Food Allergies: ಆಹಾರದ ಅಲರ್ಜಿ ನಿವಾರಣೆಗೆ ಇಲ್ಲಿದೆ ಸುಲಭ ಮನೆಮದ್ದು; ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಲೂ ಇವು ಸಹಕಾರಿ
Jul 17, 2023 06:13 PM IST
ಆಹಾರದ ಅರ್ಲಜಿಗೆ ಇಲ್ಲಿದೆ ಮನೆಮದ್ದು
- Home Remedies Food Allergies: ಮಳೆಗಾಲದಲ್ಲಿ ಕಲುಷಿತ ನೀರು ಹಾಗೂ ಆಹಾರದ ಕಾರಣದಿಂದ ಅಲರ್ಜಿ ಉಂಟಾಗುವುದು ಸಾಮಾನ್ಯ. ಹಾಗಂತ ಇದಕ್ಕೆ ವೈದ್ಯರ ಬಳಿಗೆ ಹೋಗಬೇಕು ಎಂದೇನಿಲ್ಲ. ಮನೆಯಲ್ಲೇ ಇರುವಂತಹ ಕೆಲವು ವಸ್ತುಗಳನ್ನು ನಿರಂತರವಾಗಿ ಬಳಸಬೇಕು, ಅವು ಆಹಾರದ ಅಲರ್ಜಿಗೆ ಉತ್ತಮ ಮನೆಮದ್ದು.
ಮಳೆಗಾಲದಲ್ಲಿ ನೀರು, ಆಹಾರ ಹಾಗೂ ವಾತಾವರಣದ ಕಾರಣದಿಂದ ಅಲರ್ಜಿಗಳು ಉಂಟಾಗುವುದು ಸಾಮಾನ್ಯ. ಇವು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಕುಗ್ಗಿಸುವ ಜೊತೆಗೆ ಇನ್ನಿತರ ಆರೋಗ್ಯ ಸಮಸ್ಯೆಯನ್ನೂ ಉಂಟು ಮಾಡುತ್ತವೆ. ಅದರಲ್ಲೂ ಮಳೆಗಾಲದಲ್ಲಿ ಕಲುಷಿತ ನೀರು ಹಾಗೂ ಆಹಾರದ ಕಾರಣದಿಂದ ಅಲರ್ಜಿ ಉಂಟಾಗುವುದು ಸಾಮಾನ್ಯ. ಹಾಗಂತ ಇದಕ್ಕೆ ವೈದ್ಯರ ಬಳಿಗೆ ಹೋಗಬೇಕು ಎಂದೇನಿಲ್ಲ. ಮನೆಯಲ್ಲೇ ಸಿಗುವ ಮನೆಮದ್ದುಗಳು ತುರ್ತು ಸಂದರ್ಭಗಳಲ್ಲಿ ನಮಗೆ ನೆರವಾಗುವುದರಲ್ಲಿ ಎರಡು ಮಾತಿಲ್ಲ.
ಸಾಮಾನ್ಯ ಮೊಟ್ಟೆ, ಹಾಲು, ಕಡಲೆಕಾಯಿ, ಜೋಳ, ಗೋಧಿ ಮತ್ತು ಚಿಪ್ಪುಮೀನು, ಸ್ಟ್ರಾಬೆರಿ ಮತ್ತು ಸೋಯಾಗಳಿಂದ ಅಲರ್ಜಿ ಉಂಟಾಗುತ್ತದೆ.
ಆಹಾರದ ಅಲರ್ಜಿಯಿಂದ ಉಸಿರಾಟದ ತೊಂದರೆ, ನಾಲಿಗೆ ಅಥವಾ ಗಂಟಲಿನ ಊತ, ಧ್ವನಿ ಕರ್ಕಶವಾಗುವುದು, ವಾಕರಿಕೆ, ಹೊಟ್ಟೆ ನೋವು ಅಥವಾ ಜಠರಗರುಳಿನ ಸಮಸ್ಯೆ, ವಾಂತಿ, ಕೆಮ್ಮು, ಚರ್ಮದ ದದ್ದುಗಳು, ಉಬ್ಬಸ ಹಾಗೂ ತಲೆ ತಿರುಗುವುದು ಇಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಕೆಲವೊಮ್ಮೆ ಮನೆಮದ್ದುಗಳು ನಿಮಗೆ ಹೊಂದಿಕೊಳ್ಳದೇ ಇರಬಹುದು ಅಂತಹ ಸಮಯದಲ್ಲಿ ವೈದ್ಯರ ಬಳಿ ತೋರಿಸುವುದು ಉತ್ತಮ.
