logo
ಕನ್ನಡ ಸುದ್ದಿ  /  ಜೀವನಶೈಲಿ  /  Health News: ತೂಕ ಇಳಿಕೆಯಿಂದ ಹೃದಯದ ಆರೋಗ್ಯ ಕಾಪಾಡಿಕೊಳ್ಳುವವರೆಗೆ ರಾತ್ರಿ ಊಟಕ್ಕೆ ಸೂಕ್ತ ಸಮಯ ಯಾವುದು; ತಜ್ಞರ ಸಲಹೆ ಇಲ್ಲಿದೆ

Health News: ತೂಕ ಇಳಿಕೆಯಿಂದ ಹೃದಯದ ಆರೋಗ್ಯ ಕಾಪಾಡಿಕೊಳ್ಳುವವರೆಗೆ ರಾತ್ರಿ ಊಟಕ್ಕೆ ಸೂಕ್ತ ಸಮಯ ಯಾವುದು; ತಜ್ಞರ ಸಲಹೆ ಇಲ್ಲಿದೆ

Reshma HT Kannada

Aug 13, 2023 07:45 AM IST

google News

ರಾತ್ರಿ ಊಟಕ್ಕೆ ಸೂಕ್ತ ಸಮಯ ಯಾವುದು (ಸಾಂಕೇತಿಕ ಚಿತ್ರ)

    • ಇಂದು ನಾವೆಲ್ಲರೂ ಬಿಡುವಿಲ್ಲದ ಜೀವನ ನಡೆಸುತ್ತಿದ್ದೇವೆ. ನೆಮ್ಮದಿಯಾಗಿ ಕೂತು ತಿನ್ನಲೂ ನಮ್ಮ ಬಳಿ ಸಮಯವಿಲ್ಲ. ಓಡು ಓಡು ಓಡು ಹೀಗೆ ಜೀವನ ಓಟದಂತೆ ಸಾಗುತ್ತಿದೆ. ಈ ನಡುವೆ ರಾತ್ರಿ ಊಟದ ವಿಷಯದಲ್ಲಿ ಹಲವರು ತಪ್ಪು ಮಾಡುತ್ತಿದ್ದಾರೆ. ಇದರಿಂದ ತೂಕ ಹೆಚ್ಚಳ ಸೇರಿದಂತೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿದೆ. ರಾತ್ರಿ ಊಟ ಮಾಡಲು ಸೂಕ್ತ ಸಮಯ ಯಾವುದು? 
ರಾತ್ರಿ ಊಟಕ್ಕೆ ಸೂಕ್ತ ಸಮಯ ಯಾವುದು (ಸಾಂಕೇತಿಕ ಚಿತ್ರ)
ರಾತ್ರಿ ಊಟಕ್ಕೆ ಸೂಕ್ತ ಸಮಯ ಯಾವುದು (ಸಾಂಕೇತಿಕ ಚಿತ್ರ)

ಇತ್ತೀಚೆಗೆ ಇಲ್ಲಸಲ್ಲದ ಆರೋಗ್ಯ ಸಮಸ್ಯೆಗಳು ಜನರನ್ನು ಹೆಚ್ಚು ಕಾಡುತ್ತಿದೆ. ಉತ್ತಮ ಆರೋಗ್ಯಕ್ಕಾಗಿ ಡಯೆಟ್‌ ಪಾಲನೆ ಮಾಡುವುದು ಅವಶ್ಯ. ಇದರೊಂದಿಗೆ ಸಮರ್ಪಕ ಆಹಾರ ಸೇವನೆಯೂ ಮುಖ್ಯವಾಗುತ್ತದೆ. ಕೆಲವು ಆರೋಗ್ಯ ಸಮಸ್ಯೆಗಳು ಇರುವವರು ಹಾಗೂ ತೂಕ ಇಳಿಕೆಗೆ ಪ್ಲಾನ್‌ ಮಾಡುತ್ತಿರುವವರಿಗೆ ರಾತ್ರಿ ಊಟವನ್ನು ಯಾವಾಗ ಮಾಡಬೇಕು ಎಂಬ ಪ್ರಶ್ನೆ ಕಾಡುವುದು ಸಹಜ. ಹಲವರು ಸೂರ್ಯಾಸ್ತಕ್ಕೂ ಮೊದಲು ರಾತ್ರಿ ಊಟ ಸೇವಿಸಬೇಕು ಎನ್ನುತ್ತಾರೆ. ನಂತರ ತಿನ್ನುವುದರಿಂದ ತೂಕ ಹೆಚ್ಚುತ್ತದೆ ಎಂಬ ಭಾವನೆ ಹಲವರಲ್ಲಿದೆ.

