logo
ಕನ್ನಡ ಸುದ್ದಿ  /  ಜೀವನಶೈಲಿ  /  Health Tips: ವಯಸ್ಸು 30 ಆಯ್ತಾ, ಹಾಗಿದ್ರೆ ಈ 9 ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿದ್ರೆ ಬಹಳ ಒಳ್ಳೆಯದು

Health Tips: ವಯಸ್ಸು 30 ಆಯ್ತಾ, ಹಾಗಿದ್ರೆ ಈ 9 ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿದ್ರೆ ಬಹಳ ಒಳ್ಳೆಯದು

Rakshitha Sowmya HT Kannada

Jan 25, 2024 12:19 PM IST

google News

30ರ ನಂತರ ಮಾಡಿಸಬೇಕಾದ ಆರೋಗ್ಯ ತಪಾಸಣೆಗಳು

  • Health Tips: 30 ದಾಟುತ್ತಿದ್ದಂತೆ ಕೆಲವೊಂದು ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸುವುದು ಸೂಕ್ತ. ವರ್ಷಕ್ಕೆ ಒಮ್ಮೆ ನೀವು ಈ ಆರೋಗ್ಯ ತಪಾಸಣೆ ಮಾಡಿಕೊಂಡರೆ, ನಿಮಗೆ ಏನೇ ಗಂಭೀರ ಆರೋಗ್ಯ ಸಮಸ್ಯೆಗಳಿದ್ದರೂ ಅದನ್ನು ಪರಿಹರಿಸಿಕೊಳ್ಳಬಹುದು.

30ರ ನಂತರ ಮಾಡಿಸಬೇಕಾದ ಆರೋಗ್ಯ ತಪಾಸಣೆಗಳು
30ರ ನಂತರ ಮಾಡಿಸಬೇಕಾದ ಆರೋಗ್ಯ ತಪಾಸಣೆಗಳು (PC: Freepik)

Health Tips: 30 ವರ್ಷ ದಾಟುವುದು ಜೀವನದ ಒಂದು ಪ್ರಮುಖ ಮೈಲಿಗಲ್ಲು ಇದು ಜೀವನದಲ್ಲಿ ಅನೇಕ ಜವಾಬ್ದಾರಿಗಳನ್ನು ನೀಡುತ್ತದೆ. ಈ ವಯಸ್ಸು ವೃತ್ತಿ ಮಾತ್ರವಲ್ಲದೆ, ವೈಯಕ್ತಿಕ ಜೀವನದಲ್ಲೂ ಸಾಕಷ್ಟು ಜವಾಬ್ದಾರಿಗಳನ್ನು ಹೊತ್ತು ತರುತ್ತದೆ. ಇದರೊಂದಿಗೆ ನಿಮಗೆ ಒತ್ತಡ, ಆತಂಕವೂ ಹೆಚ್ಚಾಗಿ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು.

ಕೊಲೆಸ್ಟ್ರಾಲ್‌ ರಕ್ತ ಪರೀಕ್ಷೆ

ಲಿಪಿಡ್ ಪ್ರೊಫೈಲ್ ಪರೀಕ್ಷೆಯು ನಿಮ್ಮ ಎಲ್‌ಡಿಎಲ್ ಮಟ್ಟವನ್ನು ಬಹಿರಂಗಪಡಿಸುವುದು ಮಾತ್ರವಲ್ಲದೆ ಟ್ರೈಗ್ಲಿಸರೈಡ್‌ಗಳು ಮತ್ತು ಹೈ-ಡೆನ್ಸಿಟಿ ಲಿಪೊಪ್ರೋಟೀನ್ (ಎಚ್‌ಡಿಎಲ್) ನಂತಹ ಇತರ ಅಂಶಗಳನ್ನು ಸಹ ತೋರಿಸುತ್ತದೆ. ಆದ್ದರಿಂದ ವೈದ್ಯರನ್ನು ಭೇಟಿ ಮಾಡಿ ತಪ್ಪದೆ ಈ ಪರೀಕ್ಷೆ ಮಾಡಿಸಿಕೊಳ್ಳಿ.

ರಕ್ತದೊತ್ತಡ

ಸಾಮಾನ್ಯ ರಕ್ತದೊತ್ತಡವು 120/80 ಆಗಿದೆ. ಅಸಹಜತೆಯ ಸಂದರ್ಭದಲ್ಲಿ, ನೀವು ಆಗಾಗ್ಗೆ ರಕ್ತದೊತ್ತಡ ತಪಾಸಣೆಗೆ ಒಳಗಾಗಬೇಕಾಗಬಹುದು ಮತ್ತು ರಕ್ತದೊತ್ತಡದ ಔಷಧಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