ಹಾಗಾದರೆ ಆಹಾರ ಅಲರ್ಜಿ ನಿವಾರಿಸುವ ಕೆಲವೊಂದು ಮನೆಮದ್ದುಗಳು ಯಾವುವು ನೋಡೋಣ.
ಶುಂಠಿ
ಶುಂಠಿ ಸಾಮಾನ್ಯ ಎಲ್ಲರ ಮನೆಯಲ್ಲೂ ಸಿಗುವ ಸಾಮಾನ್ಯ ವಸ್ತು ಹಾಗೂ ಇದು ಸರ್ವರೋಗಕ್ಕೂ ಮದ್ದು. ಇದರಲ್ಲಿ ಉರಿಯೂತ ವಿರೋಧಿ ಲಕ್ಷಣಗಳಿವೆ. ಇದರಲ್ಲಿ ಆಂಟಿ ಆಕ್ಸಿಡೆಂಟ್ ಹಾಗೂ ಆಂಟಿ ಬ್ಯಾಕ್ಟೀರಿಯಲ್ ಅಂಶಗಳು ಸಮೃದ್ಧವಾಗಿವೆ. ಅಲ್ಲದೆ ಇದು ವಾಕರಿಕೆ, ವಾಂತಿ, ಅಜೀರ್ಣ, ಅತಿಸಾರದಂತಹ ವಿವಿಧ ಜಠರಗರುಳಿನ ಸಮಸ್ಯೆಗಳ ನಿವಾರಣೆಗೆ ಉತ್ತಮ ಮನೆಮದ್ದು. ಪ್ರತಿದಿನ ಶುಂಠಿಯನ್ನು ಅಗಿಯಬೇಕು ಅಥವಾ ಕೆಲವು ದಿನಗಳವರೆಗೆ ಪ್ರತಿದಿನ 2 ರಿಂದ 3 ಕಪ್ ಶುಂಠಿ ಚಹಾವನ್ನು ಸೇವಿಸಬೇಕು.
ಪ್ರೊಬಯೋಟಿಕ್ ಆಹಾರ
ಹೊಟ್ಟೆ ನೋವು ಮತ್ತು ಅತಿಸಾರವನ್ನು ನಿವಾರಿಸಲು ಪ್ರತಿದಿನ 1 ಕಪ್ ಮೊಸರು ಸೇವಿಸಬೇಕು. ಇದು ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯಾವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಜೀರ್ಣಕಾರಿ ಸಮಸ್ಯೆಗಳಿಗೆ ಚಿಕಿತ್ಸೆ ನೀಡುತ್ತದೆ.
ವಿಟಮಿನ್ ಸಿ ಅಂಶ ಇರುವ ಆಹಾರ
ವಿಟಮಿನ್ ಸಿ ಅಂಶ ಸಮೃದ್ಧವಾಗಿರುವ ಆಹಾರ ಸೇವನೆಗೆ ಒತ್ತು ನೀಡಬೇಕು. ಇವು ದೇಹದಲ್ಲಿ ವಿಷಕಾರಿ ಅಂಶಗಳ ಸಂಗ್ರಹವನ್ನು ತಡೆಯಲು ಸಹಾಯ ಮಾಡುತ್ತದೆ. ನಿಂಬೆಹಣ್ಣು, ಕಿತ್ತಳೆ, ಕೋಸುಗಡ್ಡೆ, ದ್ರಾಕ್ಷಿಹಣ್ಣು, ಕಿವಿ, ಸ್ಟ್ರಾಬೆರಿ ಮತ್ತು ಟೊಮೆಟೊಗಳಂತಹ ವಿಟಮಿನ್ ಸಿ ಹೊಂದಿರುವ ಹಣ್ಣು ಹಾಗೂ ತರಕಾರಿಗಳನ್ನು ಹೆಚ್ಚು ಹೆಚ್ಚು ಸೇವಿಸಬೇಕು.
