logo
ಕನ್ನಡ ಸುದ್ದಿ  /  ಜೀವನಶೈಲಿ  /  Naked Sleep: ಬಟ್ಟೆ ಇಲ್ಲದೇ ಮಲಗೋದಾ ಅಂತ ಹುಬ್ಬೇರಿಸಬೇಡಿ, ಬೆತ್ತಲೆ ಮಲಗೋದ್ರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ

Naked Sleep: ಬಟ್ಟೆ ಇಲ್ಲದೇ ಮಲಗೋದಾ ಅಂತ ಹುಬ್ಬೇರಿಸಬೇಡಿ, ಬೆತ್ತಲೆ ಮಲಗೋದ್ರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ

Reshma HT Kannada

Apr 26, 2024 12:31 PM IST

google News

ಬೆತ್ತಲೆ ಮಲಗೋದ್ರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ

    • ಇತ್ತೀಚಿನ ದಿನಗಳಲ್ಲಿ ತಾಪಮಾನ ಏರಿಕೆಯ ಕಾರಣದಿಂದ ಮೈ ಮೇಲೆ ಬಟ್ಟೆ ಹಾಕಿಕೊಳ್ಳುವುದು ಕಷ್ಟಸಾಧ್ಯವಾಗಿದೆ. ಆ ಕಾರಣಕ್ಕೆ ಕೆಲವರು ಬೆತ್ತಲೆ ಮಲಗುವ ಅಭ್ಯಾಸ ರೂಢಿಸಿಕೊಂಡಿದ್ದಾರೆ. ಬೆತ್ತಲೆ ಮಲಗೋದಾ ಅಂತಾ, ಹುಬ್ಬೇರಿಸಬೇಡಿ, ಹೀಗೆ ಬಟ್ಟೆ ಇಲ್ಲದೇ ಮಲಗುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂದು ತಿಳಿದರೆ ನೀವು ಅಚ್ಚರಿ ಪಡ್ತೀರಿ.
ಬೆತ್ತಲೆ ಮಲಗೋದ್ರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ
ಬೆತ್ತಲೆ ಮಲಗೋದ್ರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ (PC: Sleep.com)

ನಿದ್ದೆ ಮನುಷ್ಯನ ದೇಹಕ್ಕೆ ಬಹಳ ಅತ್ಯಗತ್ಯ. ಇದು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅವಶ್ಯ ಕೂಡ. ದಿನದಲ್ಲಿ ಕನಿಷ್ಠ 7 ಗಂಟೆಗಳ ದೀರ್ಘ ಹಾಗೂ ನೆಮ್ಮದಿಯ ನಿದ್ರೆ ಮಾಡುವ ವ್ಯಕ್ತಿಯು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಆದರೆ ನೀವು ನಿದ್ದೆ ಮಾಡುವ ಬಟ್ಟೆಯಿಲ್ಲದೇ ಮಲಗುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ ಎನ್ನುತ್ತಾರೆ ತಜ್ಞರು.

ಬೆತ್ತಲೆ ನಿದ್ರೆಯ

ಮೈ ಮೇಲೆ ಬಟ್ಟೆ ಇಲ್ಲದೆ ಬೆತ್ತಲೆಯಾಗಿ ಮಲಗುವುದು ಕೆಲವರಿಗೆ ಅಸಹಜ ಎನ್ನಿಸಬಹುದು. ಆದರೆ ಹೀಗೆ ಮಲಗುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಇದು ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ, ಚರ್ಮದ ಆರೋಗ್ಯ ಸುಧಾರಣೆಗೂ ಇದು ಉತ್ತಮ. ನಿಮ್ಮ ಸಂಗಾತಿಯೊಂದಿಗೆ ಅನ್ಯೋನ್ಯತೆ ಹೆಚ್ಚುತ್ತದೆ. ಇಷ್ಟೇ ಅಲ್ಲದೇ ಬೆತ್ತಲೆ ಮಲಗುವುದರಿಂದ ಇನ್ನೂ ಹಲವು ಪ್ರಯೋಜನಗಳಿವೆ. ಇದರಿಂದ ಏನೆಲ್ಲಾ ಉಪಯೋಗಗಳಿವೆ ನೋಡಿ.

ನಿದ್ರೆಯ ಗುಣಮಟ್ಟ ಸುಧಾರಿಸುತ್ತದೆ

ಯಾವುದೇ ಬಟ್ಟೆ ಇಲ್ಲದೆ ಬೆತ್ತಲೆಯಾಗಿ ಮಲಗುವುದು ನಿಮ್ಮ ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ. ನಿದ್ರೆಯ ಸಮಯದಲ್ಲಿ, ದೇಹದ ಉಷ್ಣತೆಯು ಸ್ವಾಭಾವಿಕವಾಗಿ ಕಡಿಮೆಯಾಗುತ್ತದೆ ಮತ್ತು ಬೆತ್ತಲೆಯಾಗಿ ಮಲಗುವುದು ಈ ತಾಪಮಾನವನ್ನು ಹೆಚ್ಚು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ದೀರ್ಘ ಮತ್ತು ಹೆಚ್ಚು ಶಾಂತ ನಿದ್ರೆಗೆ ಸಹಾಯ ಮಾಡುತ್ತದೆ. ಇದು ಮಲಗಿದ ತಕ್ಷಣ ನಿದ್ದೆ ಬರಲು ಕೂಡ ಸಹಕಾರಿ.

