logo
ಕನ್ನಡ ಸುದ್ದಿ  /  ಜೀವನಶೈಲಿ  /  Dehydration: ಆರಂಭವಾಗಿದೆ ಬೇಸಿಗೆ, ಡೀಹೈಡ್ರೇಷನ್‌ನಿಂದ ದೇಹವನ್ನು ರಕ್ಷಿಸಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಅನುಸರಿಸಿ

Dehydration: ಆರಂಭವಾಗಿದೆ ಬೇಸಿಗೆ, ಡೀಹೈಡ್ರೇಷನ್‌ನಿಂದ ದೇಹವನ್ನು ರಕ್ಷಿಸಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಅನುಸರಿಸಿ

Reshma HT Kannada

Feb 21, 2024 07:33 PM IST

google News

ಆರಂಭವಾಗಿದೆ ಬೇಸಿಗೆ, ಡೀಹೈಡ್ರೇಷನ್‌ನಿಂದ ದೇಹವನ್ನು ರಕ್ಷಿಸಿಕೊಳ್ಳಲು ತಪ್ಪದೇ ಕ್ರಮಗಳನ್ನು ಅನುಸರಿಸಿ

    • ಬೇಸಿಗೆ ಆರಂಭವಾಗಿ ಕೆಲ ದಿನಗಳು ಕಳೆದಿದ್ದಷ್ಟೇ ಆದರೂ ಬಿಸಿಲಿನ ತಾಪ ಜೋರಾಗಿದೆ. ಹೊರಗಡೆ ಕಾಲಿಡುವುದೂ ಕಷ್ಟ ಎನ್ನುವ ಪರಿಸ್ಥಿತಿ ಇದೆ. ಈ ಸುಡು ಬಿಸಿಲಿನಲ್ಲಿ ಬೇಡವೆಂದರೂ ಡೀಹೈಡ್ರೇಷನ್‌ ಸಮಸ್ಯೆ ಕಾಡುತ್ತದೆ. ಇದು ಜೀವಕ್ಕೂ ಅಪಾಯ ಉಂಟು ಮಾಡಬಹುದು. ಡೀಹೈಡ್ರೇಷನ್‌ ಅಥವಾ ನಿರ್ಜಲೀಕರಣ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಈ ಮಾರ್ಗಗಳನ್ನು ತಪ್ಪದೇ ಅನುಸರಿಸಿ. 
 ಆರಂಭವಾಗಿದೆ ಬೇಸಿಗೆ, ಡೀಹೈಡ್ರೇಷನ್‌ನಿಂದ ದೇಹವನ್ನು ರಕ್ಷಿಸಿಕೊಳ್ಳಲು ತಪ್ಪದೇ ಕ್ರಮಗಳನ್ನು ಅನುಸರಿಸಿ
ಆರಂಭವಾಗಿದೆ ಬೇಸಿಗೆ, ಡೀಹೈಡ್ರೇಷನ್‌ನಿಂದ ದೇಹವನ್ನು ರಕ್ಷಿಸಿಕೊಳ್ಳಲು ತಪ್ಪದೇ ಕ್ರಮಗಳನ್ನು ಅನುಸರಿಸಿ

ಬೇಸಿಗೆ ಆರಂಭವಾಗಿದೆ. ಮಾಘ ಮಾಸದ ಚಳಿಯ ನಡುವೆಯೂ ಬಿಸಿಲಿನ ಝಳ ಜೋರಾಗಿದೆ. ವರ್ಷದಿಂದ ವರ್ಷಕ್ಕೆ ಬಿಸಿಲಿನ ತಾಪ ಏರಿಕೆಯಾಗುತ್ತಲೇ ಇದೆ. ಈ ಬಿಸಿಲಿನಲ್ಲಿ ಹೊರಗಡೆ ಕಾಲಿಡುವುದು ಕಷ್ಟ ಎನ್ನುವಂತೆ ಭೂಮಿ ಸುಡುತ್ತಿದೆ. ಆರಂಭದಲ್ಲೇ ಹೀಗೆ ಇನ್ನೂ ಮಾರ್ಚ್‌, ಏಪ್ರಿಲ್‌ ಕಥೆ ಏನು ಎಂದು ಜನ ಮಾತನಾಡಿಕೊಳ್ಳುವಂತಾಗಿದೆ. ಬೇಸಿಗೆ ಬಂದಾಕ್ಷಣ ಡಿಹೈಡ್ರೇಷನ್‌ ಸಮಸ್ಯೆ ಕಾಡುವುದು ಸಹಜ. ಹಾಗಂತ ಇದು ನಿರ್ಲಕ್ಷ್ಯ ಮಾಡುವ ವಿಚಾರ ಖಂಡಿತ ಅಲ್ಲ. ನಿರ್ಜಲೀಕರಣದಿಂದ ತಪ್ಪಿಸಿಕೊಳ್ಳಲು ದೇಹವನ್ನು ಸಿದ್ಧತೆ ಮಾಡುವುದು ಮುಖ್ಯ.

