logo
ಕನ್ನಡ ಸುದ್ದಿ  /  ಜೀವನಶೈಲಿ  /  ದಾಸವಾಳ-ಶಂಖಪುಷ್ಪ ಟೀ ಕುಡಿಯುವುದರಿಂದ ಆರೋಗ್ಯಕ್ಕುಂಟು ನೂರಾರು ಪ್ರಯೋಜನ; ರಕ್ತದೊತ್ತಡ, ಮುಟ್ಟಿನ ನೋವು ನಿವಾರಣೆಗೆ ಇದುವೇ ಪರಿಹಾರ

ದಾಸವಾಳ-ಶಂಖಪುಷ್ಪ ಟೀ ಕುಡಿಯುವುದರಿಂದ ಆರೋಗ್ಯಕ್ಕುಂಟು ನೂರಾರು ಪ್ರಯೋಜನ; ರಕ್ತದೊತ್ತಡ, ಮುಟ್ಟಿನ ನೋವು ನಿವಾರಣೆಗೆ ಇದುವೇ ಪರಿಹಾರ

Reshma HT Kannada

Dec 22, 2023 07:42 AM IST

google News

ದಾಸವಾಳ-ಶಂಖಪುಷ್ಪ ಟೀ

    • ನಮ್ಮ ದೇಹವನ್ನು ಕಾಡುವ ಹಲವು ಸಮಸ್ಯೆಗಳಿಗೆ ಮನೆಮದ್ದಿನ ಮೂಲಕವೇ ಪರಿಹಾರ ಕಂಡುಕೊಳ್ಳಬಹುದು. ನೀವು ರಕ್ತದೊತ್ತಡ ಹಾಗೂ ಮುಟ್ಟಿನ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದರೆ ನಿಮ್ಮ ಗಾರ್ಡನ್‌ನಲ್ಲೇ ಇದೆ ಪರಿಹಾರ. ಈ ಸಮಸ್ಯೆಗಳ ನಿರ್ವಹಣೆಯ ವಿಚಾರದಲ್ಲಿ ಮ್ಯಾಜಿಕ್‌ ಮಾಡಲಿದೆ ದಾಸವಾಳ ಹಾಗೂ ಶಂಖಪುಷ್ಪ ಹೂಗಳು. ಇದರಿಂದಾಗುವ ಇತರ ಪ್ರಯೋಜನಗಳನ್ನು ತಿಳಿಯಿರಿ.
ದಾಸವಾಳ-ಶಂಖಪುಷ್ಪ ಟೀ
ದಾಸವಾಳ-ಶಂಖಪುಷ್ಪ ಟೀ

ಆಯುರ್ವೇದ ಎನ್ನುವುದು ನಿಜಕ್ಕೂ ಒಂದು ಶಕ್ತಿ. ಆಯುರ್ವೇದವು ಹಲವು ದೈಹಿಕ, ಮಾನಸಿಕ ಸಮಸ್ಯೆಗಳನ್ನು ನಿವಾರಿಸುತ್ತದೆ. ಆಯುರ್ವೇದವು ಮನೆಮದ್ದಿಗೆ ಹೆಚ್ಚು ಪ್ರಾಶಸ್ತ್ಯ ನೀಡುವ ಕಾರಣಕ್ಕೆ ಅಡುಗೆಮನೆ, ಹೂದೋಟದಲ್ಲಿ ಸಿಗುವ ವಸ್ತುಗಳು ಔಷಧಿಯಾಗಿ ಪರಿವರ್ತನೆಯಾಗುತ್ತವೆ.