ಆದರೆ ಅಸಮರ್ಪಕ ಆಹಾರ ಸೇವನೆಯು ಹಲವು ರೀತಿಯ ಹಾನಿಕಾರಕ ಪರಿಣಾಮಗಳನ್ನು ಹೊಂದಿದೆ, ಮಾತ್ರವಲ್ಲ ಇದು ಆರೋಗ್ಯಕ್ಕೂ ಅಪಾಯ ಎಂದು ಇಂಡಿಯಾ ಡಾಟ್‌ ಕಾಮ್‌ಗೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದಾರೆ ಹೆಲ್ತ್‌ ಅಂಡ್‌ ಫ್ಯಾಟ್‌ ಲಾಸ್‌ ಕೋಚ್‌ ಜಶನ್‌ ವಿಜ್‌.

ಜಶನ್‌ ಅವರ ಪ್ರಕಾರ ʼರಾತ್ರಿ ಊಟದ ಸಮಯವು ವೈಯಕ್ತಿಕ ಆದ್ಯತೆಗಳು, ಸಾಂಸ್ಕೃತಿಕ ರೂಢಿಗಳು ಮತ್ತು ಜೀವನಶೈಲಿಯ ಅಂಶಗಳನ್ನು ಅವಲಂಬಿಸಿ ಬದಲಾಗಬಹುದು. ರಾತ್ರಿ ಊಟವನ್ನು ಗಡಿಯಾರ ಸಮಯದ ಆಧಾರದ ಮೇಲೆ ನಿರ್ಧಾರ ಮಾಡಲು ಆಗುವುದಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಅವರು ಹೇಳುತ್ತಾರೆ.

ಹಸಿವಿನ ಆಧಾರ ಮೇಲೆ ಊಟದ ಸಮಯವನ್ನು ನಿರ್ಧರಿಸಬೇಕು. ನೈಸರ್ಗಿಕವಾದ ದೇಹದ ಹಸಿವಿನ ಸೂಚನೆಗಳತ್ತ ಗಮನ ಹರಿಸಬೇಕು. ನಿಜವಾಗಿಯೂ ಹಸಿದಿರುವ ಸಮಯದಲ್ಲಿ ಊಟ ಮಾಡಬೇಕು. ಬೇಸರ ಅಥವಾ ಇತರ ಭಾವನಾತ್ಮಕ ಪ್ರಚೋದಕಗಳು ಉಂಟಾದಾಗ ತಿನ್ನುವುದನ್ನು ತಪ್ಪಿಸಬೇಕು ಎಂದು ಅವರು ಸಲಹೆ ನೀಡುತ್ತಾರೆ.

ರಾತ್ರಿ ಊಟ ಮಾಡಲು ಸೂಕ್ತ ಸಮಯ ಯಾವುದು?

ಜೀರ್ಣಶಕ್ತಿ ಸಮಸ್ಯೆ: ರಾತ್ರಿ ತಡವಾಗಿ ಊಟ ಮಾಡುವುದರಿಂದ ದೇಹದ ನೈಸರ್ಗಿಕ ಸಿರ್ಕಾಡಿಯನ್ ರಿದಂ ಹಾಗೂ ಜೀರ್ಣಕ್ರಿಯೆಗೆ ಅಡ್ಡಿಪಡಿಸುತ್ತದೆ. ಸಂಜೆಯಾದಂತೆ ದೇಹದ ಚಯಾಪಚಯವು ನಿಧಾನಗೊಳ್ಳುತ್ತದೆ. ಆಹಾರವನ್ನು ಸರಿಯಾಗಿ ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ಇದು ಅಜೀರ್ಣ, ಹೊಟ್ಟೆಯುಬ್ಬರದಂತಹ ಸಮಸ್ಯೆಗೆ ಕಾರಣವಾಗುತ್ತದೆ.