ಡಿಹೈಡ್ರೇಷನ್‌ ಉಂಟಾಗದೇ ಇರಲು ಸಾಕಷ್ಟು ನೀರು ಕುಡಿಯುವುದು ಬಹಳ ಅವಶ್ಯ. ಬೇಸಿಗೆಯಲ್ಲಿ ಎಲ್ಲಿಗೇ ಹೋಗಬೇಕಾದನಿಮ್ಮ ಜೊತೆ ನೀರಿನ ಬಾಟಲಿ ಇರುವಂತೆ ನೋಡಿಕೊಳ್ಳಿ. ದೇಹದಲ್ಲಿ ನೀರಿನ ಕೊರತೆಯು ಹೈಡ್ರೇಷನ್‌ಗೆ ಪ್ರಮುಖ ಕಾರಣವಾಗುತ್ತದೆ. ನಮ್ಮ ದೇಹವು ಶೇ 60 ರಷ್ಟು ನೀರಿನಿಂದ ಕೂಡಿದೆ. ನೀರು ದೇಹದ ಅಂಗಾಂಶಗಳಿಗೆ ಅಗತ್ಯ ಪೋಷಕಾಂಶ ನೀಡುವ ಜೊತೆಗೆ ರಕ್ತಪರಿಚಲನೆ ಹಾಗೂ ದೇಹದ ತಾಪ ನೀಗಿಸಲು ನೆರವಾಗುತ್ತದೆ. ಇದರೊಂದಿಗೆ ದೇಹವು ಹೈಡ್ರೇಟ್‌ ಆಗಿರಲು ಈ ಕೆಲವು ಮಾರ್ಗಗಳನ್ನೂ ಅನುಸರಿಸಬೇಕು. ಇದರಿಂದ ಬೇಸಿಗೆಯಲ್ಲಿ ಡಿಹೈಡ್ರೇಷನ್‌ ಸಮಸ್ಯೆ ಕಾಡುವುದಿಲ್ಲ.

ಸಾಕಷ್ಟು ನೀರು ಕುಡಿಯಿರಿ

ಈ ಮೊದಲೇ ಹೇಳಿದಂತೆ ಬೇಸಿಗೆಯಲ್ಲಿ ಸಾಕಷ್ಟು ನೀರು ಕುಡಿಯವುದು ಬಹಳ ಅವಶ್ಯ. ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ದಿನದಲ್ಲಿ ಕನಿಷ್ಠ 3 ರಿಂದ 4 ಲೀಟರ್‌ ನೀರು ತಪ್ಪದೇ ಕುಡಿಯಿರಿ. ನೀರು ಕುಡಿದಷ್ಟೂ ದೇಹದ ತಾಪವು ನಿಯಂತ್ರಣದಲ್ಲಿರುತ್ತದೆ.

ಡಿಹೈಡ್ರೇಷನ್‌ ಲಕ್ಷಣಗಳ ಬಗ್ಗೆ ಅರಿವಿರಲಿ

ಚರ್ಮ ಒಣಗುವುದು, ಚರ್ಮದ ಕಿರಿಕಿರಿ, ಉರಿಯಾಗುವುದು, ತುರಿಕೆ ಇವು ಡೀಹೈಡ್ರೇಷನ್‌ನ ಲಕ್ಷಣಗಳಿರಬಹುದು. ಪದೇ ಪದೇ ತಲೆನೋವು ಕಾಡುವುದು, ತಲೆಸುತ್ತು, ಆಯಾಸ ಕೂಡ ಇದರ ಲಕ್ಷಣಗಳಾಗಿದೆ. ಇದಲ್ಲದೇ ಸ್ನಾಯ ಸೆಳೆತ, ಉಸಿರಾಟದಲ್ಲಿ ವ್ಯತ್ಯಾಸ, ಮೂರ್ಛೆ ತಪ್ಪುವುದು ಹಾಗೂ ಮೂತ್ರ ವಿಸರ್ಜನೆಯಾಗದೇ ಇರುವುದು ಕೂಡ ಡೀಹೈಡ್ರೇಷನ್‌ನ ಲಕ್ಷಣವಾಗಿದೆ. ನಿಮ್ಮಲ್ಲೂ ಇಂತಹ ಲಕ್ಷಣಗಳು ಕಾಣಿಸಿದರೆ ಸಾಕಷ್ಟು ನೀರು ಕುಡಿಯಲು ಆರಂಭಿಸಿ.

