Healthy Food: ಕಂದು ಮೊಟ್ಟೆ v/s ಬಿಳಿ ಮೊಟ್ಟೆ ನಡುವಿನ ವ್ಯತ್ಯಾಸವೇನು? ಆರೋಗ್ಯಕ್ಕೆ ಯಾವ ಬಣ್ಣದ ಮೊಟ್ಟೆ ಒಳ್ಳೆಯದು?
Mar 10, 2024 10:41 PM IST
ಬಿಳಿ ಮೊಟ್ಟೆ, ಕಂದು ಮೊಟ್ಟೆ ಆರೋಗ್ಯಕ್ಕೆ ಯಾವ ಮೊಟ್ಟೆ ಒಳ್ಳೆಯದು
Healthy Food: ಮೊಟ್ಟೆಗಳಲ್ಲಿ ನೈಸರ್ಗಿಕವಾಗಿ ಪ್ರೋಟಿನ್, ಕ್ಯಾಲ್ಸಿಯಂ ಹಾಗೂ ವಿಟಮಿನ್ ಡಿ ಲಭ್ಯವಿದ್ದು, ಮೂಳೆಗಳು ಹಾಗೂ ಹೃದಯದ ಆರೋಗ್ಯಕ್ಕೆ, ಕಣ್ಣುಗಳ ದೃಷ್ಟಿ ದೋಷ ಪರಿಹರಿಸಲು ಇದು ಪ್ರಯೋಜನಕಾರಿ. ಆದರೆ ಯಾವ ಮೊಟ್ಟೆಗಳು ಬಳಕೆಗೆ ಸೂಕ್ತ ? ಕಂದು, ಬಿಳಿ ಮೊಟ್ಟೆಗಳಲ್ಲಿ ಯಾವುದು ಹೆಚ್ಚಿನ ಪೋಷಕಾಂಶಗಳನ್ನು ಹೊಂದಿದೆ ? ಇಲ್ಲಿದೆ ಮಾಹಿತಿ.
Healthy Food: ಉತ್ತಮ ಆರೋಗ್ಯವನ್ನು ಹೊಂದುವುದಕ್ಕಾಗಿ ದಿನಕ್ಕೆರಡು ಮೊಟ್ಟೆ ತಿನ್ನಲೇಬೇಕು ಎನ್ನುವ ಮಂದಿ ನಮ್ಮ ನಡುವೆ ಅನೇಕರಿದ್ದಾರೆ. ಬೆಳಗ್ಗಿನ ಉಪಹಾರದಲ್ಲಿ ಪ್ರೊಟೀನ್ ರಿಚ್ ಬಿಸಿ ಬಿಸಿ ಮೊಟ್ಟೆ ದೋಸೆ, ಮಧ್ಯಾಹ್ನ ಊಟಕ್ಕೆ ಎಗ್ ಕರಿ, ಸಂಜೆ ಸ್ನ್ಯಾಕ್ಸ್ ಟೈಂನಲ್ಲಿ ಮೊಟ್ಟೆಯಿಂದ ತಯಾರಿಸಿ ಖಾದ್ಯಗಳು, ರಾತ್ರಿಯಾದರೆ ಊಟಕ್ಕೂ ಬೇಯಿಸಿದ ಮೊಟ್ಟೆಗಳನ್ನು ಬಳಸುವವರೇ ಹೆಚ್ಚು.
ದಿನಬಳಕೆಯಲ್ಲಿ ಮೊಟ್ಟೆಯನ್ನು ನಾವು ಪ್ರಮುಖ ಆಹಾರ ಪದಾರ್ಥವನ್ನಾಗಿಸಿಕೊಂಡರೂ ಮೊಟ್ಟೆಯ ಬಗೆಗಿನ ಅನೇಕ ಗೊಂದಲಗಳು ನಮ್ಮನ್ನು ಕಾಡುತ್ತಲೇ ಇರುತ್ತವೆ. ಮೊಟ್ಟೆಯನ್ನು ತರಲು ಅಂಗಡಿ, ಮಾರುಕಟ್ಟೆಗೆ ಹೋದರೆ ಬೆಲೆಯ ಗೊಂದಲ ಒಂದೆಡೆಯಾದರೆ, ಬಿಳಿ ಮೊಟ್ಟೆ ಹಾಗೂ ಬಣ್ಣದ ಮೊಟ್ಟೆಗಳ ನಡುವೆ ಯಾವುದು ಆರೋಗ್ಯಕರ ಎಂಬ ಯೋಚನೆ ಕಾಡೋದಕ್ಕೆ ಶುರುಮಾಡುತ್ತದೆ. ಬೆಲೆ ಹೆಚ್ಚಿರುವ ಕಾರಣಕ್ಕೆ ಕಂದು ಮೊಟ್ಟೆಯೇ ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರಬಹುದು ಎಂಬ ಚಿಂತೆಯಲ್ಲಿ ದುಬಾರಿಯಾದರೂ ಅದನ್ನೇ ಕೊಂಡುಕೊಳ್ಳುವವರು ನಾವು. ಆದರೆ ಬೆಲೆ, ಬಣ್ಣ, ರುಚಿ, ಶಕ್ತಿಗಾಗಿ ಯಾವ ಮೊಟ್ಟೆಗಳು ಸೂಕ್ತ ? ಇಲ್ಲಿವೆ ಮಾಹಿತಿ.