ನೀವು ರಕ್ತದೊತ್ತಡ, ಮಟ್ಟಿನ ಸಮಸ್ಯೆಗಳಿಂದ ಬಳಲ್ತಾ ಇದ್ರೆ ನಿಮಗೆ ನಿಮ್ಮ ಹೂದೋಟದಲ್ಲಿರುವ ಹೂಗಳೇ ಸಹಾಯ ಮಾಡುತ್ತವೆ. ಈ ಹೂಗಳು ಇವೆರಡು ಸಮಸ್ಯೆ ಮಾತ್ರವಲ್ಲ, ಹಲವು ರೀತಿಯ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಆದರೆ ಅವುಗಳನ್ನು ಬಳಸುವ ವಿಧಾನ ತಿಳಿದಿರಬೇಕು.

ದಾಸವಾಳ ಹಾಗೂ ಶಂಖಪುಷ್ಪ ಹೂಗಳು ಮುಟ್ಟಿನ ನೋವು ನಿವಾರಣೆ ಹಾಗೂ ರಕ್ತದೊತ್ತಡ ನಿವಾರಿಸುವ ಜೊತೆಗೆ ಮುಟ್ಟಿನ ವೇಳೆ ಅಧಿಕ ರಕ್ತಸ್ರಾವ, ಆತಂಕ, ಮೊಡವೆ, ತಲೆನೋವು ಹಾಗೂ ಮೈಗ್ರೇನ್‌ನಂತಹ ಸಮಸ್ಯೆಗಳ ನಿವಾರಣೆಗೆ ಸಹಕಾರಿ.

ಈ ಹೂವುಗಳನ್ನು ಆಯುರ್ವೇದ ಟೀ ಜೊತೆ ಬಳಸಬಹುದು. ಇದು ಕೊಲೆಸ್ಟ್ರಾಲ್‌ ನಿಯಂತ್ರಣ, ಮಧುಮೇಹ, ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು, ಹಾರ್ಮೋನುಗಳ ಅಸಮತೋಲನ ನಿವಾರಣೆಗೂ ಮದ್ದು. ಈ ಆಯುರ್ವೇದ ಟೀಯನ್ನು ಸರಳವಾಗಿ ಸುಲಭವಾಗಿ ಮಾಡಬಹುದು.

ಇದನ್ನೂ ಓದಿ: Nasal Congestion: ಚಳಿಗಾಲ ಆರಂಭವಾಗಿದೆ, ಪದೇ ಪದೇ ಮೂಗು ಕಟ್ಟುವ ಸಮಸ್ಯೆ ಕಾಡ್ತಾ ಇದ್ರೆ, ಈ ಸಿಂಪಲ್‌ ಆಯುರ್ವೇದ ಪರಿಹಾರ ಪಾಲಿಸಿ

ಹೂಗಳ ಆಯುರ್ವೇದ ಟೀ ತಯಾರಿಸುವ ವಿಧಾನ

ಶಂಖ ಪುಷ್ಪ ಹೂ 2, ದಾಸವಾಳ ಹೂ 1, ನೀರು 1 ಕಪ್‌,

ನೀರನ್ನು ಕುದಿಸಿ, ಕುದಿಯುತ್ತಿರುವ ನೀರಿಗೆ ಈ ಹೂಗಳನ್ನು ಹಾಕಿ ಚೆನ್ನಾಗಿ ಕುದಿಸಿ. 5 ರಿಂದ 7 ನಿಮಿಷಗಳ ಕಾಲ ಕುದಿಸಿದ ನಂತರ ನೀರು ನೇರಳೆ ಬಣ್ಣಕ್ಕೆ ತಿರುಗುತ್ತದೆ. ಇದನ್ನು ಸೋಸಿ ಬೆಳಗಿನ ಖಾಲಿ ಹೊಟ್ಟೆಯಲ್ಲಿ ತಿನ್ನಬೇಕು. ಈ ಟೀ ರುಚಿ ಎನ್ನಿಸಿಲ್ಲ, ಕಹಿಯಾಗಿದೆ ಅನ್ನಿಸದರೆ ಇದಕ್ಕೆ ಒಂದು ಚಮಚ ಜೇನುತುಪ್ಪ ಹಾಗೂ ನಿಂಬೆರಸ ಸೇರಿಸಿ ಕುಡಿಯಬಹುದು.