ಚರ್ಮದ ಆರೋಗ್ಯಕ್ಕೂ ಉತ್ತಮ

ಸಾಕಷ್ಟು ನಿದ್ರೆ ಸಿಗುವುದರಿಂದ ಚರ್ಮದ ಕೋಶಗಳನ್ನು ಸರಿಪಡಿಸಲು ಮತ್ತು ಪುನರುತ್ಪಾದಿಸಲು ದೇಹಕ್ಕೆ ಅನುವಾಗುತ್ತದೆ. ನಿದ್ರೆಯ ಸಮಯದಲ್ಲಿ, ನಿಮ್ಮ ದೇಹವು ಕಾಲಜನ್ ಅನ್ನು ಉತ್ಪಾದಿಸುತ್ತದೆ, ಇದು ಚರ್ಮವನ್ನು ದೃಢವಾಗಿ ಮತ್ತು ಸ್ಥಿತಿಸ್ಥಾಪಕವಾಗಿಡಲು ಸಹಾಯ ಮಾಡುತ್ತದೆ. ನೀವು ಬೆತ್ತಲೆಯಾಗಿ ಮಲಗಿದಾಗ, ಚರ್ಮಕ್ಕೆ ಉತ್ತಮವಾಗಿ ಉಸಿರಾಡಲು ಅನುವಾಗುತ್ತದೆ. ಮೊಡವೆ ಮತ್ತು ಡರ್ಮಟೈಟಿಸ್‌ನಂತಹ ಚರ್ಮದ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಒತ್ತಡವನ್ನು ಕಡಿಮೆ ಮಾಡುತ್ತದೆ

ಒತ್ತಡವನ್ನು ಕಡಿಮೆ ಮಾಡುವುದು ಬೆತ್ತಲೆಯಾಗಿ ಮಲಗುವ ಮತ್ತೊಂದು ಗಮನಾರ್ಹ ಪ್ರಯೋಜನ. ಬರಿ ಚರ್ಮದ ಮೇಲೆ ಮೃದುವಾದ ಹಾಸಿಗೆಯು ನಿಮಗೆ ಆರಾಮ ಮತ್ತು ವಿಶ್ರಾಂತಿಯ ಭಾವನೆಗಳನ್ನು ನೀಡುತ್ತದೆ, ಕಾರ್ಟಿಸೋಲ್ ಮಟ್ಟವನ್ನು ಕಡಿಮೆ ಮಾಡಲು ಕೂಡ ಇದು ಉತ್ತಮ ಮತ್ತು ಶಾಂತತೆಯ ಭಾವವನ್ನು ಉತ್ತೇಜಿಸುತ್ತದೆ. ಬೆತ್ತಲೆಯಾಗಿ ಮಲಗುವುದು ನಿಮ್ಮ ದೇಹದ ಉಷ್ಣತೆಯನ್ನು ತಂಪಾಗಿರಿಸುತ್ತದೆ, ಇದು ವಿಶ್ರಾಂತಿಯನ್ನು ಉತ್ತೇಜಿಸುತ್ತದೆ.

ತೂಕ ನಿರ್ವಹಣೆಗೆ ಪ್ರಯೋಜನಕಾರಿ

7 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುವ ಜನರಲ್ಲಿ ತೂಕ ಹೆಚ್ಚುವ ಸಾಧ್ಯತೆಯಿದೆ ಎಂದು ವಿವಿಧ ಅಧ್ಯಯನಗಳು ತೋರಿಸಿವೆ. ಆದ್ದರಿಂದ, ಬೆತ್ತಲೆಯಾಗಿ ಮಲಗುವುದು ನಿಮ್ಮ ನಿದ್ರೆಯ ಚಕ್ರವನ್ನು ಸುಧಾರಿಸಲು ಮತ್ತು ತೂಕ ನಷ್ಟಕ್ಕೆ ಪ್ರಯೋಜನಕಾರಿಯಾಗಿದೆ. ಇದು ನಿಮ್ಮ ದೇಹವನ್ನು ತಂಪಾಗಿ ಮತ್ತು ಶಾಂತವಾಗಿಡಲು ಸಹಾಯ ಮಾಡುತ್ತದೆ, ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ನೀವು ನಿದ್ದೆ ಮಾಡುವಾಗ ಕ್ಯಾಲೊರಿಗಳನ್ನು ಬರ್ನ್ ಮಾಡಲು ಸಹಾಯ ಮಾಡುತ್ತದೆ.

