logo
ಕನ್ನಡ ಸುದ್ದಿ  /  ಜೀವನಶೈಲಿ  /  Morning Food: ಬೆಳಗೆದ್ದು ಖಾಲಿ ಹೊಟ್ಟೆಯಲ್ಲಿ ಈ ಆಹಾರಗಳನ್ನು ಎಂದಿಗೂ ಸೇವಿಸಬೇಡಿ, ಆರೋಗ್ಯ ಕೆಡುವ ಜೊತೆಗೆ ತೂಕವೂ ಹೆಚ್ಚಬಹುದು

Morning Food: ಬೆಳಗೆದ್ದು ಖಾಲಿ ಹೊಟ್ಟೆಯಲ್ಲಿ ಈ ಆಹಾರಗಳನ್ನು ಎಂದಿಗೂ ಸೇವಿಸಬೇಡಿ, ಆರೋಗ್ಯ ಕೆಡುವ ಜೊತೆಗೆ ತೂಕವೂ ಹೆಚ್ಚಬಹುದು

Reshma HT Kannada

May 29, 2023 03:06 PM IST

google News

ಖಾಲಿ ಹೊಟ್ಟೆಯಲ್ಲಿ ಸೇವಿಸುವ ಆಹಾರವು ಆರೋಗ್ಯ ಕೆಡಲು, ತೂಕ ಹೆಚ್ಚಲು ಕಾರಣವಾಗಬಹುದು

    • Empty Stomach food: ಬೆಳಗೆದ್ದು ಖಾಲಿ ಹೊಟ್ಟೆಯಲ್ಲಿ ನಾವು ಸೇವಿಸುವ ಆಹಾರವು ನಮ್ಮ ದೈನಂದಿನ ಆರೋಗ್ಯ ಹಾಗೂ ತೂಕ ಹೆಚ್ಚಳದ ಮೇಲೆ ಪರಿಣಾಮ ಬೀರಬಹುದು.  ಹಾಗಾದರೆ ಬೆಳಗೆದ್ದು ಖಾಲಿ ಹೊಟ್ಟೆಯಲ್ಲಿ ಏನನ್ನು ತಿನ್ನಬಹುದು ಹಾಗೂ ಏನನ್ನು ತಿನ್ನಬಾರದು ಅಥವಾ ಕುಡಿಯಬಾರದು ಎಂಬುದರ ಬಗ್ಗೆ ತಜ್ಞರ ಸಲಹೆ ಇಲ್ಲಿದೆ. 
ಖಾಲಿ ಹೊಟ್ಟೆಯಲ್ಲಿ ಸೇವಿಸುವ ಆಹಾರವು ಆರೋಗ್ಯ ಕೆಡಲು, ತೂಕ ಹೆಚ್ಚಲು ಕಾರಣವಾಗಬಹುದು
ಖಾಲಿ ಹೊಟ್ಟೆಯಲ್ಲಿ ಸೇವಿಸುವ ಆಹಾರವು ಆರೋಗ್ಯ ಕೆಡಲು, ತೂಕ ಹೆಚ್ಚಲು ಕಾರಣವಾಗಬಹುದು

ಬೆಳಿಗ್ಗೆ ನಾವು ಸೇವಿಸುವ ಆಹಾರವು ನಮ್ಮ ಒಟ್ಟಾರೆ ಆರೋಗ್ಯ ಹಾಗೂ ದಿನಚರಿಯ ಮೇಲೆ ಪರಿಣಾಮ ಬೀರುತ್ತದೆ. ಇದು ದೀರ್ಘಾವಧಿಯ ರಾತ್ರಿಯ ಉಪವಾಸವನ್ನು ಮುರಿಯುತ್ತದೆ, ಅಲ್ಲದೆ ಅಂದಿನ ಇಡೀ ದಿನವನ್ನು ಕಳೆಯಲು ದೇಹವನ್ನು ಸಂಯೋಜಿಸುತ್ತದೆ. ಆ ಕಾರಣಕ್ಕೆ ಬೆಳಿಗ್ಗೆ ಎದ್ದ ತಕ್ಷಣ ಅದರಲ್ಲೂ ಖಾಲಿ ಹೊಟ್ಟೆಯಲ್ಲಿ ಏನನ್ನು ತಿನ್ನುತ್ತೀರಿ ಎಂಬುದರ ಮೇಲೆ ಗಮನ ಹರಿಸುವುದು ಬಹಳ ಮುಖ್ಯವಾಗುತ್ತದೆ. ಏಕೆಂದರೆ ಇದು ಒಟ್ಟಾರೆ ಆರೋಗ್ಯದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ.

