logo
ಕನ್ನಡ ಸುದ್ದಿ  /  ಜೀವನಶೈಲಿ  /  ಸೈನಸ್‌ ನಿಮ್ಮನ್ನು ಬಿಡದೇ ಕಾಡ್ತಿದ್ಯಾ, ಹಾಗಿದ್ರೆ ಈ 6 ಪದಾರ್ಥಗಳ ಸೇವನೆಗೆ ಇಂದೇ ಗುಡ್‌ಬೈ ಹೇಳಿ

ಸೈನಸ್‌ ನಿಮ್ಮನ್ನು ಬಿಡದೇ ಕಾಡ್ತಿದ್ಯಾ, ಹಾಗಿದ್ರೆ ಈ 6 ಪದಾರ್ಥಗಳ ಸೇವನೆಗೆ ಇಂದೇ ಗುಡ್‌ಬೈ ಹೇಳಿ

Reshma HT Kannada

Jan 24, 2024 07:43 AM IST

google News

ಸೈನಸ್‌ಗೆ ಕಾರಣವೇನು?

    • Sinus Boosting Foods: ಸೈನಸೈಟಿಸ್‌ನಿಂದ ನಿಮ್ಮಲ್ಲಿ ಉಸಿರಾಟದ ಸಮಸ್ಯೆಗಳು ಹೆಚ್ಚಿದರೆ, ಅದಕ್ಕೆ ಕಾರಣಗಳು ಹಲವು. ಕೆಲವು ಆಹಾರ ಪದಾರ್ಥಗಳ ಸೇವನೆಯಿಂದಲೂ ಸೈನಸ್‌ ಉಲ್ಭಣವಾಗುತ್ತದೆ. ಹಾಗಾಗಿ ಇವುಗಳ ಸೇವನೆಯನ್ನು ನಿಲ್ಲಿಸುವುದು ಉತ್ತಮ. ನೀವು ಸೈನಸ್‌ನಿಂದ ಬಳಲ್ತಾ ಇದ್ರೆ ಈ 6 ಆಹಾರ ಪದಾರ್ಥಗಳ ಸೇವನೆಗೆ ಒಂದೇ ಬ್ರೇಕ್‌ ಹಾಕಿ. 
ಸೈನಸ್‌ಗೆ ಕಾರಣವೇನು?
ಸೈನಸ್‌ಗೆ ಕಾರಣವೇನು? (HT File Photo)

ನಮ್ಮ ಶ್ವಾಸಕೋಶವು ಬಹಳ ಸೂಕ್ಷ್ಮವಾದ ಅಂಗವಾಗಿದ್ದು, ಇದಕ್ಕೆ ವಿಶೇಷ ಕಾಳಜಿ ಅವಶ್ಯ. ಇಲ್ಲವಾದರೆ ಹಲವಾರು ಆರೋಗ್ಯ ಸಮಸ್ಯೆಯಿಂದ ಬಳಲಬೇಕಾಗುತ್ತದೆ. ಶ್ವಾಸಕೋಶದ ಸಮಸ್ಯೆಗಳಲ್ಲಿ ಸೈನಸೈಟಿಸ್‌ ಕೂಡಾ ಒಂದು. ಇದರಿಂದ ಅನೇಕರು ಬಳಲುತ್ತಿದ್ದಾರೆ. ಹೆಚ್ಚುತ್ತಿರುವ ಮಾಲಿನ್ಯ ಇದಕ್ಕೆ ಕಾರಣ. ಕೆಲವು ಇತರ ಅಂಶಗಳೂ ಸಹ ಸೈನಸ್‌ ಮೇಲೆ ನೇರ ಪರಿಣಾಮ ಬೀರುತ್ತವೆ. ಅವುಗಳಲ್ಲಿ ಆಹಾರವೂ ಒಂದು. ನೀವು ಸೇವಿಸುವ ಆಹಾರವು ಸೈನಸ್‌ ಹೆಚ್ಚಾಗಲು ಕಾರಣವಾಗಿರಬಹುದು. ಅದಕ್ಕಾಗಿ ಅಂತಹ ಆಹಾರಗಳ ಸೇವನೆಯನ್ನು ಕಡಿಮೆ ಮಾಡಬೇಕು, ಇಲ್ಲವೇ ಅವುಗಳಿಂದ ದೂರವಿರುವುದೇ ಉತ್ತಮ. ಹಾಗಾದ್ರೆ ಸೈನುಟಿಸ್‌ ಎಂದರೇನು? ಅದು ಯಾವ ಆಹಾರಗಳ ಸೇವನೆಯಿಂದ ಹೆಚ್ಚಾಗುತ್ತದೆ?

