logo
ಕನ್ನಡ ಸುದ್ದಿ  /  ಜೀವನಶೈಲಿ  /  Yellow Urine: ಮೂತ್ರ ಹಳದಿಯಾಗಲು ಕಾರಣವೇನು? ವಿಜ್ಞಾನಿಗಳು ಹೇಳಿದ ಉತ್ತರ ಹೀಗಿದೆ

Yellow Urine: ಮೂತ್ರ ಹಳದಿಯಾಗಲು ಕಾರಣವೇನು? ವಿಜ್ಞಾನಿಗಳು ಹೇಳಿದ ಉತ್ತರ ಹೀಗಿದೆ

HT Kannada Desk HT Kannada

Jan 17, 2024 06:02 PM IST

google News

ಮೂತ್ರದ ಹಳದಿ ಬಣ್ಣಕ್ಕೆ ಕಾರಣವಾದ ವಸ್ತು ಯಾವುದು?

    • Reasons for Yellow Urine: ನಿಮಗೆ ಅನಿಸಿರಬಹುದಲ್ಲವೇ ಮೂತ್ರ ಯಾಕೆ ಹಳದಿಯಾಗುತ್ತದೆ ಎಂದು. ಅದಕ್ಕೆ ಏನು ಕಾರಣವಿರಬಹುದು? ಯಾವ ವಸ್ತು ಮೂತ್ರವನ್ನು ಬಣ್ಣವನ್ನು ಬದಲಾಯಿಸುತ್ತದೆ? ಹೀಗೆ ಬಣ್ಣ ಬದಲಾಗುವುದು ಯಾವುದಾದರೂ ರೋಗದ ಲಕ್ಷಣವೇ? ಈ ಎಲ್ಲಾ ಪ್ರಶ್ನೆಗಳಿಗೆ ವಿಜ್ಞಾನಿಗಳು ಉತ್ತರವನ್ನು ಕಂಡುಹಿಡಿದ್ದಾರೆ.
ಮೂತ್ರದ ಹಳದಿ ಬಣ್ಣಕ್ಕೆ  ಕಾರಣವಾದ ವಸ್ತು ಯಾವುದು?
ಮೂತ್ರದ ಹಳದಿ ಬಣ್ಣಕ್ಕೆ ಕಾರಣವಾದ ವಸ್ತು ಯಾವುದು? (PC: Unsplash)

ಬಹಳಷ್ಟು ಸಲ ರೋಗ ಬಂದಾಗ ವೈದ್ಯರು ರಕ್ತ, ಮೂತ್ರ ಪರೀಕ್ಷೆ ಮಾಡಿಸಲು ಹೇಳಿರುವುದನ್ನು ನಾವು ಕೇಳಿರುತ್ತೇವೆ. ಮೂತ್ರ ಪರೀಕ್ಷೆಯಿಂದ ಕೆಲವು ರೋಗಗಳನ್ನು ಪತ್ತೆ ಹಚ್ಚಲಾಗುತ್ತದೆ. ಅಂದರೆ ಮೂತ್ರದ ಬಣ್ಣಗಳ ಮೇಲಿಂದ ರೋಗಿಗೆ ಯಾವ ಸೋಂಕು ತಗಲಿದೆ ಎಂಬುದು ತಿಳಿದುಬರುತ್ತದೆ. ಮೂತ್ರದ ವಿವಿಧ ಬಣ್ಣಗಳು ರೋಗಿ ಯಾವ ಕಾಯಿಲೆಯಿಂದ ಬಳಲುತ್ತಿದ್ದಾನೆ ಎಂಬುದನ್ನು ಹೇಳುತ್ತದೆ. ಆದರೆ ಮೂತ್ರ ಏಕೆ ಹಳದಿಯಾಗುತ್ತದೆ? ಮೂತ್ರಕ್ಕೆ ಹಳದಿ ಬಣ್ಣ ತಂದುಕೊಡುವ ವಸ್ತು ಯಾವುದು? ಇದಕ್ಕೆ ಉತ್ತರವನ್ನು ಇತ್ತೀಚೆಗೆ ಮೇರಿಲ್ಯಾಂಡ್ ವಿಶ್ವವಿದ್ಯಾಲಯ ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್‌ನ ಸಂಶೋಧಕರ ತಂಡವು ಹೇಳಿದೆ.

