logo
ಕನ್ನಡ ಸುದ್ದಿ  /  ಜೀವನಶೈಲಿ  /  Breakfast: ಬೆಳಗಿನ ಉಪಹಾರಕ್ಕೆ ಈ ಆಹಾರ ಪದಾರ್ಥಗಳನ್ನು ಸೇವಿಸಲೇಬೇಡಿ

Breakfast: ಬೆಳಗಿನ ಉಪಹಾರಕ್ಕೆ ಈ ಆಹಾರ ಪದಾರ್ಥಗಳನ್ನು ಸೇವಿಸಲೇಬೇಡಿ

HT Kannada Desk HT Kannada

Dec 23, 2023 06:29 AM IST

google News

ಬೆಳಗಿನ ಉಪಹಾರಕ್ಕೆ ಈ ಆಹಾರ ಪದಾರ್ಥಗಳನ್ನು ಸೇವಿಸಬೇಡಿ

  • Breakfast: ಸಾಮಾನ್ಯವಾಗಿ ಎಲ್ಲರೂ ಬೆಳಗ್ಗಿನ ಉಪಹಾರದ ಬಗ್ಗೆ ತಲೆಕೆಡಿಸಿಕೊಳ್ಳುವುದೇ ಇಲ್ಲ. ಇನ್ನೂ ಕೆಲವರು ವಿವಿಧ ಜಾಹೀರಾತುಗಳನ್ನು ನಂಬಿಕೊಂಡು ಆರೋಗ್ಯಕ್ಕೆ ಒಳ್ಳೆಯದು ಎಂದು ಇಲ್ಲದನ್ನೆಲ್ಲಾ ತಿನ್ನುತ್ತಾರೆ. ಆಹಾರ ತಜ್ಞರು ಹೇಳುವ ಪ್ರಕಾರ ನೀವು ಈ ಆಹಾರ ಪದಾರ್ಥಗಳನ್ನು ಯಾವುದೇ ಕಾರಣಕ್ಕೂ ಬ್ರೇಕ್​ಫಾಸ್ಟ್​ ರೂಪದಲ್ಲಿ ಸೇವಿಸುವಂತಿಲ್ಲ .

ಬೆಳಗಿನ ಉಪಹಾರಕ್ಕೆ ಈ ಆಹಾರ ಪದಾರ್ಥಗಳನ್ನು ಸೇವಿಸಬೇಡಿ
ಬೆಳಗಿನ ಉಪಹಾರಕ್ಕೆ ಈ ಆಹಾರ ಪದಾರ್ಥಗಳನ್ನು ಸೇವಿಸಬೇಡಿ (PC: Unsplash)

Breakfast: ನೀವು ಬೆಳಗ್ಗೆ ಉಪಹಾರದ ರೂಪದಲ್ಲಿ ಸೇವಿಸುವ ಆಹಾರವು ಹೆಚ್ಚು ಪೋಷಕಾಂಶಗಳಿಂದ ಕೂಡಿರಬೇಕು.. ಆದರೆ ಅನೇಕರು ಬೆಳಗ್ಗಿನ ಉಪಹಾರವನ್ನೇ ಸೇವಿಸುವುದಿಲ್ಲ. ಉತ್ತಮ ಆರೋಗ್ಯದ ದೃಷ್ಟಿಯಿಂದ ಇದು ಒಳ್ಳೆಯ ಅಭ್ಯಾಸವಲ್ಲ. ಆಹಾರ ತಜ್ಞರು ಹೇಳುವ ಪ್ರಕಾರ ಸರಿಯಾದ ಪೋಷಕಾಂಶಯುಕ್ತ ಆಹಾರವನ್ನು ಬೆಳಗಿನ ತಿಂಡಿಯ ರೂಪದಲ್ಲಿ ಸೇವಿಸುವುದು ಆರೋಗ್ಯ ಸುಧಾರಿಸುತ್ತದೆ. ಕೆಲವರು ತಪ್ಪದೆ ಬೆಳಗಿನ ಉಪಹಾರ ಸೇವಿಸುತ್ತಾರೆ. ಆದರೆ ಅದರಲ್ಲಿ ಯಾವುದೇ ಪೋಷಕಾಂಶವಾಗಲಿ, ಖನಿಜಗಳಾಗಲಿ, ಫೈಬರ್​ ಅಂಶವಾಗಲಿ ಇರುವುದಿಲ್ಲ. ಹೀಗಾಗಿ ತಿಂಡಿ ತಿಂದು ಕೆಲವೇ ಕ್ಷಣಗಳಲ್ಲಿ ನಿಮಗೆ ಹಸಿವಾಗುತ್ತದೆ.

