logo
ಕನ್ನಡ ಸುದ್ದಿ  /  ಜೀವನಶೈಲಿ  /  ಅತಿಯಾದ ಎಲೆಕ್ಟ್ರಾನಿಕ್‌ ಉಪಕರಣಗಳ ಬಳಕೆಯಿಂದ ಮಕ್ಕಳ ಮೆದುಳಿನ ಮೇಲೆ ಪರಿಣಾಮ; ಇದರಿಂದಾಗುವ ಸಮಸ್ಯೆಗಳ ಬಗ್ಗೆ ತಜ್ಞರು ಹೇಳುವ ವಿಚಾರಗಳಿವು

ಅತಿಯಾದ ಎಲೆಕ್ಟ್ರಾನಿಕ್‌ ಉಪಕರಣಗಳ ಬಳಕೆಯಿಂದ ಮಕ್ಕಳ ಮೆದುಳಿನ ಮೇಲೆ ಪರಿಣಾಮ; ಇದರಿಂದಾಗುವ ಸಮಸ್ಯೆಗಳ ಬಗ್ಗೆ ತಜ್ಞರು ಹೇಳುವ ವಿಚಾರಗಳಿವು

HT Kannada Desk HT Kannada

Nov 26, 2023 02:08 PM IST

google News

ಡಾ. ಶಿವಕುಮಾರ್ ಆರ್ (ಬಲಚಿತ್ರ)

    • ಅತಿಯಾದ ಎಲೆಕ್ಟ್ರಾನಿಕ್‌ ಉಪಕರಣಗಳ ಬಳಕೆಯಿಂದ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಇದರಿಂದ ಮೆದುಳಿನಲ್ಲಿ ಹಲವು ರೀತಿಯ ಸಮಸ್ಯೆಗಳು ಕಾಣಿಸಬಹುದು. ಈ ಬಗ್ಗೆ ಮಣಿಪಾಲ ಹಾಸ್ಪಿಟಲ್‌ನ ಹಿರಿಯ ಕನ್ಸಲ್ಟೆಂಟ್ ಡಾ. ಶಿವಕುಮಾರ್ ಆರ್ ಹೇಳುವುದು ಹೀಗೆ. 
ಡಾ. ಶಿವಕುಮಾರ್ ಆರ್ (ಬಲಚಿತ್ರ)
ಡಾ. ಶಿವಕುಮಾರ್ ಆರ್ (ಬಲಚಿತ್ರ)

ಇಂದಿನ ಆಧುನಿಕ ಯುಗವು ಡಿಜಿಟಲ್ ತಂತ್ರಜ್ಞಾನದ ಮೇಲೆ ಹೆಚ್ಚು ಅವಲಂಬಿತವಾಗಿದೆ. ಮಕ್ಕಳಲ್ಲಿಯೂ ಕೂಡ ಇಲೆಕ್ಟ್ರಾನಿಕ್ ಉಪಕರಣಗಳ ಬಳಕೆ ಹೆಚ್ಚಾಗಿದೆ. 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೆದುಳಿನ ಮೇಲೆ ಈ ಉಪಕರಣಗಳ ಪ್ರಭಾವವನ್ನು ನಿರ್ಣಯಿಸಲು ಹಲವಾರು ಅಧ್ಯಯನಗಳು ನ್ಯೂರೋಇಮೇಜಿಂಗ್ ತಂತ್ರಜ್ಞಾನವನ್ನು ಬಳಸಿಕೊಂಡಿವೆ. ದೀರ್ಘಕಾಲದ ಇಲೆಕ್ಟ್ರಾನಿಕ್ ಉಪಕರಣಗಳ ಬಳಕೆಯು ಮಕ್ಕಳಲ್ಲಿ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳನ್ನು ಹೊಂದಿದೆ.

ಅಧಿಕೃತ ಇಲೆಕ್ಟ್ರಾನಿಕ್ ಉಪಕರಣಗಳ ಬಳಕೆ, ಬೆಳೆಯುವ ಮಕ್ಕಳ ಮೆದುಳಿನ ಕಾರ್ಯನಿರ್ವಹಣೆಯಲ್ಲಿ ತೊಡಕು ಮತ್ತು ಆಕಾರದಲ್ಲಿ ಬದಲಾವಣೆಗೆ ಕಾರಣವಾಗಬಹುದು ಎಂದು ಈ ಅಧ್ಯನಗಳು ಸಾಬೀತು ಪಡಿಸಿವೆ. ಕೆಲವು ಸಾಧನ ಆಧಾರಿತ (device – based) ಸಂಶೋಧನೆಗಳು ಏಕಾಗ್ರತೆ, ತಾರ್ಕಿಕ ಚಿಂತನೆ, ಮತ್ತು ಸಮಸ್ಯೆಗಳನ್ನೂ ಪರಿಹರಿಸುವ ಕ್ಷಮತೆಯಲ್ಲಿ ಸುಧಾರಣೆ ಬಗ್ಗೆ ಉಲ್ಲೇಖಿಸಿವೆ. ಆದರೆ, ಇಲೆಕ್ಟ್ರಾನಿಕ್ ಉಪಕರಣಗಳ ಬಳಕೆಯಿಂದ ಆಗುವ ಧನಾತ್ಮಕ ಬದಲಾವಣೆಗಳ ಬಗ್ಗೆ ಮಾತನಾಡುವ ಇಂತಹ ಅಧ್ಯಯನಗಳು ತುಂಬಾ ವಿರಳ.

