Heart Health: ಥಟ್ಟಂತ ರೆಡಿಯಾಗುವ, ಹೃದಯ ಆರೋಗ್ಯಕ್ಕೆ ಬೆಸ್ಟ್ ಎನ್ನಿಸುವ 3 ರೆಸಿಪಿಗಳು; ಇವುಗಳ ಪ್ರಯೋಜನ ತಿಳಿಯಿರಿ
Nov 30, 2023 07:15 AM IST
ಥಟ್ಟಂತ ರೆಡಿಯಾಗುವ, ಹೃದಯ ಆರೋಗ್ಯಕ್ಕೆ ಬೆಸ್ಟ್ ಎನ್ನಿಸುವ ರೆಸಿಪಿಗಳು
- ಕಡಲೆಕಾಳಿನ ಸಲಾಡ್‌ನಿಂದ ಗ್ರಿಲ್ಡ್ ಸಾಲ್ಮನ್‌ವರೆಗೆ, ಥಟ್ಟಂತ ಅಂತ ರೆಡಿಯಾಗುವ, ಹೃದಯ ಆರೋಗ್ಯಕ್ಕೆ ಉತ್ತಮ ಎನ್ನಿಸುವ ಮೂರು ರೆಸಿಪಿಗಳಿವು ಇಲ್ಲಿವೆ.
ಇತ್ತೀಚಿನ ಒತ್ತಡ ದಿನಗಳಲ್ಲಿ ಹೃದಯ ಆರೋಗ್ಯಕ್ಕೆ ಬಗ್ಗೆ ಹೆಚ್ಚು ಗಮನ ಕೊಡುವುದು ಅವಶ್ಯವಾಗಿದೆ. ಹೃದಯದ ಆರೋಗ್ಯದ ವಿಚಾರದಲ್ಲಿ ಆಹಾರದ ಪಾತ್ರವೂ ಪ್ರಮುಖವಾದದ್ದು. ಸಮಯವಿಲ್ಲ ಎಂಬ ಕಾರಣಕ್ಕೆ ಬಾಯಿ ರುಚಿಸಿದ್ದು ಅಥವಾ ಜಂಕ್‌ಫುಡ್ ಸೇವಿಸುವವರು ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿದೆ. ಅವರ ಬದಲು ಆರೋಗ್ಯಕ್ಕೂ ಉತ್ತಮ ಎನ್ನಿಸುವ, ಬೇಗನೆ ರೆಡಿಯಾಗುವ ಹೆಲ್ತಿ ರೆಸಿಪಿಗಳನ್ನು ನೀವು ಮನೆಯಲ್ಲೇ ತಯಾರಿಸಿಕೊಂಡು ತಿನ್ನಬಹುದು. ಅರ್ಧ ಗಂಟೆಗೂ ಕಡಿಮೆ ಅವಧಿಯಲ್ಲಿ ಈ ರೆಸಿಪಿಯನ್ನು ತಯಾರಿಸಬಹುದು. ಈ ಆಹಾರಗಳು ಹೃದಯರಕ್ತನಾಳದ ಆರೋಗ್ಯ ಸುಧಾರಣೆಗೆ ನೆರವಾಗುತ್ತದೆ. ರಾತ್ರಿ ಊಟ ಬಿಡಬೇಕು ಎಂದುಕೊಂಡಿರುವವರಿಗೂ ಈ ರೆಸಿಪಿಗಳು ಬೆಸ್ಟ್. ಇದು ತೂಕ ಇಳಿಕೆಗೂ ನೆರವಾಗುತ್ತವೆ.
ಮೆಡಿಟರೇನಿಯನ್ ಚಿಕ್‌ಪೀ ಸಲಾಡ್
ಚಿಕ್‌ಪೀ ಅಥವಾ ಕಡಲೆಕಾಳಿನ ಸಲಾಡ್ ಸೇವನೆಯೊಂದಿಗೆ ನಿಮ್ಮ ದಿನವನ್ನು ಆರಂಭಿಸಬಹುದು. ಕಡಲೆಕಾಳಿನೊಂದಿಗೆ ಚೆರಿ ಟೊಮೆಟೊ, ಸೌತೆಕಾಯಿ, ಈರುಳ್ಳಿ, ಚೀಸ್, ಆಲಿವ್ ಎಣ್ಣೆ ಸೇರಿಸಿ ಸಲಾಡ್ ತಯಾರಿಸಿ ತಿನ್ನಬಹುದು. ಇದಕ್ಕೆ ಕೊಂಚ ಉಪ್ಪು ಹಾಗೂ ಕಾಳುಮೆಣಸು ಸೇರಿಸಿ ರುಚಿ ಹೆಚ್ಚಿಸಿಕೊಳ್ಳಬಹುದು.
