logo
ಕನ್ನಡ ಸುದ್ದಿ  /  ಜೀವನಶೈಲಿ  /  Viral: ಚಳಿಗಾಲದಲ್ಲಿ ಹೆಚ್ಚುತ್ತೆ ಹೃದಯಾಘಾತ, ಹೃದಯ ಜೋಪಾನ; ಸಾಮಾಜಿಕ ಜಾಲತಾಣದಲ್ಲಿ ವೈದ್ಯರು ನೀಡಿದ್ರು ಬೆಸ್ಟ್‌ ಟಿಪ್ಸ್‌

Viral: ಚಳಿಗಾಲದಲ್ಲಿ ಹೆಚ್ಚುತ್ತೆ ಹೃದಯಾಘಾತ, ಹೃದಯ ಜೋಪಾನ; ಸಾಮಾಜಿಕ ಜಾಲತಾಣದಲ್ಲಿ ವೈದ್ಯರು ನೀಡಿದ್ರು ಬೆಸ್ಟ್‌ ಟಿಪ್ಸ್‌

Reshma HT Kannada

Dec 17, 2023 08:30 AM IST

google News

ಸಾಂಕೇತಿಕ ಚಿತ್ರ

    • ಚಳಿಗಾಲದಲ್ಲಿ ರಕ್ತ ದಪ್ಪವಾಗುವ ಕಾರಣ ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚುತ್ತವೆ. ಹೃದಯಾಘಾತದ ಪ್ರಮಾಣವೂ ಅಧಿಕ. ಹೃದಯದ ಆರೋಗ್ಯಕ್ಕೆ ಸಂಬಂಧಿಸಿದ ಟಿಪ್ಸ್‌ ಇರುವ ಪೋಸ್ಟ್‌ವೊಂದು ಇತ್ತೀಚೆಗೆ ವೈರಲ್‌ ಆಗುತ್ತಿದೆ.
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಚಳಿಗಾಲ ಬಂತೆಂದರೆ ಆರೋಗ್ಯ ಸಮಸ್ಯೆಗಳು ಜೊತೆಯಾಗಿಯೇ ಬರುತ್ತವೆ. ಶೀತ ವಾತಾವರಣದ ಕಾರಣದಿಂದ ಜ್ವರ, ಕೆಮ್ಮು, ನೆಗಡಿ, ಗಂಟಲು ಕೆರೆತ ಇಂತಹ ಸಮಸ್ಯೆಗಳು ಕಾಡುವುದು ಸಹಜ. ಇದರೊಂದಿಗೆ ಕೆಲವು ಗಂಭೀರ ಆರೋಗ್ಯ ಸಮಸ್ಯೆಗಳೂ ಕಾಡಬಹುದು. ಅದರಲ್ಲೂ ಚಳಿಗಾಲದಲ್ಲಿ ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚು ಕಾಡುತ್ತವೆ. ರಕ್ತ ದಪ್ಪವಾಗುವ ಕಾರಣಕ್ಕೆ ಹೃದಯಕ್ಕೆ ರಕ್ತ ಹರಿವಿನಲ್ಲಿ ವ್ಯತ್ಯಯ ಉಂಟಾಗಬಹುದು. ಈ ಕಾರಣಕ್ಕೆ ಹೃದಯಾಘಾತದ ಪ್ರಮಾಣವೂ ಅಧಿಕವಾಗುತ್ತದೆ.

ಚಳಿಗಾಲದಲ್ಲಿ ಹೃದಯದ ಆರೋಗ್ಯ ಕಾಪಾಡಿಕೊಳ್ಳುವ ಕುರಿತಾಗಿ ವೈದ್ಯರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್‌ ಈಗ ವೈರಲ್‌ ಆಗಿದೆ.

@Wegiveyouhealt1 ಎಂಬ ಎಕ್ಸ್‌ ಖಾತೆ ಹೊಂದಿರುವ ಡಾ ಶ್ರದ್ಧೆ ಕಟಿಯಾರ್ ಒಂದಿಷ್ಟು ಪ್ರಾಕ್ಟಿಕಲ್‌ ಟಿಪ್ಸ್‌ ನೀಡಿದ್ದಾರೆ. ಆ ಸಲಹೆಗಳು ಹೀಗಿವೆ.

ವ್ಯಾಯಾಮಕ್ಕೆ ಹೊಸಬರಾದರೇ?

ನಿಧಾನಕ್ಕೆ ಆರಂಭಿಸಿ: ನೀವು ಮೊದಲ ಬಾರಿ ವ್ಯಾಯಾಮ ಆರಂಭಿಸಿದ್ದರೆ, ಒಂದೊಂದೇ ಕ್ರಮ ಪಾಲಿಸಿ. ಎಲ್ಲವೂ ಒಟ್ಟಿಗೆ ಮಾಡುವ ಹುಂಬತನ ಬೇಡ. ವಾಕ್‌ ಮಾಡಿ, ಚಳಿಗಾಲಕ್ಕೆ ಹೊಂದುವ ಬಟ್ಟೆ ಧರಿಸಿ. ದೇಹವನ್ನು ಬೆಚ್ಚಗಾಗಿಸಿ. ತಂಪಾದ ಗಾಳಿಗೆ ಚರ್ಮವನ್ನು ಒಡ್ಡಬೇಡಿ. ಕೆಲವು ದಿನಗಳ ನಂತರ ನಿಮ್ಮ ನಡಿಗೆಯ ವೇಗವನ್ನು ಹೆಚ್ಚಿಸಿ.