ಕೆಲವರು ಹೊಟ್ಟೆ ತುಂಬ ಬೆಳಗಿನ ಉಪಹಾರ ಸೇವಿಸುತ್ತಾರೆ, ಇನ್ನೂ ಕೆಲವರು ಸಾಧಾರಣ ತಿನ್ನುತ್ತಾರೆ. ಹಾಗಾದರೆ ಬೆಳಿಗ್ಗೆ ಎದ್ದು ಏನು ತಿನ್ನಬೇಕು ಅಥವಾ ಏನನ್ನು ತಿನ್ನಬಾರದು ಎಂಬ ಬಗ್ಗೆ ಪೌಷ್ಟಿಕ ತಜ್ಞೆ ನೇಹಾ ಸಹಾಯ್‌, ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಅವರ ಪ್ರಕಾರ ಈ ಕೆಲವು ಆಹಾರಗಳನ್ನು ಯಾವುದೇ ಕಾರಣಕ್ಕೂ ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದು. ಅಂತಹ ಆಹಾರಗಳು ಹೀಗಿವೆ.

ನಿಂಬೆರಸದೊಂದಿಗೆ ಜೇನುತುಪ್ಪ ಸೇರಿಸಿ ಕುಡಿಯುವುದು

ತೂಕ ಇಳಿಸುವುದು, ಕೊಬ್ಬು ಕರಗಿಸುವ ಉದ್ದೇಶದಿಂದ ಬಹುತೇಕರು ಖಾಲಿ ಹೊಟ್ಟೆಯಲ್ಲಿ ನಿಂಬೆರಸದ ನೀರಿಗೆ ಜೇನುತುಪ್ಪ ಮಿಶ್ರಣ ಮಾಡಿ ಕುಡಿಯುತ್ತಾರೆ. ಆದರೆ ಈ ಪಾನೀಯದ ಸೇವನೆ ಉತ್ತಮವಲ್ಲ, ಇದನ್ನು ಕುಡಿಯಬೇಡಿ ಎಂದು ನೇಹಾ ಸಲಹೆ ನೀಡುತ್ತಾರೆ. ಜೇನುತುಪ್ಪದಲ್ಲಿ ಕ್ಯಾಲೋರಿ ಅಂಶ ಹೆಚ್ಚಿದೆ. ಅದರಲ್ಲಿ ಸಕ್ಕರೆಗಿಂತ ಹೆಚ್ಚು ಗ್ಲೆಸೆಮಿಕ್‌ ಅಂಶವಿದೆ. ಇತ್ತೀಚಿನ ದಿನಗಳಲ್ಲಿ ಯಾವುದೇ ಮಿಶ್ರಣಗಳಿಲ್ಲದ ಜೇನುತುಪ್ಪ ಸಿಗುವುದು ಕಷ್ಟ. ಹೆಚ್ಚಿನವರು ಜೇನುತುಪ್ಪದ ಹೆಸರಿನಲ್ಲಿ ಸಕ್ಕರೆ ಮತ್ತು ಅಕ್ಕಿ ಸಿರಪ್‌ ಸೇರಿಸುತ್ತಾರೆ. ಇದರ ಸೇವನೆಯಿಂದ ಹಸಿವು ಹೆಚ್ಚಬಹುದು, ಅಲ್ಲದೆ ದಿನವಿಡೀ ಕಡುಬಯಕೆಗಳ ಪರಿಣಾಮಮವಾಗಿ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆʼ ಎನ್ನುತ್ತಾರೆ.

ಆದರೆ ಇದನ್ನು ವಿರೋಧಿಸುವ ಐಥ್ರೈವ್‌ ಸ್ಥಾಪಕಿ, ಪೌಷ್ಟಿಕತಜ್ಞೆ ಮುಗ್ಧ ಪ್ರಧಾನ್‌ ʼಕಚ್ಚಾ ಪರಿಶುದ್ಧ ಜೇನುತುಪ್ಪವು ಆರೋಗ್ಯಕರ ನೈಸರ್ಗಿಕ ಸಿಹಿಕಾರಕಗಳಲ್ಲಿ ಒಂದಾಗಿದೆ ಮತ್ತು ಇದರಲ್ಲಿ ಆರೋಗ್ಯಕರ ಕಾರ್ಬೋಹೈಡ್ರೇಟ್‌ಗಳ ಉತ್ತಮ ಮೂಲವಾಗಿದೆ. ಇದು ಪೋಷಕಾಂಶಗಳು ಮತ್ತು ಇತರ ಪ್ರತಿರಕ್ಷಣಾ ವ್ಯವಸ್ಥೆಯನ್ನು ಉತ್ತೇಜಿಸುವ ಸಂಯುಕ್ತಗಳಲ್ಲಿ ಸಮೃದ್ಧವಾಗಿದೆʼ ಎನ್ನುತ್ತಾರೆ. ಅಲ್ಲದೆ ಜೇನುತುಪ್ಪವು ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ ಎನ್ನುವುದು ಹಲವು ಅಧ್ಯಯನಗಳಲ್ಲಿ ಸಾಬೀತಾಗಿದೆ.

