logo
ಕನ್ನಡ ಸುದ್ದಿ  /  ಜೀವನಶೈಲಿ  /  ಕಣ್ಣಲ್ಲಿ ಹರಳಿದ್ರೆ ಎರಡೇ ನಿಮಿಷದಲ್ಲಿ ತೆಗಿತಾರೆ ಗೌರವ್ವ ಆಯಿ; ರಾಯಭಾಗದ ಈ ಅಜ್ಜಿ ಯಾವ ಡಾಕ್ಟರ್‌ಗೂ ಕಡಿಮೆ ಇಲ್ಲ

ಕಣ್ಣಲ್ಲಿ ಹರಳಿದ್ರೆ ಎರಡೇ ನಿಮಿಷದಲ್ಲಿ ತೆಗಿತಾರೆ ಗೌರವ್ವ ಆಯಿ; ರಾಯಭಾಗದ ಈ ಅಜ್ಜಿ ಯಾವ ಡಾಕ್ಟರ್‌ಗೂ ಕಡಿಮೆ ಇಲ್ಲ

Reshma HT Kannada

May 23, 2024 06:37 PM IST

google News

ಕಣ್ಣಲ್ಲಿ ಹರಳಿದ್ರೆ ಎರಡೇ ನಿಮಿಷದಲ್ಲಿ ತೆಗಿತಾರೆ ಗೌರವ್ವ ಆಯಿ

    • ಧೂಳು, ಗಾಳಿಯಲ್ಲಿ ಓಡಾಡುವಾಗ ಕಣ್ಣಿಗೆ ಕಸ, ಕಲ್ಲು, ಧೂಳಿನ ಕಣಗಳು ಬೀಳುವುದು ಸಹಜ. ಕೆಲವೊಮ್ಮೆ ಇವು ಎಷ್ಟು ಕಿರಿಕಿರಿ ಮಾಡುತ್ತವೆ ಎಂದರೆ ಏನೇ ಪ್ರಯತ್ನ ಮಾಡಿದ್ರೂ ಹೊರ ಹೋಗುವುದಿಲ್ಲ. ಆದರೆ ರಾಯಭಾಗದ ಗೌರವ್ವ ಆಯಿ ಎರಡೇ ನಿಮಿಷದಲ್ಲಿ ಕಣ್ಣಿನಲ್ಲಿನ ಹರಳು ತೆಗಿತಾರೆ ಅಂದ್ರೆ ನಂಬಲೇಬೇಕು. ಇವರು ಯಾವ ಡಾಕ್ಟರ್‌ಗೂ ಕಡಿಮೆಯಲ್ಲ ಅನ್ನೋದು ಅತಿಯೋಶಕ್ತಿಯಲ್ಲ. 
ಕಣ್ಣಲ್ಲಿ ಹರಳಿದ್ರೆ ಎರಡೇ ನಿಮಿಷದಲ್ಲಿ ತೆಗಿತಾರೆ ಗೌರವ್ವ ಆಯಿ
ಕಣ್ಣಲ್ಲಿ ಹರಳಿದ್ರೆ ಎರಡೇ ನಿಮಿಷದಲ್ಲಿ ತೆಗಿತಾರೆ ಗೌರವ್ವ ಆಯಿ

ಕಣ್ಣು ದೇಹದ ಸೂಕ್ಷ್ಮ ಭಾಗಗಳಲ್ಲಿ ಒಂದು. ಕಣ್ಣಿನ ಬಗ್ಗೆ ನಾವು ಜಾಗರೂಕರಾಗಿರಬೇಕು. ಕಣ್ಣಿಗೆ ಏನಾದ್ರೂ ಅಪಾಯ ಆದ್ರೆ ಸರಿ ಪಡಿಸೋದು ಕಷ್ಟ ಆಗಬಹುದು. ಆದರೂ ಕೆಲವೊಮ್ಮೆ ಧೂಳು, ಗಾಳಿಯಿಂದ ಕಣ್ಣನ್ನು ರಕ್ಷಿಸಿಕೊಳ್ಳುವುದು ಕಷ್ಟ ಎನ್ನಿಸುತ್ತದೆ. ಸೂಕ್ಷ್ಮ ಕಣಗಳು ಕಣ್ಣಿಗೆ ತಾಕಿದ್ರೆ ಅದು ನಮಗೆ ಅರಿವಿಗೇ ಬರುವುದಿಲ್ಲ. ಆದರೆ ಇದು ನಿರಂತರ ಕಿರಿಕಿರಿಗೆ ಕಾರಣವಾಗುತ್ತದೆ. ಪದೇ ಪದೇ ಕಣ್ಣಿನಲ್ಲಿ ಚುಚ್ಚಿದ ಅನುಭವ ನೀಡುತ್ತದೆ.