ಮೂತ್ರವು ನಮ್ಮ ದೇಹದ ಕಲ್ಮಶಗಳನ್ನು ಹೊರ ಹಾಕುವ ಸಹಜ ಕ್ರಿಯೆಯಾಗಿದೆ. ರಕ್ತ ಶುದ್ಧಿಯಾದಾಗ ಮೂತ್ರಪಿಂಡಗಳು ದ್ರವ ತ್ಯಾಜ್ಯವನ್ನು ಹೊರಹಾಕುತ್ತವೆ. ಇದು ನೀರು, ಎಲೆಕ್ಟ್ರೋಲೈಟ್ಸ್‌, ಮತ್ತು ಚಯಾಪಚಯ ಕ್ರಿಯೆಯ ತ್ಯಾಜ್ಯವನ್ನು ಮೂತ್ರ ಒಳಗೊಂಡಿರುತ್ತದೆ. ಇದು ದೇಹದ ಆಂತರಿಕ ಸಮತೋಲನವನ್ನು ಕಾಪಾಡಿಕೊಳ್ಳಲು ಮತ್ತು ದೇಹದಲ್ಲಿರುವ ಹೆಚ್ಚುವರಿ ವಸ್ತುಗಳನ್ನು ಹೊರಹಾಕಲು ಬಹಳ ಅವಶ್ಯವಾಗಿದೆ. ಮೂತ್ರದಲ್ಲಿ ಪ್ರಮುಖವಾಗಿ ನೀರು ಇರುತ್ತದೆ. ಇದು ಯೂರಿಯಾ, ಕ್ರಿಯೇಟಿನೈನ್‌, ಅಮೋನಿಯಾ ಮತ್ತು ಇತರ ಲವಣಗಳು ಸೇರಿದ ವಸ್ತುಗಳನ್ನು ದೇಹದಿಂದ ಹೊರಹಾಕಲು ಅನುಕೂಲ ಮಾಡಿಕೊಡುತ್ತದೆ. ಚಯಾಪಚಯ ಕ್ರಿಯೆಯ ಉಪ ಉತ್ಪನ್ನವಾದ ಯೂರಿಯಾ ಮತ್ತು ಪ್ರೋಟೀನ್‌ಗಳು ಮೂತ್ರಕ್ಕೆ ವಿಶಿಷ್ಟವಾದ ಅಮೋನಿಯಾದ ವಾಸನೆಯನ್ನು ನೀಡುತ್ತವೆ. ಬಣ್ಣ, ವಾಸನೆ ಮತ್ತು ಮೂತ್ರದ ಸಂಯೋಜನೆಯು ವ್ಯಕ್ತಿಯ ಹೈಡ್ರೇಷನ್‌ ಸ್ಥಿತಿ, ಆಹಾರ ಪದ್ಧತಿ, ಮತ್ತು ಸಂಪೂರ್ಣ ಆರೋಗ್ಯದ ಸೂಚಕದಂತೆ ಕಾರ್ಯನಿರ್ವಹಿಸುತ್ತದೆ. ನಿಯಮಿತ ಮೂತ್ರದ ಉತ್ಪಾದನೆ ಮತ್ತು ವಿಸರ್ಜನೆ ದೇಹದ ನಿರ್ವಶೀಕರಣ ಕ್ರಿಯೆಯ ಅತಿಮುಖ್ಯ ಭಾಗವಾಗಿದೆ. ಶರೀರದ ಇತರ ಕಾರ್ಯಗಳ ನಿರ್ವಹಣೆಗೂ ಇದು ಮುಖ್ಯವಾಗಿದೆ.