ಸ್ಟಿಗಿಂಗ್ ನೆಟಲ್ ಅಥವಾ ಕುಟುಕುವ ಗಿಡವು ಆಹಾರದ ಅರ್ಲಜಿಗಳಿಗೆ ಉತ್ತಮ ಔಷಧಿ. ಇದು ಸ್ರವಿಸುವ ಮೂಗು, ವಾಕರಿಕೆ, ಚರ್ಮ ದದ್ದುಗಳು, ಹೊಟ್ಟೆ ನೋವು ಮುಂತಾದ ರೋಗಲಕ್ಷಣಗಳಿಗೆ ಪರಿಹಾರ ನೀಡುತ್ತದೆ. ಆಹಾರದ ಅಲರ್ಜಿ ಉಂಟಾದರೆ ಪ್ರತಿದಿನ ಒಂದು ವಾರದವರೆಗೆ ಈ ಗಿಡದ ಎಲೆಗಳಿಂದ ತಯಾರಿಸಿದ ಚಹಾವನ್ನು ಕುಡಿಯಬೇಕು.
ನಿಂಬೆಹಣ್ಣು
ದೇಹದಲ್ಲಿ ಪ್ರತಿರಕ್ಷಣಾ ವ್ಯವಸ್ಥೆ ಸುಧಾರಿಸಲು ನಿಂಬೆಹಣ್ಣು ಉತ್ತಮ ಔಷಧಿ. ಇದು ಹಲವು ಬಗೆಯ ಆಹಾರದ ಅಲರ್ಜಿಗಳಿಂದ ದೇಹವನ್ನು ರಕ್ಷಿಸುತ್ತದೆ. ಆಹಾರದ ಅಲರ್ಜಿ ನಿವಾರಣೆಗೆ ಪ್ರತಿದಿನ ಖಾಲಿಯಲ್ಲಿ ಹೊಟ್ಟೆಯಲ್ಲಿ 1 ಕಪ್ ಬಿಸಿನೀರಿನೊಂದಿಗೆ ನಿಂಬೆರಸ ಮಿಶ್ರಣ ಮಾಡಿ ಕುಡಿಯಬೇಕು.
ಗ್ರೀನ್ ಟೀ
ಇದರಲ್ಲಿ ಆಂಟಿ ಆಕ್ಸಿಡೆಂಟ್ ಅಂಶ ಅಧಿಕವಾಗಿದೆ. ಇದು ಉರಿಯೂತ ವಿರೋಧ ಅಂಶಗಳನ್ನು ಹೊಂದಿದೆ. ಇದರಲ್ಲಿರುವ ಆಂಟಿಹಿಸ್ಟಮೈನ್ ಗುಣಲಕ್ಷಣಗಳು ಆಹಾರದ ಅಲರ್ಜಿಗಳಿಂದ ಉಂಟಾಗುವ ಹೊಟ್ಟೆಯ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ.
ಹರಳೆಣ್ಣೆ
ಹರಳೆಣ್ಣೆ ಕೂದಲಿನ ಆರೋಗ್ಯಕ್ಕೆ ಮಾತ್ರವಲ್ಲ ದೇಹದ ಆರೋಗ್ಯಕ್ಕೂ ಉತ್ತಮ. ಇದು ಆಹಾರದ ಅಲರ್ಜಿಗೆ ಸಂಬಂಧಿಸಿದ ಜಠರಗರುಳಿನ ಸಮಸ್ಯೆಗಳ ನಿವಾರಣೆಗೆ ಉತ್ತಮ ಔಷಧಿ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅರ್ಧ ಟೀ ಚಮಚ ಹರಳೆಣ್ಣೆಯನ್ನು ಒಂದು ಲೋಟ ಉಗುರು ಬೆಚ್ಚಗಿನ ನೀರಿನಲ್ಲಿ ಮಿಶ್ರಣ ಮಾಡಿ ಕುಡಿಯಬೇಕು.
ಕ್ಯಾರೆಟ್ ಹಾಗೂ ಕುಂಬಳ ಕಾಯಿ ಜ್ಯೂಸ್
ಯಾವುದೇ ರೀತಿಯ ಆಹಾರದ ಅಲರ್ಜಿಗೆ ಕ್ಯಾರೆಟ್ ಮತ್ತು ಕುಂಬಳಕಾಯಿ ಮಿಶ್ರಣದ ಜ್ಯೂಸ್ ಸೇವನೆ ಉತ್ತಮ. ಇದರಲ್ಲಿ ಅಲರ್ಜಿ ವಿರೋಧಿ ಅಂಶವು ಆಹಾರ ಅಲರ್ಜಿಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.