಿಯು ಶರೀರದೊಳಗಿನ ಈ ಪ್ರಕ್ರಿಯೆ ಹೆಚ್ಚು ಸಂಕೀರ್ಣ ಎಂಬುದನ್ನು ಸೂಚಿಸಿತ್ತು. ದೇಹದಲ್ಲಿ ಇರುವ ವಿವಿಧ ಲಿಪಿಡ್‌ಗಳ ಪ್ರಕಾರಗಳನ್ನು ಸಾವಿರಾರು ಸಂಖ್ಯೆಯಲ್ಲಿವೆ. ಪ್ರತಿಯೊಂದೂ ಪ್ರತ್ಯೇಕ ಕಾರ್ಯಗಳನ್ನು ಹೊಂದಿರುವುದನ್ನು ಪ್ರಸ್ತುತ ಪುರಾವೆಗಳು ತೋರಿಸಿಕೊಟ್ಟಿವೆ. ಇದಕ್ಕಾಗಿ ಮಾಸ್ ಸ್ಪೆಕ್ಟ್ರೋಮೆಟ್ರಿ ಎಂಬ ರಸಾಯನಶಾಸ್ತ್ರಕ್ಕೆ ಸಂಬಂಧಿಸಿದ ತಂತ್ರವನ್ನು ಬಳಸಲಾಗಿತ್ತು.

ಬೊಜ್ಜು ಹೊಂದಿರುವ 1,300 ಮಕ್ಕಳ ರಕ್ತದ ಲಿಪಿಡ್‌ ಪರಿಶೀಲಿಸಿ ಅವರಲ್ಲಿ 200 ಮಕ್ಕಳನ್ನು ಒಂದು ವರ್ಷ ಗಮನಿಸಲಾಯಿತು. ಇದಕ್ಕಾಗಿ ಹಾಲ್‌ಬಾಕ್-ಮಾದರಿ (HOLBAEK-model) ಅನುಸರಿಸಲಾಯಿತು. ಡೆನ್ಮಾರ್ಕ್‌ನಲ್ಲಿ ಜನಪ್ರಿಯ ಜೀವನ ಶೈಲಿ ಸುಧಾರಣಾ ಕ್ರಮ ಇದು. ಕೆಲವು ಮಕ್ಕಳ ಬಿಎಂಐಯಲ್ಲಿ ಸೀಮಿತ ಸುಧಾರಣೆಗಳ ಹೊರತಾಗಿಯೂ, ಮಧ್ಯಸ್ಥಿಕೆಯ ಗುಂಪಿನಲ್ಲಿ, ಮಧುಮೇಹದ ಅಪಾಯ, ಇನ್ಸುಲಿನ್ ಪ್ರತಿರೋಧ ಮತ್ತು ರಕ್ತದೊತ್ತಡದೊಂದಿಗೆ ಲಿಪಿಡ್‌ಗಳ ಎಣಿಕೆಗಳು ಕಡಿಮೆಯಾಗುತ್ತವೆ ಎಂದು ನಂತರದ ವರದಿಗಳು ತೋರಿಸಿವೆ ಎಂದು ಅಧ್ಯಯನ ತಂಡದ ಲೇಖಕರಾದ ಲಂಡನ್‌ನ ಕಿಂಗ್ಸ್‌ ಕಾಲೇಜಿನ ಡಾ. ಕ್ರಿಸ್ಟಿನಾ ಲೆಗಿಡೊ ಕ್ವಿಂಗ್ಲೆ ಹೇಳಿದ್ದಾರೆ.

ಕೊಲೆಸ್ಟ್ರಾಲ್‌ ಮೀರಿ ಲಿಪಿಡ್ ಅರ್ಥಮಾಡಿಕೊಳ್ಳುವ ವಿಧಾನ

ಫ್ಯಾಟಿ ಲಿವರ್‌ (ಕೊಬ್ಬಿನ ಪಿತ್ತಜನಕಾಂಗ) ಕಾಯಿಲೆಯಂತಹ ಪರಿಸ್ಥಿತಿಗಳಿಗೆ ಸ್ಥೂಲಕಾಯ ಅಪಾಯಕಾರಿ ಅಂಶ. ಆದರೆ ಮಕ್ಕಳು ಅಪಾಯದಲ್ಲಿರುವಾಗ ಮತ್ತು ಅವರ ಗೆಳೆಯರಿಗಿಂತ ಸ್ವಲ್ಪ ದೊಡ್ಡದಾದಾಗ ಚಿಕಿತ್ಸೆ ನೀಡಲು ವೈದ್ಯರು ಈ ಮಾನದಂಡಗಳನ್ನು ಬಳಸಬಹುದು ಎಂದು ಅಧ್ಯಯನ ತಂಡವು ಪ್ರತಿಪಾದಿಸಿದೆ.

"ಈ ಮಾರಣಾಂತಿಕ ಕಾಯಿಲೆಗಳಿಗೆ ಅಪಾಯದಲ್ಲಿರುವ ಮಕ್ಕಳನ್ನು ಆರಂಭಿಕ ಗುರುತಿಸುವಿಕೆ ನಿರ್ಣಾಯಕ. ಅಧ್ಯಯನವು ಸ್ಥೂಲಕಾಯತೆಯ ನಿರ್ವಹಣೆಗೆ ಹೆಚ್ಚಿನ ಅಗತ್ಯವಿರುವ ಬಲವಾದ ಪುರಾವೆಗಳನ್ನು ಒದಗಿಸುತ್ತದೆ. ತಮ್ಮ ಮಕ್ಕಳ ಜೀವನದಲ್ಲಿ ಹೆಚ್ಚು ಸಹಾನುಭೂತಿಯಿಂದ ಮಧ್ಯಪ್ರವೇಶಿಸುವ ವಿಶ್ವಾಸ, ತೂಕವನ್ನು ಕಳೆದುಕೊಳ್ಳಲು ಪಾಲಕರಿಗೆ ಸಹಾಯ ಮಾಡುತ್ತದೆ” ಎಂದು ಅಧ್ಯಯನದ ಭಾಗವಾಗಿದ್ದ ಮತ್ತು ಎಸ್‌ಡಿಸಿಸಿಯಲ್ಲಿ ವಿಶ್ಲೇಷಣೆ ನಡೆಸಿದ ಡಾ ಕರೋಲಿನಾ ಸುಲೆಕ್ ಹೇಳಿದರು.

ಸಂಶೋಧಕರು ತಮ್ಮ ಮುಂದಿನ ಹಂತದ ಅಧ್ಯಯನದಲ್ಲಿ ಜೆನೆಟಿಕ್ಸ್ ಲಿಪಿಡ್‌ಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಮತ್ತು ಚಯಾಪಚಯ ಕಾಯಿಲೆಗಳಿಗೆ ಸಂಬಂಧಿಸಿ ಇದರ ಅರ್ಥವೇನು ಎಂಬುದನ್ನು ತಿಳಿಯಲಿದ್ದಾರೆ. ಅದೇ ರೀತಿ ಆರೋಗ್ಯವನ್ನು ಸುಧಾರಿಸಲು ಈ ಲಿಪಿಡ್‌ಗಳನ್ನು ಹೇಗೆ ಬದಲಾಯಿಸಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುವಂತೆ ಅಧ್ಯಯನ ನಡೆಸಲಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