ಇದನ್ನೂ ಓದಿ: ಮಕ್ಕಳು ಪದೇ ಪದೇ ಶೀತ, ಜ್ವರದಿಂದ ಬಳಲುತ್ತಿದ್ದರೆ ಈ ವಿಚಾರಗಳತ್ತ ಗಮನ ಹರಿಸಿ; ಹೀಗಿರಲಿ ಮಗುವಿನ ಆರೈಕೆ

ಸೂಕ್ಷಾಣುಜೀವಿಯ ಕಿಣ್ವಗಳು ಮತ್ತು ಬಿಲಿರುಬಿನ್‌ ರಿಡಕ್ಟೇಸ್‌ ಮೂತ್ರಕ್ಕೆ ಹಳದಿ ಬಣ್ಣ ಬರಲು ಕಾರಣವಾಗಿದೆ ಎಂದು ವಿಜ್ಞಾನಿಗಳು ಕಂಡುಹಿಡಿದ್ದಾರೆ. ಬಿಲಿರುಬಿನ್‌ ರೆಡಕ್ಟೇಸ್‌ ಎಂಬುದು ಜೀರ್ಣಕ್ರಿಯೆಯಲ್ಲಿ ಒಳಗೊಂಡಿರುವ ಬಿಲಿರುಬಿನ್‌ ಕಿಣ್ವವಾಗಿದೆ. ಇದು ಕೆಂಪು ರಕ್ತ ಕಣದಲ್ಲಿರುವ ಹೀಮ್‌ನ ವಿಭಜನೆಯಿಂದ ಪಡೆದ ಹಳದಿ ವರ್ಣದ ದ್ರವ್ಯವಾಗಿದೆ. ಬಿಲಿರುಬಿನ್ ರಿಡಕ್ಟೇಸ್ ಇದು ಹಸಿರು ವರ್ಣದ ದ್ರವ್ಯವಾದ ಬಿಲಿವರ್ಡಿನ್‌ಅನ್ನು ಹಳದಿ ಬಣ್ಣದಲ್ಲಿರುವ ಬಿಲಿರುಬಿನ್‌ಗೆ ಬದಲಾಯಿಸುತ್ತದೆ. ಈ ಎಂಜೈಮ್ಯಾಟಿಕ್ ಪರಿವರ್ತನೆಯು ಯಕೃತ್ತು ಮತ್ತು ಇತರ ಅಂಗಾಂಶಗಳಲ್ಲಿ ಸಂಭವಿಸುವ ಹೀಮ್ ಕ್ಯಾಟಾಬಲಿಸಮ್ ಪ್ರಕ್ರಿಯೆಯಲ್ಲಿ ಪ್ರಮುಖ ಹಂತವಾಗಿದೆ. ಬಿಲಿರುಬಿನ್, ಒಮ್ಮೆ ರೂಪುಗೊಂಡ ನಂತರ, ಯಕೃತ್ತಿನಲ್ಲಿ ಮತ್ತಷ್ಟು ಸಂಸ್ಕರಿಸಲ್ಪಡುತ್ತದೆ. ನಂತರ ಪಿತ್ತರಸದ ಮೂಲಕ ದೇಹದಿಂದ ಹೊರಹಾಕಲ್ಪಡುತ್ತದೆ. ಚಯಾಪಚಯ ಕ್ರಿಯೆಯಲ್ಲಿ ಬಿಲಿರುಬಿನ್‌ನಲ್ಲಿ ತೊಂದರೆಗಳಾದಾಗ ಕಾಮಾಲೆ (ಹಳದಿ ರೋಗ) ಮತ್ತು ಬಿಲಿರುಬಿನ್ ಮಟ್ಟದಲ್ಲಿ ಅಸಮತೋಲನಕ್ಕೆ ಸಂಬಂಧಿಸಿದ ಇತರ ಕಾಯಿಲೆಗಳಿಗೆ ಕಾರಣವಾಗುತ್ತದೆ.

ಬಿಲಿರುಬಿನ್‌ ಹೇಗೆ ಕೆಲಸ ಮಾಡುತ್ತದೆ?

