logo
ಕನ್ನಡ ಸುದ್ದಿ  /  ಜೀವನಶೈಲಿ  /  Health Tips: ಚಳಿಗಾಲದಲ್ಲಿ ಜೇನುತುಪ್ಪ ಸೇವಿಸಿದರೆ ಆರೋಗ್ಯಕ್ಕೆ ಆಗುವ ಪ್ರಯೋಜನ ಪಟ್ಟಿ ಇಲ್ಲಿದೆ

Health tips: ಚಳಿಗಾಲದಲ್ಲಿ ಜೇನುತುಪ್ಪ ಸೇವಿಸಿದರೆ ಆರೋಗ್ಯಕ್ಕೆ ಆಗುವ ಪ್ರಯೋಜನ ಪಟ್ಟಿ ಇಲ್ಲಿದೆ

Raghavendra M Y HT Kannada

Jan 21, 2024 09:47 AM IST

google News

ಜೇನುತುಪ್ಪದ ಆರೋಗ್ಯ ಪ್ರಯೋಜನಗಳನ್ನು ತಿಳಿಯಿರಿ

  • ಚಳಿಗಾಲದ ಸಮಯದಲ್ಲಿ ನೀವು ಜೇನುತುಪ್ಪ ಸೇವನೆ ಮಾಡುವ ಮೂಲಕ ಸಾಕಷ್ಟು ಆರೋಗ್ಯ ಪ್ರಯೋಜನ ಪಡೆಯಬಹುದಾಗಿದೆ.

ಜೇನುತುಪ್ಪದ ಆರೋಗ್ಯ ಪ್ರಯೋಜನಗಳನ್ನು ತಿಳಿಯಿರಿ
ಜೇನುತುಪ್ಪದ ಆರೋಗ್ಯ ಪ್ರಯೋಜನಗಳನ್ನು ತಿಳಿಯಿರಿ

ಅದರಕ್ಕೆ ಕಹಿ ಉದರಕ್ಕೆ ಸಿಹಿ ಎಂಬ ಮಾತೊಂದಿದೆ. ಆದರೆ ಜೇನುತುಪ್ಪದ ವಿಚಾರಕ್ಕೆ ಬಂದಾಗ ಮಾತ್ರ ಈ ಮಾತು ಸುಳ್ಳು ಎನಿಸುತ್ತದೆ. ಏಕೆಂದರೆ ಜೇನುತುಪ್ಪ ಅದರಕ್ಕೂ ಸಿಹಿ ಹಾಗೂ ಉದರಕ್ಕೂ ಸಿಹಿ ಎಂದು ಹೇಳಬಹುದಾಗಿದೆ. ಜೇನುತುಪ್ಪದ ಸವಿಗೆ ಮಾರು ಹೋಗದೇ ಇರುವವರು ಯಾರೂ ಇಲ್ಲ. ಆರೋಗ್ಯದ ದೃಷ್ಟಿಯಿಂದ ಕೂಡ ಸಾಕಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ಇನ್ನು ಚಳಿಗಾಲದಲ್ಲಿ ಜೇನುತುಪ್ಪ ಸೇವನೆಯಿಂದ ಆರೋಗ್ಯಕ್ಕೆ ಯಾವೆಲ್ಲ ರೀತಿಯಲ್ಲಿ ಲಾಭವಿದೆ ಎಂಬುದನ್ನು ತಿಳಿದುಕೊಳ್ಳೋಣ

ಚಳಿಗಾಲದ ಸಮಯದಲ್ಲಿ ಇರುವ ಕಡಿಮೆ ತಾಪಮಾನವು ಆರೋಗ್ಯದ ಮೇಲೆ ಸಾಕಷ್ಟು ರೀತಿಯಲ್ಲಿ ದುಷ್ಪರಿಣಾಮಗಳನ್ನು ಬೀರುತ್ತದೆ. ಹೀಗಾಗಿ ಇಂತಹ ಸಮಯದಲ್ಲಿ ಜೇನುತುಪ್ಪ ಸೇವಿಸಿದರೆ ಯಾವ ಆರೋಗ್ಯದ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಂಬುದರ ಮಾಹಿತಿ ಇಲ್ಲಿದೆ.