ಟೀ ಮತ್ತು ಕಾಫಿ

ಖಾಲಿ ಹೊಟ್ಟೆಯಲ್ಲಿ ಟೀ ಅಥವಾ ಕಾಫಿ ಕುಡಿಯುವುದರಿಂದ ಹೊಟ್ಟೆಯ ಆಮ್ಲಗಳನ್ನು ಪ್ರಚೋದಿಸುತ್ತದೆ. ಇದು ಹೊಟ್ಟೆಯ ಅಸಮತೋಲನಕ್ಕೆ ಕಾರಣವಾಗುತ್ತದೆ ಮತ್ತು ಜೀರ್ಣಕಾರಿ ಸಮಸ್ಯೆಗಳನ್ನು ಉಂಟು ಮಾಡುತ್ತದೆ ಎಂದು ಸಹಾಯ ಹಂಚಿಕೊಂಡಿದ್ದರು.

ಇದನ್ನು ಒಪ್ಪುವ ಪ್ರಧಾನ್‌ ʼಬೆಳಿಗ್ಗೆ ಎದ್ದಾಗ ದೇಹದಲ್ಲಿ ಕಾರ್ಟಿಸೋಲ್‌ ಹಾರ್ಮೋನ್‌ಗಳ ಮಟ್ಟಗಳು ಹೆಚ್ಚಿರುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಚಹಾ, ಕಾಫಿ ಅಥವಾ ಇತರ ಕೆಫಿನ್‌ ಅಂಶವುಳ್ಳ ಆಹಾರ ಸೇವನೆಯು ಕಾರ್ಟಿಸೋಲ್‌ ಹಾರ್ಮೋನ್‌ ಹೆಚ್ಚಳಕ್ಕೆ ಕಾರಣವಾಗಬಹುದು, ಅಲ್ಲದೆ ಒತ್ತಡ ಹೆಚ್ಚಳಕ್ಕೆ ಕಾರಣವಾಗಬಹುದು. ಆ ಕಾರಣಕ್ಕೆ ಇವುಗಳಿಂದ ದೂರ ಇರುವುದು ಉತ್ತಮ ಎನ್ನುತ್ತಾರೆ. ಬೆಳಿಗ್ಗೆ ಎದ್ದ ಮೇಲೆ ಕನಿಷ್ಠ 2 ಗಂಟೆಗಳ ನಂತರ ಇದನ್ನು ಲಘು ಉಪಾಹಾರ ಸೇವಿಸಿದ ನಂತರ ಕುಡಿಯಬಹುದುʼ ಎಂದು ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಸಲಹೆ ನೀಡಿದ್ದಾರೆ.

ಹಣ್ಣುಗಳು

ನೇಹಾ ಸಹಾಯ್‌ ಅವರ ಪ್ರಕಾರ ಹಣ್ಣುಗಳು ಬೇರೆಲ್ಲಾ ಆಹಾರಕ್ಕಿಂತ ಬೇಗನೆ ಜೀರ್ಣವಾಗುತ್ತದೆ. ʼಇದು ಒಂದು ಗಂಟೆಯಲ್ಲಿ ಪುನಃ ಹಸಿವಾಗುವಂತೆ ಮಾಡುತ್ತದೆ. ಸಿಟ್ರಸ್‌ ಅಂಶವುಳ್ಳ ಕೆಲವು ಹಣ್ಣುಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಆಸಿಡಿಟಿ ಉಂಟಾಗಬಹುದುʼ ಎಂದು ಅವರು ಹೇಳುತ್ತಾರೆ.