ಸೈನಸ್‌ ಎಂದರೆನು?

ನಮ್ಮ ಮುಖದ ಮೂಳೆಗಳಲ್ಲಿ ಗಾಳಿ ತುಂಬಿಕೊಳ್ಳುವಂತಹ ರಚನೆಯಿದೆ. ಅದು ನಮ್ಮ ಉಸಿರಾಟ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಮುಖದ ಮುಂಭಾಗದಲ್ಲಿರುವ ಮ್ಯಾಕ್ಸಿಲ್ಲರಿ, ಎಥ್ಮೋಯ್ಡ್ ಮತ್ತು ಸ್ಪೆನಾಯ್ಡ್ ಸೈನಸ್‌ಗಳು ರಂದ್ರಗಳನ್ನು ಒಳಗೊಂಡಿದೆ. ಇವು ಲೋಳೆಯ ಪೊರೆಯಿಂದ ಜೋಡಿಸಲ್ಪಟ್ಟಿರುತ್ತದೆ ಮತ್ತು ಅದರಲ್ಲಿ ಗಾಳಿಯು ತುಂಬಿರುತ್ತದೆ. ನಾವು ಉಸಿರಾಡುವ ತೇವಾಂಶಗೊಳಿಸುವ ಮತ್ತು ಫಿಲ್ಟರ್‌ ಮಾಡುವಂತಹ ಅಗತ್ಯ ಕೆಲಸಗಳನ್ನು ಅವು ಮಾಡುತ್ತವೆ. ಬ್ಯಾಕ್ಟೀರಿಯಾ, ವೈರಲ್ ಅಥವಾ ಶಿಲೀಂಧ್ರಗಳ ಸೋಂಕಿನಿಂದ ಸೈನಸ್ ಸಮಸ್ಯೆಗಳು ಉಂಟಾಗುತ್ತವೆ. ಸೈನಸ್‌ ಸೋಂಕು ತಗುಲಿದಾಗ, ಸಮಸ್ಯೆ ಅಷ್ಟೇ ಹೆಚ್ಚಾಗುವುದಿಲ್ಲ ಬದಲಿಗೆ ದೈನಂದಿನ ಜೀವನಕ್ಕೂ ಅಡ್ಡಿಪಡಿಸುತ್ತದೆ. ಸೈನಸ್‌ ಅಲರ್ಜಿ ಅಥವಾ ಉರಿಯೂತದ ಸಮಸ್ಯೆಯಿಂದ ಇನ್ನಷ್ಟು ಹೆಚ್ಚಾಗುತ್ತದೆ. ಮೂಗು ಕಟ್ಟಿಕೊಳ್ಳುವುದು, ತಲೆನೋವು, ಮುಖದ ನೋವು ಮತ್ತು ಉಸಿರಾಟದ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.

