logo
ಕನ್ನಡ ಸುದ್ದಿ  /  ಜೀವನಶೈಲಿ  /  Health Tips: 40ರ ಆಸುಪಾಸಿನಲ್ಲಿದ್ದೀರೇ, ಆಹಾರ ಕ್ರಮದಲ್ಲಿ ಮಾಡಿ ಬದಲಾವಣೆ: ಇವುಗಳನ್ನು ಸೇವಿಸಲು ಮರೆಯದಿರಿ

Health Tips: 40ರ ಆಸುಪಾಸಿನಲ್ಲಿದ್ದೀರೇ, ಆಹಾರ ಕ್ರಮದಲ್ಲಿ ಮಾಡಿ ಬದಲಾವಣೆ: ಇವುಗಳನ್ನು ಸೇವಿಸಲು ಮರೆಯದಿರಿ

Priyanka Gowda HT Kannada

Aug 24, 2024 12:12 PM IST

google News

ನೀವು 40ರ ಆಸುಪಾಸಿನಲ್ಲಿದ್ದರೆ ನಿಮ್ಮ ಆಹಾರ ಕ್ರಮಕ್ಕೆ ಸೇರಿಸಿಕೊಳ್ಳಬಹುದಾದ ಫೈಬರ್ ಭರಿತ ಆಹಾರಗಳ ಪಟ್ಟಿ ಇಲ್ಲಿದೆ ನೋಡಿ:

  • 40ರ ಆಸುಪಾಸಿಗೆ ಬರುತ್ತಿದ್ದಂತೆಯೇ ನೂರೆಂಟು ಆರೋಗ್ಯ ಸಮಸ್ಯೆಗಳು ತಲೆದೋರುತ್ತದೆ. ಆದರೆ ನಮ್ಮ ಆಹಾರ ಕ್ರಮದಲ್ಲಿ ಕೆಲವು ಬದಲಾವಣೆಗಳನ್ನು ತರುವ ಮೂಲಕ ಈ ಅಪಾಯದಿಂದ ಪಾರಾಗಲು ಸಾಧ್ಯವಿದೆ. ಹಾಗಾದರೆ 40ರ ಬಳಿಕ ನಾವು ಯಾವೆಲ್ಲ ಆಹಾರ ಸೇವಿಸಬೇಕು ಎನ್ನುವುದಕ್ಕೆ ಮಾಹಿತಿ ಇಲ್ಲಿದೆ.

ನೀವು 40ರ ಆಸುಪಾಸಿನಲ್ಲಿದ್ದರೆ ನಿಮ್ಮ ಆಹಾರ ಕ್ರಮಕ್ಕೆ ಸೇರಿಸಿಕೊಳ್ಳಬಹುದಾದ ಫೈಬರ್ ಭರಿತ ಆಹಾರಗಳ ಪಟ್ಟಿ ಇಲ್ಲಿದೆ ನೋಡಿ:
ನೀವು 40ರ ಆಸುಪಾಸಿನಲ್ಲಿದ್ದರೆ ನಿಮ್ಮ ಆಹಾರ ಕ್ರಮಕ್ಕೆ ಸೇರಿಸಿಕೊಳ್ಳಬಹುದಾದ ಫೈಬರ್ ಭರಿತ ಆಹಾರಗಳ ಪಟ್ಟಿ ಇಲ್ಲಿದೆ ನೋಡಿ:

ದೇಹದ ಆರೋಗ್ಯ ಕ್ಷೇಮವಾಗಿದ್ದರೆ ಅದಕ್ಕಿಂತ ದೊಡ್ಡ ವರದಾನ ಬೇರೊಂದಿಲ್ಲ. ಅದರಲ್ಲೂ 40ರ ಆಸುಪಾಸಿಗೆ ಬಂದಾಗ ವಿವಿಧ ಕಾಯಿಲೆಗಳು ನಮ್ಮನ್ನು ಸುತ್ತಿಕೊಳ್ಳುವ ಅಪಾಯ ಜಾಸ್ತಿ ಇರುತ್ತದೆ. ಹೀಗಾಗಿ ನಮ್ಮ ಆರೋಗ್ಯವನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳುವ ಕಾರ್ಯವನ್ನು ನಾವು ಮಾಡಬೇಕು. ಆರೋಗ್ಯ ಕ್ಷೇಮವಾಗಿ ಇರಬೇಕು ಎಂದರೆ ನಾವು ಸೇವಿಸುವ ಆಹಾರದ ಮೇಲೂ ನಿಯಂತ್ರಣ ಇರುವುದು ಬಹಳ ಮುಖ್ಯ. 40ರ ಹರೆಯದಲ್ಲಿ ಫೈಬರ್ ಅಂಶ ಇರುವ ಆಹಾರ ಸೇವನೆ ಮಾಡುವುದರಿಂದ ದೇಹದಲ್ಲಿ ಚಯಾಪಚಯ ಕ್ರಿಯೆ ಸರಾಗವಾಗಿ ನಡೆಯುತ್ತದೆ. ಮಲಬದ್ಧತೆಯಂತಹ ಸಮಸ್ಯೆಗಳು ನಿಯಂತ್ರಣಕ್ಕೆ ಬರುತ್ತವೆ. ಹೃದಯದ ಆರೋಗ್ಯವನ್ನು ಸುಧಾರಿಸುವಲ್ಲಿ, ಕರುಳಿನ ಚಲನೆಯನ್ನು ನಿಯಂತ್ರಿಸುವಲ್ಲಿ ಫೈಬರ್ ಪ್ರಮುಖ ಪಾತ್ರವನ್ನು ವಹಿಸುತ್ತದೆ. ನೀವು ಕೂಡ 40ರ ಆಸುಪಾಸಿನಲ್ಲಿದ್ದರೆ ನೀವು ನಿಮ್ಮ ಆಹಾರ ಕ್ರಮಕ್ಕೆ ಸೇರಿಸಿಕೊಳ್ಳಬಹುದಾದ ಫೈಬರ್ ಭರಿತ ಆಹಾರಗಳ ಪಟ್ಟಿ ಇಲ್ಲಿದೆ ನೋಡಿ:

ಓಟ್ಸ್: ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುವ ಓಟ್ಸ್ ನಲ್ಲಿ ಬೀಟಾ - ಗ್ಲುಕನ್ ಎಂಬ ಕರುಗವ ಫೈಬರ್ ಇದೆ. ಇದು ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವ ಜೊತೆಯಲ್ಲಿ ರಕ್ತದಲ್ಲಿನ ಸಕ್ಕರೆ ಪ್ರಮಾಣದಲ್ಲಿ ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರಿಂದ ಸಹಜವಾಗಿ ಹೃದಯದ ಆರೋಗ್ಯ ಸುಧಾರಿಸುತ್ತದೆ. ವಯಸ್ಸಾಗುತ್ತಾ ಹೋದಂತೆ ಕರಗುವ ಫೈಬರ್ ಹೊಂದಿರುವ ಆಹಾರ ಸೇವನೆ ಮಾಡುವುದು ತುಂಬಾ ಒಳ್ಳೆಯದು.

ಸಿರಿಧಾನ್ಯಗಳು: ಸಿರಿಧಾನ್ಯಗಳು ಕರಗುವ ಹಾಗೂ ಕರಗದ ಫೈಬರ್ ಎರಡರಿಂದಲೂ ಸಮೃದ್ಧವಾಗಿದೆ. ಇವುಗಳು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಕರುಳಿನ ಆರೋಗ್ಯವನ್ನು ಸುಧಾರಿಸುವ ಜೊತೆಯಲ್ಲಿ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಣಕ್ಕೆ ತರುವ ಕಾರ್ಯವನ್ನು ಮಾಡುತ್ತವೆ. ಸಿರಿಧಾನ್ಯದಲ್ಲಿರುವ ಫೈಬರ್ ಅಂಶವು ಮಲಬದ್ಧತೆಯನ್ನು ನಿಯಂತ್ರಿಸುತ್ತದೆ ಹಾಗೂ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ.

ಚಿಯಾ ಬೀಜಗಳು: ಚಿಯಾ ಬೀಜಗಳಲ್ಲಿ ಕರಗುವ ಫೈಬರ್ ಅತ್ಯಧಿಕ ಪ್ರಮಾಣದಲ್ಲಿ ಇರುತ್ತದೆ. ತೂಕ ನಿರ್ವಹಣೆ ಮಾಡಬೇಕು ಎಂದುಕೊಂಡವರಿಗೆ ಚಿಯಾ ಸೇವನೆ ತುಂಬಾನೇ ಒಳ್ಳೆಯದು. ಇವುಗಳು ದೇಹದಲ್ಲಿ ಜೀರ್ಣಕ್ರಿಯೆಯನ್ನು ಸುಧಾರಿಸುವುದರ ಜೊತೆಯಲ್ಲಿ ನಿಮಗೆ ಸುಲಭದಲ್ಲಿ ಹಸಿವಾದ ಅನುಭವವನ್ನು ನೀಡುವುದಿಲ್ಲ. ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಿಸುವ ಕಾರ್ಯವನ್ನು ಇವುಗಳು ಮಾಡುತ್ತದೆ.