ಆಸಿಡ್‌ ರಿಫ್ಲಕ್ಸ್‌: ತಡರಾತ್ರಿ ಊಟ ಮಾಡುವುದರಿಂದ ಆಸಿಡ್‌ ರಿಫ್ಲಕ್ಸ್‌ ಅಥವಾ ಗ್ಯಾಸ್ಟ್ರೋಸೊಫೇಜಿಲ್ ರಿಫ್ಲಕ್ಸ್ ಕಾಯಿಲೆಯ (ಜಿಇಆರ್‌ಡಿ) ಅಪಾಯ ಹೆಚ್ಚಬಹುದು. ತಿಂದ ಸ್ವಲ್ಪ ಸಮಯಕ್ಕೆ ಮಲಗುವುದರಿಂದ ಹೊಟ್ಟೆಯಲ್ಲಿನ ಆಮ್ಲವು ಪುನಃ ಅನ್ನನಾಳಕ್ಕೆ ಹರಿಯಬಹುದು. ಇದು ಎದೆಯುರಿ ಹಾಗೂ ಕಿರಿಕಿರಿಯನ್ನು ಉಂಟು ಮಾಡುತ್ತದೆ.

ನಿದ್ದೆಗೆ ಅಡ್ಡಿ: ಮಲಗುವ ಸ್ವಲ್ಪ ಹೊತ್ತಿಗೆ ಮುಂಚೆ ತಿನ್ನುವುದು ನಿದ್ದೆಯ ಮಾದರಿಗೆ ಅಡ್ಡಿಪಡಿಸಬಹುದು. ಜೀರ್ಣಕ್ರಿಯೆ ಸಕ್ರಿಯ ಪ್ರಕ್ರಿಯೆಯಾಗಿದ್ದು ಇದು ದೇಹದ ವಿಶ್ರಾಂತಿ ಹಾಗೂ ನಿದ್ದೆಯ ಸಾಮರ್ಥ್ಯಕ್ಕೆ ಅಡ್ಡಿಪಡಿಸಬಹುದು.

ತೂಕ ಹೆಚ್ಚಳ: ತಡರಾತ್ರಿಯಲ್ಲಿ ಹೊಟ್ಟೆ ತುಂಬ ಊಟ ಸೇವಿಸುವುದು ತೂಕ ಹೆಚ್ಚಳಕ್ಕೆ ಕಾರಣವಾಗಬಹುದು. ನಿದ್ದೆಯ ಸಮಯದಲ್ಲಿ ದೇಹವು ಕಡಿಮೆ ಸಕ್ರಿಯವಾಗಿರುತ್ತದೆ. ಆದ್ದರಿಂದ ರಾತ್ರಿ ಊಟದ ನಂತರ ಕ್ಯಾಲೊರಿ ಬರ್ನ್‌ ಆಗುವ ಸಾಧ್ಯತೆ ಕಡಿಮೆ. ತಡರಾತ್ರಿಯ ಕಡುಬಯಕೆಗಳು ಸಾಮಾನ್ಯವಾಗಿ ಅನಾರೋಗ್ಯಕ್ಕೆ ಕಾರಣವಾಗಬಹುದು.

ದುರ್ಬಲವಾಗುವ ಚಯಾಪಚಯ: ತಡರಾತ್ರಿಯಲ್ಲಿ ತಿನ್ನುವುದು ಗ್ಲೂಕೋಸ್ ಚಯಾಪಚಯ ಕ್ರಿಯೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎನ್ನುತ್ತವೆ ಅಧ್ಯಯನಗಳು. ಇದು ಇದು ಇನ್ಸುಲಿನ್ ಪ್ರತಿರೋಧ ಮತ್ತು ಟೈಪ್ 2 ಮಧುಮೇಹದ ಅಪಾಯ ಹೆಚ್ಚಲು ಕಾರಣವಾಗಬಹುದು.