ಮೂತ್ರವನ್ನು ಪರೀಕ್ಷಿಸಿ

ಡೀಹೈಡ್ರೇಷನ್‌ ಅನ್ನು ಪತ್ತೆ ಮಾಡಲು ಇರುವ ಸುಲಭ ಮಾರ್ಗ ಎಂದರೆ ಮೂತ್ರವನ್ನು ಪರೀಕ್ಷಿಸುವುದು. ಮೂತ್ರ ಬಣ್ಣ ಬದಲಾಗಿರುವುದು, ಹಳದಿ ಬಣ್ಣಕ್ಕೆ ತಿರುಗಿರುವುದು ಡೀಹೈಡ್ರೇಷನ್‌ ಲಕ್ಷಣವಿರಬಹುದು. ಕೆಲವೊಮ್ಮೆ ನೀವು ಸೇವಿಸುವ ಔಷಧಿಗಳ ಪರಿಣಾಮದಿಂದಲೂ ಮೂತ್ರದ ಬಣ್ಣ ಬದಲಾಗಬಹುದು. ಡೀಹೈಡ್ರೇಷನ್‌ ಕಾರಣದಿಂದ ಮೂತ್ರದ ಬಣ್ಣದ ಬದಲಾದರೆ ನೀವು ಸಾಕಷ್ಟು ನೀರಿನಾಂಶ ಸೇವಿಸಬೇಕು.

ಆಲ್ಕೊಹಾಲ್‌, ಕೋಲ್ಡ್‌ ಡ್ರಿಂಕ್ಸ್‌, ಕೆಫಿನ್‌ ಸೇವನೆ ನಿಲ್ಲಿಸಿ

ಈ ಮೇಲೆ ತಿಳಿಸಿರುವ ಪದಾರ್ಥಗಳು ದ್ರವಾಹಾರವೇ ಆದರೂ ಬೇಸಿಗೆಯಲ್ಲಿ ಇವುಗಳ ಸೇವನೆಯಿಂದ ದೇಹ ಹೈಡ್ರೇಟ್‌ ಆಗುವ ಬದಲು ಡೀ ಹೈಡ್ರೇಷನ್‌ ಸಮಸ್ಯೆ ಕಾಡಬಹುದು. ಕಾಫಿ, ಸೋಡಾ, ಕೋಲ್ಡ್‌ ಡ್ರಿಂಕ್ಸ್‌, ಆಲ್ಕೋಹಾಲ್‌ ಸೇವನೆಯಿಂದ ಡೀಹೈಡ್ರೇಷನ್‌ ಸಮಸ್ಯೆ ಇನ್ನಷ್ಟು ಉಲ್ಬಣವಾಗಬಹುದು. ಅದರ ಬದಲು ನಿಂಬೆಹಣ್ಣಿನ ಪಾನಕ, ಸ್ಮೂಥಿಗಳು, ಹಣ್ಣಿನ ರಸ ಸೇವನೆಯನ್ನು ರೂಢಿಸಿಕೊಳ್ಳಿ. ಅತಿಯಾದ ಸಕ್ಕರೆ ಹಾಗೂ ಸೋಡಿಯಂ ಅಂಶ ಇರುವ ಪಾನೀಯಗಳ ಸೇವನೆಗೆ ಕಡಿವಾಣ ಹಾಕಿ.

ದೇಹವನ್ನು ತಂಪಾಗಿಸಿ

ದೇಹದ ತಾಪವನ್ನು ತಣಿಸಲು ನೀರು ಅತಿ ಅವಶ್ಯವಾದರೂ ನೀರಿನಿಂದ ಮಾತ್ರ ದೇಹವನ್ನು ತಣಿಸಲು ಸಾಧ್ಯವಿಲ್ಲ. ಇದರೊಂದಿಗೆ ದೇಹತಾಪವನ್ನು ತಣಿಸಲು ತೆಳುವಾದ ಹತ್ತಿಯ ಬಟ್ಟೆ ಧರಿಸುವುದು, ಸಡಿಲವಾದ ಉಡುಪು ಧರಿಸುವುದು, ತಿಳಿ ಬಣ್ಣ ಬಟ್ಟೆ ತೊಡುವುದು ಕೂಡ ಮುಖ್ಯವಾಗುತ್ತದೆ. ಅಲ್ಲದೇ ಬಿಸಿಲಿಗೆ ಹೋಗುವಾಗ ಟೋಪಿ, ಕೂಲಿಂಗ್‌ ಗ್ಲಾಸ್‌ ಧರಿಸುವುದನ್ನು ಮರೆಯಬಾರದು.