ಉಪಹಾರದ ಅವಧಿಯಲ್ಲಿ ಏನನ್ನೂ ಸೇವಿಸದೇ ಇರುವುದಕ್ಕಿಂತ ಬೇಡದ ಆಹಾರ ಪದಾರ್ಥವನ್ನು ಸೇವಿಸುವುದು ನಿಜಕ್ಕೂ ಅಪಾಯಕಾರಿಯಾಗಿದೆ. ಆರೋಗ್ಯಕರ ಉಪಹಾರದಲ್ಲಿ ಫೈಬರ್​, ಖನಿಜ, ಒಳ್ಳೆಯ ಕೊಬ್ಬು, ಪ್ರೋಟೀನ್​ ಹೀಗೆ ಪ್ರತಿಯೊಂದು ಅಂಶಗಳನ್ನು ಒಳಗೊಂಡಿರಬೇಕು. ಈ ರೀತಿಯ ಪರಿಪೂರ್ಣವಾದ ಉಪಹಾರವನ್ನು ಸೇವಿಸಿದಾಗ ಮಾತ್ರ ಮಧ್ಯಾಹ್ನ ಊಟದ ಅವಧಿಯವರೆಗೂ ನಿಮಗೆ ಹಸಿವೆಯ ಅನುಭವವಾಗೋದೇ ಇಲ್ಲ.

ಧಾನ್ಯಗಳು

ಅನೇಕರು ಬೆಳಗ್ಗಿನ ಉಪಹಾರಕ್ಕೆ ಸಂಸ್ಕರಿಸಿದ ಧಾನ್ಯಗಳು ಬೆಸ್ಟ್​ ಆಯ್ಕೆ ಎಂದುಕೊಳ್ಳುತ್ತಾರೆ. ಸಂಸ್ಕರಿಸಿದ ಧಾನ್ಯಗಳನ್ನು ತಯಾರಿಸುವ ಕಂಪನಿಗಳೂ ಸಹ ಬೆಳಗಿನ ಉಪಹಾರಕ್ಕೆ ಸಂಸ್ಕರಿಸಿದ ಧಾನ್ಯಗಳು ಬೆಸ್ಟ್​ ಎಂದೇ ಜಾಹೀರಾತು ನೀಡುತ್ತವೆ. ಆದರೆ ವಾಸ್ತವ ಬೇರೆಯೇ ಇದೆ. ಇದು ಸಂಸ್ಕರಿಸಿದ ಆಹಾರವಾಗಿರುವುದರಿಂದ ನಿಮಗೆ ಇದರಲ್ಲಿ ಯಾವುದೇ ಅಗತ್ಯ ಪೋಷಕಾಂಶಗಳು ಸಿಗುವುದಿಲ್ಲ. ಅಲ್ಲದೇ ಇದರಲ್ಲಿ ಸಕ್ಕರೆ ಕೂಡ ಅಗಾಧ ಪ್ರಮಾಣದಲ್ಲಿ ಇರುತ್ತದೆ. ಇದು ನಿಮ್ಮಲ್ಲಿ ಸ್ಥೂಲಕಾಯ ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗಬಹುದು

ಫ್ಲೇವರ್ ಮೊಸರು (ಯೋಗರ್ಟ್​)

ಅಂಗಡಿಗಳಲ್ಲಿ ಸಿಗುವ ಈ ಫ್ಲೇವರ್​ ಭರಿತ ಯೋಗರ್ಟ್​ಗಳನ್ನು ನೀವೂ ನಿಮ್ಮ ಉಪಹಾರದ ಅವಧಿಯಲ್ಲಿ ಸೇವಿಸುತ್ತಿದ್ದರೆ ನೀವು ಖಂಡಿತವಾಗಿಯೂ ಇನ್ನೊಮ್ಮೆ ಯೋಚಿಸಲೇಬೇಕು. ಇದರಲ್ಲಿ ಸಕ್ಕರೆ ಅಂಶ ಅಗಾಧ ಪ್ರಮಾಣದಲ್ಲಿ ಇರುತ್ತದೆ. ಹೀಗಾಗಿ ಇದನ್ನು ನೀವು ತ್ಯಜಿಸುವುದೇ ಉತ್ತಮ.

ವೈಟ್​ ಬ್ರೆಡ್​

ಉಪಹಾರದ ಸಮಯದಲ್ಲಿ ಕಾಫಿ ಹಾಗೂ ಟೋಸ್ಟ್​ ಸೇವನೆ ಮಾಡುವ ಅಭ್ಯಾಸ ಅನೇಕರಿಗಿದೆ. ಆದರೆ ಆರೋಗ್ಯದ ದೃಷ್ಟಿಯಿಂದ ಇದು ಖಂಡಿತವಾಗಿಯೂ ಒಳ್ಳೆಯದಲ್ಲ. ಮೊದಲನೆಯದಾಗಿ ಇವುಗಳಲ್ಲಿ ಯಾವುದೇ ಪೋಷಕಾಂಶ ಇರುವುದಿಲ್ಲ. ಅದರ ಜೊತೆಯಲ್ಲಿ ಇದಕ್ಕೆ ನೀವು ಜಾಮ್​ ಅಥವಾ ಚಾಕಲೇಟ್​ ಸಾಸ್​ ಜೊತೆ ತಿಂದರೆ ಮುಗೀತು. ಅಗಾಧ ಪ್ರಮಾಣದಲ್ಲಿ ಸಕ್ಕರೆಯಂಶ ನಿಮ್ಮ ದೇಹಕ್ಕೆ ಸೇರಿ ಆರೋಗ್ಯ ಇನ್ನಷ್ಟು ಹದಗೆಡುತ್ತದೆ.