ಸೈನಸ್‌ಗೆ ಆಹಾರ ಹೇಗೆ ಕಾರಣ?‌

ಕೆಲವರು ಸೇವಿಸುವ ಆಹಾರಗಳು ಅವರಲ್ಲಿ ಸೈನಸ್‌ ಸಮಸ್ಯೆ ಹೆಚ್ಚಾಗುವಂತೆ ಮಾಡುತ್ತದೆ. ಮತ್ತು ಅದರ ಬಗ್ಗೆ ಗಮನ ಕೊಡುವವರು ಕಡಿಮೆ. ಆಗ ಪರಿಸ್ಥಿತಿ ಹದಗೆಡುತ್ತದೆ. ಆಹಾರದಿಂದ ಸೈನಸ್‌ ತೊಂದರೆ ಹೆಚ್ಚಾಗುವುದು ವ್ಯಕ್ತಿಯಿಂದ ವ್ಯಕ್ತಿಗೆ ಬೇರೆಯಾಗಿರುತ್ತದೆ. ಸಾಮಾನ್ಯವಾಗಿ ಈ ಆಹಾರಗಳ ಸೇವನೆಯು ಸೈನಸ್‌ ಹೆಚ್ಚಾಗುವಂತೆ ಮಾಡುತ್ತದೆ. ಹಾಗಾಗಿ ಸೈನಸ್‌ ಸಮಸ್ಯೆಯಿರುವವರು ಈ ಕೆಳಗಿನ ಆಹಾರಗಳಿಂದ ದೂರವಿದ್ದರೆ ಒಳ್ಳೆಯದು.

ಇದನ್ನೂ ಓದಿ: Menstrual Health: ಮುಟ್ಟಿನ ದಿನಗಳಲ್ಲಿ ಈ ಸಮಸ್ಯೆಗಳು ಕಾಡ್ತಿದ್ಯಾ, ನಿರ್ಲಕ್ಷ್ಯ ಮಾಡಿದ್ರೆ ಅಪಾಯ ತಪ್ಪಿದ್ದಲ್ಲ

ಡೇರಿ ಉತ್ಪನ್ನಗಳು

ಹಾಲು, ಚೀಸ್‌ ಮತ್ತು ಮೊಸರು ಮುಂತಾದ ಡೇರಿ ಉತ್ಪನ್ನಗಳು ಮೂಗಿನಲ್ಲಿ ದಪ್ಪವಾದ ಲೋಳೆ ಉಂಟುಮಾಡುತ್ತವೆ. ಇದರಿಂದ ಮೂಗು ಸೂಕ್ಷ್ಮಾಣುಜೀವಿಗಳ ಉತ್ಪತ್ತಿಯ ತಾಣವಾಗುತ್ತದೆ. ನೀವು ಸೈನಸ್‌ ಸೋಂಕಿಗೆ ಒಳಟ್ಟಿದ್ದರೆ ಡೇರಿ ಉತ್ಪನ್ನಗಳ ಸೇವನೆಯನ್ನು ಆದಷ್ಟು ಕಡಿಮೆ ಮಾಡುವುದು ಉತ್ತಮ. ಇದು ಇದರಿಂದ ದಪ್ಪ ಲೋಳೆ ಉಂಟಾಗುವುದನ್ನು ತಪ್ಪಿಸಬಹುದು.

ಸ್ಯಾಚುರೇಟೆಡ್‌ ಫಾಟ್ ಇರುವ ಆಹಾರಗಳು

ಸ್ಯಾಚುರೇಟೆಡ್‌ ಫಾಟ್‌ ಹೆಚ್ಚಾಗಿರುವ ಆಹಾರಗಳು ದೇಹದಲ್ಲಿ ಉರಿಯೂತವನ್ನು ಹೆಚ್ಚಿಸಲು ಸಹಾಯಮಾಡುತ್ತದೆ. ಉರಿಯೂತವು ದಪ್ಪ ಲೋಳೆ ಉತ್ಪತ್ತಿ ಮಾಡುತ್ತದೆ. ಪಿಜಾ, ಮಾಂಸಾಹಾರ ಉತ್ಪನ್ನಗಳು, ಚೀಸ್‌ ಮಂತಾದವುಗಳು ಸೈನಸ್‌ ಸೋಂಕು ಉಲ್ಭಣಗೊಳ್ಳಲು ಕಾರಣವಾಗುತ್ತದೆ. ಹಾಗಾಗಿ ನೀವು ಸೈನಸ್‌ನಿಂದ ಬಳಲುತ್ತಿದ್ದರೆ ಸ್ಯಾಚುರೇಟೆಡ್‌ ಫಾಟ್‌ ಇರುವ ಆಹಾರಗಳನ್ನು ತ್ಯಜಿಸಿ.

