logo
ಕನ್ನಡ ಸುದ್ದಿ  /  ಜೀವನಶೈಲಿ  /  Mushroom In Mansoon: ಮಶ್ರೂಮ್‌ ಪ್ರಿಯರೇ, ಮಳೆಗಾಲದಲ್ಲಿ ಅಣಬೆ ಸೇವಿಸುವ ಮೊದಲು ಇದನ್ನೊಮ್ಮೆ ಓದಿ

Mushroom In Mansoon: ಮಶ್ರೂಮ್‌ ಪ್ರಿಯರೇ, ಮಳೆಗಾಲದಲ್ಲಿ ಅಣಬೆ ಸೇವಿಸುವ ಮೊದಲು ಇದನ್ನೊಮ್ಮೆ ಓದಿ

Reshma HT Kannada

Jun 26, 2023 06:04 PM IST

google News

ಮಳೆಗಾಲ ಮತ್ತು ಅಣಬೆ

    • Mushroom and Health: ಮಶ್ರೂಮ್ ಕರಿ, ಮಶ್ರೂಮ್ ಬಿರಿಯಾನಿ, ಮಶ್ರೂಮ್ ಚಿಲ್ಲಿ ಸೇರಿದಂತೆ ಅಣಬೆಯಿಂದ ತಯಾರಿಸುವ ವಿಶೇಷ ಖಾದ್ಯಗಳು ಬಾಯಲ್ಲಿ ನೀರೂರುವಂತೆ ಮಾಡುವುದು ಸಹಜ. ಆದರೆ ಈ ಅಣಬೆಗಳು ಮಳೆಗಾಲದಲ್ಲಿ ತಿನ್ನಲು ಸುರಕ್ಷಿತವೇ ಎಂಬುದು ಹಲವರ ಪ್ರಶ್ನೆ. ಹಾಗಾದರೆ ಮಳೆಗಾಲದಲ್ಲಿ ಅಣಬೆ ತಿನ್ನಬಾರದೇ?
ಮಳೆಗಾಲ ಮತ್ತು ಅಣಬೆ
ಮಳೆಗಾಲ ಮತ್ತು ಅಣಬೆ

ಮಶ್ರೂಮ್‌ ಹಲವರ ಫೇವರಿಟ್‌ ಫುಡ್‌. ಆದರೆ ಅವುಗಳನ್ನು ತಿನ್ನುವ ವಿಷಯದಲ್ಲಿ ಕೆಲವು ಗೊಂದಲಗಳಿವೆ. ಅವು ವಿಷಕಾರಿ ಎಂದು ಕೆಲವರು ಹೇಳುತ್ತಾರೆ. ಭೂಮಿ ತಣ್ಣಗಾದಾಗ ಅಣಬೆಗಳು ಬೆಳೆಯಲು ಪ್ರಾರಂಭಿಸುತ್ತವೆ. ಮಶ್ರೂಮ್ ತಿಂದ ಕೆಲವರು ಅಸ್ವಸ್ಥರಾಗುತ್ತಿರುವ ಪ್ರಕರಣಗಳನ್ನು ಕೇಳಿದ ನಂತರ ಮಳೆಗಾಲದಲ್ಲಿ ಅಣಬೆ ಸುರಕ್ಷಿತವೇ ಎಂಬ ಪ್ರಶ್ನೆ ಮೂಡುತ್ತದೆ.

ಋತುಮಾನದ ಆಹಾರ ಆರೋಗ್ಯಕ್ಕೆ ಒಳ್ಳೆಯದು ಎಂದು ಎಲ್ಲರಿಗೂ ತಿಳಿದಿದೆ. ಮಳೆಗಾಲದಲ್ಲಿ ನೈಸರ್ಗಿಕವಾಗಿ ಬೆಳೆಯುವ ಅಣಬೆಗಳು ಆರೋಗ್ಯಕ್ಕೆ ಆರೋಗ್ಯ ಸಮಸ್ಯೆಗೂ ಕಾರಣವಾಗಬಹುದು. ಯಾಕೆಂದರೆ ಈ ಋತುಮಾನದಲ್ಲಿ ಹಲವು ವಿಧದ ಅಣಬೆಗಳು ಬೆಳೆಯಲು ಪ್ರಾರಂಭಿಸುತ್ತವೆ. ಎಲ್ಲಾ ಅಣಬೆಗಳು ತಿನ್ನಲು ಯೋಗ್ಯವಲ್ಲ. ಇದರ ಬಗ್ಗೆ ಎಚ್ಚರವಿರಲಿ. ಕೆಲವು ಅಣಬೆಗಳು ತಿನ್ನಬಹುದಾದ ಅಣಬೆಗಳಂತೆ ಕಾಣುತ್ತವೆ, ಆದರೆ ಅವು ವಿಷಕಾರಿ. ಇವುಗಳಿಂದ ಸೋಂಕು ತಗಲುವ ಸಾಧ್ಯತೆಯೂ ಇದೆ.

ಅಣಬೆ ತಿನ್ನುವ ಮೊದಲು

ಅಣಬೆಗಳನ್ನು ಸರಿಯಾಗಿ ಬೇಯಿಸಿ. ಇಲ್ಲದಿದ್ದರೆ ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಅಣಬೆಗಳನ್ನು ಬೇಯಿಸುವಾಗ, ಕೊಳೆಯುವ ಹಂತದಲ್ಲಿರುವ ಅಣಬೆಗಳನ್ನು ಬಳಸಬೇಡಿ. ಏಕೆಂದರೆ ಅವುಗಳು ಬ್ಯಾಕ್ಟೀರಿಯಾವನ್ನು ಹೊಂದಿರುತ್ತವೆ. ಹಾಗಾಗಿ ಅಂತಹ ಅಣಬೆಗಳನ್ನು ತಿನ್ನಬೇಡಿ.