ಕೆಲವೊಮ್ಮೆ ಗಾಳಿಯಲ್ಲಿನ ಸಣ್ಣ ಧೂಳಿನ ಕಣ ಅಥವಾ ಕಲ್ಲಿನ ಕಣಗಳು ಕಣ್ಣಿಗೆ ಸೇರಬಹುದು. ನೀರು ಹಾಕಿ ಪಟಪಟನೇ ಕಣ್‌ರಪ್ಪೆ ಬಡಿದರೂ ಪ್ರಯೋಜನವಾಗುವುದಿಲ್ಲ. ಐ ಡ್ರಾಪ್‌ ಕೂಡ ಯೂಸ್‌ ಆಗೊಲ್ಲ. ಅಂತಹ ಸಂದರ್ಭದಲ್ಲಿ ಕಣ್ಣಿನ ವೈದ್ಯರ ಬಳಿಗೆ ಹೋಗಿ ತೋರಿಸಬೇಕಾಗುತ್ತದೆ. ಆದರೆ ರಾಯಭಾಗದ ಜನ ಖಂಡಿತ ವೈದ್ಯರ ಬಳಿಗೆ ಹೋಗುವುದಿಲ್ಲ. ಅವರು ನೇರವಾಗಿ ಗೌರವ್ವ ಆಯಿಯ ಬಳಿಗೆ ಹೋಗುತ್ತಾರೆ. ಅವರು ಕಣ್ಣಿನಲ್ಲಿನ ಹರಳುಗಳನ್ನು ಎರಡೇ ನಿಮಿಷದಲ್ಲಿ ತೆಗೆಯುತ್ತಾರೆ. ಯಾರೀ ಗೌರವ್ವ ಆಯಿ ಎಂತ ಕೇಳ್ತೀರಾ? ಇವರ ಬಗ್ಗೆ ಈರಣ್ಣ ಮಡಿವಾಳರ ಅವರು ಬರೆದುಕೊಂಡು ಫೇಸ್‌ಬುಕ್‌ ಪೋಸ್ಟ್‌ ಇಲ್ಲಿದೆ ನೋಡಿ.

ಯಾರೀ ಗೌರವ್ವ ಆಯಿ?

ಎರಡು ನಿಮಿಷದಲ್ಲಿ ಕಣ್ಣಲ್ಲಿನ ಹರಳು ತೆಗೆಯುತ್ತಾಳೆ ಈ ಗೌರವ್ವ ಆಯಿ. ಇಂದು ಆಕಸ್ಮಿಕವಾಗಿ ಗೌರವ್ವ ಆಯಿ ಭೇಟಿಯಾದೆ. ಎರಡು ನಿಮಿಷದಲ್ಲಿ ಒಂದು ಚೂರು ನೋವಿಲ್ಲದೆ ನನ್ನ ಕಣ್ಣಲ್ಲಿನ ಸುಮಾರು ಹತ್ತು ಗ್ರಾಂ ಹರಳುಗಳನ್ನ ನಿರಾಯಾಸವಾಗಿ ತೆಗೆದಳು ಈ ಮಹಾತಾಯಿ. ನಿಮ್ಮ ಕಣ್ಣಲ್ಲಿ ಏನೇ ಬಿದ್ದಿದ್ದರೂ ಕಸ ಕಡ್ಡಿ ಚೂರು ಏನೇ ಇದ್ದರೂ ಎರಡು ನಿಮಿಷದಲ್ಲಿ ಸ್ವಲ್ಪವೂ ನೋವಿನ ಅನುಭವವಾಗದಂತೆ ತೆಗೆಯಬಲ್ಲಳು ಈ ಅಜ್ಜಿ. ನಿಮಗೆ ಅಗತ್ಯವಾದರೆ ಖಂಡಿತ ರಾಯಭಾಗಕ್ಕೆ ಬನ್ನಿ. ಕಣ್ಣಲ್ಲಿ ಕಬ್ಬಿಣದ ಚೂರುಗಳು ಬಿದ್ದಿದ್ದ ಮಹಾರಾಷ್ಟ್ರದ ಒಬ್ಬ ಹೆಣ್ಣುಮಗಳಿಗೆ ಈ ಅಜ್ಜಿ ಕಣ್ಣು ಸ್ವಚ್ಛಗೊಳಿಸಿದ್ದಕ್ಕೆ ಬಂಗಾರದ ಸರವೊಂದನ್ನ ಮಾಡಿಸಿಕೊಟ್ಟು ಅಜ್ಜಿಗೆ ಸನ್ಮಾನಿಸಿ ಕಳಿಸಿದ್ದಾರೆ. ಈ ಅಜ್ಜಿಯ ವಿದ್ಯೆಗೆ ಇದು ಕಡಿಮೆಯೇ. ನನ್ನ ಕಣ್ಣಲ್ಲಿನ ಕಲ್ಲಿನ ಚೂರುಗಳನ್ನ ನೋಡಿ ನನಗೇ ಆಶ್ಚರ್ಯ. ಆ ಹರಳು ತೆಗೆದ ಮೇಲೆ ಎಂಥದೋ ಅವ್ಯಕ್ತ ನಿರಾಳತೆ. ಥ್ಯಾಂಕ್ಯೂ ಗೌರವ್ವ ಆಯಿ.

