Water Intoxication: ಅತಿಯಾಗಿ ನೀರು ಕುಡಿಯುವುದೂ ಅಪಾಯ; ದೇಹದಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದನ್ನು ಸೂಚಿಸುವ ಲಕ್ಷಣಗಳಿವು
Sep 06, 2023 10:06 AM IST
ಅತಿಯಾಗಿ ನೀರು ಕುಡಿಯುವುದೂ ಅಪಾಯ
- ನೀರು ಕುಡಿಯುವುದು ದೇಹಾರೋಗ್ಯಕ್ಕೆ ಉತ್ತಮ. ಆದರೆ ಹೆಚ್ಚು ನೀರು ಕುಡಿಯುವುದರಿಂದ ಅಪಾಯ ತಪ್ಪಿದ್ದಲ್ಲ. ದೇಹದಲ್ಲಿ ನೀರಿನಾಂಶ ಅತಿಯಾದರೆ ಸೋಡಿಯಂ ಅಸಮತೋಲನ ಉಂಟಾಗುತ್ತದೆ. ಇದರಿಂದ ಹಲವು ರೀತಿಯ ಸಮಸ್ಯೆಗಳು ಉಂಟಾಗುತ್ತವೆ. ಕೆಲವೊಮ್ಮೆ ಇದು ಮಾರಣಾಂತಿಕವೂ ಆಗಬಹುದು.
ನೀರು ಮನುಷ್ಯ ದೇಹದ ಅಗತ್ಯಗಳಲ್ಲಿ ನೀರು ಕೂಡ ಒಂದು. ಒಂದು ದಿನ ಕೂಡ ನೀರಿಲ್ಲದೇ ಮನುಷ್ಯ ಬದುಕಿರಲಾರ. ನಮ್ಮ ಸಂಪೂರ್ಣ ದೇಹದ ಕಾರ್ಯ ಚಟುವಟಿಕೆಗಳು ಸರಾಗವಾಗಿ ಸಾಗಲು ನೀರಿನ ಸೇವನೆ ಅಗತ್ಯ. ಸಾಕಷ್ಟು ನೀರು ಕುಡಿಯುವುದರಿಂದ ಹಲವು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂಬುದನ್ನು ನಾವು ಕೇಳಿದ್ದೇವೆ. ಆದರೆ ಅತಿಯಾಗಿ ನೀರು ಕುಡಿಯುವುದು ಕೂಡ ಅಪಾಯ. ಇದರಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು. ಇದು ದೇಹದಲ್ಲಿನ ಎಲೆಕ್ಟ್ರೋಲೈಟ್‌ಗಳ ಅಸಮತೋಲನಕ್ಕೆ ಕಾರಣವಾಗುತ್ತದೆ. ಒಂದು ದಿನದಲ್ಲಿ 8 ಲೋಟ ಅಥವಾ 3 ರಿಂದ 4 ಲೀಟರ್ ನೀರು ಕುಡಿಯುವುದು ಅವಶ್ಯ ಎಂಬುದನ್ನು ನಾವು ಕೇಳಿರುತ್ತೇವೆ. ಆದರೆ ಇದು ಎಲ್ಲರಿಗೂ ಅನ್ವಯಿಸುವುದಿಲ್ಲ ಎಂಬುದನ್ನು ಮರೆಯಬಾರದು.
ಜೀವನಶೈಲಿಗೆ ಸಂಬಂಧಿಸಿದ ಲೇಖನಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಏನಿದು ವಾಟರ್ ಇನ್‌ಟಾಕ್ಸಿಕೇಷನ್?
ವಾಟರ್ ಇನ್‌ಟಾಕ್ಸಿಕೇಷನ್ (ನೀರಿನ ಅಮಲು) ಇದನ್ನು ವಾಟರ್ ಪಾಯಿಸನಿಂಗ್ ಎಂದೂ ಕರೆಯುತ್ತಾರೆ. ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ನೀರು ಕುಡಿಯುವುದರಿಂದ ಈ ಸಮಸ್ಯೆ ಉಂಟಾಗುತ್ತದೆ. ಇದು ರಕ್ತನಾಳದಲ್ಲಿ ನೀರಿನ ಹರಿವನ್ನು ಹೆಚ್ಚಿಸುವ ಜೊತೆಗೆ ಸೋಡಿಯಂ ಪ್ರಮಾಣವನ್ನು ದುರ್ಬಲಗೊಳಿಸುತ್ತದೆ. ದೇಹದ ಅಂಗಾಂಶಗಳಲ್ಲಿ ದ್ರವಾಂಶದ ಸಮತೋಲನಕ್ಕೆ ಸೋಡಿಯಂ ಅವಶ್ಯ. ಅತಿಯಾಗಿ ನೀರನ್ನು ಕುಡಿಯುವುದರಿಂದ ದೇಹದಲ್ಲಿ ಸೋಡಿಯಂ ಮಟ್ಟದಲ್ಲಿ ಕುಸಿತ ಉಂಟಾಗಿ ದ್ರವಾಂಶವು ಹೊರಭಾಗದಿಂದ ಜೀವಕೋಶಗಳ ಒಳಭಾಗಕ್ಕೆ ಹರಿಯುತ್ತವೆ. ಇದು ಮೆದುಳಿನ ಊತದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಮಾರಣಾಂತಿಕ ಸಮಸ್ಯೆಗಳಿಗೂ ಕಾರಣವಾಗಬಹುದು.