ನೀರಿನಾಂಶ ಸಮೃದ್ಧ ಆಹಾರಗಳ ಸೇವನೆ

ನಮ್ಮ ದೇಹಕ್ಕೆ ಶೇ 80ರಷ್ಟು ನೀರಿನಾಂಶ ನಾವು ಸೇವಿಸುವ ದ್ರವಾಹಾರದಿಂದ ಸಿಕ್ಕರೆ ಇನ್ನೂ ಶೇ 20ರಷ್ಟು ಆಹಾರಗಳಿಂದ ದೊರೆಯುತ್ತದೆ. ನೀರಿನಾಂಶ ಸಮೃದ್ಧವಾಗಿರುವ ಹಣ್ಣುಗಳು ಹಾಗೂ ತರಕಾರಿಗಳಿಂದ ದೇಹಕ್ಕೆ ನೀರಿನಾಂಶ ಸಿಗುತ್ತದೆ. ಸೌತೆಕಾಯಿ, ಟೊಮೆಟೊ, ಮೂಲಂಗಿ, ಕಲ್ಲಂಗಡಿ, ಸ್ಟ್ರಾಬೆರಿ, ದ್ರಾಕ್ಷಿ, ಕಿತ್ತಳೆ ಇಂತಹ ನೀರಿನಾಂಶ ಇರುವ ಹಣ್ಣು ತರಕಾರಿ ಸೇವಿಸಿ.

ಪ್ರೊಬಯೋಟಿಕ್‌ ಆಹಾರಗಳ ಸೇವನೆ

ನಮ್ಮ ದೇಹವು ಉತ್ತಮ ಬ್ಯಾಕ್ಟೀರಿಯಾಗಳ ಆಗರವಾಗಿದೆ. ನಮ್ಮ ಬಾಯಿ, ಕರಳು ಹಾಗೂ ಚರ್ಮದಲ್ಲಿ ಉತ್ತಮ ಬ್ಯಾಕ್ಟೀರಿಯಾಗಳಿರುತ್ತವೆ. ಮೊಸರು, ಯೋಗರ್ಟ್‌ನಂತಹ ಆಹಾರ ಪದಾರ್ಥಗಳಲ್ಲಿ ಉತ್ತಮ ಬ್ಯಾಕ್ಟೀರಿಯಾಗಳಿರುತ್ತವೆ. ಇವುಗಳ ಸೇವನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ, ಇದು ಸೋಂಕುಗಳಿಂದ ದೇಹವನ್ನು ರಕ್ಷಿಸುತ್ತದೆ, ಜೀರ್ಣಕ್ರಿಯೆಯನ್ನು ವೃದ್ಧಿಸುವುದು ಮಾತ್ರವಲ್ಲ ಆಹಾರಗಳಿಂದ ಅಗತ್ಯ ಪೋಷಕಾಂಶಗಳನ್ನು ಹೀರಿಕೊಳ್ಳುತ್ತದೆ.

ಈ ಮೇಲಿನ ತಿಳಿಸಿರುವ ಎಲ್ಲಾ ಮಾರ್ಗಗಳು ಬೇಸಿಗೆಯಲ್ಲಿ ನಿಮ್ಮ ದೇಹವನ್ನು ಡೀಹೈಡ್ರೇಷನ್‌ನಿಂದ ಕಾಪಾಡುವ ಮಾರ್ಗಗಳಾಗಿದೆ. ಈ ಮಾರ್ಗಗಳನ್ನು ತಪ್ಪದೇ ಅನುಸರಿಸಿದ ಡೀಹೈಡ್ರೇಷನ್‌ನಿಂದ ಎದುರಾಗುವ ಸಮಸ್ಯೆಗಳಿಂದ ದೂರ ಉಳಿಯಿರಿ.

(This copy first appeared in Hindustan Times Kannada website. To read more like this please logon to kannada.hindustantimes.com)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