ಮೆದುಳಿನ ಪೂರ್ವ-ಮುಂಭಾಗದ ಕಾರ್ಟೆಕ್ಸ್ ಕಾರ್ಯನಿರ್ವಹಣೆ, ಸ್ಮರಣೆ ಮತ್ತು ಸನ್ನಿವೇಶಗಳಿಗೆ ಹೊಂದಿಕೊಳ್ಳುವ ಅಥವಾ ಪ್ರತಿಕ್ರಿಯಿಸುವ ಸಾಮರ್ಥ್ಯ ಇತ್ಯಾದಿ ಕಾರ್ಯನಿರ್ವಾಹಕ ಕೌಶಲಗಳ ಅಡಿಪಾಯವಾಗಿದೆ. ಅಂತೆಯೇ ಸ್ಪರ್ಶ, ಶಾಖ, ಶೀತ ಮತ್ತು ನೋವಿನ ಪ್ರಕ್ರಿಯೆಗೆ ಪರಿಎಟಲ್ ಲೋಬ್ ಸಹಕರಿಸುತ್ತದೆ. ಜ್ಞಾಪಕ, ಶ್ರವಣ ಮತ್ತು ಭಾಷೆಯಲ್ಲಿ ಸಹಾಯ ಟೆಂಪೋರಲ್ ಲೋಬ್ ಮತ್ತು ದೃಶ್ಯ ಮಾಹಿತಿಯ ವ್ಯಾಖ್ಯಾನದಲ್ಲಿ ಆಕ್ಸಿಪಿಟಲ್ ಲೋಬ್‌ಗಳು ಸಹಾಯ ಮಾಡುತ್ತವೆ. ಬೆಳೆಯುವ ಮಕ್ಕಳು ಅತಿಯಾಗಿ ಸ್ಕ್ರೀನ್ ಬೆಳೆಸಿದಲ್ಲಿ ಈ ಎಲ್ಲ ಮೆದುಳಿನ ಭಾಗಗಳು ಹಾಗೂ ಮೇಲೆ ನಮೂದಿಸಿರುವ ಅದಕ್ಕೆ ಸಂಬಂಧಪಟ್ಟ ಕಾರ್ಯಗಳಲ್ಲೂ ಋಣಾತ್ಮಕ ಬದಲಾವಣೆಗಳು ಕಂಡುಬರುತ್ತವೆ.

ಮಕ್ಕಳಲ್ಲಿ ಸರಿಯಾದ ಬೆಳವಣಿಗೆಗೆ ಒಳ್ಳೆಯ ನಿದ್ರೆ ಅತ್ಯವಶ್ಯಕ. ಇಲೆಕ್ಟ್ರಾನಿಕ್ ಉಪಕರಣಗಳ ದೀರ್ಘಕಾಲದ ಉಪಯೋಗವು ಹಾಗೂ ಪರದೆಯ ಸಾಧನಗಳಿಂದ ಹೊರಬರುವ ಬೆಳಕು ನಿದ್ರೆಯ ಸಮಯ ಹಾಗೂ ಸರಿಯಾದ ನಿದ್ರೆಯನ್ನು ಅಡ್ಡಿಪಡಿಸುತ್ತದೆ ಮತ್ತು ದೇಹದ ಗಡಿಯಾರವನ್ನು ಡಿಸಿಂಕ್ರೊನೈಸ್ ಮಾಡುತ್ತದೆ. ಇದು ಹಾರ್ಮೋನ್ ಅಸಮತೋಲನ, ಮೆದುಳಿನ ಉರಿಯೂತದಂತಹ ಹಲವಾರು ರೀತಿಯ ಇತರ ಅನಾರೋಗ್ಯಕರ ಪ್ರತಿಕ್ರಿಯೆಗಳಿಗೆ ಅನುವು ಮಾಡುತ್ತದೆ.

ಒಟ್ಟಿನಲ್ಲಿ ಹೇಳುವುದಾದರೆ, ಡಿಜಿಟಲ್ ತಂತ್ರಜ್ಞಾನ ಹಾಗೂ ಉಪಕರಣಗಳ ಬಳಕೆ ಹತ್ತು ಹಲವಾರು ಬಗೆಗಳಿಂದ ಮಕ್ಕಳ ಮೆದುಳಿನ ಕಾರ್ಯಕ್ಷಮತೆ ಹಾಗೂ ಒಟ್ಟಾರೆ ಬೆಳೆವಣಿಗೆಯಲ್ಲಿ ತೊಡಕು ಉಂಟು ಮಾಡುತ್ತದೆ. ಆದಕಾರಣ ಡಿಜಿಟಲ್ ತಂತ್ರಜ್ಞಾನ ಹಾಗೂ ಉಪಕರಣಗಳನ್ನು ಮಿತವಾಗಿ ಬಳಸುವುದು ಅತ್ಯವಶ್ಯಕ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