ದಾಸಾವಾಳದ ಪ್ರಯೋಜನ

ದಾಸವಾಳವು ಹಲವು ರೀತಿಯ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದರಲ್ಲಿ ಜಿಂಕ್‌, ಕ್ಯಾಲ್ಸಿಯಂ, ಮ್ಯಾಗ್ನೇಶಿಯಂ, ವಿಟಮಿನ್‌ ಬಿ9, ಫಾಸ್ಪರಸ್‌, ಪೊಟ್ಯಾಶಿಯಂ ಹಾಗೂ ಇತರ ಪ್ರಯೋಜನಕಾರಿ ಅಂಶಗಳಿದ್ದು ಇದು ನಮ್ಮ ಒಟ್ಟಾರೆ ಆರೋಗ್ಯ ಸುಧಾರಣೆಗೆ ಸಹಾಯ ಮಾಡುತ್ತದೆ. ಇದು ಕೊಲೆಸ್ಟ್ರಾಲ್‌ ತಗ್ಗಿಸುತ್ತದೆ, ತೂಕ ನಿರ್ವಹಣೆ, ರಕ್ತದಲ್ಲಿನ ಸಕ್ಕರೆಯ ಪ್ರಮಾಣ ತಗ್ಗಿಸುವುದು ಹಾಗೂ ಉರಿಯೂತವನ್ನು ನಿವಾರಿಸುತ್ತದೆ. ಇದರಲ್ಲಿ ಸೋಂಕು ನಿವಾರಕ ಗುಣವಿದ್ದು, ದೇಹವನ್ನು ಸೋಂಕಿನಿಂದ ರಕ್ಷಿಸುತ್ತದೆ.

ಶಂಖಪುಷ್ಪ ಟೀ ಪ್ರಯೋಜನಗಳು

ದಕ್ಷಿಣ ಏಷ್ಯಾದ ರಾಷ್ಟ್ರಗಳಲ್ಲಿ ಕಂಡುಬರುವ ಶಂಖಪುಷ್ಪ ಹೂಗಳಲ್ಲಿ ಆಂಟಿಆಕ್ಸಿಡೆಂಟ್‌ ಅಂಶ ಅಧಿಕವಿರುತ್ತದೆ. ಇದನ್ನು ಸಾಂಪ್ರದಾಯಿಕ ಔಷಧಿಗಳ ರೂಪದಲ್ಲಿ ಬಳಸಲಾಗುತ್ತದೆ. ಇದರಲ್ಲಿ ಉರಿಯೂತ ವಿರೋಧಿ ಅಂಶಗಳೂ ಇವೆ. ಇದು ಆತಂಕ, ಒತ್ತಡ, ಖಿನ್ನತೆಯಂತಹ ಮಾನಸಿಕ ಸಮಸ್ಯೆ ನಿವಾರಣೆಗೂ ಸಹಾಯ ಮಾಡುತ್ತದೆ. ಇದು ಮುಟ್ಟಿನ ನೋವು ಹಾಗೂ ಬಿಳಿ ಮುಟ್ಟು ನಿಯಂತ್ರಿಸಲು ಪರಿಣಾಮಕಾರಿ. ಇದು ಚರ್ಮದ ಅಂದ ಹೆಚ್ಚಲು ಸಹಕಾರಿ. ರಕ್ತದಲ್ಲಿನ ಸಕ್ಕರೆಯ ಮಟ್ಟ ನಿವಾರಣೆ, ಕೂದಲು ಹಾಗೂ ಉಸಿರಾಟದ ಆರೋಗ್ಯ ಹಾಗೂ ಜೀರ್ಣಕ್ರಿಯ ವ್ಯವಸ್ಥೆ ಸುಧಾರಿಸಲು ಸಹಕಾರಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