ಮೋನೊ ಸೋಡಿಯಂ ಗ್ಲುಟಮೇಟ್‌

ಸಾಮಾನ್ಯವಾಗಿ ರೆಡಿ ಟು ಈಟ್‌ ಆಹಾರಗಳಲ್ಲಿ ಸುವಾಸನೆ ವರ್ಧಕವಾಗಿ ಬಳಕೆ ಮಾಡುವ ಮೋನೊ ಸೋಡಿಯಂ ಗ್ಲುಟಮೇಟ್‌ ದೇಹದಲ್ಲಿ ಉರಿಯೂತವನ್ನು ಹೆಚ್ಚಿಸಲು ಕಾರಣವಾಗುತ್ತದೆ. ಈ ಮೊದಲೇ ಸೈನಸ್‌ ಸಮಸ್ಯೆ ಇರುವವರಲ್ಲಿ ಇದು ಇನ್ನಷ್ಟು ಹೆಚ್ಚು ಉಲ್ಭಣಗೊಳ್ಳುತ್ತದೆ. ಹಾಗಾಗಿ ಈ ಸಮಸ್ಯೆ ಇರುವವರು ಅಂತಹ ಆಹಾರಗಳನ್ನು ಸೇವಿಸುವುದರ ಬಗ್ಗೆ ಜಾಗರೂಕರಾಗಿಬೇಕು.

ಕೆಫಿನ್ ಮತ್ತು ಆಲ್ಕೋಹಾಲ್‌

ಇವೆರೆಡೂ ದೇಹದಲ್ಲಿ ನಿರ್ಜಲೀಕರಣ, ಲೋಳೆ ದಪ್ಪವಾಗುವುದು ಮತ್ತು ಸೈನಸ್‌ ಹೆಚ್ಚಾಗುವಂತೆ ಮಾಡುತ್ತದೆ. ಹಾಗಾಗಿ ಇವುಗಳ ಸೇವನೆಯನ್ನು ದೂರವಿರುವುದು ಉತ್ತಮ.

ಗ್ಲುಟನ್‌ ಅಂಶ ಇರುವ ಅಹಾರಗಳು

ಗೋಧಿ ಮತ್ತು ಕೆಲವು ಧಾನ್ಯಗಳಲ್ಲಿ ಗ್ಲುಟನ್‌ ಅಂಶ ಹೆಚ್ಚಾಗಿರುತ್ತದೆ. ಇದು ಲೋಳೆ ಉತ್ಪಾದನೆಯನ್ನು ಇನ್ನಷ್ಟು ಹೆಚ್ಚಾಗುವಂತೆ ಮಾಡುತ್ತದೆ. ಸೈನಸ್‌ನಿಂದ ಉಂಟಾಗುವ ಆರೋಗ್ಯದ ಏರುಪೇರುಗಳಿಂದ ದೂರವಿರಲು ಗ್ಲುಟನ್‌ ಅಂಶ ಹೆಚ್ಚಿರುವ ಆಹಾರಗಳನ್ನು ಬಳಕೆ ಮಾಡುವುದನ್ನು ಕಡಿಮೆ ಮಾಡುವುದು ಉತ್ತಮವಾಗಿದೆ.

ಮಸಾಲೆಯುಕ್ತ ಆಹಾರಗಳು

ಕೆಲವರಿಗೆ ಮಸಾಲೆಯುಕ್ತ ಆಹಾರಗಳು ಸೈನಸ್‌ನಿಂದ ಪರಿಹಾರ ಒದಗಿಸಿದರೂ, ಹಲವರಲ್ಲಿ ಸೈನಸ್‌ ಲಕ್ಷಣಗಳನ್ನು ಕೆರಳಿಸುತ್ತದೆ. ಆ ರೀತಿಯ ಅನುಭವ ನಿಮಗಾಗಿದ್ದರೆ ಮಸಾಲೆಯುಕ್ತ ಆಹಾರಗಳಿಂದ ದೂರವಿರುವುದು ಒಳ್ಳೆಯುದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