ಹಾರ್ಮೋನುಗಳ ವ್ಯತ್ಯಯ: ತಡರಾತ್ರಿ ಆಹಾರ ಸೇವಿಸುವುದು ಇನ್ಸುಲಿನ್‌ ಮತ್ತು ಗ್ರೆಲಿನ್‌ (ಹಸಿವಿನ ಹಾರ್ಮೋನ್‌) ಸೇರಿದಂತೆ ಇತರ ಹಾರ್ಮೋನ್‌ಗಳ ಸವ್ರಿಕೆಯ ಮೇಲೆ ಪರಿಣಾಮ ಬೀರುಬಹುದು. ಇದು ಹಸಿವಿನ ನಿಯಂತ್ರಣ ತಡೆಯುತ್ತದೆ ಮತ್ತು ಅತಿಯಾಗಿ ತಿನ್ನುವುದಕ್ಕೆ ಕಾರಣವಾಗುತ್ತದೆ.

ಕಳಪೆ ಆಹಾರದ ಆಯ್ಕೆ: ತಡರಾತ್ರಿಯಲ್ಲಿ ಜನರು ತಮ್ಮ ಅನುಕೂಲಕ್ಕಾಗಿ ಅನಾರೋಗ್ಯಕರ ಆಹಾರ, ಹೆಚ್ಚು ಕ್ಯಾಲೊರಿ ಅಂಶವಿರುವ ಆಹಾರ ಹಾಗೂ ಸಂಸ್ಕರಿತ ಆಹಾರಗಳ ಸೇವನೆಯ ಮೇಲೆ ಹೆಚ್ಚು ಗಮನ ನೀಡುತ್ತಾರೆ., ಇದು ಅಸಮತೋಲಿತ ಆಹಾರ ಸೇವನೆಗೆ ಕಾರಣವಾಗುತ್ತದೆ.

ಹೃದಯದ ಆರೋಗ್ಯ ಕಾಳಜಿ: ಕೊಲೆಸ್ಟ್ರಾಲ್‌ ಮಟ್ಟ ಮತ್ತು ರಕ್ತದೊತ್ತಡ ಮೇಲೆ ಅದರ ಪ್ರಭಾವದಿಂದಾಗಿ ತಡರಾತ್ರಿ ಆಹಾರ ಸೇವಿಸುವುದು ಹೃದ್ರೋಗದ ಅಪಾಯವನ್ನೂ ಹೆಚ್ಚಿಸಬಹುದು ಎಂದು ಹಲವು ಅಧ್ಯಯನಗಳು ತಿಳಿಸಿವೆ.

ರಾತ್ರಿ ಊಟವನ್ನು ಒಂದು ನಿರ್ದಿಷ್ಟ ಸಮಯಕ್ಕೆ ಸರಿಯಾಗಿ ಮಾಡುವುದು ದೇಹ ಆಂತರಿಕ ವ್ಯವಸ್ಥೆ ಮತ್ತು ಜೀರ್ಣಕ್ರಿಯೆಗೆ ಸಹಕಾರಿ. ತಡರಾತ್ರಿ ಊಟ ಮಾಡುವುದು ಅಥವಾ ನಿದ್ದೆಯ ಮಾಡುವ ಮೊದಲು ಊಟ ಮಾಡುವುದರಿಂದ ದೇಹವು ನೀವು ಸೇವಿಸಿದ ಆಹಾರಗಳಿಂದ ಪೋಷಕಾಂಶಗಳನ್ನು ಸಂಸ್ಕರಿಸಲು, ಜೀರ್ಣಿಸಿಕೊಳ್ಳಲು ಮತ್ತು ಹೀರಿಕೊಳ್ಳಲು ಅವಕಾಶಗಳು ಕಡಿಮೆ. ಆ ಹೊತ್ತಿನಲ್ಲಿ ಸೇವಿಸಿದ ಆಹಾರವು ಜೀರ್ಣವಾಗುವುದು ಕಡಿಮೆ ಮತ್ತು ನಿದ್ದೆಗೂ ಇದು ಅಡ್ಡಿಪಡಿಸುತ್ತದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