ಕೆಂಪು ರಕ್ತಕಣಗಳ ಜೀವಿತಾವಧಿ ಆರು ತಿಂಗಳುಗಳು. ನಂತರ ಬಿಲಿರುಬಿನ್‌ ಎಂಬ ಕಿತ್ತಳೆ ಬಣ್ಣದ ದ್ಯವ್ಯವನ್ನು ಉಪಉತ್ಪನ್ನವಾಗಿ ಉತ್ಪತ್ತಿಯಾಗುತ್ತದೆ. ಸಾಮಾನ್ಯವಾಗಿ ಬೈಲಿರುಬಿನ್ ಕರುಳಿನಲ್ಲಿ ಸ್ರವಿಸುತ್ತದೆ. ಅದರ ಉದ್ದೇಶವೂ ವಿಸರ್ಜನೆಯಾಗುವುದಾಗಿದೆ. ಅದರ ಕೆಲವೇ ಕೆಲವು ಅಂಶಗಳು ಮರುಹೀರಿಕೆಗೆ ಒಳಪಡುತ್ತದೆ. ಆದರೆ ಹೆಚ್ಚುವರಿಯಾಗಿ ಮರುಹೀರಿಕೆಯಾದಾಗ ರಕ್ತದಲ್ಲಿ ಬಿಲಿರುಬಿನ್ ಸಂಗ್ರಹವಾಗುತ್ತದೆ. ಇದು ಕಾಮಾಲೆ ರೋಗಕ್ಕೆ ಕಾರಣವಾಗಬಹುದು. ಆಗ ಚರ್ಮ ಮತ್ತು ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಕರುಳಿನ ಸೂಕ್ಷ್ಮಜೀವಿಗಳು ಬಿಲಿರುಬಿನ್ ರಿಡಕ್ಟೇಸ್ ಕಿಣ್ವವನ್ನು ಎನ್ಕೋಡ್ ಮಾಡುತ್ತವೆ. ಅದು ಬಿಲಿರುಬಿನ್‌ಅನ್ನು ಯುರೋಬಿಲಿನೋಜೆನ್ ಎಂಬ ಬಣ್ಣರಹಿತ ಉಪಉತ್ಪನ್ನವಾಗಿ ಪರಿವರ್ತಿಸುತ್ತದೆ. ನಂತರ ಅದು ತಾನಾಗಿಯೇ ಯುರೋಬಿಲಿನ್ ಎಂಬ ಅಣುವಾಗಿ ವಿಭಜನೆಗೊಳ್ಳುತ್ತದೆ. ಇದೇ ಮೂತ್ರದ ಹಳದಿ ಬಣ್ಣಕ್ಕೆ ಕಾರಣವಾಗಿದೆ ಎಂದು ಸಂಶೋಧಕರು ವಿವರಿಸಿದ್ದಾರೆ.

‘ದಿನನಿತ್ಯದ ಜೈವಿಕ ವಿದ್ಯಮಾನವನ್ನು ಇಷ್ಟು ದಿನಗಳವರೆಗೆ ವಿವರಿಸದೇ ಇರುವುದು ಗಮನಾರ್ಹವಾಗಿದೆ, ಈ ಕಿಣ್ವದ ಆವಿಷ್ಕಾರವು ಅಂತಿಮವಾಗಿ ಮೂತ್ರದ ಹಳದಿ ಬಣ್ಣದ ಹಿಂದಿನ ರಹಸ್ಯವನ್ನು ಬಿಚ್ಚಿಡುತ್ತದೆ’ ಎಂದು ಅಧ್ಯಯನದ ಪ್ರಮುಖ ಲೇಖಕ ಬ್ರಾಂಟ್ಲಿ ಹಾಲ್ ಹೇಳಿದ್ದಾರೆ. ಅವರು ಮೇರಿಲ್ಯಾಂಡ್ ವಿಶ್ವವಿದ್ಯಾಲಯದ ಕೋಶ ಜೀವಶಾಸ್ತ್ರ ಮತ್ತು ಅಣು ಜೆನೆಟಿಕ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