ಬಿಳಿ ಮೊಟ್ಟೆ ಮತ್ತು ಕಂದು ಮೊಟ್ಟೆಗಳ ನಡುವಿನ ವ್ಯತ್ಯಾಸವೇನು?
ಫಾರಂ ಕೋಳಿ ಮೊಟ್ಟೆ ಮತ್ತು ದೇಸಿ ಕೋಳಿ ಮೊಟ್ಟೆಗಳ ನಡುವಿನ ಅತ್ಯಂತ ಸ್ಪಷ್ಟವಾದ ವ್ಯತ್ಯಾಸವೆಂದರೆ ಬಣ್ಣ. ದೇಸಿ ಮೊಟ್ಟೆಗಳು ಕಂದು ಅಥವಾ ತಿಳಿ ಕಂದು ಬಣ್ಣದಲ್ಲಿರುತ್ತವೆ. ಫಾರಂ ಕೋಳಿ ಮೊಟ್ಟೆಗಳು ಸಂಪೂರ್ಣ ಬಿಳಿ ಬಣ್ಣವನ್ನು ಹೊಂದಿರುತ್ತವೆ. ಕಂದು ಮೊಟ್ಟೆಗಳು ಕೃತಕ ಹಾರ್ಮೋನುಗಳು ಮತ್ತು ಔಷಧಿಗಳೊಂದಿಗೆ ಚುಚ್ಚುಮದ್ದು ಮಾಡದ ಕೋಳಿಗಳಿಂದ ಬರುತ್ತಿದ್ದು, ದೇಸಿ ಮೊಟ್ಟೆಗಳನ್ನು ಬೆಳೆಸಲಾಗುವುದಿಲ್ಲ ಮತ್ತು ನೈಸರ್ಗಿಕವಾಗಿ ಇಡಲಾಗುತ್ತದೆ. ಫಾರಂ ಕೋಳಿಗಳನ್ನು ಸಾಮಾನ್ಯವಾಗಿ ಹೆಚ್ಚು ಮಾಂಸವನ್ನು ಉತ್ಪಾದಿಸಲು ಮತ್ತು ಹೆಚ್ಚು ಮೊಟ್ಟೆಗಳನ್ನು ಇಡಲು ಹಾರ್ಮೋನುಗಳು ಮತ್ತು ಔಷಧಗಳೊಂದಿಗೆ ಪಂಪ್ ಮಾಡಲಾಗುತ್ತದೆ. ಕೋಳಿಗಳಿಗೆ ನೀಡುವ ಆಹಾರದ ಮೇಲೆ ಮೊಟ್ಟೆಗಳ ಬಣ್ಣ ನಿರ್ಧಾರವಾಗುತ್ತದೆ.
ಯಾವ ಬಣ್ಣದ ಮೊಟ್ಟೆಗಳ ಬಳಕೆ ಆರೋಗ್ಯಕರ ? ಯಾವುದರ ರುಚಿ ಹೆಚ್ಚು ?
ಪೌಷ್ಠಿಕಾಂಶದ ದೃಷ್ಟಿಕೋನದಿಂದ ಮತ್ತು ಮೊಟ್ಟೆಯ ರುಚಿಯನ್ನು ತುಲನೆ ಮಾಡುವುದಾದರೆ ಎರಡೂ ಬಗೆಯ ಮೊಟ್ಟೆಗಳೂ ಒಂದೇ. ಮೊಟ್ಟೆಯ ಚಿಪ್ಪಿನ ಬಣ್ಣದಲ್ಲಿ ಮಾತ್ರ ವ್ಯತ್ಯಾಸ ಕಂಡುಬರುತ್ತದೆ. ಸುವಾಸನೆ ಹಾಗೂ ಮೊಟ್ಟೆಗಳ ರುಚಿಯಲ್ಲಿ ಹೆಚ್ಚಿನ ವ್ಯತ್ಯಾಸ ಕಾಣುವುದು ಕಷ್ಟ.