ಪ್ಯಾನ್​ಕೇಕ್ಸ್​

ಪ್ಯಾನ್​ಕೇಕ್​ನ್ನು ಉಪಹಾರದ ರೂಪದಲ್ಲಿ ಸೇವಿಸುವ ಅಭ್ಯಾಸ ಅನೇಕರಿಗಿದೆ. ಇದು ಬಾಯಿಗೆ ರುಚಿ ಎನಿಸಬಹುದು ಆದರೆ ಆರೋಗ್ಯಕ್ಕಲ್ಲ. ಇವುಗಳಲ್ಲಿ ಪೋಷಕಾಂಶ ಇದ್ದರೂ, ಸಂಸ್ಕರಿಸಿದ ಧಾನ್ಯಗಳ ಹಿಟ್ಟು ಬಳಕೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿದೆ. ಸಂಸ್ಕರಿಸಿದ ಧಾನ್ಯಗಳಿಂದ ಬೊಜ್ಜಿನ ಸಮಸ್ಯೆ ಉಂಟಾಗುತ್ತದೆ ಎಂದು ಅಧ್ಯಯನಗಳೇ ಹೇಳಿವೆ.

ಸಂಸ್ಕರಿಸಿದ ಹಣ್ಣಿನ ಜ್ಯೂಸ್​ಗಳು

ನೀವು ತೂಕ ಇಳಿಸಬೇಕು ಎಂದುಕೊಂಡಾಕ್ಷಣ ಅನೇಕರು ಸಲಹೆ ನೀಡುತ್ತಾರೆ. ಆದರೆ ನಾವು ಅಂದುಕೊಂಡಷ್ಟು ಇವು ಒಳ್ಳೆಯದಲ್ಲ. ಅದರಲ್ಲೂ ಪ್ಯಾಕೇಜ್ಡ್​ ಜ್ಯೂಸ್​ಗಳಲ್ಲಿ ಇರುವ ಅತಿಯಾದ ಸಕ್ಕರೆ ಅಂಶವು ನಿಮ್ಮ ಆರೋಗ್ಯವನ್ನು ಹಳ್ಳ ಹಿಡಿಸಬಹುದು. ಅಲ್ಲದೇ ಈ ಜ್ಯೂಸ್​ಗಳಲ್ಲಿ ನಿಜವಾದ ಹಣ್ಣುಗಳ ಬಳಕೆ ಕೂಡ ಮಾಡಿರುವುದಿಲ್ಲ. ಅವುಗಳಲ್ಲಿ ಹಣ್ಣಿನ ರುಚಿಯನ್ನು ತರಲು ರಾಸಾಯನಿಕ ಬಳಕೆ ಮಾಡಲಾಗುತ್ತದೆ.

ಕಾಫಿ

ನಿಯಮಿತ ಪ್ರಮಾಣದಲ್ಲಿ ಕಾಫಿ ಕುಡಿಯುವುದು ಒಳ್ಳೆಯದೇ. ಆದರೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವುದು ನಿಜವಾಗಿಯೂ ಒಳ್ಳೆಯದಲ್ಲ. ಕಾಫಿ ಸೇವನೆಯಿಂದ ಆರೋಗ್ಯಕ್ಕೆ ಲಾಭವಿದೆ. ಆದರೆ ಹೊಟ್ಟೆ ತುಂಬಿದ್ದಾಗ ಮಾತ್ರ ನೀವು ಕಾಫಿ ಸೇವನೆ ಮಾಡಬೇಕು. ಖಾಲಿ ಹೊಟ್ಟೆಯಲ್ಲಿ ಎಂದಿಗೂ ಕಾಫಿ ಸೇವಿಸಬಾರದು. ಕಾಫಿ ಸೇವಿಸದೆ ಇರಲು ಸಾಧ್ಯವೇ ಇಲ್ಲ ಎನ್ನುವವರು ಬೆಳಗ್ಗೆ ಏನನ್ನಾದರೂ ಸೇವಿಸಿದ ಬಳಿಕ ಕಾಫಿ ಕುಡಿಯುವುದು ಉತ್ತಮ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