ಮಳೆಗಾಲದಲ್ಲಿ ಬೆಳೆದ ಅಣಬೆಯನ್ನು ತಿನ್ನುವುದರಿಂದ ಹೆಚ್ಚಿನ ತೊಂದರೆ ಆಗುವುದಿಲ್ಲ. ಚಿಂತಿಸದೆ ತಿನ್ನಿರಿ. ಆದರೆ ನೀವು ಅಣಬೆಗಳನ್ನು ಖರೀದಿಸಿ ತಂದಿದ್ದರೆ ಅಥವಾ ಕಿತ್ತು ತಂದಿದ್ದರೆ, ಅವುಗಳನ್ನು ಬೇಗನೆ ಬೇಯಿಸಿ ಅಥವಾ ಖಾದ್ಯ ತಯಾರಿಸಿ. ಅವು ಕೊಳೆಯುವ ಹಂತದಲ್ಲಿದ್ದಾಗ ಯಾವುದೇ ಕಾರಣಕ್ಕೂ ಬಳಸಬೇಡಿ. ಮಳೆಗಾಲದಲ್ಲಿ ಅಣಬೆಗಳಿಂದ ಖಾದ್ಯ ತಯಾರಿಸುವ ಮುನ್ನ ಸರಿಯಾಗಿ ನೋಡಿಕೊಳ್ಳಿ. ತಿನ್ನಲು ಯೋಗ್ಯವಾದರೆ.. ಮಾತ್ರ ತಿನ್ನಿ. ಕೆಲವು ತಿನ್ನುವ ಅಣಬೆಯಂತೆಯೇ ಕಾಣುತ್ತವೆ. ಆದರೆ ಅವುಗಳನ್ನು ಕೂಲಂಕುಷವಾಗಿ ಪರಿಶೀಲಿಸಬೇಕು.

ಅಣಬೆಗಳ ಪ್ರಯೋಜನಗಳು

ಅಣಬೆಯಲ್ಲಿ ವಿಟಮಿನ್ ಡಿ ಅಂಶವಿದೆ. ಮಳೆಗಾಲದಲ್ಲಿ ಸೂರ್ಯನ ಬೆಳಕು ಕಡಿಮೆ ಇರುತ್ತದೆ, ಆದ್ದರಿಂದ ವಿಟಮಿನ್ ಡಿ ಹೆಚ್ಚು ಲಭ್ಯವಿರುವುದಿಲ್ಲ. ಆದರೆ ಮಶ್ರೂಮ್ ತಿನ್ನುವುದರಿಂದ ಅದರಲ್ಲಿ ವಿಟಮಿನ್ ಡಿ ಸಿಗುತ್ತದೆ. ಅಣಬೆಯಲ್ಲಿರುವ ಅಮಿನೋ ಆಸಿಡ್, ಎರ್ಗೋಥಿಯೋನಿನ್ ಅಂಶವು ಕ್ಯಾನ್ಸರ್ ಅಪಾಯವನ್ನು ತಡೆಯುತ್ತದೆ. ಅಣಬೆಯನ್ನು ತಿನ್ನುವುದರಿಂದ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ.

ಹೊಟ್ಟೆಯ ಆರೋಗ್ಯಕ್ಕೆ ಅಣಬೆ ಉತ್ತಮ. ಮಳೆಗಾಲದಲ್ಲಿ ಹೊಟ್ಟೆಯ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು. ಅಣಬೆಗಳನ್ನು ತಿನ್ನುವುದರಿಂದ ಹೊಟ್ಟೆಯ ಆರೋಗ್ಯ ಸುಧಾರಿಸುತ್ತದೆ. ಕರುಳಿನ ಆರೋಗ್ಯವನ್ನು ಉತ್ತೇಜಿಸಲು ಅಣಬೆಗಳು ಪ್ರಿಬಯಾಟಿಕ್‌ಗಳನ್ನು ಹೊಂದಿರುತ್ತವೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮಳೆಗಾಲದಲ್ಲಿ ಚರ್ಮಕ್ಕೆ ಸಾಕಷ್ಟು ಸೂರ್ಯನ ಬೆಳಕು ಸಿಗದಿದ್ದರೆ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ.

ಮಾಂಸದಲ್ಲಿ ಕಂಡುಬರುವ ಪೋಷಕಾಂಶಗಳು ಅಣಬೆಗಳಲ್ಲಿ ಕಂಡುಬರುತ್ತವೆ. ಮಾಂಸಾಹಾರಿಗಳು ಮಾಂಸದಲ್ಲಿರುವ ಪೋಷಕಾಂಶಗಳನ್ನು ಪಡೆಯಲು ಅಣಬೆಗಳನ್ನು ತಿನ್ನುತ್ತಾರೆ. ಆದರೆ ಹೆಚ್ಚಿನ ಸಸ್ಯಾಹಾರಿಗಳು ಅಣಬೆಗಳನ್ನು ತಿನ್ನುವುದಿಲ್ಲ. ಅಣಬೆಯನ್ನು ತಿನ್ನುವವರಿಗೆ ಮಾಂಸದಷ್ಟೇ ಪೋಷಕಾಂಶಗಳು ಸಿಗುತ್ತವೆ. ಮಶ್ರೂಮ್ ಸೂಪ್ ಮಾಡಿ ಮಕ್ಕಳಿಗೆ ನೀಡಿ ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