ಗಂಟಲಿನ ಕಿರಿಕಿರಿ: ಚಳಿಗಾಲದ ಸಮಯದಲ್ಲಿ ಶೀತ, ಕೆಮ್ಮು, ಗಂಟಲು ನೋವು, ಗಂಟಲಿನಲ್ಲಿ ಕಿರಿಕಿರಿ ಈ ರೀತಿಯ ಸಮಸ್ಯೆಗಳು ಉಂಟಾಗುವುದು ಸಹಜ.ಇಂತಹ ಸಂದರ್ಭದಲ್ಲಿ ಜೇನುತುಪ್ಪ ಸೇವನೆ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ . ಗಂಟಲಿನ ಕಿರಿಕಿರಿ ಉಂಟಾದ ಸಂದರ್ಭದಲ್ಲಿ ಜೇನುತುಪ್ಪ ಸೇವನೆ ಮಾಡುವುದರಿಂದ ಕಿರಿಕಿರಿಯನ್ನು ನಿವಾರಿಸುತ್ತದೆ. ಅಲ್ಲದೇ ಶ್ವಾಸಕೋಶ ಸಂಬಂಧಿ ಸೋಂಕುಗಳಿಗೂ ರಾಮಬಾಣವಾಗಿದೆ.

ಹೃದಯದ ಆರೋಗ್ಯ: ಜೇನುತುಪ್ಪವು ಕೇವಲ ಶ್ವಾಸಕೋಶದ ಆರೋಗ್ಯ ಮಾತ್ರವಲ್ಲ ಹೃದಯದ ಆರೋಗ್ಯವನ್ನೂ ಕಾಪಾಡುತ್ತದೆ. ಚಳಿಗಾಲದಲ್ಲಿ ಹೃದಯಾಘಾತಕ್ಕೆ ಒಳಗಾಗುವವರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಆದರೆ ಜೇನುತುಪ್ಪ ಸೇವನೆಯು ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ನಿಯಂತ್ರಿಸಿ ಹೃದಯದ ಕಾರ್ಯವೈಖರಿಗಳನ್ನು ಸುಗಮಗೊಳಿಸುತ್ತದೆ.

ರೋಗ ನಿರೋಧಕ ಶಕ್ತಿ: ಜೇನುತುಪ್ಪದಲ್ಲಿ ಆಂಟಿಆಕ್ಸಿಡಂಟ್​ಗಳು ಅಗಾಧ ಪ್ರಮಾಣದಲ್ಲಿ ಅಡಕವಾಗಿದೆ. ಹೀಗಾಗಿ ಜೇನುತುಪ್ಪ ಸೇವನೆಯು ಮನುಷ್ಯನ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ಬ್ಯಾಕ್ಟೀರಿಯಾ, ಫಂಗಸ್​ ಹಾಗೂ ವಿವಿಧ ವೈರಸ್​ಗಳ ದಾಳಿಯಿಂದ ಪಾರಾಗಲು ಸಾಧ್ಯವಾಗುತ್ತದೆ.

ಚರ್ಮದ ಆರೋಗ್ಯ: ಚಳಿಗಾದಲ್ಲಿ ಶುಷ್ಕ ತ್ವಚೆಯ ಸಮಸ್ಯೆಯು ಬಹುತೇಕ ಎಲ್ಲರನ್ನೂ ಕಾಡುತ್ತದೆ. ಆದರೆ ಜೇನುತುಪ್ಪವು ಚರ್ಮಕ್ಕೆ ತೇವಾಂಶವನ್ನು ತಂದುಕೊಡುವಲ್ಲಿ ಸಹಕಾರಿಯಾಗಿದೆ. ಇದರಿಂದ ಚಳಿಗಾಲದಲ್ಲಿ ಚರ್ಮವು ಒಣಗುವುದು ತಪ್ಪುತ್ತದೆ.

ದೇಹದ ಶಕ್ತಿ: ಜೇನುತುಪ್ಪದಲ್ಲಿ ಕಾರ್ಬೋಹೈಡ್ರೇಟ್​ಗಳು ಹಾಗೂ ಗ್ಲುಕೋಸ್​ ಆಂಶವಿರುತ್ತದೆ. ಇದು ಮನುಷ್ಯನ ದೇಹಕ್ಕೆ ಶಕ್ತಿಯನ್ನು ತಂದುಕೊಡುವ ಕಾರ್ಯವನ್ನು ಮಾಡುತ್ತದೆ.

'ಮನೆ-ಮನದಲ್ಲಿ ಶ್ರೀರಾಮ' ಸರಣಿಗೆ ನೀವೂ ಬರೆಯಿರಿ. ಇಮೇಲ್: ht.kannada@htdigital.in

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