ರೋಗಗಳನ್ನು ತಡೆಯುತ್ತದೆ

ಬೆತ್ತಲೆಯಾಗಿ ಮಲಗುವುದು ಅನೇಕ ರೋಗಗಳನ್ನು ತಡೆಯುತ್ತದೆ ಎಂದು ಹೇಳಲಾಗುತ್ತದೆ. ಬಟ್ಟೆ ಇಲ್ಲದೆ ಮಲಗುವುದರಿಂದ ತಲೆಯಿಂದ ಪಾದದವರೆಗೆ ದೇಹದಲ್ಲಿ ರಕ್ತದ ಹರಿವು ಹೆಚ್ಚಾಗುತ್ತದೆ. ಸುಧಾರಿತ ರಕ್ತದ ಹರಿವು ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಮಧುಮೇಹ ಮತ್ತು ಹೃದ್ರೋಗದಂತಹ ಸಾಮಾನ್ಯ ಕಾಯಿಲೆಗಳನ್ನು ಅಭಿವೃದ್ಧಿಪಡಿಸುವ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ

ಸಂಗಾತಿಯೊಂದಿಗೆ ಅನ್ಯೋನ್ಯತೆಯನ್ನು ಹೆಚ್ಚಿಸುತ್ತದೆ

ದೈಹಿಕ ಆರೋಗ್ಯ ಪ್ರಯೋಜನಗಳ ಜೊತೆಗೆ, ಬೆತ್ತಲೆಯಾಗಿ ಮಲಗುವುದು ನಿಮ್ಮ ಸಂಗಾತಿಯೊಂದಿಗೆ ಅನ್ಯೋನ್ಯತೆಯನ್ನು ಹೆಚ್ಚಿಸುತ್ತದೆ. ಎರಡು ದೇಹಗಳ ನಡುವಿನ ಪರಸ್ಪರ ಕ್ರಿಯೆಯಿಂದಾಗಿ ಆಕ್ಸಿಟೋಸಿನ್ ಬಿಡುಗಡೆಯಾಗುತ್ತದೆ. ಇದು ಬಾಂಧವ್ಯ ಮತ್ತು ಅನ್ಯೋನ್ಯತೆಯ ಭಾವನೆಗಳನ್ನು ಸೃಷ್ಟಿಸುತ್ತದೆ. ಇದು ನಿಮಗೆ ಹೆಚ್ಚು ತೃಪ್ತಿಕರವಾದ ಲೈಂಗಿಕ ಅನುಭವಗಳನ್ನು ಹೊಂದಲು ಸಹಾಯ ಮಾಡುತ್ತದೆ ಎಂದು ಸಂಶೋಧನಾ ಫಲಿತಾಂಶಗಳು ಸೂಚಿಸುತ್ತವೆ

ಜನನಾಂಗದ ಆರೋಗ್ಯಕ್ಕೆ ಪ್ರಯೋಜನಕಾರಿ

ಬಿಗಿಯಾದ ಒಳ ಉಡುಪು ಅಥವಾ ಪೈಜಾಮಾಗಳನ್ನು ಧರಿಸುವುದರಿಂದ ಜನನಾಂಗದ ಪ್ರದೇಶದಲ್ಲಿ ಬೆಚ್ಚಗಿನ, ತೇವಾಂಶದ ವಾತಾವರಣವನ್ನು ಸೃಷ್ಟಿಸುತ್ತದೆ, ಇದು ಬ್ಯಾಕ್ಟೀರಿಯಾ ಮತ್ತು ಯೀಸ್ಟ್‌ನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇದು ಬ್ಯಾಕ್ಟೀರಿಯಾದ ಯೋನಿನೋಸಿಸ್ ಅಥವಾ ಯೀಸ್ಟ್ ಸೋಂಕಿನಂತಹ ಸೋಂಕುಗಳಿಗೆ ಕಾರಣವಾಗಬಹುದು. ರಾತ್ರಿಯಲ್ಲಿ ಬಟ್ಟೆ ಧರಿಸಿ ಮಲಗುವುದು ಜನನಾಂಗದ ನಯಗೊಳಿಸುವಿಕೆಯನ್ನು ಉತ್ತೇಜಿಸುತ್ತದೆ, ಲೈಂಗಿಕ ಚಟುವಟಿಕೆಯ ಸಮಯದಲ್ಲಿ ಅಸ್ವಸ್ಥತೆಯನ್ನು ಕಡಿಮೆ ಮಾಡುತ್ತದೆ ಮತ್ತು ಒಟ್ಟಾರೆ ಜನನಾಂಗದ ಆರೋಗ್ಯವನ್ನು ಸುಧಾರಿಸುತ್ತದೆ.

ನೋಡಿದ್ರಲ್ಲ, ಬೆತ್ತಲೆ ಮಲಗುವುದರಿಂದ ದೇಹಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂದು. ಬೇಸಿಗೆ ಮಾತ್ರವಲ್ಲ ಎಲ್ಲಾ ಕಾಲದಲ್ಲೂ ಬೆತ್ತಲೆ ಮಲಗುವುದು ದೇಹಕ್ಕೆ ಉತ್ತಮ ಎನ್ನುವುದು ತಜ್ಞರು ಅಭಿಪ್ರಾಯ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