ಕಣ್ಣಿನಿಂದ ಹರಳು ತೆಗೆದಿರುವುದು (ಎಡಚಿತ್ರ) ಗೌರವ್ವ ಅಜ್ಜಿ (ಬಲಚಿತ್ರದಲ್ಲಿ ಇರುವವರು)

ನಿಮಗೂ ಕಣ್ಣಲ್ಲಿ ಕಸ ಅಥವಾ ಧೂಳು ಬಿದ್ದ ಅನುಭವ ಆಗುತ್ತಿದ್ದು, ಎಷ್ಟೇ ಪ್ರಯತ್ನ ಪಟ್ಟರೂ ಸರಿಯಾಗಿಲ್ಲ ಅಂದ್ರೆ, ಆಸ್ಪತ್ರೆಗೆ ಹೋಗಿ ವೈದ್ಯರ ಬಳಿ ತೋರಿಸಿದ್ರೆ ನೋವಾಗುತ್ತೆ ಅನ್ನಿಸಿದ್ರೆ ಈ ನೀವು ರಾಯಭಾಗಕ್ಕೆ ಹೋಗಿ ಗೌರವ್ವ ಅಜ್ಜಿಯನ್ನು ಭೇಟಿ ಮಾಡಬಹುದು. ರಾಯಭಾಗ ಬೆಳಗಾವಿ ಜಿಲ್ಲೆಯಲ್ಲಿರುವ ಒಂದು ಹಳ್ಳಿ.

ಇದನ್ನೂ ಓದಿ 

ಬಿರುಬಿಸಿಲಿನ ಕಾರಣ ಕಣ್ಣು ಒಣಗಿದಂತಾಗಿ ತುರಿಕೆ, ಮಂಜಾಗೋದು ಇಂತಹ ಸಮಸ್ಯೆ ಕಾಡ್ತಿದ್ಯಾ; ನಿವಾರಣೆಗೆ ಇಲ್ಲಿದೆ ಸುಲಭ ಪರಿಹಾರ

ಬೇಸಿಗೆಯಲ್ಲಿ ಅತಿಯಾದ ಬಿಸಿಲು, ಧೂಳು, ಮಾಲಿನ್ಯದ ಕಾರಣದಿಂದ ಕಣ್ಣುಗಳು ಒಣಗುವುದು ಸಹಜ. ಇದರಿಂದ ಕಣ್ಣಿನ ಕಿರಿಕಿರಿ, ಕಣ್ಣು ಮಂಜಾದಂತಾಗುವುದು ಇಂತಹ ಸಮಸ್ಯೆಗಳು ಎದುರಾಗಬಹುದು. ಇದಕ್ಕೆ ಸೂಕ್ತ ಕಾಳಜಿ ಅಗತ್ಯ. ಬೇಸಿಗೆಯಲ್ಲಿ ನೀವು ಡ್ರೈ ಐ ಸಮಸ್ಯೆ ಎದುರಿಸುತ್ತಿದ್ದರೆ ಅದರ ನಿವಾರಣೆಗೆ ಈ ಸುಲಭ ಪರಿಹಾರಗಳನ್ನು ಟ್ರೈ ಮಾಡಿ. 

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

 

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