ಹೃದಯ ಸಂಬಂಧಿ ವೈದ್ಯಕೀಯ ಪರೀಕ್ಷೆಗಳು

ಇಸಿಜಿ ಪರೀಕ್ಷೆಯು ನಿಮ್ಮ ಹೃದಯದಿಂದ ವಿದ್ಯುತ್ ಸಂಕೇತಗಳನ್ನು ಅಳೆಯುತ್ತದೆ, ಆದರೆ ಎಕೋ ಪರೀಕ್ಷೆಯು ನಿಮ್ಮ ಹೃದಯ, ಅದರ ರಚನೆ ಮತ್ತು ನೈಜ ಸಮಯದಲ್ಲಿ ಯಾವುದೇ ಅಸಹಜತೆಗಳನ್ನು ವೀಕ್ಷಿಸಲು ಧ್ವನಿ ತರಂಗಗಳನ್ನು ಬಳಸುತ್ತದೆ. ಇದರ ನಡುವೆ, ಹೃದಯದ ಅಪಾಯದ ಗುರುತುಗಳು ಎಂದು ಕರೆಯಲ್ಪಡುವ ಕೆಲವು ರಕ್ತ ಪರೀಕ್ಷೆಗಳು ಹೃದಯದ ಆರೋಗ್ಯವನ್ನು ನಿರ್ಣಯಿಸಲು ಸಹಾಯ ಮಾಡುತ್ತದೆ.

ಕ್ಯಾನ್ಸರ್ ಸ್ಕ್ರೀನಿಂಗ್ ಪರೀಕ್ಷೆಗಳು

30 ವರ್ಷ ದಾಟಿದ ನಂತರ ಮಹಿಳೆಯರು HPV ಪರೀಕ್ಷೆ ಮಾಡಿಸಬೇಕು. ಹಾಗೇ ಪುರುಷರು ಪ್ರಾಸ್ಟೇಟ್ ಕ್ಯಾನ್ಸರ್ ಸ್ಕ್ರೀನಿಂಗ್ ಪರೀಕ್ಷೆಯನ್ನು ಆರಿಸಿಕೊಳ್ಳಬೇಕು ಪ್ರತಿ 2-3 ವರ್ಷಗಳಿಗೊಮ್ಮೆ ಈ ಟೆಸ್ಟ್‌ ಮಾಡಿಸಿಕೊಂಡರೆ ಉತ್ತಮ.

ರಕ್ತದಲ್ಲಿನ ಸಕ್ಕರೆ ಪರೀಕ್ಷೆ

ಮಧುಮೇಹವನ್ನು ತಡೆಗಟ್ಟಲು ಈ ಪರೀಕ್ಷೆಯನ್ನು ವಾರ್ಷಿಕವಾಗಿ ಮಾಡಬೇಕು. HbA1c ಜೊತೆಗೆ ಉಪವಾಸ ಮತ್ತು ಊಟದ ನಂತರದ ರಕ್ತದ ಗ್ಲೂಕೋಸ್ ಪರೀಕ್ಷೆಗಳನ್ನು ಶಿಫಾರಸು ಮಾಡಲಾಗುತ್ತದೆ.

ಸಾಮಾನ್ಯ ಪರೀಕ್ಷೆಗಳು

ಥೈರಾಯ್ಡ್ ಫಂಕ್ಷನ್ ಟೆಸ್ಟ್, ಕಿಡ್ನಿ ಫಂಕ್ಷನ್ ಟೆಸ್ಟ್ ಮತ್ತು ಲಿವರ್ ಫಂಕ್ಷನ್ ಟೆಸ್ಟ್ ನಿಮ್ಮ ದೇಹದಲ್ಲಿನ 3 ಪ್ರಮುಖ ಅಂಗಗಳ ಪರೀಕ್ಷೆಗಳಾಗಿವೆ. ಈ ಟೆಸ್ಟ್‌ ಮಾಡಿಸುವುದರಿಂದ ನಿಮ್ಮ ವೈದ್ಯರು ಈ ಅಂಗಗಳಲ್ಲಿ ನಿಮಗೆ ಯಾವುದೇ ಸಮಸ್ಯೆ ಇದ್ದರೆ ಅರ್ಥಮಾಡಿಕೊಳ್ಳಬಹುದು.

ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಪರೀಕ್ಷೆಗಳು

ಪ್ರತಿ ವರ್ಷ ನಿಮ್ಮ ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಮಟ್ಟವನ್ನು ತಿಳಿಯಲು ನೀವು ಪರೀಕ್ಷೆ ಮಾಡಿಸಬೇಕು.

ದಂತ ತಪಾಸಣೆ

ನಿಮ್ಮ ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ನೀವು ಪ್ರತಿ ವರ್ಷ ಹಲ್ಲಿನ ಪರೀಕ್ಷೆಗೆ ಒಳಗಾಗಬೇಕು.

ಕಣ್ಣಿನ ತಪಾಸಣೆ

ನಿಮ್ಮ ಕಣ್ಣುಗಳು ಆರೋಗ್ಯವಾಗಿರಲು ನೀವು ಸಂಪೂರ್ಣ ಕಣ್ಣಿನ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು.

ನಿಮ್ಮ ಆರೋಗ್ಯ ನಿಮ್ಮ ಕೈಯ್ಯಲ್ಲಿದೆ. ಉತ್ತಮ ಆಹಾರ ಪದ್ದತಿ, ವ್ಯಾಯಾಮ, ಜೀವನಶೈಲಿಯಿಂದ ನೀವು ಅನಾರೋಗ್ಯ ಕಾಡದಂತೆ ಎಚ್ಚರಿಕೆ ವಹಿಸಬಹುದು. ಆದರೂ ಆಗ್ಗಾಗ್ಗೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