ICU New Guidelines:ರೋಗಿಗಳು ಅಥವಾ ಸಂಬಂಧಿಕರು ಒಪ್ಪದಿದ್ದರೆ ಆಸ್ಪತ್ರೆಗಳು ಯಾರನ್ನೂ ಐಸಿಯುಗೆ ದಾಖಲಿಸುವಂತಿಲ್ಲ: ಹೊಸ ಮಾರ್ಗಸೂಚಿಯಲ್ಲೇನಿದೆ
Jan 03, 2024 06:27 PM IST
ಕೇಂದ್ರ ಆರೋಗ್ಯ ಸಚಿವಾಲಯವು ಐಸಿಯುಗೆ ಸಂಬಂಧಿಸಿ ಹೊಸ ಮಾರ್ಗಸೂಚಿಗಳನ್ನು ರೂಪಿಸಿದೆ.
- ICU New Guidelines ಕೇಂದ್ರ ಆರೋಗ್ಯ ಸಚಿವಾಲಯವು ಐಸಿಯುನ ಬಳಕೆಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಮಾರ್ಗಸೂಚಿಯಲ್ಲಿಏನಿದೆ.
ದೆಹಲಿ: ಆಸ್ಪತ್ರೆಗಳು ಹಾಗೂ ರೋಗಿಗಳ ಕುಟುಂಬದವರ ನಡುವೆ ಆಗುವ ಗೊಂದಲಗಳನ್ನು ತಡೆಗಟ್ಟಿ ಪಾರದರ್ಶಕ ವ್ಯವಸ್ಥೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಕೇಂದ್ ಆರೋಗ್ಯ ಸಚಿವಾಲಯವು ಆಸ್ಪತ್ರೆಗಳ ತೀವ್ರ ನಿಗಾ ಘಟಕಗಳ ನಿರ್ವಹಣೆ ವಿಚಾರದಲ್ಲಿ ಹೊಸ ಮಾರ್ಗ ಸೂಚಿಗಳನ್ನು ಬಿಡುಗಡೆ ಮಾಡಿದೆ. ರೋಗಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿ ತುರ್ತು ಚಿಕಿತ್ಸಾ ಘಟಕದಲ್ಲಿದ್ದವರನ್ನು ಅಲ್ಲಿ ಇರಿಸುವುದು ಬೇಡ ಎಂದು ಸಂಬಂಧಿಕರು ಹೇಳಿದರೆ ಅದನ್ನು ಪಾಲಿಸಬೇಕು ಎಂದು ಹೊಸ ಮಾರ್ಗ ಸೂಚಿಯಲ್ಲಿ ತಿಳಿಸಲಾಗಿದೆ.
ಸಂಬಂಧಿಕರು ಇಲ್ಲವೇ ರೋಗಿಯ ಕಡೆಯವರು ಗಂಭೀರ ಅನಾರೋಗ್ಯಕ್ಕೆ ತುತ್ತಾಗಿರುವ ರೋಗಿಯನ್ನು ಆಸ್ಪತ್ರೆಗಳ ತೀವ್ರ ನಿಗಾ ಘಟಕ(ICU)ದಲ್ಲಿ ಇರಿಸಿಕೊಳ್ಳುವುದು ಬೇಡ ಎಂದು ವಿರೋಧಿಸಿದರೆ ಇಲ್ಲವೇ ಅದನ್ನು ಕಡ್ಡಾಯವಾಗಿ ಜಾರಿಗೊಳಿಸಿ ಅವರನ್ನು ಬಿಡುಗಡೆ ಮಾಡಬೇಕು. ಹೀಗೆ ಮಾಢಿದರೆ ಅದು ಕಾನೂನು ಕ್ರಮಕ್ಕೂ ದಾರಿ ಮಾಡಿಕೊಡಲಿದೆ ಎಂದು ಮಾರ್ಗಸೂಚಿ ಪಟ್ಟಿಯಲ್ಲಿ ಹೇಳಲಾಗಿದೆ.
ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆ ಇದ್ದರೆ, ಐಸಿಯು ಆರೈಕೆ ವಿರುದ್ಧದ ಸುಧಾರಿತ ನಿರ್ದೇಶನಗಳ ಪಾಲನೆಯಲ್ಲಿ ಸೂಚಿಸಿದ್ದರೆ ಐಸಿಯುನಲ್ಲಿ ದಾಖಲಿಸುವಂತಿಲ್ಲ. ಯಾವುದೇ ಚಿಕಿತ್ಸೆಯಿಂದ ರೋಗಿಯ ಆರೋಗ್ಯದಲ್ಲಿ ಯಾವುದೇ ಚೇತರಿಕೆ ತರಲು ಸಾಧ್ಯವಿಲ್ಲದ ಸಂದರ್ಭದಲ್ಲಿ ಅಥವಾ ರೋಗಿಗೆ ಹೆಚ್ಚಿನ ಚಿಕಿತ್ಸೆ ಪ್ರಯೋಜನವಿಲ್ಲದಿದ್ದ ಪಕ್ಷದಲ್ಲಿ ಸಂಬಂಧಪಟ್ಟ ರೋಗಿಯನ್ನು ಐಸಿಯುನಲ್ಲಿಡುವುದು ನಿರರ್ಥಕವಾಗಲಿದೆ. ಈ ಕಾರಣದಿಂದಲೇ 24 ತಜ್ಞರ ಅಭಿಪ್ರಾಯ ಆಧರಿಸಿ ಇದನ್ನು ಮಾರ್ಗಸೂಚಿಯಾಗಿ ರೂಪಿಸಲಾಗಿದೆ ಎಂದು ಸಮಿತಿ ಸ್ಪಷ್ಟವಾಗಿ ತಿಳಿಸಿದೆ.
ಒಂದೊಮ್ಮೆ ಯಾವುದೇ ರೋಗಿಯು ಐಸಿಯು ಹಾಸಿಗೆಯ ನಿರೀಕ್ಷೆಯಲ್ಲಿದ್ದರೆ, ಅಂಥವರ ರಕ್ತದೊತ್ತಡ, ನಾಡಿ ಮಿಡಿತ, ಉಸಿರಾಟ ಕ್ರಿಯೆ ಹಾಗೂ ಪ್ರಕ್ರಿಯೆ, ಹೃದಯದ ಆರೋಗ್ಯ, ಆಮ್ಲಜನಕ ಹೀರಿಕೊಳ್ಳುವ ಸಾಮರ್ಥ್ಯ, ಮೂತ್ರ ವಿಸರ್ಜನೆಯ ಪ್ರಮಾಣ ಮತ್ತು ನರವ್ಯೂಹದ ಸ್ಥಿತಿಗತಿಯಂತಹ ಅಂಶಗಳನ್ನು ಪರೀಕ್ಷಿಸಿಯೇ ರೋಗಿಯನ್ನು ದಾಖಲಿಸಿಕೊಳ್ಳಬೇಕು. ಇದೆಲ್ಲವನ್ನೂ ರೋಗಿಯ ಕಡೆಯವರ ಗಮನಕ್ಕೆ ತರಬೇಕು ಎಂದು ನಿರ್ದೇಶಿಸಲಾಗಿದೆ.
ಹೃದಯ ಸಂಬಂಧಿ ಸಮಸ್ಯೆ ಅಥವಾ ಉಸಿರಾಟ ಸಮಸ್ಯೆ ಅಥವಾ ಯಾವುದಾದರೂ ಪ್ರಮುಖ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೆ ಅಂಥವರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳಲು ಅಭ್ಯಂತರವಿಲ್ಲ. ಆದರೆ ರೋಗಿಯ ಸಂಬಂಧಿಕರು ಐಸಿಯು ಚಿಕಿತ್ಸೆ ಬೇಡವೆಂದರೆ ಅಂಥ ರೋಗಿಗಳನ್ನು ದಾಖಲಿಸಬಾರದು ಎಂದು ತಿಳಿಸಲಾಗಿದೆ.
ಕೋವಿಡ್‌ನಂತಹ ಸಾಂಕ್ರಾಮಿಕ ರೋಗ ಅಥವಾ ವಿಪತ್ತು ಸಂದರ್ಭದಲ್ಲಿ ಸಂಪನ್ಮೂಲದ ಮಿತಿ ಇದ್ದಲ್ಲಿ ಅಂಥ ಸಂದರ್ಭದಲ್ಲಿ ರೋಗಿಯನ್ನು ಐಸಿಯುನಲ್ಲಿ ಇಡಬಹುದು. ಅಂಗಾಂಗ ವೈಫಲ್ಯ ಹಾಗೂ ಅಂಗಾಂಗ ಕಸಿ ಅಥವಾ ವೈದ್ಯಕೀಯ ಸ್ಥಿತಿ ಕ್ಷೀಣಿಸುವ ನಿರೀಕ್ಷೆ ಇದ್ದಲ್ಲಿ ಅಂಥವರನ್ನು ಐಸಿಯುನಲ್ಲಿ ಇಡಲು ಅವಕಾಶವಿದೆ’ ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.
===
ವಿಭಾಗ