ದೇಹದಲ್ಲಿ ನೀರಿನ ಪ್ರಮಾಣ ಅತಿಯಾದರೆ ಉಂಟಾಗುವ ಸಮಸ್ಯೆ
ವಾಕರಿಕೆ ಮತ್ತು ವಾಂತಿ: ಅತಿಯಾಗಿ ನೀರು ಕುಡಿಯುವುದರಿಂದ ತಲೆ ತಿರುಗುವಿಕೆ ಮತ್ತು ವಾಕರಿಕೆಯಂತಹ ಅನುಭವಗಳು ಆರಂಭವಾಗಬಹುದು.
ತಲೆನೋವು: ರಕ್ತನಾಳಗಳಲ್ಲಿ ಸೋಡಿಯಂ ಪ್ರಮಾಣದ ಏರಿಕೆಯಾಗುವುದರಿಂದ ಕಿರಿಕಿರಿ, ತಲೆನೋವು ಉಂಟಾಗಬಹುದು.
ಗೊಂದಲ ಹಾಗೂ ದಿಗ್ಭ್ರಮೆ: ಅತಿಯಾಗಿ ನೀರು ಕುಡಿಯುವುದರಿಂದ ಗೊಂದಲ, ದಿಗ್ಭ್ರಮೆಯಂತಹ ಮಾನಸಿಕ ಸಮಸ್ಯೆಗಳು ಉಂಟಾಗಬಹುದು.
ಊತ: ನೀರಿನ ಸೇವನೆಯ ಪ್ರಮಾಣ ಹೆಚ್ಚಾದರೆ ಕೈಗಳು, ಪಾದಗಳು ಮತ್ತು ಕಣಕಾಲುಗಳು ಸೇರಿದಂತೆ ದೇಹದ ವಿವಿಧ ಭಾಗಗಳಲ್ಲಿ ಊತ ಉಂಟಾಗಬಹುದು.
ಸ್ನಾಯ ಸೆಳೆತ: ದೇಹದಲ್ಲಿ ಸೋಡಿಯಂ ಪ್ರಮಾಣ ಕಡಿಮೆಯಾಗುವುದರಿಂದ ಸ್ನಾಯು ಸೆಳೆತ ಹಾಗೂ ನಿಶಕ್ತಿ ಉಂಟಾಗಬಹುದು.
ಆಯಾಸ: ಅತಿಯಾಗಿ ನೀರು ಕುಡಿಯುವುದರಿಂದ ಆಯಾಸ ಉಂಟಾಗಬಹುದು. ಆಲಸ್ಯವು ಕಾಡಬಹುದು.
ಅತಿಯಾಗಿ ನೀರು ಕುಡಿಯುವುದರಿಂದ ಉಂಟಾಗುವ ಸಮಸ್ಯೆಗಳನ್ನು ತಪ್ಪಿಸಲು ನೀರು ಸೇವನೆಯ ಪ್ರಮಾಣವನ್ನು ಕಡಿಮೆ ಮಾಡುವುದು ಅವಶ್ಯ. ದಿನದಲ್ಲಿ 8 ರಿಂದ 9 ಲೋಟಗಳಷ್ಟು ನೀರು ಸೇವನೆ ಅವಶ್ಯ. ಮಧುಮೇಹ, ಮೂತ್ರಪಿಂಡಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿರುವವರು ವೈದ್ಯರೊಂದಿಗೆ ಚರ್ಚಿಸಿ ಎಷ್ಟು ನೀರು ಕುಡಿಯಬೇಕು ಎಂದು ತಿಳಿಯುವುದು ಅವಶ್ಯ. ದೇಹ ತೂಕ, ಹವಾಮಾನ ಮತ್ತು ದೈಹಿಕ ಚಟುವಟಿಕೆಯ ಆಧಾರದ ಮೇಲೆ ನೀರು ಕುಡಿಯುವುದನ್ನು ಖಚಿತ ಪಡಿಸಿಕೊಳ್ಳಿ. ಅತಿಯಾದ ಬಾಯಾರಿಕೆಯು ಅನಾರೋಗ್ಯದ ಲಕ್ಷಣ ಇರಬಹುದು. ಈ ಬಗ್ಗೆ ವೈದ್ಯರ ಬಳಿ ತೋರಿಸಿ ಚಿಕಿತ್ಸೆ ಪಡೆಯುವುದು ಉತ್ತಮ.
ಇದನ್ನೂ ಓದಿ
Tasting Powder: ಟೇಸ್ಟಿಂಗ್ ಪೌಡರ್ ಎಂದರೇನು, ಇದು ಆಹಾರದ ರುಚಿ ಹೆಚ್ಚಿಸುವುದು ಹೇಗೆ; ಮಾಹಿತಿ ಇಲ್ಲಿದೆ
ಹೋಟೆಲ್, ರೆಸ್ಟೊರೆಂಟ್‌ಗಳಲ್ಲಿ ನಾವು ಬಾಯಿ ಚಪ್ಪರಿಸಿಕೊಂಡು ತಿನ್ನುವ ಖಾದ್ಯಗಳಿಗೆ ಟೇಸ್ಟಿಂಗ್ ಪೌಡರ್ ಸೇರಿಸುತ್ತಾರೆ, ಆ ಕಾರಣಕ್ಕೆ ಇವರ ರುಚಿ ಇಮ್ಮಡಿಯಾಗುವುದು ಎಂದು ಹಲವರು ಹೇಳುವುದನ್ನು ನಾವು ಕೇಳಿರುತ್ತೇವೆ. ಹಾಗಾದರೆ ಏನಿದು ಟೇಸ್ಟಿಂಗ್ ಪೌಡರ್, ಇದು ಆಹಾರದ ರುಚಿ ಹೆಚ್ಚಿಸುವುದು ಹೇಗೆ? ನೋಡಿ.
ವಿಭಾಗ