ಕಂದು ಬಣ್ಣದ ಮೊಟ್ಟೆಗಳಿಗೇಕೆ ಬೇಡಿಕೆ ಹೆಚ್ಚು ? ದುಬಾರಿ ಏಕೆ ?
ಅನೇಕರು ಬಿಳಿ ಮೊಟ್ಟೆಗಳಿಗಿಂತ ಕಂದು ಮೊಟ್ಟೆಗಳನ್ನೇ ಹೆಚ್ಚಿಗೆ ಇಷ್ಟಪಡುತ್ತಾರೆ. ನೈಸರ್ಗಿಕವಾಗಿರುತ್ತವೆ ಎಂಬ ಕಾರಣಕ್ಕಾಗಿ ಕಂದು ಮೊಟ್ಟೆಗಳು ಮೊರೆ ಹೋಗುವ ಮಂದಿ ಅದನ್ನು ಬಿಳಿಯ ಮೊಟ್ಟೆಗಳಿಗೆ ಆರೋಗ್ಯಕರ ಪರ್ಯಾಯವೆಂದು ಭಾವಿಸುತ್ತಾರೆ. ಆದರೆ ಪೌಷ್ಟಿಕಾಂಶದಲ್ಲಿ ಎರಡೂ ಬಗೆಯ ಮೊಟ್ಟೆಗಳು ಸಾಕಷ್ಟು ಹೋಲುತ್ತವೆ.
ಎಲ್ಲಾ ಮೊಟ್ಟೆಗಳು ವಾಸ್ತವವಾಗಿ ಬಿಳಿ ಬಣ್ಣವಿರುತ್ತದೆ. ಆದರೆ ಕಂದು ಮೊಟ್ಟೆಗಳನ್ನು ಇಡುವ ಕೋಳಿಗಳು ಆ ಮೊಟ್ಟೆಗಳ ಚಿಪ್ಪಿನಲ್ಲಿ ಬಣ್ಣವನ್ನು ಸೃಷ್ಟಿಸಿಕೊಳ್ಳಲು ಹೆಚ್ಚುವರಿ ಪ್ರಕ್ರಿಯೆಗೊಳಲಾಗುವ ಅಗತ್ಯವಿರುತ್ತದೆ. ಇದಕ್ಕಾಗಿ ಕೋಳಿಗಳಿಗೆ ಅವುಗಳ ಫೀಡ್‌ನಲ್ಲಿ ಹೆಚ್ಚಿನ ಪೋಷಕಾಂಶಗಳನ್ನು ನೀಡಬೇಕಾಗುತ್ತದೆ. ಇದು ಬಿಳಿ ಕೋಳಿಗಳ ಫೀಡ್‌ಗಿಂತ ಸ್ವಲ್ಪ ಹೆಚ್ಚು ದುಬಾರಿಯಾಗಿದೆ. ಅಲ್ಲದೆ ಕಂದು ಮೊಟ್ಟೆಗಳು ಜನಪ್ರಿಯತೆ ಗಳಿಸುತ್ತಲೇ ಮಾರುಕಟ್ಟೆಯು ಅದಕ್ಕೆ ಹೆಚ್ಚು ಬೆಲೆ ನಿಗದಿ ಮಾಡಿದೆ.
ಎರಡೂ ರೀತಿಯ ಮೊಟ್ಟೆ ಆರೋಗ್ಯಕ್ಕೆ ಒಳ್ಳೆಯದು
ಒಟ್ಟಿನಲ್ಲಿ ಬಿಳಿ ಮೊಟ್ಟೆಗಳು ಮತ್ತು ಕಂದು ಮೊಟ್ಟೆಗಳ ನಡುವಿನ ವ್ಯತ್ಯಾಸವೆಂದರೆ ಮೊಟ್ಟೆಯ ಚಿಪ್ಪುಗಳ ಬಣ್ಣ ಮತ್ತು ಬಹುಶಃ ಬೆಲೆ ಮಾತ್ರವಷ್ಟೇ. ಮೊಟ್ಟೆಯ ಚಿಪ್ಪಿನ ಬಣ್ಣ ಯಾವುದೇ ಆಗಿರಲಿ, ಮೊಟ್ಟೆಯು ಒಂದೇ ರುಚಿ ಹಾಗೂ ಸಮಾನ ಪೌಷ್ಠಿಕಾಂಶವನ್ನು ಹೊಂದಿರುತ್ತದೆ. ಹಾಗಾದರೆ ಇನ್ಯಾಕೆ ಚಿಂತೆ? ಮೊಟ್ಟೆ ಯಾವುದಾದರೇನು ಆರೋಗ್ಯ ವೃದ್ಧಿಸಿದರೆ ಸಾಲದೇ..!
ವಿಭಾಗ