ನಂತರ: 30 ನಿಮಿಷಗಳ ಕಾಲ ಪ್ರತಿದಿನ ಬೆಳಿಗ್ಗೆ ಜಾಗ್‌ ಮಾಡಿ. (ಇದು ಕೂಡ ಆರಂಭದಲ್ಲಿ ನಿಧಾನಕ್ಕೆ ಇರಲಿ. ಕ್ರಮೇಣ ವೇಗ ಹೆಚ್ಚಿಸಿಕೊಳ್ಳಿ)

* ದಿನದಲ್ಲಿ 3 ಬಾರಿ ಊಟ ಮಾಡಿ. ಸ್ನ್ಯಾಕ್ಸ್‌ ಬೇಡ.

* ವಾರದಲ್ಲಿ 5 ದಿನವಾದರೂ ಇಂಟರ್‌ಮಿಂಟೆಂಟ್‌ ಫಾಸ್ಟಿಂಗ್‌ ಮಾಡಿ.

* ರಾತ್ರಿ ಮಲಗುವ ಮುನ್ನ 30 ರಿಂದ 40 ನಿಮಿಷಗಳ ಕಾಲ ಸ್ಲೋ ವಾಕ್‌ ಮಾಡಿ.

ಇವುಗಳ ಪ್ರಮಾಣ ಹೀಗಿರಲಿ: ಎಚ್‌ಡಿಎಲ್‌/ ಟ್ರೈಗ್ಲಿಸರೈಡ್ಗಳು: 2ಕ್ಕಿಂತ ಕಡಿಮೆ ಇರಲಿ. 1.5 ಕ್ಕಿಂತ ಕಡಿಮೆ ಇರುವುದು ಉತ್ತಮ.

Hb1Ac ಪ್ರಮಾಣ ಶೇ 5.5ಕ್ಕಿಂತ ಕಡಿಮೆ ಇರಬೇಕು.

ಬಾಡಿ ಫ್ಯಾಟ್‌: ಪುರುಷರಲ್ಲಿ ಶೇ 18ಕ್ಕಿಂತ ಕಡಿಮೆ, ಮಹಿಳೆಯರಲ್ಲಿ ಶೇ 24 ಕ್ಕಿಂತ ಕಡಿಮೆ ಇರಬೇಕು.

ಹಿಮೊಗ್ಲೋಬಿನ್‌: ಪುರುಷರಲ್ಲಿ ಶೇ 14ಕ್ಕಿಂತ ಹೆಚ್ಚಿರಬೇಕು. ಮಹಿಳೆಯರಲ್ಲಿ: ಶೇ 12ಕ್ಕಿಂತ ಹೆಚ್ಚಿರಬೇಕು.

ಇನ್ಸುಲಿನ್‌ ಪ್ರಮಾಣ ಖಾಲಿ ಹೊಟ್ಟೆಯಲ್ಲಿ 8 ng/dl.

ರಕ್ತದೊತ್ತಡ 130 /80 mm of Hg ಗಿಂತ ಕಡಿಮೆ ಇರಬೇಕು.

ಪಲ್ಸ್‌ ನಿಮಿಷಕ್ಕೆ 90 ಗಿಂತ ಕಡಿಮೆ ಇರಬೇಕು.

ವಯಸ್ಸಿಗೆ ಶಿಫಾರಸು ಮಾಡಲಾದ ಗರಿಷ್ಠ ನಾಡಿ ದರ:

220- ವಯಸ್ಸು

40 ವರ್ಷ ವಯಸ್ಸಾಗಿದ್ದರೆ ನಾಡಿಮಿಡಿತದ ದರ 180ಕ್ಕಿಂತ ಹೆಚ್ಚಿರಬಾರದು. ಪ್ರತಿ ನಿಮಿಷಕ್ಕೆ 160ಕ್ಕಿಂತ ಕಡಿಮೆ ಇರುವುದು ಮುಖ್ಯ. ನಿಧಾನ ಆಳವಾದ ಉಸಿರಾಟದ ಅಭ್ಯಾಸ ರೂಢಿಸಿಕೊಳ್ಳಿ.

ನಡಿಗೆ ಅಥವಾ ಯಾವುದೇ ದೈಹಿಕ ಚಟುವಟಿಕೆಯಲ್ಲಿ ತೊಡಗಿರುವಾಗ ತಲೆ ಸುತ್ತಿದರೆ, ನಿತ್ರಾಣ ಎನ್ನಿಸಿದರೆ ಕೂಡಲೇ ಆಳವಾದ ಉಸಿರನ್ನು ಎಳೆದುಕೊಳ್ಳಿ. ತಕ್ಷಣಕ್ಕೆ ಬೇರೆಯವರ ಸಹಾಯ ಕೇಳಿ. ಯಾರೂ ಹತ್ತಿರ ಇಲ್ಲದೇ ಇದ್ದಾಗ ಯಾವುದೇ ಚಟುವಟಿಕೆ ಮಾಡಬೇಡಿ.

ಇವರು ಡಿಸೆಂಬರ್‌ 15 ರಂದು ಈ ಪೋಸ್ಟ್‌ ಅನ್ನು ಹಂಚಿಕೊಂಡಿದ್ದಾರೆ. ಈಗಾಗಲೇ 1ಲಕ್ಷ 47 ಸಾವಿರಕ್ಕೂ ಅಧಿಕ ಮಂದಿ ಈ ಪೋಸ್ಟ್‌ ವೀಕ್ಷಿಸಿದ್ದಾರೆ. 147 ಮಂದಿ ಪೋಸ್ಟ್‌ ಅನ್ನು ರೀಪೋಸ್ಟ್‌ ಮಾಡಿದ್ದಾರೆ. 17 ಮಂದಿ ಕಾಮೆಂಟ್‌ ಮಾಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