ಅವಕಾಡೋಗಳು: ಅವಕಾಡೋಗಳು ಕರಗುವ ಹಾಗೂ ಕರಗದ ಫೈಬರ್ ಎರಡನ್ನೂ ಅಧಿಕ ಪ್ರಮಾಣದಲ್ಲಿ ಹೊಂದಿದೆ. ಇವುಗಳು ಕೂಡ ದೇಹದಲ್ಲಿ ಜೀರ್ಣಕ್ರಿಯೆಯನ್ನು ಸರಾಗಗೊಳಿಸುತ್ತದೆ. ಅಲ್ಲದೇ ಇವುಗಳು ದೇಹಕ್ಕೆ ಅಗತ್ಯವಿರುವ ಪೊಟ್ಯಾಷಿಯಂನ್ನು ಒದಗಿಸುತ್ತದೆ. ಅವಕಾಡೋದಲ್ಲಿರುವ ಫೈಬರ್ ಅಂಶವು ಹೃದಯದ ಆರೋಗ್ಯವನ್ನು ಕಾಪಾಡಲು ಹಾಗೂ ಮಲಬದ್ಧತೆ ನಿಯಂತ್ರಿಸಲು ಸಹಕಾರಿಯಾಗಿದೆ.

ಬೆರ್ರಿ ಹಣ್ಣುಗಳು: ರಸ್ಬೆರ್ರಿ ಹಾಗೂ ಬ್ಲೂಬೆರ್ರಿಯಂತಹ ಹಣ್ಣುಗಳು ಅತ್ಯಧಿಕ ಪ್ರಮಾಣದಲ್ಲಿ ಫೈಬರ್ ಅಂಶವನ್ನು ಹೊಂದಿರುತ್ತವೆ. ಇವುಗಳು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಆರೋಗ್ಯಕರ ಕರುಳಿನ ಚಲನೆಯನ್ನು ಬೆಂಬಲಿಸುವ ಕಾರ್ಯವನ್ನು ಮಾಡುತ್ತವೆ.

ಬ್ರೊಕೊಲಿ: ಬ್ರೊಕೊಲಿಯು ಫೈಬರ್‌ನಿಂದ ಸಮೃದ್ಧವಾಗಿದೆ ಮತ್ತು ಸಲ್ಫೊರಾಫೇನ್ ಅನ್ನು ಹೊಂದಿರುತ್ತದೆ. ಇದು ಕ್ಯಾನ್ಸರ್ ನಂತಹ ಕಾಯಿಲೆಗಳನ್ನು ತಡೆಗಟ್ಟುವ ಸಾಮರ್ಥ್ಯವನ್ನು ಹೊಂದಿದೆ. ಬ್ರೊಕೊಲಿಯಲ್ಲಿರುವ ಫೈಬರ್ ಜೀರ್ಣಕಾರಿ ಕ್ರಿಯೆಯನ್ನು ಸುಧಾರಿಸುತ್ತದೆ. ಮತ್ತು ವಿವಿಧ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಬಾದಾಮಿ: ಬಾದಾಮಿಯು ಫೈಬರ್, ಆರೋಗ್ಯಕರ ಕೊಬ್ಬುಗಳು ಮತ್ತು ಉತ್ಕರ್ಷಣಾ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು, ಹೃದಯದ ಆರೋಗ್ಯವನ್ನು ಸುಧಾರಿಸಲು ಮತ್ತು ಜೀರ್ಣಕ್ರಿಯೆಯನ್ನು ಬೆಂಬಲಿಸಲು ಸಹಾಯ ಮಾಡುತ್ತದೆ. ಬಾದಾಮಿಯಲ್ಲಿರುವ ಫೈಬರ್ ಚಯಾಪಚಯ ಕ್ರಿಯೆಯನ್ನು ಉತ್ತೇಜಿಸುತ್ತದೆ ಮತ್ತು ಹೃದಯದ ರಕ್ತನಾಳಗಳ ಆರೋಗ್ಯವನ್ನು ಸುಧಾರಿಸುತ್ತದೆ.
ಸಿಹಿ ಗೆಣಸು: ಸಿಹಿ ಗೆಣಸಿನಲ್ಲಿ ಅಗಾಧ ಪ್ರಮಾಣದ ಫೈಬರ್ ಅಡಗಿದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಕಣ್ಣಿನ ಆರೋಗ್ಯವನ್ನು ಸುಧಾರಿಸುವಲ್ಲಿಯೂ ಸಿಹಿಗೆಣಸು ಪ್ರಮುಖ ಪಾತ್ರ ವಹಿಸುತ್ತದೆ. ಸಿಹಿ ಗೆಣಸಿನಲ್ಲಿರುವ ಫೈಬರ್ ಅಂಶವು ದೇಹದಲ್ಲಿ ಮಧುಮೇಹ ಪ್ರಮಾಣವನ್ನು ನಿಯಂತ್ರಿಸುತ್ತದೆ.

ಸೇಬು: ಸೇಬುಗಳು ಕರಗಬಲ್ಲ ಮತ್ತು ಕರಗದ ಫೈಬರ್ ಅನ್ನು ಹೊಂದಿರುತ್ತವೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ ಮತ್ತು ಕರುಳಿನ ಆರೋಗ್ಯವನ್ನು ಕಾಪಾಡುವ ಜೊತೆಯಲ್ಲಿ ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