ಉಪಯೋಗಗಳು: ಕಡಲೆಯು ಪ್ರೊಟೀನ್ ಹಾಗೂ ನಾರಿನಾಂಶಗಳಿಂದ ಸಮೃದ್ಧವಾಗಿದೆ. ಇದು ಸಸ್ಯ ಆಧಾರಿತ ಮೂಲವಾಗಿದೆ. ಇದು ಜೀರ್ಣಕ್ರಿಯೆ ಹೆಚ್ಚಿಸಲು ಸಹಾಯ ಮಾಡುತ್ತದೆ. ಟೊಮೆಟೊ ಮತ್ತು ಸೌತೆಕಾಯಿ ಸೇರಿದಂತೆ ಸಲಾಡ್‌ನಲ್ಲಿರುವ ಇನ್ನಿತರ ಅಂಶಗಳು ವಿಟಮಿನ್ ಹಾಗೂ ಉತ್ಕರ್ಷಣ ನಿರೋಧಕ ಅಂಶಗಳನ್ನು ಹೊಂದಿದ್ದು, ಇವು ಹೃದಯಕ್ಕೆ ಆರೋಗ್ಯಕ್ಕೆ ಉತ್ತಮ. ಆಲಿವ್ ಎಣ್ಣೆಯು ಏಕಪರ್ಯಾಪ್ತ ಕೊಬ್ಬನ್ನು ಹೊಂದಿರುವ ಕಾರಣಕ್ಕೆ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಇದು ಹೃದಯ ಆರೋಗ್ಯಕ್ಕೆ ಪ್ರಯೋಜನಕಾರಿ.
ಗ್ರಿಲ್ಡ್ ಸಾಲ್ಮಾನ್
ಬಹಳ ಬೇಗ ರೆಡಿಯಾಗುವ ಪೋಷಕಾಂಶ ಸಮೃದ್ಧ ಸಾಲ್ಮಾನ್ ಮೀನು ಹೃದಯ ಆರೋಗ್ಯಕ್ಕೆ ಉತ್ತಮ. ಇದರಲ್ಲಿ ಒಮೆಗಾ 3 ಕೊಬ್ಬಿನಾಮ್ಲವಿದ್ದು, ಇದು ಉತ್ತಮ ಹೃದಯ ಆರೋಗ್ಯವನ್ನು ಪ್ರಚೋದಿಸುತ್ತದೆ. ನಿಂಬೆರಸ, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು ಹರಡಿ ಗ್ರಿಲ್ಡ್ ಸಾಲ್ಮನ್ ತಯಾರಿಸಬಹುದು.
ಪ್ರಯೋಜನ: ಇದು ರುಚಿಯಾಗಿದ್ದು, ಹೃದಯದ ಆರೋಗ್ಯಕ್ಕೆ ಉತ್ತಮ. ಇದರಲ್ಲಿನ ಒಮೆಗಾ 3 ಕೊಬ್ಬಿನಾಮ್ಲ ಉರಿಯೂತವನ್ನು ನಿವಾರಿಸಿ, ಹೃದಯದ ಆರೋಗ್ಯ ಸುಧಾರಣೆಗೆ ನೆರವಾಗುತ್ತದೆ. ನಿಂಬೆಹಣ್ಣಿನಲ್ಲಿರುವ ವಿಟಮಿನ್ ಸಿ ಕೂಡ ಹೃದಯಕ್ಕೆ ಉತ್ತಮ.
ಓಟ್‌ಮೀಲ್ ಹಾಗೂ ಬೆರಿ
ನಿಮ್ಮ ಹೃದಯದ ಆರೋಗ್ಯ ಉತ್ತಮವಾಗಿರಬೇಕು ಎಂದರೆ ನಿಮ್ಮ ದಿನವನ್ನು ಓಟ್‌ಮೀಲ್ ಬೆರಿಯೊಂದಿಗೆ ಆರಂಭಿಸಬಹುದು. ಓಟ್ಸ್ ಅನ್ನು ನೀರು ಅಥವಾ ಹಾಲಿನೊಂದಿಗೆ ಕಾಯಿಸಿ, ಅದಕ್ಕೆ ಬೆರಿ ಹಾಗೂ ಒಣಹಣ್ಣು ಸೇರಿಸಿ ತಿನ್ನಬಹುದು. ಇದು ನಾರಿನಾಂಶ, ಆಂಟಿಆಕ್ಸಿಡೆಂಟ್ ಹಾಗೂ ಆರೋಗ್ಯಕರ ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿರುತ್ತದೆ. ಓಟ್ಸ್ ಜೊತೆಗೆ ಬಾದಾಮಿ ಹಾಗೂ ಬೆರಿ ಬೆರೆಸಿ ತಿನ್ನುವುದರಿಂದ ಹೃದಯದ ಆರೋಗ್ಯಕ್ಕೆ ಉತ್ತಮ. ಇವುಗಳ ಸೇವನೆಯು ಕೊಲೆಸ್ಟ್ರಾಲ್ ಕಡಿಮೆ ಮಾಡಲು ಉತ್ತಮ. ಇದು ಹೃದಯದ ಲಯವನ್ನು ನಿಯಂತ್ರಣಕ್ಕೆ ತರುತ್ತದೆ.
ವಿಭಾಗ