ಸಿಹಿ ಅಂಶವಿರುವ ಉಪಾಹಾರ

ಕೆಲವರಿಗೆ ಬೆಳಗಿನ ಉಪಾಹಾರದಲ್ಲಿ ಕೇಸರಿಬಾತ್‌ನಂತಹ ಸಿಹಿ ತಿನಿಸುಗಳನ್ನು ತಿನ್ನುವ ಅಭ್ಯಾಸ. ಆದರೆ ಇದು ಒಳ್ಳೆಯದಲ್ಲ ಎನ್ನುತ್ತಾರೆ ನೇಹಾ ಸಹಾಯ್‌, ಅವರ ಪ್ರಕಾರ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಿಹಿ ಉಪಾಹಾರದ ಜೊತೆಗೆ ಖಾರದ ಪದಾರ್ಥಗಳನ್ನೂ ಸೇವಿಸಬೇಕು. ಇದರೊಂದಿಗೆ ಪ್ರೊಟೀನ್‌ ಅಂಶ ಇರುವ ಆಹಾರ ಪದಾರ್ಥಗಳ ಸೇವನೆಗೂ ಒತ್ತು ನೀಡಬೇಕು. ಪ್ರೊಟೀನ್‌ ಹಾಗೂ ಉತ್ತಮ ಕೊಬ್ಬಿನಾಂಶವುಳ್ಳ ಬೆಳಗಿನ ಉಪಾಹಾರವು ದಿನವಿಡೀ ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅಲ್ಲದೆ ಊಟದ ಹೊತ್ತಿನವರೆಗೂ ಹೊಟ್ಟೆ ತುಂಬಿದಂತಿರುತ್ತದೆ. ಆದರೆ ಸಿಹಿ ಪದಾರ್ಥಗಳು ಅಥವಾ ಉಪಾಹಾರ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸಿ, ಹಸಿವನ್ನೂ ಹೆಚ್ಚಿಸುತ್ತದೆ. ಇದರಿಂದ ತೂಕ ಹೆಚ್ಚಳಕ್ಕೂ ಕಾರಣವಾಗಬಹುದುʼ ಎನ್ನುತ್ತಾರೆ ನೇಹಾ. ಇದರೊಂದಿಗೆ ಬೆಣ್ಣೆಹಣ್ಣು, ತುಪ್ಪ, ಬೀಜಗಳನ್ನು ತಿನ್ನಬಹುದು. ಇದು ಹೊಟ್ಟೆ ತುಂಬಿದಂತಿರಲು ಸಹಾಯ ಮಾಡುತ್ತದೆʼ ಎನ್ನುತ್ತಾರೆ ಅವರು.

ʼಮಧುಮೇಹ ಸಮಸ್ಯೆ ಇಲ್ಲದೇ ಇರುವ ರೋಗಿಗಳು, ಚಯಾಪಚಯ ಸಮಸ್ಯೆ ಹಾಗೂ ಇನ್ಸುಲಿನ್ಸ್‌ ಪ್ರತಿರೋಧವನ್ನು ಹೊಂದಿರದ ವ್ಯಕ್ತಿಗಳು ಬೆಳಗಿನ ಉಪಾಹಾರದೊಂದಿಗೆ ಆರೋಗ್ಯಕರ ಕಾರ್ಬೋಹೈಡ್ರೇಟ್‌ ಇರುವ ಪದಾರ್ಥಗಳನ್ನು ಸೇವಿಸಬಹುದು. ಅಂತಹವರು ದೇಹ ಬಯಸಿದ ರೀತಿಯಲ್ಲಿ ಉಪಾಹಾರವನ್ನು ಸೇವಿಸಹುದು. ಕಾರ್ಟಿಸೋಲ್‌ ಮತ್ತು ಒತ್ತಡದ ಸಮಸ್ಯೆಗಳಿರುವ ಜನರು ಬೆಳಿಗ್ಗೆ ಒತ್ತಡವನ್ನು ನಿವಾರಿಸಲು ಸಹಾಯ ಮಾಡುವ ಆರೋಗ್ಯಕರ ಕಾರ್ಬೋಹೈಡ್ರೇಟ್‌ಗಳಿಂದ ಪ್ರಯೋಜನ ಪಡೆಯಬಹುದುʼ ಎನ್ನುತ್ತಾರೆ ಮುಗ್ಧ ಪ್ರಧಾನ್‌.

ʼಚಯಾಪಚಯ ಸಮಸ್ಯೆ ಇಲ್ಲದೇ ಇರುವವರು ಅತಿಯಾದ ಸಕ್ಕರೆ ಹಾಗೂ ಕಾರ್ಬೋಹೈಡ್ರೇಟ್‌ ಸೇವನೆ ಮಾಡಬಾರದು ಎಂದು ಅವರು ಒತ್ತಿ ಹೇಳುತ್ತಾರೆ. ಏಕೆಂದರೆ ಇದು ದೀರ್ಘಾವಧಿಯಲ್ಲಿ ಆರೋಗ್ಯ ಕೆಡಲು ಕಾರಣವಾಗಬಹುದು ಎನ್ನುತ್ತಾರೆ ಪ್ರಧಾನ್‌.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